ಅಂಡಾಂಡ..ಸ್ವಾಮೀಜಿಯ ಜತೆ ಸಪ್ತಗಿರಿ,ರಾಮೋಜಿ
ಅಂಡಾಂಡ ಭಂಡರ ಆಶ್ರಮಕ್ಕೆ ಹೋಗೋಣ ಎಂದು ಸಪ್ತಗಿರಿವಾಸಿ ಹೇಳಿದ ಕೂಡಲೇ ರಾಮಮೋಹನರು, ಪೆನ್, ಕನ್ನಡಕ, ಅಂಗಿಯ ಬಟನ್, ಶೂನಲ್ಲೆಲ್ಲಾ ಮಿನಿ ಕ್ಯಾಮರಾಗಳನ್ನು ಫಿಕ್ಸ್ ಮಾಡಿ ರೆಡಿಯಾದರು. ಸಪ್ತಗಿರಿವಾಸಿ ಆಶ್ರಮದ ಶಿಷ್ಯರೊಂದಿಗೆ ಕಾರಲ್ಲಿ ಬಂದಾಗ, ರಾಮಮೋಹನರು ಕಾರಿನ ನಂಬರ್ ನೋಟ್ ಮಾಡಿದರು. "ಸರ್, ಇದು ಬಾಡಿಗೆ ಕಾರು. ನಂಬರ್ ನೋಡಿ ಪ್ರಯೋಜನವಿಲ್ಲ. ಆಶ್ರಮ ತಲುಪುವುದರೊಳಗೆ ೪-೫ ಕಾರು ಬದಲಾಯಿಸುವರು" ಅಂದನು ಸಪ್ತಗಿರಿವಾಸಿ.
ರಾಮಮೋಹನರು ಕಾರು ಹತ್ತಿದ ಕೂಡಲೇ ಶಿಷ್ಯರು ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿದರು. ಕಟ್ಟಲಿ ಬಿಡು..ಹಿಡನ್ ಕ್ಯಾಮರಾವಿದೆಯಲ್ಲ ಎಂದು ಮನದಲ್ಲೇ ಅಂದುಕೊಂಡರು, ರಾಮಮೋಹನರು. ಸುಮಾರು ಎರಡು ಗಂಟೆ ಸುತ್ತಾಡಿದ ನಂತರ ಆಶ್ರಮ ತಲುಪಿದರು. ಕಣ್ಣಿಗೆ ಕಟ್ಟಿದ ಬಟ್ಟೆ ಬಿಚ್ಚಿದ ಶಿಷ್ಯರು, ಎರಡು ಪಂಚೆ ಕೊಟ್ಟು, "ಇದನ್ನೇ ನೀವು ಉಡಬೇಕು. ನಿಮ್ಮ ಡ್ರೆಸ್ ಎಲ್ಲಾ ಇಲ್ಲಿ ಬಿಚ್ಚಿಡಬೇಕು" ಅಂದರು.
"ನಾವು ಅಂಡಾಂಡಭಂಡ ಸ್ವಾಮಿಯ ಗೆಳೆಯರು. ಅವರಿಗೆ ತಿಳಿಸಿ.." ಎಂದು ರಾಮಮೋಹನರು ಹೇಳಿದಾಗ, "ಯಾರೇ ಬಂದರೂ ಆಶ್ರಮದ ನಿಯಮ ಬದಲಾಯಿಸಲು ಸಾಧ್ಯವಿಲ್ಲ. ಗಂಡಸರು ಇಲ್ಲಿ ಕೊಡುವ ಬಿಳಿಪಂಚೆಯಲ್ಲಿರಬೇಕು. ಹೆಂಗಸರು ಸಹ ಇಲ್ಲಿ ನಾವೇ ಕೊಡುವ ಕಾವಿ ಬಣ್ಣದ ನೈಟಿಯಲ್ಲಿಯೇ ಬರಬೇಕು. ಮನೆಯಿಂದ ನಿಮ್ಮದೇ ಬಿಳಿಪಂಚೆ ಉಟ್ಟು ಬಂದರೂ ಪ್ರವೇಶವಿಲ್ಲ."- ಮುಲಾಜಿಲ್ಲದೇ ಹೇಳಿದರು ಶಿಷ್ಯರು. ಡ್ರೆಸ್ ಬಿಚ್ಚಿ ಪಂಚೆ ಉಟ್ಟ ರಾಮಮೋಹನರು, ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ಒಂದು ಕ್ಯಾಮರಾವಾದರೂ ಉಳಿಯುತ್ತದಲ್ಲಾ ಅಂದು ಯೋಚಿಸುವಾಗಲೇ, "ಅಂತಃ ಚಕ್ಷುವಿನಿಂದ ನೋಡಿ, ಕನ್ನಡಕದ ಅಗತ್ಯವಿಲ್ಲ" ಎಂದು ಅದನ್ನೂ ತೆಗೆಸಿದರು.
ಪಂಚೆ ಉಟ್ಟು ಅಭ್ಯಾಸವಿಲ್ಲದ ಸಪ್ತಗಿರಿ ಪಂಚೆ ಉಡಲು ಒದ್ದಾಡುತ್ತಿದ್ದ. ಕೊನೆಗೆ ರಾಮಮೋಹನರು ಆತನಿಗೆ ಉಡಿಸಿ, ಎರಡು ಹೆಜ್ಜೆ ಇಟ್ಟಿದ್ದಾರೋ ಇಲ್ಲವೋ ಸಪ್ತಗಿರಿ ಸಾಷ್ಟಾಂಗ ನಮಸ್ಕಾರ ಮಾಡಿದ. "ಇಲ್ಲಿಂದಲೇ ನಮಸ್ಕಾರ ಬೇಡ. ಸ್ವಾಮಿಗಳ ಎದುರಿಗೆ ಮಾಡಿದರೆ ಸಾಕು."ಎಂದಾಗ, "ಇಲ್ಲಾ, ರಾಮ್ಜಿ, ಪಂಚೆ ಕಾಲಿಗೆ ಸಿಕ್ಕಿ ಎಡವಿಬಿದ್ದೆ" ಎಂದನು. "ಪಂಚೆ ಈತನ ಸೊಂಟದಲ್ಲಿ ನಿಲ್ಲುವುದಿಲ್ಲ. ಈತನಿಗೆ ಒಂದು ಕಾವಿ ನೈಟಿಯೇ ಕೊಡಿ"ಎಂದು ಶಿಷ್ಯರಲ್ಲಿ ರಾಮಮೋಹನರು ಕೇಳಿದರು.
ಕೆದರಿದ ತಲೆಕೂದಲು,ಕುರುಚಲು ಗಡ್ಡ, ಕಾವಿ ನೈಟಿಯಲ್ಲಿ ಸಪ್ತಗಿರಿಯೂ ಸ್ವಾಮಿ ತರಹ ಕಾಣುತ್ತಿದ್ದುದರಿಂದ, ಅನೇಕರು ಕಾಲಿಗೆ ಬಿದ್ದು ಆಶೀರ್ವಾದ ಬೇಡಿದರು. "ದೀರ್ಘ...ಭವ" ಎಂದು ಆಶೀರ್ವಾದ ಮಾಡುತ್ತಿದ್ದ ಸಪ್ತಗಿರಿಯನ್ನು ಪಕ್ಕಕ್ಕೆ ಎಳಕೊಂಡು, ಕಿವಿಯಲ್ಲಿ, "ನಿನ್ನನ್ನು ಸ್ವಾಮಿ ಮಾಡಿ ಈ ಆಶ್ರಮದಲ್ಲಿರಿಸಿ, ಅಂಡಾಂಡ ಸ್ವಾಮಿ ವಿಶ್ವಪರ್ಯಟನೆಗೆ ಹೊರಟಾರು. ಮತ್ತೆ ನಿನಗೆ ಮದುವೆನೂ ಇಲ್ಲಾ...ಬೇಗ ಬಾ.." ಎಂದು ಸ್ವಾಮೀಜಿಯ ಪ್ರವಚನ ನಡೆಯುವಲ್ಲಿಗೆ ಹೋದರು.
ದೂರದಿಂದಲೇ ರಾಮಮೋಹನ+ಸಪ್ತಗಿರಿವಾಸಿಯನ್ನು ಕಂಡ ಸ್ವಾಮಿ, ಸ್ವಲ್ಪ ಹೊತ್ತು ಕುಳಿತಿರಲು ಸೂಚಿಸಿ, ತಮ್ಮ ಪ್ರವಚನ ಮುಂದುವರೆಸಿದರು-
"ನನ್ನ ಪ್ರಿಯ ಶಿಷ್ಯ-ಶಿಷ್ಯೆಯರೆ, ನೀವೆಲ್ಲಾ ಲಕ್ಷ್ಮಿಯನ್ನು ಹೇಗೆ ಪ್ರಾರ್ಥಿಸುವಿರಿ-" ನಮಸ್ತೇಸ್ತು ಮಹಾಮಾಯೆ ಶ್ರೀಪೀಠೇ ಸುರಪೂಜಿತೆ ಶಂಖಚಕ್ರಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೇ" ಎಂದು ತಾನೆ. ಲಕ್ಷ್ಮಿಯೇನು ಯುದ್ಧಕ್ಕೆ ಹೊರಟಿರುವಳಾ? ಇಲ್ವಲ್ಲಾ? ಮತ್ಯಾಕೆ ಚಕ್ರ, ಗಧೆ ಕೈಯಲ್ಲಿ? ದುಷ್ಟರಿಗೆ ಭಯಬೀಳಿಸಲು..ಶಕ್ತಿವಂತ ದೇವರೇ ಆಯುಧಧಾರಿಯಾಗಿರುವಾಗ, ನಾರಿಯರು ಕೈಯಲ್ಲಿ ತಮ್ಮ ರಕ್ಷಣೆಗಾಗಿಯಾದರೂ, ಒಂದು ಸಣ್ಣ ಆಯುಧವನ್ನು ಯಾಕೆ ಇಟ್ಟುಕೊಳ್ಳುವುದಿಲ್ಲಾ? ನಾರಿಯನ್ನು ನಾವು ಎಲ್ಲರಂತೆ ಅಬಲೆ ಅನ್ನುವುದಿಲ್ಲ. ಅವರೂ ಶಕ್ತಿವಂತರೇ.ಹನುಮನೂ ಮಹಾನ್ ಬಲಶಾಲಿ. ಗಧೆಯಿಲ್ಲದ ಹನುಮನ ಚಿತ್ರ ಎಲ್ಲಾದರೂ ನೋಡಿರುವಿರಾ? ಸ್ವರಕ್ಷಣೆಗೆ ಹಾಗೂ ದುಷ್ಟರಿಗೆ ಭಯಮೂಡಿಸಲಾದರೂ, ನಾರೀಮಣಿಗಳು ಆಯುಧಧಾರಿಗಳಾಗಬೇಕು...."
"ವ್ಹಾ ವ್ಹಾ ಏನು ವಿಚಾರಧಾರೆ ನಮ್ಮ ಸ್ವಾಮಿಯವರದ್ದು" ಎಂದು ಸಪ್ತಗಿರಿವಾಸಿ ಹೊಗಳಿದಾಗ, ರಾಮಮೋಹನರು, "ಏ...ಅದು ನಮ್ಮ ಸತೀಶರೋ,ಪಾರ್ಥರೋ, ಕವಿನಾಗರಾಜರೋ ಬರೆದು ಕೊಟ್ಟದ್ದಿರಬೇಕು." ಅಂದರು.
ಆ ಸಮಯದಲ್ಲೇ ಒಬ್ಬರು ಎದ್ದು "ಮಾನವ ದೇಹದಲ್ಲಿ ಸಪ್ತರಂಧ್ರಗಳೋ, ನವರಂಧ್ರಗಳೋ...ಸ್ವಾಮಿಗಳೇ" ಎಂದರು.
"ಒಳ್ಳೆಯ ಪ್ರಶ್ನೆ, ಇದಕ್ಕೆ ವಿಶದವಾಗಿ ಉತ್ತರಕೊಡಬೇಕು.ನಾಳೆಯ ಪ್ರವಚನದಲ್ಲಿ ಉತ್ತರಿಸುವೆ" ಎಂದು ಸ್ವಾಮೀಜಿ ಪೀಠದಿಂದ ಎದ್ದರು. ರಾಮಮೋಹನರು "ನೋಡಿದೆಯಾ? ಹೇಗೆ ನುಣುಚಿಕೊಂಡರು. ನಾಳೆ ಯಾರ ಬಳಿಯಾದರೂ ಕೇಳಿಬಂದು ಉತ್ತರಿಸುವರು" ಎಂದರು.
ಶಿಷ್ಯರು ಬಂದು, ಸ್ವಾಮಿಯ ಆಪ್ತರಿಗೆ ಮಾತ್ರ ಪ್ರವೇಶವಿರುವ ಕೊಠಡಿಗೆ ರಾಮೋಜಿ+ಸಪ್ತಗಿರಿವಾಸಿಯನ್ನು ಕರಕೊಂಡು ಹೋದರು. "ನೀವು ಬಂದದ್ದು ಒಳ್ಳೆಯದೇ ಆಯಿತು. ಈ ಸಪ್ತರಂಧ್ರ ಅಂದರೆ ಏನ್ರೀ?" ಅಂದು ಕೇಳಿದರು ಸ್ವಾಮೀಜಿ. ಮುಗುಳ್ನಗುತ್ತಾ ಸಪ್ತಗಿರಿವಾಸಿಯ ಕಡೆ-ನಾನು ಆಗಲೇ ಹೇಳಿಲ್ವಾ-ಎಂಬಂತೆ ನೋಡಿ, "ಅದಿರ್ಲಿ ಗಣೇಶರೆ, ಏನು ಕತೆ ನಿಮ್ಮದು? ಎರಡು ದಿನ ಟಿ.ವಿ.ಯಲ್ಲಿ ನಿಮ್ಮದೇ ಸುದ್ದಿ..."
"ಓ ಅದಾ... ಆ ಚಾನಲ್ ನಮ್ಮದೇ.. ಆ ನ್ಯೂಸ್ ರೀಡರ್ ಇಲ್ಲಿ ಅಡುಗೆಕೋಣೆ ಮೇಲ್ವಿಚಾರಕ. ಗಣೇಶನ ಹೆಂಡತಿಯಾಗಿ ಅತ್ತಾಕೆ, ನಮ್ಮದೇ ಚ್ಯಾನಲ್ಲಿನಲ್ಲಿ ಮಧ್ಯಾಹ್ನ ಸೀರಿಯಲ್ ಬರುತ್ತದೆಯಲ್ಲಾ-"ಕಪ್ಪಾದ ಕರಿಮಣಿ" ಅದರ ನಾಯಕಿ. ಪ್ರಶ್ನೆ ಕೇಳುವವರೂ, ಚರ್ಚೆ ಮಾಡುವವರೂ, ವಿಚಾರವಾದಿಗಳೂ ಎಲ್ಲಾ ನಮ್ಮವರೇ.. ಅಲ್ಲಿ ಚರ್ಚೆ ನಡೆದಷ್ಟೂ ಇಲ್ಲಿ ನಮ್ಮ ಭಕ್ತರ ಸಂಖ್ಯೆ, ಕಾಣಿಕೆ ಜಾಸ್ತಿಯಾಗುವುದು. ಅದರ ಬಗ್ಗೆ ಚಿಂತಿಸಬೇಡಿ." ಎಂದರು. ಸಪ್ತಗಿರಿವಾಸಿಗೆ ಸಮಾಧಾನವಾಯಿತು. ಭಕ್ತಾದಿಗಳ ನೂಕುನುಗ್ಗಲು ಜಾಸ್ತಿಯಾದದ್ದರಿಂದ ಇಬ್ಬರೂ ಹೊರಟರು. ಆವಾಗ ರಾಮಮೋಹನರನ್ನು ಕರೆದು, " ರಾಮೋಜಿ, ನಿಮ್ಮ ಎಲ್ಲಾ ಕ್ಯಾಮರಾಗಳ ಚಿತ್ರಗಳನ್ನು ನಮ್ಮ ಶಿಷ್ಯರು ಗೊತ್ತಿಲ್ಲದೇ ಅಳಿಸಿಬಿಟ್ಟಿದ್ದಾರೆ. ಕ್ಷಮಿಸಿ. ಅದರಲ್ಲಿ ಹಳೇ ಕನ್ನಡ ಹಾಡುಗಳನ್ನು ಹಾಕಲು ಹೇಳಿರುವೆ. ಮನೆಗೆ ಹೋಗಿ ನೋಡಿ ಕೇಳಿ ಆನಂದಿಸಿ" ಅಂದ್ರು ಅಂಡಾಂಡಭಂಡ ಸ್ವಾಮೀಜಿ.
Comments
@ ಅಣ್ಣ ಗಣೇಶ್ ಅಣ್ಣ.. ಆ ಪರಮ ರಹಸ್ಯ..!!
अन्दान्दा ब्रह्मा स्वामीजी महान हो..!!
ತುಂಬಾ ದಿನಗಳ ಅಂತರ ಓದುತ್ತಲೇ ಬಿದ್ದು ಬಿದ್ದು ನಕ್ಕ ಬರಹ..
ಅಣ್ಣ ಗಣೇಶ್ ಅಣ್ಣ..
ಯಾರಿಗೂ ಗೊತ್ತಿರದ ಆ ಪರಮ ರಹಸ್ಯ(ನಾ ಇದ್ವರ್ಗು ಪಂಚೆ /ಲುಂಗಿ ಉಟ್ಟಿಲ್ಲ -ನಂಗೆ ಉಡೋಕು ಬರೋಲ್ಲ-ಅದು ಅನ್ನಗೆ ಹಿಡಿಸೋದು ಇಲ್ಲ..!!) ನಿಮ್ಮ ಆ ಸ್ವಾಮೀಜಿಗಳಿಗೆ ಗೊತಾಗಿದೆ ಅಂದ್ರೆ ಅವರು ..............ಇರ್ಬೇಕು..!!
ಆಶ್ರಮದ ಜನರನ್ನೇ ಬಹುಪಾತ್ರ ಕಲಾವಿದ್ರನ್ನಾಗಿಸಿದ ಅವರ ಮಹಿಮೆ ಅಪಾರ..!!
ಈಗೆಗ್ ಅನಾವ್ ನೋಡೋ ಚರ್ಚೆಗಳು-ಚಕ್ರವ್ಯೂಹ- ಬಿಗ್ ಫೈಟ್ ಎಲ್ಲ ಹೀಗೆ ಇರಬಹುದು ಎನ್ನುವ ಅನುಮಾನದ ಹೊಗೆ ಏಳುತ್ತಿದೆ ಮನದಲ್ಲಿ.!!
ಯಾವನಿಗ್ಗೊತ್ತು..!!
ರಾ ಮೊ ಅವರ ಎಲ್ಲ ಪ್ಲಾನ್ ಈ ರೀತಿ ಆಗಿದ್ದು.. ಪ್ಚ್..
ನೆಕ್ಸ್ಟ್ ಟೈಮ್ ಅದ್ಕೆ ನಾವ್ ಸ್ಯಾಟಲೈಟ್ ಕ್ಯಾಮೆರ ಯೂಜ್ ಮಾಡ್ತೀವಿ ಅಪ್ಪಿ ತಪ್ಪಿಯೂ ಸ್ವಾಮೀಜಿಯ ಆಶ್ರಮದ ಕೋಣೆಯೊಳಗೆ ಹೋಗೋಲ್ಲ,ಅವ್ರನೆ ಆಚೆ ಬಯಲಿಗೆ ಕರಿಸುವೆವು..!!
ಇದ್ಯಾಕೋ ಚಾಪೆ ರಂಗೋಲಿ ಗಾದೆ ನೆನಪಿಸಿತು..!!
೭ ರಂದ್ರ-೯ ರಂದ್ರ ಬಳಕೆ (ಆ ಬಗ್ಗೆ ನಾವಿಬ್ಬರೂ ಹಿರಿಯರಿಗೆ ಪ್ರಶ್ನಿಸಿದ್ದೆವು)..!! :()))
ಮುಸ್ಸಂಜೇಲಿ ನಿಮ್ ಬರಹ ಓದಿ ಮನ ಮುದಗೊಂಡಿತು..
ನನ್ನಿ
ಶುಭವಾಗಲಿ
ಶುಭ ಸಂಜೆ..
\|/
In reply to @ ಅಣ್ಣ ಗಣೇಶ್ ಅಣ್ಣ.. ಆ ಪರಮ ರಹಸ್ಯ..!! by venkatb83
ಯಾವನಿಗ್ಗೊತ್ತು..!!
>>>ನೆಕ್ಸ್ಟ್ ಟೈಮ್ ಅದ್ಕೆ ನಾವ್ ಸ್ಯಾಟಲೈಟ್ ಕ್ಯಾಮೆರ ಯೂಜ್ ಮಾಡ್ತೀವಿ ಅಪ್ಪಿ ತಪ್ಪಿಯೂ ಸ್ವಾಮೀಜಿಯ ಆಶ್ರಮದ ಕೋಣೆಯೊಳಗೆ ಹೋಗೋಲ್ಲ,ಅವ್ರನೆ ಆಚೆ ಬಯಲಿಗೆ ಕರಿಸುವೆವು..!
:) :)
ಧನ್ಯವಾದಗಳು ಸಪ್ತಗಿರಿವಾಸಿಯವರೆ,
-ಗಣೇಶ.
ನೈಟಿಯಲ್ಲಿ ಸಪ್ತಗಿರಿ !!! ಅ0ಡಾ0ಡ ಬ0ಡರು ಬ0ದರೆ ಮತ್ತೆ
ಹಾಗೆ ನೈಟಿಯಲ್ಲಿ ಸಪ್ತಗಿರಿಯವರ ಚಿತ್ರ ಪ್ರಕಟಿಸಿದ್ದರೆ ಚೆನ್ನಾಗಿತ್ತು. ಇರಲಿ ಅ0ಡಾ0ಡಬ0ಡರು ಮತ್ತೆ ರ0ಗಕ್ಕೆ ಇಳಿದುದ್ದು ಸ0ತಸ
In reply to ನೈಟಿಯಲ್ಲಿ ಸಪ್ತಗಿರಿ !!! ಅ0ಡಾ0ಡ ಬ0ಡರು ಬ0ದರೆ ಮತ್ತೆ by partha1059
ನೈಟಿಯಲ್ಲಿ ಸಪ್ತಗಿರಿ..
ಅದಾಗಲೇ ಎರಡು ದಿನದಿಂದ ನಮ್ಮ ಜ್ಯೂಸೀ ನ್ಯೂಸ್ ಚಾನಲ್ನಲ್ಲಿ ಬಿತ್ತರವಾಗುತ್ತಲಿದೆ. ನಿಮ್ಮ ಪಕ್ಕದ ಕೇಬಲ್ ಆಪರೇಟರ್ಗೆ ಹೇಳಿ...
ಸ.ಗಿ ಯವರ ನೈ೦ಟಿ ... ಅಲ್ಲಲ್ಲ ..
ಸ.ಗಿ ಯವರ ನೈ೦ಟಿ ... ಅಲ್ಲಲ್ಲ ... ನೈಟಿ ಗುಟ್ಟನ್ನು ಬಹಿರ೦ಗ ಮಾಡಿದ್ದಕ್ಕೆ ನಮ್ ಕಡೆಯಿ೦ದ ಒ೦ದು e-ತೆಂಗಿನಕಾಯಿ ಸ್ವಿಕರಿಸಬೇಕು :-)
In reply to ಸ.ಗಿ ಯವರ ನೈ೦ಟಿ ... ಅಲ್ಲಲ್ಲ .. by bhalle
e-ತೆಂಗಿನಕಾಯಿ..
ನಾವು ಭಂಡ್ರಾಯ್ಡ್ ಮೊಬೈಲ್ ಉಪಯೋಗಿಸೋ ಲೇಟೆಸ್ಟ್ ಸ್ವಾಮಿಗಳು. e-ಮೊಬೈಲ್ ಕಳುಹಿಸಿ ಧನ್ಯರಾಗಿ. ಸದ್ಯಕ್ಕೆ ತೆಂಗಿನಕಾe ಸ್ವೀಕರಿಸಿ e-ಆಶೀರ್ವಾದ ಕಳುಹಿಸಿರುವೆವು.
ಅಂ.ಸ್ವಾಮಿ.
In reply to e-ತೆಂಗಿನಕಾಯಿ.. by ಗಣೇಶ
:-)))))
:-)))))
:-)))))))))
:-)))))))))
In reply to :-))))))))) by gopaljsr
ಇರುವೆಗಳನ್ನು ಕೊಂದ ಸ್ವಾಮಿಜಿಗೆ
ಇರುವೆಗಳನ್ನು ಕೊಂದ ಸ್ವಾಮಿಜಿಗೆ ದಿಕ್ಕಾರ ... ಎಂದು ಬೇರೆ ಚಾನಲ್ ನಲ್ಲಿ ಕೂಗುತ್ತಿದ್ದಾರೆ.....
In reply to ಇರುವೆಗಳನ್ನು ಕೊಂದ ಸ್ವಾಮಿಜಿಗೆ by gopaljsr
ಈ ಬಗ್ಗೆ ಒಂದು ಚರ್ಚೆಯ ಅಂಕಣ
ಈ ಬಗ್ಗೆ ಒಂದು ಚರ್ಚೆಯ ಅಂಕಣ ಚಾನೆಲ್ ನಲ್ಲಿ ಬಿತ್ತರವಾಗಲಿದೆ. ಚರ್ಚೆಯಲ್ಲಿ ಸ್ವಾಮಿಗಳ ಪರವಾಗಿ ಮಾತನಾಡುವವರು ಮಾತ್ರ ಇರುತ್ತಾರೆ.
In reply to ಈ ಬಗ್ಗೆ ಒಂದು ಚರ್ಚೆಯ ಅಂಕಣ by kavinagaraj
ಛೇ ಛೇ ಹಾಗೇನಿಲ್ಲ ಕವಿನಾಗರಾಜರೆ,
ಚರ್ಚೆಯಲ್ಲಿ ಸ್ವಾಮಿಗಳ ವಿರುದ್ಧವಾಗಿಯೂ ಮಾತನಾಡುವವರು ಇರುತ್ತಾರೆ! ಅವರೂ ನಮ್ಮವರೇ..ಏನು ವಿರೋಧಿಸಬೇಕೆಂದು ಹೇಳಿರುವೆವೋ ಅದನ್ನು ಮಾತ್ರ ವಿರೋಧಿಸುವರು.
-ಅಂ.ಭಂ.ಸ್ವಾಮಿ
In reply to ಇರುವೆಗಳನ್ನು ಕೊಂದ ಸ್ವಾಮಿಜಿಗೆ by gopaljsr
ಇರುವೆಗಳನ್ನು ಕೊಂದ ಸ್ವಾಮೀಜಿಗೆ ಧಿಕ್ಕಾರ
:) :)
ಈ ಸ್ಕ್ರಿಪ್ಟ್ ಸಹ ನಾವೇ ಆ ಚಾನಲ್ಗೆ ಕೊಟ್ಟದ್ದು. :) ಇನ್ನೂ ಕೆಲವು ನಮ್ಮ ಸಂಗ್ರಹದಲ್ಲಿದೆ. ಬೇರೆ ಚಾನಲ್ ಟಿ.ಆರ್.ಪಿ. ಡೌನ್ ಆದಾಗ ಬಂದು ಬೇಡಿ ಕೊಂಡು ಹೋಗುವರು.
ನೈಟಿ ಹಾಕ್ಕೊಂಡೆ ಗಂಡಂಗೆ ಕಾಫಿ ಕೊಡಂಗಿಲ್ಲ...!!
ಎಲ್ಲ ಪ್ರತಿಕ್ರಿಯೆಗಳು ಅದರಲ್ಲೂ ಎಂದಿನಂತೆ ಸ್ಪೆಸಲ್ಲಾಗಿ ಕಮೆಂಟಿಸುವ ಬಲ್ಲೆ ಜಿ ಮತ್ತು ಗುರುಗಳ ಪ್ರತಿಕ್ರಿಯೆಗಳ ಕಾರಣವಾಗಿ ಮತ್ತವುಗಳಿಗೆ ಗಣೇಶ್ ಅಣ್ಣ ಕೊಟ್ಟ 'ತಕ್ಕ' ಪ್ರತ್ಯುತ್ತರ ಓದಿ ನಗೆ ತಡೆಯಾಲಾಗುತ್ತಿಲ್ಲ..
ಗುಟ್ಟು-ರಟ್ಟು: ನಾನೇ ಆ ನೈಟಿ ದ್ವೇಷಿ-ವಿರೋಧಿ...ಇನ್ನದನ್ನ ನಾವ್ ಧರಿಸುವೇವೆ?
ಈಗೀಗ ಯಾವದೇ ಸಮಯದಲ್ಲೂ ಅದನ್ನು ದರಿಸಿರುವವರನ್ನು ಕಂಡಾಗ ಪ್ಚ್ ಅನ್ನಿಸುವುದು...
ಅದ್ಕೆ ಇರ್ಬೇಕು ನಿರ್ದೆಷೇಕ ಪ್ರೇಂ ಹೇಳಿದ್ದು;
ನೈಟಿ ಹಾಕ್ಕೊಂಡೆ ಗಂಡಂಗೆ ಕಾಫಿ ಕೊಡಂಗಿಲ್ಲ...!! ಅಂತ/.....
ಶುಭವಾಗಲಿ..
\|
In reply to ನೈಟಿ ಹಾಕ್ಕೊಂಡೆ ಗಂಡಂಗೆ ಕಾಫಿ ಕೊಡಂಗಿಲ್ಲ...!! by venkatb83
ಆತ್ಮೀಯ ಗಣೇಶರೆ,
ಆತ್ಮೀಯ ಗಣೇಶರೆ,
ನೀವು ಅಂಡಾಂಡ ಸ್ವಾಮಿಗಳ ಪುರಾಣಗಳ ಜೊತೆಗೆ ಸಂಪದಿಗರ ಹಲವು ರಹಸ್ಯಗಳನ್ನು ಬಯಲು ಮಾಡಿದ್ದೀರಿ. ಈ ಸ್ವಾಮಿಗಳ ಕೃಪಾಕಟಾಕ್ಷ ನಿಮ್ಮ ಮೇಲಿರುವ ಬಲದಿಂದ ಹೀಗೆ ಮಾಡಿದಿರೋ ಹೇಗೆ? ನಿಮ್ಮ ಸಿ ಸಿ ಕಾಮರ ಕೆಲಸ ಮಾಡಿದ್ದರೆ ವಿಡಿಯೋ ನೋಡಬಹುದಿತ್ತು ...........ಮುಂದಿನ ಸಾರಿ ನಿಮ್ಮ ಪ್ರಯತ್ನ ಸೋಲದಿರಲಿ, ಯಶಸ್ವೀ ಭವ!!!!!!!!!!!
In reply to ಆತ್ಮೀಯ ಗಣೇಶರೆ, by Prakash Narasimhaiya
ಧನ್ಯವಾದ ಪ್ರಕಾಶ್ ಅವರೆ
>>>ಮುಂದಿನ ಸಾರಿ ನಿಮ್ಮ ಪ್ರಯತ್ನ ಸೋಲದಿರಲಿ, ಯಶಸ್ವೀ ಭವ!!
-ಹಾಗೇ ನಮ್ಮ ಸಪ್ತಗಿರಿವಾಸಿ, ರಾಮಮೋಹನ್ ಅವರ ಪ್ರಯತ್ನಗಳೂ ಯಶಸ್ವಿಯಾಗಲಿ ಎಂದು ಹಾರೈಸಬೇಡಿ :)
In reply to ನೈಟಿ ಹಾಕ್ಕೊಂಡೆ ಗಂಡಂಗೆ ಕಾಫಿ ಕೊಡಂಗಿಲ್ಲ...!! by venkatb83
ಸಪ್ತಗಿವಾಸಿ..
ಮದುವೆಗೆ ಮೊದಲೇ "ನೈಟಿ ದ್ವೇಷಿ" ಅನ್ನಬೇಡಿ. ಒಂದೇ ಒಂದು ಹುಡುಗಿ ಸಿಗಲಿಕ್ಕಿಲ್ಲ. ಮದುವೆ ನಂತರ ಬೇಕಿದ್ದರೆ ಹೇಳಿ..ಎಳಕೊಂಡು ಹೋಗಿ ಮಾಲ್ನಿಂದ ಒಂದಷ್ಟು ಸೀರೆ,ಚೂಡಿದಾರ್ ಇತ್ಯಾದಿ ಹೊರಿಸಿಕೊಂಡು ಬರುವರು. :) ಪ್ಚ್.. ಶುಭವಾಗಲಿ.
-ಗಣೇಶಣ್ಣ.
(No subject)
In reply to (No subject) by kpbolumbu
ಅಬ್ಬಾ..ಈ ಪರಿ ಮೆಚ್ಚುಗೆಗೆ ತುಂಬಾ
ಅಬ್ಬಾ..ಈ ಪರಿ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದಗಳು,
ಗಣೇಶ.
In reply to ಅಬ್ಬಾ..ಈ ಪರಿ ಮೆಚ್ಚುಗೆಗೆ ತುಂಬಾ by ಗಣೇಶ
ಈ ಪರಿಯ ಭಂಡತನ ಇನ್ನಾವ ಸ್ವಾಮಿಯಲು
ಈ ಪರಿಯ ಭಂಡತನ ಇನ್ನಾವ ಸ್ವಾಮಿಯಲು ಕಾಣೆ
ಬಲುಹಿನ ಭಂಡ ಅಂಡಾಂಡ ಸ್ವಾಮಿಯಲಲ್ಲದೆ
In reply to ಈ ಪರಿಯ ಭಂಡತನ ಇನ್ನಾವ ಸ್ವಾಮಿಯಲು by kpbolumbu
ಅಂತು ಅಂ.ಬಂ.ಸ್ವಾಮಿಗಳ
ಅಂತು ಅಂ.ಬಂ.ಸ್ವಾಮಿಗಳ ಹಾಡಿಹೊಗಳಲು ಪುರಂದರಸ್ವಾ ಮಿಗಳೊಬ್ಬರು ಸಿಕ್ಕಾಯ್ತು.
In reply to ಅಂತು ಅಂ.ಬಂ.ಸ್ವಾಮಿಗಳ by partha1059
"ಪಾರ್ಥಸಾರಥಿ ಕೃಷ್ಣ"ರೇ ಭಕ್ತನ
"ಪಾರ್ಥಸಾರಥಿ ಕೃಷ್ಣ"ರೇ ಭಕ್ತನ ಹಾಡಿ ಹೊಗಳುವರು :)
ಆಹಾ..ಧನ್ಯನಾದೆ..ಅಂ.ಭಂ.ಸ್ವಾಮಿ.