ಮತ್ತೆ ಮಳೆ ಬರುವುದೇ...
ಕವನ
ಮತ್ತೆ ಮಳೆ ಬರುವುದೇ
ಅತ್ತ ಹೊಳೆ ಹರಿವುದೆ
ಬಿತ್ತ ಕಾಳು ಮೊಳಕೆ ಒಡೆದು
ಎಳೆಯ ಪೈರು ಬೆಳೆವುದೆ
ಮತ್ತೆ ಮಳೆ ಬರುವುದೇ
ಸುಡುವ ಬೇಗೆ ತೊಡವುದೇ
ಕಡಲ ತಡಿಯ ಮಳಲ ಮೇಲೆ
ಒಡಲು ಇಡಲು ಬಿಡುವುದೆ
ಮತ್ತೆ ಮಳೆ ಬರುವುದೆ
ಮುಡಿವ ಮೊಲ್ಲೆ ಬಿರಿವುದೇ
ಭಾಂಡವ ಮಧು ತುಂಬಿ ಬಿಡುವ
ದುಂಬಿ ಹಿಂಡು ನೆರೆವುದೆ
ಮತ್ತೆ ಮಳೆ ಬರುವುದೆ
ಎಲ್ಲ ನೆನಪ ತರುವುದೆ
ನಲ್ಲ ನುಡಿದ ಬೆಲ್ಲದ ನುಡಿ
ಮೆಲ್ಲನೆದೆ ಮಿಡಿವುದೆ
-ಮಾಲು
Comments
"ಭಾಂಡವ ಮಧು ತುಂಬಿ ಬಿಡುವ
"ಭಾಂಡವ ಮಧು ತುಂಬಿ ಬಿಡುವ
ದುಂಬಿ ಹಿಂಡು ನೆರೆವುದೆ
"
>>>>ಭಾಂಡವ
ಆ ಪದದ ಅರ್ಥ ಗೊತ್ತಾಗ್ಲಿಲ್ಲ..
ಮಳೆ ಖಂಡಿತ ಬರಲಿದೆ..
"ಭರವಸೆಯೇ ಬೆಳಕು"
ಕವನ ಸಖತ್ ...
ಶುಭವಾಗಲಿ..
\|
In reply to "ಭಾಂಡವ ಮಧು ತುಂಬಿ ಬಿಡುವ by venkatb83
ಧನ್ಯವಾದಗಳು ಸರ್. ಭಾಂಡ = ಪಾತ್ರೆ
ಧನ್ಯವಾದಗಳು ಸರ್.
ಭಾಂಡ = ಪಾತ್ರೆ
ಚೆನ್ನಾಗಿದೆ. ಬಂದೇಬಿಡ್ತಲ್ಲ ಮಳೆ.
ಚೆನ್ನಾಗಿದೆ. ಬಂದೇಬಿಡ್ತಲ್ಲ ಮಳೆ.