ಕೋಪ
ಚಿತ್ರ
![](https://saaranga-aws.s3.ap-south-1.amazonaws.com/s3fs-public/styles/large/public/angry.jpg?itok=6uKh8J28)
ದೇವರ ಸನ್ನಿದಾನದಲ್ಲಿ ಎಲ್ಲ ಅಹಂಕಾರ ಕೋಪ ದ್ವೇಷಗಳನ್ನು ಬಿಟ್ಟು ಶುದ್ದ ಭಕ್ತಿಭಾವದಲ್ಲಿರಬೇಕು ಅನ್ನುವರು. ಆದರೆ ದೇವಾಲಯಕ್ಕೆ ಹೊರಡುವಾಗ ನಾವು ಅಂತ ಶುದ್ದ ಅಂತಕರಣದಲ್ಲಿ ಇರುವೆವೆ. ಅಲ್ಲಿರುವರೆಲ್ಲ ಕೋಪವನ್ನು ಬಿಟ್ಟಿರುವರೆ ಅಸಹನೆಯನ್ನು ತೊರೆದು ಪ್ರೇಮ ಭಾವದಲ್ಲಿ ಇರುವರೆ. ನೋಡೋಣವೆಂದು ಒಬ್ಬ ನಿಗೆ ಮನಸಾಯ್ತು. ಸರಿ ಎಂದು ಬೆಳಗ್ಗೆ ಬೆಳಗ್ಗೆಯೆ ದೇವಾಲಯಕ್ಕೆ ಹೋದವನು ಒಳಗೆ ಕುಳಿತ.
ನಂತರ ಅಲ್ಲಿ ಬರುವರನ್ನೆಲ್ಲ ರೇಗಿಸ ತೊಡಗಿದ. ಒಬ್ಬನಿಗೆ 'ನಿನ್ನ ಕಾಲು ಸೊಟ್ಟ ಎನ್ನುವನು' ಮತ್ತೊಬ್ಬನಿಗೆ 'ಮೈಬಗ್ಗಿಸಿ ನಮಸ್ಕಾರ ಮಾಡು ಅದೇಕೆ ನಿಂತು ಕೈಮುಗಿಯುತ್ತಿ ಅನ್ನುವನು'
ಹುಡುಗರು ಬಂದರೆ "ದೇವರತ್ತ ನೋಡು, ಅದೇನು ನಿನ್ನ ಕಣ್ಣು ಹುಡುಗಿಯರತ್ತ" ಎಂದು ಕೂಗಿ ಹೇಳುತ್ತಿದ್ದನು.
ಹುಡುಗಿಯರಿಗೆ "ದೇವರ ಮುಂದೆಯು ಮೊಬೈಲ್ ಬೇಕ ಎಸೆ ಅದನ್ನು ನಮಸ್ಕಾರ ಹಾಕು" ಎನ್ನುವನು
ವಯಸ್ಕರು ಬಂದರೆ" ನಿನ್ನದೆಂತ ಡೋಗಿ ಭಕ್ತಿ ' ಎಂದು ರೇಗಿಸಿದನು.
ಎಲ್ಲರಿಗು ರೇಗುತ್ತಿತ್ತು. ಅವನೊಡನೆ ವಾದಕ್ಕೆ ನಿಂತು ಕೂಗಾಡುವರು. ನಾನು ಹೇಗಿದ್ದರೆ ನಿನಗೇನು ಬಾಯಿಮುಚ್ಚು ಎಂದೆಲ್ಲ ಅವನಿಗು ಬೈದರು. ಯಾರು ಅಂದರೆ ಅವನೇನು ತಲೆ ಕೆಡಸಿಕೊಳ್ಳಲಿಲ್ಲ. ತನ್ನ ಕೆಲಸ ಮುಂದುವರೆಸಿದ ಬಂದವರನ್ನೆಲ್ಲ ಅಂದು ಅವರ ಕೋಪ ಪರೀಕ್ಷಿಸುತ್ತಿದ್ದ. ಯಾರು ಇಲ್ಲ ಅನ್ನುವಾಗ ದೇವರ ಪೂಜಾರಿಯನ್ನು ಬಿಡಲಿಲ್ಲ
"ಸ್ನಾನ ಒಂದು ಮಾಡಿ ಬರುತ್ತಿ ನಿನ್ನ ಮನವೆ ಶುದ್ದವಿಲ್ಲ, ಸರಿಯಾಗಿ ಪೂಜೆ ಮಾಡು ಮನವಿಟ್ಟು " ಎಂದು ರೇಗಿಸುವನು
ಎಲ್ಲರು ಸಹನೆ ಕಳೆದುಕೊಂಡರು. ಕೆಲವರು ಅವನಿಗೆ ನಾಲಕ್ಕು ಹೊಡೆತವನ್ನು ಕೊಟ್ಟರು.
ಒಬ್ಬರಾದರು ಏಕೆ ಹೀಗೆ ಆಡುತ್ತಿದ್ದಿ ಎಂದು ಕೇಳಲು ಹೋಗಲಿಲ್ಲ.
ಇಲ್ಲಿ ಗಲಾಟೆಮಾಡಬೇಡ ಹೊರಗೆ ಹೋಗು ಎಂದರು
ಅದಕ್ಕವನು "ನಾನು ದೇವರನ್ನು ನೋಡಲು ಬಂದೆ ' ಎಂದ .
ಪೂಜಾರಿ ಎಂದ "ದೇವರು ಇಲ್ಲ ಎಂತದು ಇಲ್ಲ ಹೊರಗೆ ಹೋಗು"
"ಮತ್ತೆ ನೀನು ಯಾರಿಗೆ ದಿನ ಪೂಜೆ ಮಾಡೋದು"
ಪೂಜಾರಿ "ದೇವರ ವಿಗ್ರಹಕ್ಕೆ"
ಅವನು ಕೇಳಿದ "ದೇವರು ಇಲ್ಲವೆಂದರೆ ಎಲ್ಲಿ"
ಪುಜಾರಿ "ಇಲ್ಲ ಅಂದರೆ ಹೊರಗೆ ಹೋಗಿದ್ದಾನೆ"
ಅವನು "ಸರಿ ದೇವರು ಬರುವವರೆಗು ಕಾಯುತ್ತೇನೆ"
ಪೂಜಾರಿ ತಲೆಕೆಟ್ಟು ಹೇಳಿದ "ದೇವರು ಬರುವುದು ಇಲ್ಲ ಎಂತದೂ ಇಲ್ಲ ನೀನು ಹೊರಡು, ಇಲ್ಲಿ ಎಲ್ಲರು ಶಾಂತಿಯಿಂದ ಇರಲು ಬಿಡು"
ಆದರೆ ಅವನು ಹೋಗಲು ಒಪ್ಪಲಿಲ್ಲ
ಕಡೆಗೆ ಪೂಜಾರಿಯ ಜೊತೆ ಎಲ್ಲರು ಸೇರಿದರು, ಗಲಾಟೆ ಮಾಡುತ್ತಿದ್ದ ಅವನನ್ನು ಹೊತ್ತು ತಂದು ದೇವಾಲಯದಿಂದ ಹೊರಹಾಕಿ ತಲಾ ಒಬ್ಬರು ಒಂದು ಏಟಿನಂತೆ ಬಿಗಿದು ನೆಮ್ಮದಿಯಾಗಿ ಒಳಹೋದರು.
Rating
Comments
@ಗುರುಗಳೇ -ಬೇಕಿತ್ತಾ????
" "ದೇವರು ಬರುವುದು ಇಲ್ಲ ಎಂತದೂ ಇಲ್ಲ ನೀನು ಹೊರಡು, ಇಲ್ಲಿ ಎಲ್ಲರು ಶಾಂತಿಯಿಂದ ಇರಲು ಬಿಡು""
:()))
ಗುರುಗಳೇ
ಇದನ್ನು ಫೆಸ್ಬುಕ್ಕಲ್ಲಿ ಓದಿ ಪ್ರತಿಕ್ರಿಯಿಸಿದ್ದೆ ....
ದೇವರು ಧರ್ಮ ಆಚಾರ ವಿಚಾರ ಅಂತೆಲ್ಲ ಏನೆಲ್ಲಾ ವಯುಕ್ತಿಕ ವೈರುಧ್ಯಗಳಿದ್ದರೂ- ಅಪನಂಬಿಕೆ -ಅನಾದಾರ ಇದ್ದರೂ ಅದು ವಯುಕ್ತಿಕವಾಗಿರಬೇಕು..
ಅದನ್ನು ಬೇರೆಯವರ ಮೇಲೆ ಹೇರಲು ಹೋದಾಗ ಹೀಗೆ ಆಗೋದು..!!
ನೆಮ್ಮದಿ ಶಾಂತಿ ಸುಖ ಸಂಪತ್ತು ಬಯಸಿ ಬರುವ ಜನರಿಗೆ ಅಶಾಂತಿ ಉಂಟುಮಾಡಿದ ಆ ಮಹಾನುಭಾವನಿಗೆ ಧರ್ಮದೇಟು ಬಿದ್ದದ್ದು ಅಚ್ಚರಿ ಏನಲ್ಲ..!!
ಈ ತರಹದ್ದು ಆಗಾಗ ಪತ್ರಿಕೇಲಿ ಓದಿದ ನೆನಪು...
ಶುಭವಾಗಲಿ..
\|
In reply to @ಗುರುಗಳೇ -ಬೇಕಿತ್ತಾ???? by venkatb83
ಸಪ್ತಗಿರಿಯವರೆ
ಒ0ದೆ ಕತೆಯನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಅ0ತ ನಿಮ್ಮ ಪ್ರತಿಕ್ರಿಯೆ ನೋಡಿಯೆ ಅರ್ಥವಾಗಿದ್ದು !!
In reply to ಸಪ್ತಗಿರಿಯವರೆ by partha1059
ಆತ್ಮೀಯ ಪಾರ್ಥ ರವರೆ,
ಆತ್ಮೀಯ ಪಾರ್ಥ ರವರೆ,
ಬಿ chi ಯವರು ಒಂದು ಮಾತು ಹೇಳುತ್ತಾರೆ, " ಕೆಟ್ಟ ಭಕ್ತ ಬಂದಾಗ ದೇವ ಹೊರಗೆ, ಭಕ್ತ ಒಳಗೆ " ಪ್ರಾಯಶಃ ಇದಕ್ಕೆ ಇರಬೇಕು. ಧನ್ಯವಾದಗಳು.
In reply to ಆತ್ಮೀಯ ಪಾರ್ಥ ರವರೆ, by Prakash Narasimhaiya
ಪ್ರಕಾಶ್ ನರಸಿಂಹಯ್ಯನವರೆ ವಂದನೆಗಳು
ಈಗ ಎಲ್ಲರ ಬರಹಗಳನ್ನು ಪಾಲೊ ಮಾಡಲೆ ಕಷ್ಟ ಆಗುತ್ತಿದೆ, ಯಾರು ಬರೆಯುತ್ತಿದ್ದಾರೆ, ಸುಮ್ಮನಿದ್ದಾರೆ ಅರ್ಥವೆ ಆಗುತ್ತಿಲ್ಲ, ಹೆಸರಿನ ಬದಲು ಕೆಲವರ ಯೂಸರ್ ಐಡಿ ಬರುತ್ತದೆ ಹಾಗಾಗಿ ಮತ್ತೆ ಗಲಿಬಿಲಿ. ಪ್ರತಿಕ್ರಿಯೆ ತೆಗೆದು ನೋಡಿದರೆ, ಪ್ರತಿಕ್ರಿಯೆ ಯಾವ ಬರಹಕ್ಕೆ ಎಂದು ಗೊತ್ತಾಗುವದಿಲ್ಲ, ಓದಿದ ನಂತರವಷ್ಟೆ ಅರ್ಥವಾಗುತ್ತದೆ. ಎಲ್ಲವು ಸರಿ ಹೋಗಬಹುದು ಎನ್ನುವ ನಿರೀಕ್ಷೆಯಲ್ಲಿ
ಪಾರ್ಥಸಾರಥಿ
In reply to ಸಪ್ತಗಿರಿಯವರೆ by partha1059
ಫೆಸ್ಬುಕ್ಕಲ್ಲಿ ...!!
;()))
ಫೆಸ್ಬುಕ್ಕಲ್ಲಿ ಅವಸರವಸರವಾಗಿ ಓದಿ ಪ್ರತಿಕ್ರಿಯಿಸುವೆ..!!
ಆದರೆ ಸಂಪದ ಓಪನ್ ಮಾಡಿದಾಗ ಮಾತ್ರ ಪೂರ್ಣವಾಗಿ ತಾಳ್ಮೆಯಿಂದ ಓದುವೆ.. ಅದೇ ಈ ಎರಡು ರೀತಿಯ ಪ್ರತಿಕ್ರಿಯೆಯ ಗುಟ್ಟು..!
ಶುಭವಾಗಲಿ.
\|
ಇದೇ ಸತ್ಯ!!!
ಇದೇ ಸತ್ಯ!!!
ಚೆನ್ನಾಗಿದೆ ಪಾರ್ಥವ್ರೆ