ಅಸ್ಥಿಪಂಜರ...

ಅಸ್ಥಿಪಂಜರ...

ಕವನ

 

ಮೈ ಕೈ ತುಂಬಿಕೊಂಡಾಕೆಯ
ಮೈ ಬಿಸುಪು

ಕಣ್ಣ ಹೊಳಪು

ಅಂಗ ಸೌಷ್ಠವದ ಚೂಪು
ನೋಡಿ
ಮನವರಳಿತ್ತು ನಿನ್ನೆ

ಅಷ್ಟಕ್ಕೇ...

ಊರೇ ತನ್ನದೆಂದು
ಮೆರೆದಿದ್ದ ಸಿರಿವಂತನ
ಹೆಣದ 
ಮೆರವಣಿಗೆಗೆರಚಿದ
ನಾಲ್ಕಾಣೆ 
ಕಾಲ ಮೇಲೆ ಬಿತ್ತು

ಹೂ ತೂಕದ ಮಂಡಕ್ಕಿಯೂ

ಮೈಮೇಲೆ ಕೂರ

ಅಜ್ಜಿ ಹಣೆಯ ಮೇಲಿನ 
ತಂಪು ನೆರಿಗೆ
ಅವಳ ಯವ್ವನ 
ಬೆಂಕಿಯೊಳಗೆ ಬೆಂದ
ಅದೆಷ್ಟೋ 
ಕುರುಹುಗಳನ್ನು
ಮುಂದೆ 
ಚೆಲ್ಲಿತ್ತು ಇತಿಹಾಸವಾಗದೆ

ತಡಿ ಸ್ಮಶಾಣದೊಳಗಿಂದ
ಮನುಷ್ಯ ಮೈ ಮಾಂಸ
ಬೆಂದ ಕಮಟು ವಾಸನೆಗೆ

ಅಂಜಿ ಕಾಲೆಳೆದರೆ
'ಅಣ್ಣಾ' ಎಂದು ಕೂಗಿದ
ಪುಟ್ಟಿ ಮೈಮೇಲೂ
ಅರೆಬಟ್ಟೆಯಿಲ್ಲ ಆ ಸುಂದರಿಯಂತೆ

ಮೈ ಕಾಮ ಶೂನ್ಯವಾಗಿ
ಮತ್ತೆ ಮನಸ್ಸರಳಿಸಿ
ಸುಂದರಿಯೆಡೆಗೆ
ಕಣ್ಣುಬಿಟ್ಟೆ
'ಅಸ್ಥಿಪಂಜರ'ವಾಗಿ 
ತೂಗುತ್ತಿದ್ದಳು

Comments

Submitted by venkatb83 Tue, 11/06/2012 - 16:55

In reply to by Maalu

ಮೋಹನ್ ಅವ್ರೆ-
ಬರಹ ಮತ್ತೆ ಮತ್ತೆ ಓದಿದಾಗ ಹಲವು ಅರ್ಥಗಳು ಗೋಚರವಾಗುತ್ತವೆ.
ಬರಹ ವಸಿ ಅರ್ಥ ಮಾಡಿಕೊಳ್ಳಲು ಕಸ್ಟವೇ ..!!
ಇಂದು ನಿನ್ನೆ ನಡುವಿನ ಕೆಲವು ಗಂಟೆಗಳು -ನೋಟಗಳಲ್ಲಿ ಭಾವನೆಗಳ ವ್ಯತ್ಯಾಸ ಬದಲಾವಣೆ ಅಚ್ಚರಿ ಹುಟ್ಟಿಸುತ್ತದೆ..
ಒಂದು ಹೊಸ ರೀತಿಯ ಬರಹ..
ಹಿಡಿಸಿತು.
ಶುಭವಾಗಲಿ..

ನನ್ನಿ
\|