ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ...
ಕವನ
ಒಲ್ದಲ್ ಕೆಲ್ಸ ಮಾಡ್ತಿದ್ ನನ್ನ
ಕರ್ಕೊಂಡ್ ಬಂದ್ಯಾಕ್ ಇಲ್ಲಿ ತಿಮ್ಮಿ
ನಿಮ್ಮೂರ್ ಜನ್ರು ಕೆರ್ಯಾಗ್ ನೀರಿಲ್ಲನ್ದ್ರು
ನಿನ್ನ ಕಣ್ಣಾಗ್ ನೀರೆಂಗ್ ತುಂಬ್ತು ಅಮ್ಮಿ!
ಆಕಾಸ್ದಾಗೆ ಆರೋ ಅಕ್ಕಿ, ಮರ್ದಾಗ್
ಮಾಡ್ಕೊಂತದೆ ಗೂಡ್ನ
ನಾನ್ ಬೂಮ್ಯಾಕಿದ್ದು ದುಡ್ಡು ದುಡ್ಡು
ಮಡ್ಗೋದ್ಬ್ಯಾಡವೆ ಸ್ವಂತಕ್ಕೊಂದು ಸೂರ್ನ!
ನಿನ್ ಸಂದಾಕಿರೋ ಮುಕಾ
ಮತ್ ನೋಡಾಕ್ ಬರ್ತೀನ್ ತಿಮ್ಮಿ
ಮನ್ಷ ಮನ್ಷ ದೂರಿದ್ದರೇನು, ಇರ್ತೈತ್ಪ್ರೀತಿ
ನನ್ಮನ್ಸಲ್ಲ ಮರದ್ ದಿಮ್ಮಿ !
(ಓದುಗರು ಈ ಪದ್ಯವನ್ನು ಮನಸ್ಸಿನಲ್ಲಿ ಓದಿಕೊಳ್ಳದೆ
ಜೋರಾಗಿ ಓದಿಕೊಳ್ಳಬೇಕಾಗಿ ವಿನಂತಿ)
Comments
ಪದ್ಯ ಸೊಗಸಾಗಿದೆ.
ಪದ್ಯ ಸೊಗಸಾಗಿದೆ.
In reply to ಪದ್ಯ ಸೊಗಸಾಗಿದೆ. by kpbolumbu
ಧನ್ಯವಾದಗಳು
ಧನ್ಯವಾದಗಳು