ಪುಸ್ತಕ ಓದುವುದರ ಇಕ್ಕಟ್ಟುಗಳು
ಪುಸ್ತಕ ಓದುವಾಗ ಬೇಗಬೇಗ ಓದಬೇಕೋ, ನಿಧಾನವಾಗಿಯೋ? - ಇಲ್ಲಿ ಪುಸ್ತಕ ಎಂದರೆ ಕಥೆ, ಕಾದಂಬರಿ ಇಂಥದ್ದು ಅಂದುಕೊಳ್ಳೋಣ. ಆಫೀಸಿನ ಟೆಕ್ನಿಕಲ್ ಮ್ಯಾನುಯಲ್ ಅಲ್ಲ.
ಬೇಗಬೇಗ:
ಎಷ್ಟೊಂದು ಒಳ್ಳೆಯ ಪುಸ್ತಕಗಳು ಬಂದಿವೆ. ಬರುತ್ತಿವೆ. ಇವನ್ನೆಲ್ಲಾ ಓದಬೇಕಾದರೆ , ಇರುವಷ್ಟು ಟೈಮಿನಲ್ಲಿ ಆದಷ್ಟು ಬೇಗ ಓದಿ ಮುಗಿಸಬೇಕು. ಅಂದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದಲು ಸಾಧ್ಯ
ಮೆಲ್ಲಗೆ :
ತೇಜಸ್ವಿ ಪುಸ್ತಕವನ್ನ ಅರ್ಧಘಂಟೆಯಲ್ಲಿ ಓದಿ ಬಿಸಾಕುವುರಲ್ಲಿ ಏನರ್ಥ. ಒಂದೊಂದು ಲೈನು, ಒಂದೊಂದು ಪಾತ್ರವನ್ನು ನಿಧಾನವಾಗಿ ಓದಿ , ಅರ್ಥಮಾಡಿಕೊಂಡು ಸವಿಯಬೇಕು. ಮಂದಣ್ಣ , ಪ್ಯಾರ, ಮಾರ, ಕರ್ವಾಲೋ ಎಲ್ಲ ನಮ್ಮೆದುರಿಗೆ ಪ್ರತ್ಯಕ್ಷವಾಗುತ್ತಿರುವಾಗ , ಬುರ್ರನೆ ಓದಿ ಮುಂದೆ ಹೋಗಲಾಗುತ್ತದೆಯೇ? ಮೆಲ್ಲಗೆ ಓದಬೇಕು. ಮತ್ತೆಮತ್ತೆ ಓದಬೇಕು , ಮೆಲ್ಲಬೇಕು. ಇದೇ ಮಾತು ಮುಸ್ಸಂಜೆಯ ಕಥಾ ಪ್ರಸಂಗ, ಮರಳಿ ಮಣ್ಣಿಗೆ, ಕಾನೂರು ಹೆಗ್ಗಡಿತಿ, ಗೃಹಭಂಗದಂಥ ಅನೇಕ ಪುಸ್ತಕಗಳಿಗೂ ಅನ್ವಯವಾಗುತ್ತದೆ. ಓದಿದ ಪುಸ್ತವನ್ನೇ ಮತ್ತೆ ಮತ್ತೆ ಓದಿ ಆಸ್ವಾದಿಸುವುದರ ಸುಖವೇ ಬೇರೆ.
ಆದರೆ ಅದೇ ಅದೇ ಪುಸ್ತ ಮತ್ತೆ ಮತ್ತೆ ಓದುತ್ತಿದ್ದರೆ , ಹೊಸ ಪುಸ್ತಗಳನ್ನ ಓದುವುದಕ್ಕೆ ಟೈಮೆಲ್ಲಿದೆ?
ಏನು ಮಾಡುವುದು?
Comments
ಉ: ಪುಸ್ತಕ ಓದುವುದರ ಇಕ್ಕಟ್ಟುಗಳು