ಮಂಕೀಸ್ ಪಾ (ಕೋತಿಯ ಮುಂಗೈ

ಮಂಕೀಸ್ ಪಾ (ಕೋತಿಯ ಮುಂಗೈ

ಪುಸ್ತಕದ ಲೇಖಕ/ಕವಿಯ ಹೆಸರು
ವಿಲಿಯಂ ವೇಮರ್ಕ್ ಜಾಕೋಬ್
ಪ್ರಕಾಶಕರು
ಸೆಪ್ಟೆಂಬರ್ ೧೯೦೨ , ಇಂಗ್ಲೆಂಡ್

ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ.

ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂಗ್ಲ ಬಾಷೆ ಓದಿಗಾಗಿ 'ಮಾಡ್ರನ್ ಒನ್ ಆಕ್ಟ್ ಪ್ಲೇ ಶೀರ್ಷಿಕೆಯಲ್ಲಿ ಇದ್ದ ಪ್ರಸಿದ್ದ ನಾಟಕ ಮಂಕೀಸ್ ಪಾ. ಕಾಲೇಜಿನಲ್ಲಿ ಆಗ ಧ್ರುವಕುಮಾರ್ ಎಂಬ ಅಂಗ್ಲ ಉಪನ್ಯಾಸಕರಿದ್ದರು. ವಿಶಿಷ್ಟ ವ್ಯಕ್ತಿತ್ವ ಅವರದು, ಅವರ ಮಾತು, ನಡೆ ನುಡು ಎಲ್ಲ ನಮಗೊಂದು ಕುತೂಹಲ. ಹುಡುಗಿಯರು ಅವರನ್ನು ಧರ್ಮೇಂದ್ರ ಎಂದೆ ಕರೆಯುತ್ತಿದ್ದರು. ಪಾಠ ಮಾಡಲು ನಿಂತರೆ ಕಣ್ಣೆದುರು ಪಾತ್ರಗಳು ಕುಣಿಯುವಂತೆ ವರ್ಣಿಸುತ್ತಿದ್ದರು. ಆಗ ಅವರು ತೆಗೆದುಕೊಂಡ ನಾಟಕ ಪಠ್ಯ ಈ ಮಂಕೀಸ್ ಪಾ

ನಾಟಕದ ವಿವರ:

ಕತೆಯಲ್ಲಿ ಮಿ! ವೈಟ್ ಹಾಗು ಅವನ ಪತ್ನಿ ಮಿಸೆಸ್ ! ವೈಟ್ ಪ್ರಮುಖ ಪಾತ್ರಗಳು, ವೃದ್ದರು, ಅವರ ಮಗ ಹರ್ಬರ್ಟ್ , ಫ್ಯಾಕ್ಟರಿ ಒಂದರಲ್ಲಿ ಕೆಲಸಗಾರ. ಮೇಜರ್ ಮೋರಿಸ್ ಎಂಬಾಗ ಭಾರತದಲ್ಲಿ ಸೈನ್ಯದಲ್ಲಿ ಇದ್ದವನು, ಮಿ!ವೈಟ್ ರ ಸ್ನೇಹಿತ. ಅವನು ಒಮ್ಮೆ ತಾನು ಭಾರತದಲ್ಲಿದ್ದಾಗ ಫಕೀರನೊಬ್ಬನಿಂದ ಪಡೆದ ತಾಯಿತ ತೋರುವನು, ಅದು ಕೋತಿಯ ಮುಂಗೈನಿಂದ ಮಾಡಿರುವುದು. ಮತ್ತು ಅದು ಮಂತ್ರ ಶಕ್ತಿ ಹೊಂದಿದ್ದು , ಅದನ್ನು ಪಡೆದವ ಬೇಡುವ ಯಾವುದೆ ಮೂರು ವರಗಳನ್ನು ಖಂಡೀತ ನೆರವೇರಿಸುವದೆಂದು, ತನಗೆ ಅದರ ಅವಶ್ಯಕತೆ ಇಲ್ಲವೆಂದು ತಿಳಿಸಿ ಕೊಟ್ಟು ಹೋಗುವನು.

ಲಘು ಸ್ವಭಾವದಿಂದ, ಅದನ್ನು ಪರೀಕ್ಷಿಸಲು ಎಂಬಂತೆ, ಮಿ! ವೈಟ್ ದಂಪತಿಗಳು, ತಾವು ಕಟ್ಟ ಬೇಕಿದ್ದ ಮನೆಯ ಸಾಲದ ಕಡೆಯ ಕಂತು ಎರಡು ನೂರು ಪೌಂಡ್ ಗಳು ಹೇಗಾದರು ಸಿಗಲಿ ಎಂದು , ಅ ಮಂತ್ರ ಶಕ್ತಿಯ ತಾಯಿತ ಹಿಡಿದು ಕೇಳಿಕೊಳ್ಳುವರು. ಆ ದಂಪತಿಗಳಿಗೆ ಅಘಾತವೊಂದು ಕಾದಿರುತ್ತದೆ, ಸಂಜೆ ಮಗನನ್ನು ಕಾಯುತ್ತಿರುವಾಗ ಮಗನ ಬದಲಿಗೆ ಅವನು ಕೆಲಸ ಮಾಡುವ ಪ್ಯಾಕ್ಟರಿ ಯಿಂದ್ ಸುದ್ದಿ ಬರುತ್ತದೆ, ಕೆಲಸ ಮಾಡುವಾಗ ಅಜಾಗರುಕತೆಯಿಂದ ಅವರ ಮಗ ಹರ್ಬಟ್ ಯಂತ್ರಕ್ಕೆ ಸಿಕ್ಕಿ ಛಿದ್ರ ಛಿದ್ರವಾಗಿ ಸತ್ತು ಹೋದನೆಂದು ತಿಳಿಸಿ, ಶವವನ್ನು ತಂದು ಒಪ್ಪಿಸಿ, ಕಂಪನಿಯ ಮಾಲಿಕರು ಪರಿಹಾರಾರ್ಥವಾಗಿ ಎರಡು ನೂರು ಪೌಂಡ್ ಗಳನ್ನು ಕೊಟ್ಟು ಕಳಿಸುವರು.

ಮೊದಲ ವರ ನೆರವೇರಿದ ರೀತಿಗೆ ದಂಪತಿಗಳಿಬ್ಬರು ಅಘಾತ ಹೊಂದುವರು. ಮಗನ ಶವ ಸಂಸ್ಕಾರ ಮುಗಿಸಿ ಕೆಲವು ದಿನದ ನಂತರ, ಮನದ ಸಮತೋಲನೆ ಕಳೆದು ಕೊಂಡಂತೆ , ಹರ್ಬರ್ಟ್ ನ ತಾಯಿ, ಅದೆ ತಾಯಿತವನ್ನು ತನ್ನ ಮಗು ಬದುಕಿ ಬರುವಂತೆ ಕೇಳಿಕೊಳ್ಳಲು ತಿಳಿಸುವಳು, ಅವನು ಅವಳನ್ನು ಸಮಾದಾನಪಡಿಸಲು ಅಂತೆಯೆ ಮಾಡುವನು. ಮರುಕ್ಷಣದಲ್ಲಿ ಹೊರಗೆ ಬಾಗಿಲು ತಟ್ಟುವ ಶಬ್ದ ಮತ್ತು ಯಾರೊ ಅಮ್ಮನನ್ನು ಕೂಗುತ್ತಿರುವ ಶಬ್ದ, ದಂಪತಿಗಳು ಸ್ವಷ್ಟವಾಗಿ ಗುರುತಿಸುವರು, ಹೊರಗೆ ಕೂಗುತ್ತಿರುವುದು ಹರ್ಬರ್ಟ್ ಅಂದರೆ ಅವರ ಮಗನ ದ್ವನಿ. ತಾಯಿ ಮಗ ಬಂದನೆಂದು ಭ್ರಮೆಯಿಂದ ಬಾಗಿಲು ತೆರೆಯಲು ನಡೆಯುವಳು. ಮಿ! ವೈಟ್ ಸಾಕಷ್ಟು ಗಾಭರಿ ಹೊಂದುವನು, ತಾನೆ ದೇಹ ಛಿದ್ರಗೊಂಡಿದ್ದ ಮಗನನ್ನು ಗೋರಿಗೆ ಸೇರಿಸಿ ಬಂದಿರುವ ಈಗ, ಅವನು ಎದ್ದು ಬಂದಿದ್ದಾನೆ ಎಂದರೆ ಏನು ಗತಿ. ತಕ್ಷಣ ನಿರ್ದಾರ ತೆಗೆದುಕೊಂಡು, ಮೂರನೆ ವರವಾಗಿ ತನ್ನ ಮಗನು ಮತ್ತೆ ಮೊದಲಿನ ಸ್ಥಳಕ್ಕೆ ತೆರಳಲಿ ಹಿಂದೆ ಬರುವುದು ಬೇಡ ಎಂದು ತಾಯಿತ ಹಿಡಿದು ಕೇಳುವ, ಹೊರಗೆ ಕೇಳುತ್ತಿದ್ದ ಮಗನ ದ್ವನಿ ನಿದಾನಕ್ಕೆ ಕರಗಿ ಹೋಯಿತು.

ದು:ಖ ಪೂರ್ಣಳಾದ ತಾಯಿ ತನ್ನ ಮಗನನ್ನು ನಿರೀಕ್ಷಿಸುತ್ತ ಬಂದು ಬಾಗಿಲು ತೆರೆದಳು. ಹೊರಗೆ ಯಾರು ಇರುವದಲ್ಲಿ, ಅದೆ ನೀರಸ ಇಳಿಬೆಳಕಿನ ವಾತವಾರಣ. ತಣ್ಣಗೆ ಬೀಸುತ್ತಿರುವ ಕುಳಿರ್ಗಾಳಿ, ಮಳೆಯ ತುಂತುರು ಅಷ್ಟೆ. ಗಂಡ ಆಕೆಯನ್ನು ಮತ್ತೆ ಒಳಗೆ ಕರೆದೊಯ್ಯುವ.

ಕತೆಯ ನೀತಿ ಪಕೀರ ಹೇಳುವಂತೆ, ನಮ್ಮ ಜೀವನವನ್ನು ನಿಯಂತ್ರಿಸುವುದು ಒಂದು ವಿದಿ, ನಾವು ಅದರ ವಿರುದ್ದ ಹೋರಟರೆ, ಪರಿಣಾಮ ಬೀಕರ

ವಿದ್ಯಾರ್ಥಿ ಜೀವನದಲ್ಲಿ ಓದಿದ ಸಣ್ಣ ಕತೆಯಾದರು, ಕತೆಯ ಪಾತ್ರಗಳು, ಪರಿಣಾಮ, ಎಲ್ಲಕ್ಕಿಂತ ಹೆಚ್ಚಾಗಿ, ಪ್ರಾಧ್ಯಾಪಕರು ಅದನ್ನು ವಿವರಿಸಿದ ಶೈಲಿ ಎಲ್ಲವು ಸೇರಿ ಮನದಲ್ಲಿ ಹಸಿರಾಗಿ ನಿಂತಿದೆ. ಪ್ರಾಧ್ಯಾಪಕರು ನಾಟಕದ ಪಾತ್ರಗಳ ಸಂಬಾಷಣೆ ಹೇಳುವಾಗ, ಅದಕ್ಕೆ ತಕ್ಕಂತೆ ತಮ್ಮ ದ್ವನಿ ಸಹ ಬದಲಾಯಿಸುತ್ತ ಇದ್ದದ್ದ, ಹೆಣ್ಣು ಪಾತ್ರ ವಿದ್ದರೆ ಅವರ ದ್ವನಿ ಸಹ ಹೆಣ್ಣಿನಂತೆಯೆ ದ್ವನಿಸುತ್ತ ಇದ್ದದ್ದು, ಯಾವುದೊ ಹಳೆಯ ಭ್ರಮೆಯ ಲೋಕಕ್ಕೆ ಕೊಂಡೊಯ್ಯುತ್ತದೆ.

Comments

Submitted by bhalle Sat, 11/03/2012 - 17:52

ಸೊಗಸಾದ ಕಥಾವಸ್ತು ... ಇದನ್ನೇ ಮತ್ತೊಂದು ರೂಪದಲ್ಲಿ ಓದಿದ್ದೆ. ಅಲ್ಲಿ ಮಗನನ್ನು ಗೋರಿಗೆ ಕಳಿಸುವ ಮೊದಲೇ ವರ ಕೇಳುತ್ತಾರೆ. ಬದುಕಿದ ಮಗ, ಜೀವಚ್ಚವವಾಗಿ ಬರುತ್ತಾನೆ. ಎಲ್ಲವೂ ಮಲಗಿದ್ದಲ್ಲೇ ಜೊತೆಗೆ ಹೊರ ಪ್ರಪಂಚದ ಅರಿವೂ ಇಲ್ಲದವನಾಗಿ .... ಧನ್ಯವಾದಗಳು ಪಾರ್ಥರೇ

Submitted by Prakash Narasimhaiya Sat, 11/03/2012 - 20:48

In reply to by bhalle

ಆತ್ಮೀಯ ಪಾರ್ಥರೆ,
ಕಥೆ ಚಿಕ್ಕದಾದರೂ ಉತ್ತಮ ಸಂದೇಶ ನೀಡುತ್ತದೆ. ಬಹಳ ವರ್ಷಗಳ ಹಿಂದೆ ಕೇಳಿದ ಕಥೆಯಾದರೂ, ಹೊಸತು ಎಂದೇ ಅನಿಸಿತು. ಉತ್ತಮ ಪ್ರಸ್ತುತಿ. ಧನ್ಯವಾದಗಳು.

Submitted by ಗಣೇಶ Sat, 11/03/2012 - 23:53

In reply to by bhalle

ಭಲ್ಲೇಜಿ,
ಕತೆ ಓದಿದಾಗ ಮಗನನ್ನು ಗೋರಿಗೆ ಕಳುಹಿಸುವ ಮೊದಲೇ ವರ ಕೇಳಬಾರದಿತ್ತೇ ಅಂತ ನನಗೂ ಅನಿಸಿತು. ನಿಮ್ಮ ಪ್ರತಿಕ್ರಿಯೆ ನೋಡಿದಾಗ ಅದು ಮತ್ತೂ ಭಯಂಕರ ಅನಿಸಿತು.
ಪಾರ್ಥಸಾರಥಿಯವರೆ,
>>>ಕತೆಯ ಪಾತ್ರಗಳು, ಪರಿಣಾಮ, ಎಲ್ಲಕ್ಕಿಂತ ಹೆಚ್ಚಾಗಿ, ಪ್ರಾಧ್ಯಾಪಕರು ಅದನ್ನು ವಿವರಿಸಿದ ಶೈಲಿ ಎಲ್ಲವು ಸೇರಿ ಮನದಲ್ಲಿ ಹಸಿರಾಗಿ ನಿಂತಿದೆ. ಪ್ರಾಧ್ಯಾಪಕರು ನಾಟಕದ ಪಾತ್ರಗಳ ಸಂಬಾಷಣೆ ಹೇಳುವಾಗ, ಅದಕ್ಕೆ ತಕ್ಕಂತೆ ತಮ್ಮ ದ್ವನಿ ಸಹ ಬದಲಾಯಿಸುತ್ತ ಇದ್ದದ್ದ, ಹೆಣ್ಣು ಪಾತ್ರ ವಿದ್ದರೆ ಅವರ ದ್ವನಿ ಸಹ ಹೆಣ್ಣಿನಂತೆಯೆ ದ್ವನಿಸುತ್ತ ಇದ್ದದ್ದು, ಯಾವುದೊ ಹಳೆಯ ಭ್ರಮೆಯ ಲೋಕಕ್ಕೆ ಕೊಂಡೊಯ್ಯುತ್ತದೆ.
--ಸಣ್ಣ ಮಕ್ಕಳೇ ಇರಲಿ, ಕಾಲೇಜ್ ವಿದ್ಯಾರ್ಥಿಗಳೇ ಇರಲಿ, ವಯಸ್ಸಾದವರೇ ಇರಲಿ..ಕತೆ ಕೇಳುವ ಕುತೂಹಲವಿರುವುದು. ನಿಮ್ಮ ಅಧ್ಯಾಪಕರಂತಹವರು ತಲ್ಲೀನರಾಗಿ ಹೇಳುತ್ತಿದ್ದರೆ ಕೇಳುಗರೆಲ್ಲಾ ಆ ಲೋಕದಲ್ಲೇ ತನ್ಮಯರಾಗುವರು. ಉತ್ತಮ ಕತೆ ಜತೆಗೆ ಅಧ್ಯಾಪಕರನ್ನೂ ನೆನೆಸಿದ್ದಕ್ಕೆ ಧನ್ಯವಾದಗಳು.
-ಗಣೇಶ.

Submitted by partha1059 Sun, 11/04/2012 - 11:29

In reply to by ಗಣೇಶ

ಮಂಕೀಸ್ ಪಾ>> ಗಣೇಶರೆ
ವಂದನೆಗಳು ತಮ್ಮ ಅಭಿಪ್ರಾಯಕ್ಕೆ. ಸಂಪದದಲ್ಲಿ ಅದೇನೊ ಹಳಬರೆಲ್ಲ ಅಪರೂಪರಾಗುತ್ತಿದ್ದಾರೆ !

Submitted by lpitnal@gmail.com Sun, 11/04/2012 - 06:24

ಪ್ರಿಯ ಪಾರ್ಥ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಮಂಕೀಸ್ ಪಾ ನಾಟಕದ ಬಗ್ಗೆ ತುಂಬ ಲಲಿತವಾದ ಬರಹ. ಸ್ವಲ್ಪದರಲ್ಲೇ ಅದರ ಕಥೆ ಚನ್ನಾಗಿ ಅರ್ಥವಾಗುವಂತೆ ಬಿಚ್ಚಿಕೊಳ್ಳುವ ಬಗೆ, ಹಾಗೂ ಸಮಕಾಲೀನವಾಗಿ ತಮ್ಮ ಗುರುಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತ ಹೋಗುವ ಲೇಖನ ಆಪ್ತತೆಯನ್ನೂ ಮೆರೆದಿದೆ. ಬರಹ ಮೆಚ್ಚುಗೆಯಾಯ್ತು.ದನ್ಯವಾದಗಳು. ರವಿವಾರ ಅಲ್ಲಿ ಇಲ್ಲಿ ಬರ್ಡ ವಾಚಿಂಗ್ ಗೆ ಹೋಗುವ ಪ್ರೋಗ್ರಾಮ್ ಇಲ್ಲ ಮತ್ತೇನೋ ಇದ್ದೇ ಇರುತ್ತೆ. ಆದರೆ ನೆನ್ನೆಯಿಂದ ಮಳೆ, ಸಂಪದವೇ ಇಂದು ದಿನವೆಲ್ಲ ಕಳೆಯಲು ಸಾಧನ. ಶುಭ ಮುಂಜಾವು.

Submitted by partha1059 Sun, 11/04/2012 - 11:32

In reply to by lpitnal@gmail.com

ಮಂಕೀಸ್ ಪಾ.. > ಲಕ್ಷ್ಮಿಕಾಂತ ಇಟ್ನಾಳ್ ರವರಿಗೆ ವಂದನೆ
ಬರ್ಡ್ ವಾಚಿಂಗ್ ವಾಕಿಂಗ್ ಇಂತವೆಲ್ಲ ಮನಸಿಗೆ ಉಲ್ಲಾಸ ಕೊಡುವಂತ ಕ್ರಿಯೆಗಳು . ಬರ್ಡ್ ವಾಚಿಂಗ್ ಹಾಬಿಯ ಬಗ್ಗೆ ಒಂದಿಷ್ಟು ಬರೆಯಿರಿ.

Submitted by partha1059 Fri, 11/09/2012 - 19:00

In reply to by venkatesh

ಮ0ಕೀಸ್ ಪಾ * ವೆ0ಕಟೇಶರವರಿಗೆ ನಮಸ್ಕಾರಗಳು

ಕತೆ ಹೆಣೆಯುವದರಲ್ಲಿ ನನಗೆ ಆಸಕ್ತಿ ಇದೆ, ಆದರೆ ಇದು ಕಾಲೇಜಿನ‌ ದಿನದಲ್ಲಿ ಕಲಿತ‌ ನಾಟಕ‌ ಪಠ್ಯದಲ್ಲಿದ್ದ ಕತೆ. ಸುಮ್ಮನೆ ಹಾಗೆ ಪುಸ್ತಕ‌ ಪರಿಚಯದಲ್ಲಿ ಹಾಕಿದ್ದೆ

Submitted by partha1059 Fri, 11/09/2012 - 19:06

In reply to by venkatesh

ಮ0ಕೀಸ್ ಪಾ * ವೆ0ಕಟೇಶರವರಿಗೆ ನಮಸ್ಕಾರಗಳು

ಕತೆ ಹೆಣೆಯುವದರಲ್ಲಿ ನನಗೆ ಆಸಕ್ತಿ ಇದೆ, ಆದರೆ ಇದು ಕಾಲೇಜಿನ‌ ದಿನದಲ್ಲಿ ಕಲಿತ‌ ನಾಟಕ‌ ಪಠ್ಯದಲ್ಲಿದ್ದ ಕತೆ. ಸುಮ್ಮನೆ ಹಾಗೆ ಪುಸ್ತಕ‌ ಪರಿಚಯದಲ್ಲಿ ಹಾಕಿದ್ದೆ