ದಿಲ್ ಡೂಂಢತಾ ಹೈ ಫಿರ್ ವಹೀ.........
ದಿಲ್ ಡೂಂಢತಾ ಹೈ ಫಿರ್ ವಹೀ..
ಹಿಂದಿ ಮೂಲ : ಗುಲ್ಜಾರ ( ಚಿತ್ರ : ಮೌಸಮ್)
ಕನ್ನಡ ಅನುವಾದ : ಲಕ್ಷ್ಮೀಕಾಂತ ಇಟ್ನಾಳ
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsss
ಕುಳಿತಿರುವೆ ಧ್ಯಾನದಿssss ನಿನ್ನದೇ ನೆನಪಲಿsss
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿsss
ಮರಗಳ ಹೊಂಬಿಸಿಲಲಿss ಅಂಗಳದ ಲೊರಗುತ
ಕಣ್ಣುಗಳ ಮೇss ಲೆಳೆದು ನಿನ ಸೆರಗಿನ ನೆರಳನು
ಹಾಗೊಮ್ಮೆ ಉರುs ಳುತss ಮಗ್ಗಲು ಹೊರಳುತ
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿss
ಆ ಬೇಸಿಗೆಯ ಇರುಳಲಿss ತಂಗಾಳಿ ಚಲಿssಸುವಾ
ಆ ಬೇಸಿಗೆಯ ಇರುಳಲಿss ತಂಗಾಳಿ ಚಲಿssಸುವಾ
ತಣ್ಣನೆಯ ಬಿಳಿಚಾss ದರಲ್ಲಿss ಜಾಗರಣೆ ದೋssರುತ
ತಣ್ಣನೆಯ ಬಿಳಿಚಾss ದರಲ್ಲಿss ಜಾಗರಣೆ ದೋssರುತ
ತಾರೆಗಳ ನೋssಡುತ ಮಾಳಿಗೆ ಮೇss ಲೊರsಗುತ
ಮನ ಹುಡುಕಿದೆs ಮತ್ತದೇs ಹಗಲಿರುಳ ಬಿಡುವಲಿ
ಹಿಮದಂಥ ಛಳಿಯಲಿss ಯಾವುದೊs ಪರ್ವತssದಲಿ
ಹಿಮದಂಥ ಛಳಿಯಲಿss ಯಾವುದೊs ಪರ್ವತದಲಿ
ಕಣಿವೆಯಲಿ ಪ್ರತಿss ಧ್ವನಿಗೈssವ ನಿಶ್ಯಬ್ದ ಗಳ ಕೇsಳುತ
ಕಣಿವೆಯಲಿ ಪ್ರತಿss ಧ್ವನಿಗೈssವ ನಿಶ್ಯಬ್ದ ಗಳ ಕೇsಳುತ
ಕಣ್ಣಲಿ ಹಸಿs ಪಸೆಯ ಕ್ಷಣಗಳs ಮಿಂದುಕೊಂಡು
ಮನ ಹುಡುಕಿದೆs ಮತ್ತದೇss ಹಗಲಿರುಳ ಬಿಡುವಲಿss
ಮನ ಹುಡುಕಿದೆs ಮತ್ತದೇss ಹಗಲಿರುಳ ಬಿಡುವಲಿss
ಕುಳಿತಿರುವೆ ಧ್ಯಾನದಿss ನಿನ್ನದೇss ನೆನಪಲಿ
ಮನ ಹುಡುಕಿದೆs ಮತ್ತದೇss ಹಗಲಿರುಳ ಬಿಡುವಲಿss
(ಮೆಚ್ಚುಗೆ ಯಾಗದಿದ್ದರೆ ದಯವಿಟ್ಟು ಕ್ಷಮೆಯಿರಲಿ )
Comments
ಮೌಸಮ್ ಹಾಡು
ಇಟ್ನಾಳರೆ,
ಸಂಜೀವ್ ಕುಮಾರ್ ಹಾಗೂ ಶರ್ಮಿಳಾ ಠಾಗೋರ್( ಸೈಫ್ ಆಲಿ ಖಾನ್ನ ತಾಯಿ) ಅಭಿನಯದ ಸುಂದರ ಚಿತ್ರದ ಸೂಪರ್ ಹಾಡುಗಳಲ್ಲಿ ಒಂದಾದ "ದಿಲ್ ಡೂಂಡ್ತಾ.."- "ಮನ ಹುಡುಕಿದೆ.. ಮತ್ತದೇ.."ಅನುವಾದ ಬಹಳ ಮೆಚ್ಚಿಗೆಯಾಯಿತು.
-ಗಣೇಶ.
(ನಮ್ಮ ಭಾವಾನುವಾದ ಕವಿ ಆಸುಹೆಗ್ಡೆಯವರ ನೆನಪೂ ಆಯಿತು. ಆಸುಹೆಗ್ಡೆಯವರೆ, ನಿಮ್ಮ ಕವನಗಳನ್ನೂ ಮನ ಹುಡುಕುತ್ತಿದೆ...)
In reply to ಮೌಸಮ್ ಹಾಡು by ಗಣೇಶ
ದಿಲ್ ಡೂಂಢತಾ ಹೈ ಫಿರ್ ವಹೀ........
ಪ್ರಿಯ ಗಣೇಶ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅನುವಾದವನ್ನು ಮೆಚ್ಚಿದ್ದೂ ಅಲ್ಲದೇ ಭಾವಾನುವಾದ ಕವಿ ಆಸು ಹೆಗ್ಡೆಯವರನ್ನು ನೆನಪಿಸಿಕೊಂಡಿದ್ದೀರಿ. ತಮ್ಮ ಸಹೃದಯತೆ ನಿಜವಾಗಿಯೂ ಎದ್ದುಕಾಣುವಂತಹ ಆಂಶಗಳು ತಮ್ಮ ಮಾತುಗಳಲ್ಲಿ ಅಡಕವಾಗಿವೆ., ತಮ್ಮ ಪ್ರೋತ್ಸಾಹ ಹಲವಾರು ಜನಕ್ಕೆಇನ್ನೂ ಹೆಚ್ಚು ಕನ್ನಡದ ಅಳಿಲು ಸೇವೆಮಾಡಲು ಪ್ರೇರೇಪಿಸುವುದು ಸುಳ್ಳಲ್ಲ. ಧನ್ಯವಾದಗಳು ಗೆಳೆಯರೇ..
In reply to ಮೌಸಮ್ ಹಾಡು by ಗಣೇಶ
'ಶರ್ಮಿಳಾ ಟಾಗೋರ್ ' ರನ್ನು ಸೈಫ್'
'ಶರ್ಮಿಳಾ ಟಾಗೋರ್ ' ರನ್ನು ಸೈಫ್' ನ ತಾಯಿ ಅಂದ್ರಿ ಗಣೇಶರೆ .... ನನಗೇನೋ ಸೈಫ್'ನನ್ನು ಶರ್ಮಿಳಾ ಅವರ ಮಗ ಅನ್ನೋದೇ ವಾಸಿ ... ಮಗನಿಂದ ಆ ತಾಯಿ ಅಂಥಾ ಹೆಸರೆನು ಪಡೆಯಲಿಲ್ಲ :-)
In reply to 'ಶರ್ಮಿಳಾ ಟಾಗೋರ್ ' ರನ್ನು ಸೈಫ್' by bhalle
ದಿಲ್ ಡೂಂಢತಾ ಹೈ ಫಿರ್ ವಹೀ........
ಆತ್ಮೀಯ ಗೆಳೆಯರಾದ ಭಲ್ಲೆಜಿ ಹಾಗೂ ಗಣೇಶರವರೇ, ಇಲ್ಲಿ ಗಣೇಶರವರೇ ತಮ್ಮ ಕ್ಷಮೆ ಇರಲಿ, ನನಗೂ ಭಲ್ಲೇಜಿ ಅವರ ಅಭಿಪ್ರಾಯ ಹೆಚ್ಚು ಸರಿ ಎನಿಸಿತು.
In reply to 'ಶರ್ಮಿಳಾ ಟಾಗೋರ್ ' ರನ್ನು ಸೈಫ್' by bhalle
ಸೈಫ್-ಶರ್ಮಿಳಾ ಅವರ ಮಗ
:) :)
ಭಲ್ಲೇಜಿ,
>>ಮಗನಿಂದ ಆ ತಾಯಿ ಅಂಥಾ ಹೆಸರೆನು ಪಡೆಯಲಿಲ್ಲ :-)
-ನಲವತ್ತರ ಆಜುಬಾಜಿನಲ್ಲಿ "ಜೀರೋ ಫಿಗರ್- ನಂ ೧ ನಟಿ-ಚಮ್ಮಕ್ ಚಲ್ಲೋ"- ಕರೀನಾಳನ್ನು ಮದುವೆಯಾದದ್ದು.
-ಈ ಕಾಲದಲ್ಲಿ ಆಕ್ಟಿಂಗ್ ಅಲ್ಲಾ.. ದುಡ್ಡೇ ದೊಡ್ಡಪ್ಪ. :) ಆ ದೃಷ್ಠಿಯಲ್ಲೂ- http://www.ibtimes.co.in/articles/402362/20121107/saif-ali-khan-s-pataudi-property-reportedly.htm
ಇಟ್ನಾಳರೆ,
ಕ್ಷಮೆ ಕೇಳಬೇಕಾದ ಅಗತ್ಯವೇ ಇಲ್ಲ. (ಶರ್ಮಿಳಾ"ದಿಲ್ ಡೂಂಡ್ತಾ ಹೈ" ಅಂದು ಪಟೌಡಿಯನ್ನು ಡೂಂಡಿದರು. ಸೈಫ್ "ದಿಲ್ ಚಾಹ್ತಾ ಹೈ" ಅಂದು ಕರೀನಾಳನ್ನು ಚಾಹಿಸಿದರು.)
ನಿಮ್ಮೆಲ್ಲರ ಅಪೇಕ್ಷೆ ಮೇರೆಗೆ ತಿದ್ದುವೆ- ಶರ್ಮಿಳಾರ ಮಗ ಇಂದಿನ ನಟ ಸೈಫ್ ಆಲಿ ಖಾನ್. :)
-ಗಣೇಶ
In reply to ಸೈಫ್-ಶರ್ಮಿಳಾ ಅವರ ಮಗ by ಗಣೇಶ
:))))))))
:))))))))
In reply to :)))))))) by bhalle
ಸೈಫ್ - ಕರೀನ ಮಧ್ಯೆ ಒಂದು
ಸೈಫ್ - ಕರೀನ ಮಧ್ಯೆ ಒಂದು ಸಾಮಾನ್ಯ ಅಂಶ ಇದೆ, ಹಾಗಾಗಿ ಆ ಸೆಳೆತ .. ಅದೇ ಜೀರೋ ... ಆಕೆ ಸೈಜ್ ಜೀರೋ, ಈತ ನಟನೆಯಲ್ಲಿ ಜೀರೋ :-)
In reply to ಸೈಫ್ - ಕರೀನ ಮಧ್ಯೆ ಒಂದು by bhalle
ದಿಲ್ ಡೂಂಢತಾ ಹೈ ಫಿರ್ ವಹೀ...........
ಪ್ರಿಯ ಗಣೇಶಜಿ, ಭಲ್ಲೇ ಜಿರವರೇ, ಅವರವರ ಶೂಗಳಲ್ಲಿ ಅವರವರು ಸರಿ ಎಂದುಕೊಂಡರಾಯಿತು ಬಿಡಿ ಸರ್, ಬಟ್ ಈ ಜೀರೋ ಕಾನ್ಷೆಪ್ಟ್ ನಲ್ಲಿ ತುಲನೆ ನಿಜಕ್ಕೂ ಹೌದಲ್ಲ ಎಂದಿತು ಮನಸ್ಸು. ತಮಗೆ ಅದು ಹೇಗೆ ಹೊಳೆಯಿತೋ!
In reply to ದಿಲ್ ಡೂಂಢತಾ ಹೈ ಫಿರ್ ವಹೀ........... by lpitnal@gmail.com
ಜಗವೇ ಶೂನ್ಯ :-) ಅದರಲ್ಲಿ ಇವರೂ
ಜಗವೇ ಶೂನ್ಯ :-) ಅದರಲ್ಲಿ ಇವರೂ ಸಹ :-)))
In reply to ಸೈಫ್ - ಕರೀನ ಮಧ್ಯೆ ಒಂದು by bhalle
ದಿಲ್ ಡೂಂಡ್ತಾ- ಶೂನ್ಯ :)
ವ್ಹಾ..ಭಲ್ಲೇಜಿ,
>>>ಆಕೆ ಸೈಜ್ ಜೀರೋ,
ಈತ ನಟನೆಯಲ್ಲಿ ಜೀರೋ :))))
ಜಗವೇ ಶೂನ್ಯ:) :)
ಆದರೂ ಆತನಲ್ಲಿ 7ರ ಮುಂದೆ ಅನೇಕ ಶೂನ್ಯಗಳಿವೆಯಲ್ಲಾ..:)
-ಗಣೇಶ.
In reply to ಮೌಸಮ್ ಹಾಡು by ಗಣೇಶ
ಆಸುಹೆಗ್ಡೆಯವರೆ, ನಿಮ್ಮ ಕವನಗಳನ್ನೂ ಮನ ಹುಡುಕುತ್ತಿದೆ...)
ಆಸುಹೆಗ್ಡೆಯವರೆ, ನಿಮ್ಮ ಕವನಗಳನ್ನೂ ಮನ ಹುಡುಕುತ್ತಿದೆ...)
ಅದೇಕೋ ಆಸು ಅಣ್ಣನವರಿಗೆ ಸಂಪದದ ಮೇಲೆ/ಸಂಪದಿಗರ ಮೇಲೆ ಬೇಸರ ಬಂದಂತಿದೆ!
ಅವರ ಸಮ್ರದ್ಧ ಬ್ಲಾಗ್ ಬರಹಗಳನ್ನೋದಲು ಕೊಂಡಿ ಇಲ್ಲಿದೆ
http://athradi.wordpress.com/
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
" ದಿಲ್ ಡೂಂಢ ತಾ ಹೈ ಫಿರ್ ವಹಿ ಪುರಸತೆ ಸೆ ರಾತ ದಿನ್ " ಎಂದು ಪ್ರಾರಂಭವಾಗುವ ಈ ಗೀತೆ ಕವಿ ಗುಲ್ಜಾರರ ಬಹಳ ಸತ್ವಶಾಲಿ ರಚನೆಗಳ ಪೈಕಿ ಒಂದು. ಮೌಸಮ್ ಚಿತ್ರದಲ್ಲಿ ಶರ್ಮಿಳಾಳದು ತಾಯಿ ಮಗಳ ದ್ವಿಪಾತ್ರದಲ್ಲಿ ಸತ್ವಪೂರ್ಣ ಅಭಿನಯ, ಒಂದು ಹಳ್ಳಿಗಾಡಿನ ಮುಗ್ಧ ಪಾತ್ರವಾದರೆ, ಇನ್ನೊಂದು, ವೇಶ್ಯಾಗೃಹದ ಮೈಮಾರಿಕೊಳ್ಳುವ ತರುಣಿಯ ಪಾತ್ರ ಶರ್ಮಿಳಾಳ ಅಭಿನಯದ ಪ್ರೌಢತೆಗೆ ಹಿಡಸಿದ ಕನ್ನಡಿಯಾದರೆ, ಅದಕ್ಕೆ ಸರಿ ಸಾಟಿಯಾಗಿ ಹಳ್ಳಿ ಹಳ್ಳಿ ಹುಡುಗಿಯ ಪ್ರೇಮಿ , ಕೊನೆಗೆ ಹಾದಿ ತಪ್ಪಿದ ಮಗಳನ್ನು ಮುಖ್ಯ ಜೀವನ ವಾಹಿನಿಗೆ ತರುವ ಪಾತ್ರದಲ್ಲಿ ಸಂಜೀವ ಕುಮರಾನದು ಅಷ್ಟೇ ಪ್ರೌಢ ಅಭಿನಯ, ಇಬ್ಬರೂ ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ, ಇದು ಚಿತ್ರದ ಸ್ಥೂಲ ಸಾರಾಂಶ, ಇದು ಸರಿಯೊ ತಪ್ಪೊ ಗೊತ್ತಿಲ್ಲ, ಸುಮಾರು 25 - 26 ವರ್ಷಗಳ ಹಿಂದೆ ನೋಡಿದ ಚಿತ್ರ. ಅದೇ ರೀತಿ ' ಆಂಧಿ ' ಚಿತ್ರದ ಹಾಡುಗಳನ್ನು ಅನುವಾದಿಸಿ, ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ by H A Patil
+1
+1
In reply to +1 by Premashri
ದಿಲ್ ಡೂಂಢತಾ ಹೈ ಫಿರ್ ವಹೀ........
ಪ್ರಿಯ ಪ್ರೇಮಶ್ರೀ ರವರೇ, ತಮ್ಮ ಸಂಜ್ಞಾಪೂರ್ವಕ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತ ಧನ್ಯವಾದಲಳು.
In reply to ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ by H A Patil
ದಿಲ್ ಡೂಂಢತಾ ಹೈ ಫಿರ್ ವಹೀ........
ಆತ್ಮೀಯ ಹೆಚ್ ಎ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹಾಡಿನ ಅನುವಾದ ತಮ್ಮನ್ನು ಅಂದಿನ ದಿನಗಳಿಗೆ ಕೊಂಡೊಯ್ದಿದ್ದುದನ್ನು ತಾವು ನೆನಪಿಸಿಕೊಳ್ಳುತ್ತ ಆಂಧಿ ಚಿತ್ರದ ಗೀತೆಗಳನ್ನೂ ಕೂಡ ಅನುವಾದಿಸಲು ಪ್ರೇರೇಪಿಸುವ ತಮ್ಮ ಆಂತರ್ಯದ ಆತ್ಮೀಯ ಮನಸ್ಸಿಗೆ ಹೃದಯಪೂರ್ವಕ ಧನ್ಯವಾದಗಳು ಸರ್,
ಭಾಷಾಂತರ ಚೆನ್ನಾಗಿದೆ ... ಒಂದು
ಭಾಷಾಂತರ ಚೆನ್ನಾಗಿದೆ ... ಒಂದು ಪ್ರಶ್ನೆ
"ಕಣ್ಣುಗಳ ಮೇಲೆಳೆದು ನಿನ್ನ ಸೆರಗಿನ ನೆರಳನು" ಸರಿಯಾ? ಅಥವಾ ""ಕಣ್ಣುಗಳ ಮೇಲೆಳೆದು ನಿನ್ನ ನೆರಳಿನಾ ಸೆರಗಾ" ಸರಿಯಾ?
In reply to ಭಾಷಾಂತರ ಚೆನ್ನಾಗಿದೆ ... ಒಂದು by bhalle
ದಿಲ್ ಡೂಂಢತಾ ಹೈ ಫಿರ್ ವಹೀ.........
ಆತ್ಮೀಯ ಪ್ರಿಯ ಭಲ್ಲೆ ಜಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ದೀಪಾವಳಿಯ ಶುಭಾಶಯಗಳು ಇನ್ ಅಡ್ವಾನ್ಸ್. ತಾವು ಹೇಳಿದಂತೆ, ' ಕಣ್ಣುಗಳ ಮೇಲೆಳೆದು ನಿನ್ನ ನೆರಳಿನ ಸೆರಗಾ, ಅಥವಾ ಸೆರಗನು' ಅನ್ನುವುದಕ್ಕಿಂತ ಮೂಲದಲ್ಲಿ ಗುಲ್ಜಾರ್ ರವರು, ಹೀಗೆ ಹೇಳಿದ್ದಾರೆ ಸರ್. '"ಆಂಖೋಂ ಪೆ ಖೀಚ್ ಕರ್ ತೆರೆ ಆಂಚಲ್ ಕೆ ಸಾಯೆ ಕೋ" ಅಂದರೆ ನಾನರ್ಥ ಮಾಡಿಕೊಂಡದ್ದು ' ಸೆರಗಿನ ನೆರಳನ್ನು ಮೇಲೆಳೆದುಕೊಳ್ಳುವುದು ಎಂದಾಗುವುದು " ಅದರಿಂದ ಹಾಗೆ ಬರೆದೆ, ಇರಲಿ, ಕವಿಗೆ ಅಷ್ಟು ಸ್ವಾತಂತ್ರ್ಯವಿದೆ ಅಂದು ಕೊಳ್ಳೋಣ. ಇನ್ನೊಂದು ಮಾತು, ' ಮೊದಲ ಸಾಲುಗಳನ್ನು ' ಮನಸರಸಿದೆ ಮತ್ತದೇ ಕಳೆದಾ ಕ್ಷಣಗಳಾ, ಕುಳಿತಿರುವೆ ಧ್ಯಾನದಿ ನಿನ್ನನೇ ನೆನೆಯುತ' ಇಂತಹ ಅನೇಕ ' ಪರ್ಯಾಯಗಳನ್ನು ಹುಡುಕುತ್ತಲೇ ಮೇಲಿನಂತೆ ಅಂತಿಮಗೊಳಿಸಿದೆ ಅಷ್ಟೇ ಸರ್. ಒಂದು ಕವನಕ್ಕೆ ನೂರಾರು ಮುಖಗಳಿರುತ್ತವೆ, ಎಂಬುದು ಸುಳ್ಳಲ್ಲ ಎಂದು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಸರಿಯಾಗಿ ಹೊಂದಿಸಿದರೆ ಯಾವುದೂ ಸರಿಹೊಂದಬಹುದಲ್ಲವೆ ಸರ್. ತಮ್ಮ ಚರ್ಚೆಗೆ ನಿಜಕ್ಕೂ ಧನ್ವವಾದಗಳು.
In reply to ದಿಲ್ ಡೂಂಢತಾ ಹೈ ಫಿರ್ ವಹೀ......... by lpitnal@gmail.com
ಇಟ್ನಾಳರಿಗೂ ದೀಪಾವಳಿಯ
ಇಟ್ನಾಳರಿಗೂ ದೀಪಾವಳಿಯ ಶುಭಾಶಯಗಳು
ವಿವರಣೆ ಚೆನ್ನಾಗಿದೆ .. ಧನ್ಯವಾದಗಳು ... ಗುಲ್ಜಾರ್ ಅವರನ್ನು ಪ್ರಶ್ನೆ ಮಾಡುವಷ್ಟು ನನ್ನ ಬುದ್ದಿ ಪಕ್ವವಾಗಿಲ್ಲ ... ನಿಮ್ಮ ವಿವರಣೆ ಓದಿ ಹಾಗೂ ತೆಗೆದುಕೊಳ್ಳಬಹುದು ಎಂದುಕೊಳ್ಳೋಣ .. ನನ್ನ ಕಂಗಳಿಗೆ 'ನೆರಳಿನ ಸೆರಗ ಹೊದ್ದರೂ' / 'ಸೆರಗಿನ ನೆರಳ ಹೊದ್ದರೂ' ತಂಪು ಗ್ಯಾರಂಟಿ ...
ದಿಲ್ ಡೂಂಢತಾ ಹೈ ಫಿರ್ ವಹೀ..........
ಶುಭಾಶಯಗಳಿಗೆ ಧನ್ಯವಾದಗಳು ಭಲ್ಲೆ ಜಿ. ತಾವಂದಂತೆ 'ಕಣ್ಣುಗಳ ಮೇಲೆ ಸೆರಗನ್ನು ಎಳೆದುಕೊಳ್ಳುವುದು ಭೌತಿಕ, ನೆರಳನ್ನು ಎಳೆದುಕೊಳ್ಳುವುದು ಒಂದು ರೀತಿ ಅಲೌಕಿಕ, ಕಾವ್ಯಮಯ, ಶ್ರೇಷ್ಠ ಕವಿ ಗುಲ್ಜಾರ್ ರವರ ಕವಿತ್ವದ ಶ್ರೇಷ್ಠತೆಗಾಗಿ ಈ ಕಾರಣಕ್ಕಾಗಿಯೇ ಅಮರ ಕವಿ ಎನಿಸಿದ್ದಾರೆ, ದಿನ ನಿತ್ಯದ ಆಡುಮಾತುಳಲ್ಲೆ, ಶಬ್ದಗಳಲ್ಲೆ ಜಗತ್ತಿನ ಸುಂದರತ್ವ' ಸತ್ಯಂ ಶಿವಂ ಸುಂದರಂ' ಎನ್ನುವಂತೆ ಕಾಣುತ್ತಾರೆ, ಹಮ್ ನೆ ದೇಖಿ ಹೈ ಉನ್ ಆಂಖೋ ಕಿ ಮೆಹಕ್ ತೀ ಖುಶಬೂ" ಎಲ್ಲೆಂದೆಲ್ಲಿಯ ಅಸಂಗತ ಸಾಂಗತ್ಯ, ಅದರೂ ಮನಕ್ಕೆ ಅರಿವಿಕೆಗೆ ಬರುವ ವಿಷಯ, ಕಣ್ಣುಗಳಿಂದಲೇ ಪರಿಮಳ ಕಾಣುವ ಅನುಭೂತಿ,, ಪರಿಮಳ ಯಾವ ಪರಿಮಳ, ನಾವೆಲ್ಲ ತಿಳಿದ ಪರಿಮಳ ವಲ್ಲವದು,, ಕಣ್ನುಗಳಿಂದ ಹೊರಟ ಆ ಪರಿಮಳವನ್ನು ಮನಸ್ಸು ಗ್ರಹಿಸುತ್ತದೆ, ಭೌತಿಕವಾಗಿಲ್ಲವಾದರೂ, ಕವಿ ಮನಕ್ಕೆ ಹೊಳೆದ ಸೌಂದರ್ಯ ಅವರ್ಣನೀಯ. ಚಡ್ಡಿ ಪೆಹನ್ ಕೆ ಫೂಲ್ ಖಿಲಾ ಹೈ ಎನ್ನುತ್ತದೆ ಕವಿ ಮನ. ನಮ್ಮನ್ನೆಲ್ಲ ಬೇರೊಂದು ಲೋಕಕ್ಕೆ ಕರೆದೊಯ್ಯುವ ಅವರಿಗೊಂದು ಸಲಾಮ್ ಹೇಳೋಣವೇ ಮಿತ್ರರೆ,