ಕಂದನಿಗಾಗಿ

ಕಂದನಿಗಾಗಿ

ಕವನ

 

 

ರವಿಯು ಮೋಡಿ  ಇರುಳು ಕರಗಿ 

ಬೆಳಕು ಬಂದಿದೆ ಭೂಮಿಗೆ 

ಒಲವ ಕಂದನೇ ಮಡಿಲ ತುಂಬಿ 

ಹರುಷ ತಂದಿಹೆ ಬಾಳಿಗೇ. 

 

ನಿನ್ನ ನಗುವೂ ನಿನ್ನ ಅಳುವೂ 

ಎಲ್ಲ ನನಗೆ ನೂತನ 

ನಿನ್ನ ಹಡೆದೆ , ಅಮ್ಮನಾದೆ 

ನನ್ನಲೇನೋ ಹಿರಿತನ.

 

ಒಡಲ ತುಂಬಾ ಒಲವು ತುಂಬಿ 

ಸುರಿಯುತಿಹುದೂ ಹಾಲಿಗೆ...

ಅಮೃತವಾಗಿ ಪರಿಣಮಿಸಲಿ 

ಮಗುವೆ ನಿನ್ನ ಪಾಲಿಗೇ . . .

 

ಬೆಳೆಯ ಬೇಕು ಮಗುವೆ ನೀನು 

ವಿದ್ಯೆ, ವಿನಯವೆರಡು ಬೆರೆತು 

ಹೊಂದಿಕೊಂಡು ಬಾಳು ಕಂದಾ. . .

ಬಡವ, ಬಲ್ಲಿದ ಬೇಧ ಮರೆತು.

 

ತಾಯಿ ಮಮತೆ ತಂದೆ ಹರಕೆ 

ಎಲ್ಲಾ ನಿನ್ನ ಒಳಿತಿಗೆ. . .

ಶ್ರಮಿಸು ಮಗುವೆ ಮುಂದೆ ನೀನು 

ಭಾರತಾಂಬೆಯ ಏಳ್ಗೆಗೆ. . .

 

 

ಚಿತ್ರ್

Comments

Submitted by Maalu Tue, 11/13/2012 - 13:35

'ಒಡಲ ತುಂಬಾ ಒಲವು ತುಂಬಿ

ಸುರಿಯುತಿಹುದೂ ಹಾಲಿಗೆ...

ಅಮೃತವಾಗಿ ಪರಿಣಮಿಸಲಿ

ಮಗುವೆ ನಿನ್ನ ಪಾಲಿಗೇ . . .'

ಸುಂದರ ಸಾಲುಗಳು. ನಿಮ್ಮ ಈ ಕವಿತೆ ಅರ್ಥಪೂರ್ಣವಾಗಿದೆ.