ಸಂಪದ ನಿರ್ವಾಹಕರಲ್ಲಿ ಸಣ್ಣ ಮನವಿ

ಸಂಪದ ನಿರ್ವಾಹಕರಲ್ಲಿ ಸಣ್ಣ ಮನವಿ

ನಿರ್ವಾಹಕರೆ,


ಸಂಪದದಲ್ಲಿ ಇತ್ತೀಚಿಗೆ ಕೆಲವು  ದೇವರು ಹಾಗೂ ಧರ್ಮದ ಕುರಿತು ಕೆಲ ಕೀಳು ಬರಹಗಳು, ಲೇಖನಗಳನ್ನು ಬರೆಯುತ್ತಿದ್ದಾರೆ. ಇದರಿಂದ ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇಂಥಹ ಬರಹ ಅಥವಾ ಲೇಖನಗಳು ಸಂಪದಕ್ಕೆ ಶೋಭೆ ಅಲ್ಲ.


ಎಲ್ಲ ಲೇಖನಗಳನ್ನು ಪರಿಶೀಲಿಸುವುದು ನಿಮಗೆ ಬಹಳ ತ್ರಾಸ ಎಂಬ ಸಂಗತಿ  ನನಗೆ ತಿಳಿದಿದೆ ಆದರೆ ಇಂಥಹ ಬರಹಗಳನ್ನು ಕಿತ್ತು ಹಾಕಿದರೆ ಉತ್ತಮ ಎಂದೆನಿಸುತ್ತದೆ.


ಸಂಪದ ಉತ್ತಮ ಬರಹಗಳಿಗೆ ಕಥೆಗಳಿಗೆ ಕವನಗಳಿಗೆ ಸಮೃದ್ಧವಾದ ತಾಣವಾಗಿದೆ. ಇನ್ನು ಮುಂದೆಯೂ ಅದು ಹಾಗೆ ಇರಲೆಂದು ಆಶಿಸುವ ಸಂಪದಿಗ.


ತಮಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Rating
No votes yet

Comments

Submitted by saraswathichandrasmo Wed, 11/14/2012 - 21:49

ಇದಕ್ಕೆ ನನ್ನ‌ ಅನುಮೋದನೆ ಇದೆ. ಹಾಗೆ ಒಮ್ಮೆ ಬರೆದ‌ ಲೇಖನದಲ್ಲಿ ತಪ್ಪು ಮಾಡಿದ್ದನ್ನು ತಿದ್ದ‌ಲಿಕ್ಕೆ ಅವಕಾಶ‌ ಮಡಿಕೊಟ್ಟರೆ ಒಳ್ಳೆಯದು.

Submitted by savithru Thu, 11/15/2012 - 11:58

ವೈಯಕ್ತಿಕವಾಗಿ ನನಗೆ ಇಷ್ಟವಾಗದ ಸಾವಿರ ಬರಹಗಲಾದರೂ ಸಂಪದದಲ್ಲಿರಬಹುದು! ಆದರೆ ಅವನ್ನೆಲ್ಲ ತೆಗೆದು ಹಾಕಿ ಅಂತ ಸಂಪದದ
ಅಣತಿಗಾರರನ್ನ ಗೋಗರೆಯೋದು ಎಳಸುತನವಾಗುತ್ತೆ.

ನಿಮಗಿಷ್ಟವಾಗದ ಬರಹಗಳು ಯಾಕೆ ಕೀಳು? ತಪ್ಪು ಅನ್ನೋದು ಅಲ್ಲಲ್ಲೇ ಬರೆಯಿರಿ. ಸರಿ ತಪ್ಪು ಯಾವುದು ಅಂತ ಜೊತೆಯಲ್ಲಿ ಯೋಚಿಸೋಣ!

Submitted by sathishnasa Thu, 11/15/2012 - 12:54

+1

Submitted by anand33 Thu, 11/15/2012 - 12:57

ಕನ್ನಡವು ವೈಚಾರಿಕವಾಗಿ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕನ್ನಡ ಸಾಹಿತ್ಯದಲ್ಲಿ ಎ. ಎನ್. ಮೂರ್ತಿರಾವ್ ಅವರು ಬರೆದ 'ದೇವರು' ಪುಸ್ತಕ, ವಾಸುದೇವ ಭೂಪಾಲಂ ಬರೆದ 'ದೇವರು ಸತ್ತ' ಕೃತಿಯಾಗಲೀ, ಗೌರೀಶ ಕಾಯ್ಕಿಣಿಯವರು ಬರೆದ 'ಲೋಕಾಯತ' ಕೃತಿಯನ್ನಾಗಲೀ ದೇವರ ವಿಷಯದಲ್ಲಿ ವಿಮರ್ಶಿಸಿದ್ದಾರೆ ಎಂದು ನಿಷೇಧಿಸಿದರೆ ಕನ್ನಡ ಸಾಹಿತ್ಯ ಬಡವಾದೀತು. ಹಾಗೆಯೇ, ಸಂಪದದಲ್ಲಿಯೂ ಎಲ್ಲ ಪ್ರಕಾರದ ಸಾಹಿತ್ಯ ಬರಲಿ, ನಿಷೇಧ ಮಾಡಿದರೆ ಸಂಪದ ಬಡವಾದೀತು ಅಷ್ಟೇ.

Submitted by mnupadhya Thu, 11/15/2012 - 16:01

+1

Submitted by hvravikiran Thu, 11/15/2012 - 18:15

"ಸಂಪದದಲ್ಲಿ ಇತ್ತೀಚಿಗೆ ಕೆಲವು ದೇವರು ಹಾಗೂ ಧರ್ಮದ ಕುರಿತು ಕೆಲ ಕೀಳು ಬರಹಗಳು, ಲೇಖನಗಳನ್ನು ಬರೆಯುತ್ತಿದ್ದಾರೆ"

ಯಾವುದೇ ವಿಷಯದ ಕುರಿತ ವಿಮರ್ಶೆ ವಿಚಾರ ತಪ್ಪಲ್ಲ. ಆದರೆ ಅದು ವಿಮರ್ಶೆಗೆ ಒತ್ತುಕೊಡದೆ ಕೇವಲ ವಿಷವನ್ನೇ ಕಾರುವ ಉದ್ದೇಶ ಹೊಂದಿದ್ದರೆ ನಿಜವಾಗಿಯೂ ಖಂಡನಾರ್ಹ. ವಿಮರ್ಶೆಯೇ & ಅವಲೋಕನ ಲೇಖನದ ಉದ್ದೇಶವಾಗಿದ್ದರೆ ಅದನ್ನು ಬೆಂಬಲಿಸಬೇಕು ಹೊರತು ಸಂಪದದಿಂದಲೇ ತೆಗೆಯುವುದು ಸರ್ವಥ ಸಲ್ಲ. ಅದರ ಬದಲು ಯಾವುದೊ ಒಬ್ಬರ ಬಗ್ಗೆ ವಯಕ್ತಿಕ ನಿಂದನೆಯನ್ನಗಲಿ, ಅಥವ ಯಾವುದೇ ವಿಷಯದ ಬಗ್ಗೆ ಅವಹೇಳನಕಾರಿಯಾಗಿ ಬರೆಯುವುದನ್ನ ಖಂಡಿತ ಪ್ರೋತ್ಸಹಿಸಬಾರದು.

ಯಾವುದೇ ವಿಷಯ ಕೀಳು ಅಭಿರುಚಿಯಿಂದ ಬರೆದಿದ್ದು ಅಂತ ಅನ್ನಿಸಿದರೆ ಅದನ್ನು ಡಿಲೀಟ್ ಮಾಡಲು ಯಾವುದೇ ವಿರೋಧ ಇರಬಾರದು ಅಂತ ಭಾವಿಸುತ್ತೇನೆ !!

Submitted by Prakash Narasimhaiya Thu, 11/15/2012 - 22:00

In reply to by hvravikiran

ನಿಮಗೆ ಬೇಡವೆನಿಸಿದ ಲೇಖನವನ್ನು ಓದಲು ಹೋಗಬೇಡಿ. ಜಗತ್ತಿನಲ್ಲಿ ಎಲ್ಲವು ಬೇಕು. ನಿಂದಕರು, ಹೊಗಳುವವರು ಇಬ್ಬರು ಬೇಕು. ನಮಗೆ ಬೇಕೆನಿಸಿದ್ದನ್ನು ಆಯ್ಕೆ ಮಾಡಿ ಕೊಂಡರೆ ಸಾಕು. ಅವರವರ ವಿಚಾರ ಅವರವರು ಪ್ರಸ್ತುತ ಪಡಿಸಲಿ. ಆಸ್ತಿಕರು, ನಾಸ್ತಿಕರು ಇಬ್ಬರಿಗೂ ಸಮಾನ ಅವಕಾಶ ಸಂಪದ ನೀಡಲಿ. ಸಂಪದ ಕೇವಲ ಒಂದು ವಿಚಾರ ಅಥವಾ ವಿಷಯವರ್ಗಕ್ಕೆ ಸೇರದಿರಲಿ.

Submitted by venkatesh Fri, 11/16/2012 - 06:13

In reply to by Prakash Narasimhaiya

ವಿಚಾರ ಸ್ವಾತಂತ್ರ್ಯಕ್ಕೆ ಬೆಲೆ ಇದೆ. ಪ್ರಜಾಪ್ರಭುತ್ವದ ಮಹತ್ವ ಇರುವುದೇ ಅದರಲ್ಲಿ ಹೊಲಸು, ಹಾಗೂ ಅಶ್ಲೀಲವಾಗಿದ್ದರೆ ಪರಿಗ್ರಹಿಸಬಾರದು ಅಷ್ಟೆ. ಓದದೆ ಮುಂದೆ ಸಾಗೋಣ. ಇಂಟರ್ನೆಟ್ ನಲ್ಲಿ ಇಲ್ಲವೇ, ಅದೇ ತರಹ !

Submitted by Jayanth Ramachar Fri, 11/16/2012 - 07:04

ತಮ್ಮ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹ೦ಚಿಕೊ೦ಡ‌ ಎಲ್ಲ ಭಗವದ್ಭಕ್ತರಿಗೂ ಆ ಭಗವ೦ತ‌ ಸನ್ಮ೦ಗಳವನ್ನು೦ಟು ಮಾಡಲಿ :)