ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......

ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......

ಸಂಪದಿಗ ಮಿತ್ರರಿಗೆ ದೀಪಾವಳಿಯ ಶುಭಾಶಯಗಳೊಂದಿಗೆ,

ಹಮ್ ನೆ ದೇಖೀ ಹೈ ಉನ್ ಆಂಖೋಂ ಕಿ ಮಹಕತೀ ಖುಶ್ಬೂ.......
                   ಮೂಲ ಹಿಂದಿ: ಗುಲ್ಜಾರ್  (ಚಿತ್ರ: ಖಾವೋಶಿ )
                      ಕನ್ನಡಕ್ಕೆ: ಲಕ್ಷ್ಮೀಕಾಂತ ಇಟ್ನಾಳ
ನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವ
ಕರ ಸೋಕಿಸಿ ಸಂಬಂಧದಾ ರೋಪ ನೀಡದಿರದಕೆ
ಬರಿ ಅನುಭಾವವದು ಆತ್ಮದಿಂದ ನುಭವಿಸು ಅದನು
ಪ್ರೀತಿಗೆ ಪ್ರೀತಿಯಾಗಿರಲು ಬಿಡಿ ನೀಡದೆ ಬೇರಾವ ಹೆಸರದಕೆ

ವಾಣಿಯಲ್ಲವದು ಪ್ರೀತಿಯು,  ಪ್ರೀತಿ ಸ್ವರವಲ್ಲವದು
ಒಂದು ನಿಶ್ಯಬ್ದವದು ಆಲಿಹುದು ಹೇಳಿಕೊ ಳಲಹುದು
ನಂದದು ಎಲ್ಲಿ ನಿಲ್ಲದು ನಿಂತಿಲ್ಲವದು ನೆಲೆಯೂರಿಯೆಲ್ಲೂ  
ಕಾಂತಿಯ ಹನಿಯೊಂದದು ಯುಗಯುಗದಲೂ ಹರಿದಿಹುದು

ನಾವು ನೋಡಿಹೆವಾs  ಕಂಗಳ ಕಂಪಿನ ಪರಿಮಳವ


ನಸುನಗು ತರಹ ಅರಳಿಹುದು ಕಂಗಳದಲಿ ಎಲ್ಲೋs
ಹಾಗೆ ರೆಪ್ಪೆಯಲಿs ತೇs ಜದ ಜೊತೆ ತೂs ಗಿಹವುs
ತುಟಿಗಳು ತುಸು ಉಸುರವು, ಅದುರುವವು ತುಟಿಗಳಲಿ ಆದರೂ
ಅಷ್ಟು ನಿಶ್ಯಬ್ದಕೆ ಕತೆಗಳೆ ನಿಶ್ಚಲವೇs ನಿಲ್ಲುವವು

ನಾವು ನೋಡಿಹೆವಾs ಕಂಗಳ ಕಂಪಿನ ಪರಿಮಳವ

Rating
No votes yet

Comments

Submitted by H A Patil Fri, 11/16/2012 - 15:29

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
" ಹಮ್ ನೇ ದೇಖೀ ಹೈ ಉನ್ ಆಂಖೋಕಿ ಮೆಹಕತಿ ಖೂಶ್ಬೂ " ಓದಿದ ಕೂಡಲೆ ನನಗೆ ಥಟ್ಟನೆ ನೆನಪಿಗೆ ಬಂದದ್ದು ' ಖಾಮೋಸಿ ' ಚಿತ್ರ. ಈ ಚಿತ್ರದ ನಿರ್ದೇಶಕ ಬಾಸು ಭಟ್ಟಾಚಾರ್ಯ, ಬಾಸು ಚಟರ್ಜಿ ಇಲ್ಲ ಹೃಷಿಕೇಶ ಮುಖರ್ಜಿ ಈ ಮೂವರ ಪೈಕಿ ಯಾರೋ ಒಬ್ಬರು. ಆದರೆ ಹೇಮಂತಕುಮಾರ ಸಂಗೀತ ನಿರ್ದೇಶನದ, ವಹೀದಾ ರೆಹಮಾನ್, ಧರ್ಮೇಂದ್ರ ಮತ್ತು ರಾಜೇಶ ಖನ್ನಾ ಅಭಿನಯದ ಕಪ್ಪು ಬಿಳುಪಿನ ಈ ಚಿತ್ರ ಥಟ್ಟನೆ ನೆನಪಿಗೆ ಬಂತು. ಸುಂದರವಾದ ಮನಮುಟ್ಟುವ ಕಥಾವಸ್ತು, ನಿರೂಪಣೆ, ಪಾತ್ರಧಾರಿಗಳ ಹದವರಿತ ಅಭಿನಯ ಇವೆಲ್ಲಕ್ಕೆ ಕಳಸವಿಟ್ಟಂತೆ ಕವಿ ಗುಲ್ಜಾರರ ಈ ಮನ ಮಿಡಿವ ಗೀತೆ ಹಾಗೂ ಇನ್ನುಳಿದ ಗೀತೆಗಳೂ ಸಹ. ಆದರೆ ಆ ಕಾಲಕ್ಕೆ ಇಂತಹ ಸುಂದರ್ ಚಿತ್ರ ಹುಬ್ಬಳ್ಳಿಯ ಅಜಂತಾದಲ್ಲಿ ಎರಡು ವಾ ಸಹ ಓಡಲಿಲ್ಲ ಎನ್ನುವುದು ಅಷ್ಟೇ ನಿಜ. ಸತ್ವಪೂರ್ಣವಾಗಿ ಗುಲ್ಜಾರರ ಗೀತೆಯನ್ನು ಅನುವಾದ ಮಾಡಿದ್ದೀರಿ.

ವಾಣಿಯಲ್ಲವದು ಪ್ರೀತಿಯು
ಪ್ರೀತಿ ಸ್ವರವಲ್ಲವುದು
ಒಂದು ನಿಶ್ಯಬ್ದವದು

ಸುಂದರ ಅನುವಾದ. ನಿನ್ನೆಯೆ ನಿಮ್ಮ ಅನುವಾದ ಓದಿದ್ದೆ, ಪ್ರತಿಕ್ರಿಯಿಸಲು ಕಂಪ್ಯುಟರ್ ತೊಂದರೆ ಕೊಟ್ಟ ಕಾರಣ ಈ ದಿನ ಪ್ರತಿಕ್ರಿಯಿಸುತ್ತಿದ್ದೇನೆ. ಧನ್ಯವಾದಗಳು.

Submitted by lpitnal@gmail.com Tue, 11/20/2012 - 12:40

In reply to by H A Patil

ಮಾನ್ಯರಾದ ಹನುಮಂತ ಅನಂತ ಪಾಟೀಲ ರವರೇ, ವಂದನೆಗಳು. ಅಂದಿನ ದಿನಮಾನದ ನೆನೆಪುಗಳೊಂದಿಗೆ ಆ ಚಿತ್ರದ ಭೂಮಿಕೆ ಯ ಬಗ್ಗೆ ನಮಗೆ ಹೆಚ್ಚಿನ ವಿವರಗಳೊಂದಿಗೆ ತಿಳಿಸಿದ್ದೀರಿ. ಅನುವಾದದ ಬರಹದ ಸಾಲುಗಳಲ್ಲಿ ಮೆಚ್ಚುಗೆಯಾದದ್ದನ್ನು ಬೆರಳಿಟ್ಟು ತೋರಿಸುತ್ತ , ಬೆರಳು ಹಿಡಿದು ನಡೆಸುತ್ತ, ನೀಡುವ ಪ್ರತಿಕ್ರಿಯೆ ನಿಜಕ್ಕೂ ಪ್ರೀತಿಯುಂಟು ಮಾಡುವಂತಹದ್ದು,.ಗುಲ್ಜಾರ್ ರವರನ್ನು ಕನ್ನಡದಲ್ಲಿ ಹಿಡಿದಿಡುವುದು ಏನಿದೆಯಲ್ಲಾ ಅದು ತುಂಬ ಕಠಿಣ, ಅಲ್ಲದೇ, ಹಿಂದಿ -ಉರ್ದು ಸಾಹಿತ್ಯದ ಮಧುರ ಸಾಲುಗಳನ್ನು ಅರ್ಥ ಕಳೆದುಕೊಳ್ಳದಂತೆ ಅನುವಾದಿಸುವುದು ನಿಜಕ್ಕೂ ಕಠಿಣ, ಒಂದೊಮ್ಮೆ ಅನುವಾದ ಗದ್ಯವಾಗಲೂ ಬಾರದು ಎಂಬ ಚೌಕಟ್ಟು ಕೂಡ ಅನುವಾದಕ್ಕೆ ಚಾಲೇಂಜಿಂಗ್ ತತ್ವವಾಗುವುದರಿಂದ, ಸೀಮಿತ ಭಾಷೆಯ ಶಬ್ದಗಳಲ್ಲಿ ಗಾರುಡಿತನ ತೋರುವುದು ತುಸು ಅಲ್ಲಲ್ಲಿ ತಡವರಿಸುವ ಭಯ ಕೂಡ ಅನುವಾದಕರನ್ನು ಕಾಡುತ್ತದೆ ಎಂಬ ಪ್ರಾಮಾಣಿಕ ಅನಿಸಿಕೆ ನನ್ನದು. ನೋಡೋಣ, ಹುಲಿಯ ಗುಹೆಯನ್ನು ಹೊಕ್ಕುಬಿಟ್ಟಿದ್ದೇನೆ. ..20-30 ಹಾಡುಗಳನ್ನು ಅನುವಾದಿಸಿಯಾಗಿದೆ. ಅವರ ಅನುಮತಿ ಸಿಕ್ಕಲ್ಲಿ ಪುಸ್ತಕವೂ ಹೊರಬರಬಹುದು, ಯಾವುದಕ್ಕೂ ಕಾಲವೇ ಉತ್ತರಿಸಬೇಕು ಅಲ್ಲವೇ ಸರ್, ,,,,,,, ಪ್ರಯತ್ನ ಮುಂದುವರೆದಿದೆ, ನೋಡೋಣ, ..........ಈ ನಿಟ್ಟಿನಲ್ಲಿ ಅನುವಾದಕ್ಕೆ ಸಂಬಂಧಿಸಿದಂತೆ ತಮ್ಮಂತಹ ಸಂಪದಿಗ ಮಿತ್ರರೆಲ್ಲರ ಪ್ರಾಮಾಣಿಕ ಅಭಿಪ್ರಾಯ ನನಗೆ ಹೆಚ್ಚು ಹೆಚ್ಚು ತಿದ್ದಿಕೊಳ್ಳಲು ಅನುಕೂಲವಾಗುತ್ತೆ, . ತಮ್ಮಂತಹವರ ಪ್ರೇರಣೆ ಹೆಚ್ಚು ಹೆಚ್ಚು ಬರೆಯಲು, ತಿಳಿಯಲು ಸ್ಫೂರ್ತಿ ನೀಡುವುದರಲ್ಲಿ ಸಂಶಯವಿಲ್ಲ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. .

Submitted by H A Patil Tue, 11/20/2012 - 19:35

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ಮರು ವಂದನೆಗಳು
ತಮ್ಮ ಮರುಪ್ರಿಕ್ರಿಯೆ ಓದಿದೆ, ತಮ್ಮ ಅನುವಾದಗಳಲ್ಲಿ ಗುಲ್ಜಾರರ ಮೂಲ ರಚನೆಗೆ ಧಕ್ಕೆಯಿಲ್ಲದಂತೆ ಅನುವಾದಿಸಿದ್ದೀರಿ, ಅನುವಾದಗಳು ಕನ್ನಡಿಗರಿಗೆ ಖುಷಿ ನೀಡುವುರಲ್ಲಿ ಅನುಮಾನವಿಲ್ಲ. ಇದು ಅತ್ಯುತ್ತಮ ಅನುವಾದ ಕೃತಿ ಎನಿಸಿಕೊಳ್ಳುತ್ತೆ ಎನ್ನುವುದು ನನ್ನ ಪ್ರಾಂಜಲ ಅಭಿಪ್ರಾಯ.ಇನ್ನಷ್ಟು ಅನುವಾದಗಳು ಬರಲಿ. ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವ ಎಲ್ಲ ಅರ್ಹತೆಗಳು ತನ್ನ ಅನುವಾದಗಳಿಗಿದೆ. ತರ್ಜುಮೆ ಕಾರ್ಯ ಮುಂಧುವರಿಯಲಿ ತಮಗೆ ಇಲ್ಲಿ ಯಶ ಸಿಗಲಿ, ಧನ್ಯವಾದಗಳು.

Submitted by ಗಣೇಶ Fri, 11/16/2012 - 23:07

ಇಟ್ನಾಳರೆ,
ಪುನಃ ಒಂದು ಉತ್ತಮ ಕವಿತೆ ಹಾಗೂ ಅನುವಾದ. ಹಾಡಿನೊಂದಿಗೆ ( http://www.youtube.com/watch?v=dLxM7smo4QQ ) ಕವಿತೆ ಓದುವಾಗ ಹಿಂದಿ ಕವಿತೆ(!) ಚೆನ್ನಾಗಿ ಅರ್ಥವಾಯಿತು.
-ಗಣೇಶ.

Submitted by lpitnal@gmail.com Tue, 11/20/2012 - 12:47

In reply to by ಗಣೇಶ

ಮಿತ್ರರಾದ ಗಣೇಶ ರವರೇ, ಎಲ್ಲ ಮಿತ್ರರಿಗೂ ಸೇರಿಸಿ, ಅವರೆಲ್ಲರ ಸಹಕಾರವನ್ನು ನೆನೆಯುತ್ತ ಹೆಚ್ ಏ ಪಾಟೀಲ ರವರಿಗೆ ಪ್ರತಿಕ್ರಿಯೆಯಲ್ಲಿ ಎಲ್ಲರನ್ನೂ ನೆನೆಯುತ್ತ ನನ್ನ ವಂದನೆಗಳನ್ನು ಸಲ್ಲಿಸಿದ್ದೇನೆ. ಹಿಂದಿನ ಅನುವಾದವನ್ನೂ ನೆನಕೆಯಲ್ಲಿ ಇಟ್ಟುಕೊಂಡು ತಾವು ಈ ಹಾಡನ್ನು, ಯು ಟ್ಯೂಬ್ ನಲ್ಲಿ ಹಾಡನ್ನು ಕೇಳುತ್ತ ಅರ್ಥೈಸಿಕೊಂಡದ್ದು ಒಂದು ರೀತಿ ಧನ್ಯತೆಯನ್ನು ತಂದುಕೊಟ್ಟಿತು. ಶ್ರಮ ಸಾರ್ಥಕ ಕ್ಷಣಗಳು. ಗುಲ್ಜಾರ್ ರವರನ್ನು ಮುಟ್ಟಲು, ಆ ಎತ್ತರಕ್ಕೆ ಏರಲು ಅಸಾಧ್ಯದ ಮಾತು, ಅವರನ್ನು ತಿಳಿದುಕೊಂಡರೆ, ಅರ್ಥೈಸಿಕೊಂಡರೆ ಅದೇ ಆ ಅನುವಾದದ ಸಾರ್ಥಕ್ಯ ಎಂಬ ಅಲ್ಪ ತೃ್ಪ್ತಯ ಅನಿಸಿಕೆ ಎನ್ನದು. ತಮ್ಮ ಪ್ರತಿಕ್ರಿಯೆ ಸ್ಫೂರ್ತಿ ನೀಡಿತು, ಧನ್ಯವಾದಗಳು.