ತುಮ್ ಆಗಯೇ ಹೋ ನೂರ್ ಆಗಯಾ ಹೈ - ಗುಲ್ಜಾರ್ ಹಾಡುಗಳು-3

ತುಮ್ ಆಗಯೇ ಹೋ ನೂರ್ ಆಗಯಾ ಹೈ - ಗುಲ್ಜಾರ್ ಹಾಡುಗಳು-3

ತುಮ್ ಆಗಯೇ ಹೋ ನೂರ ಆಗಯಾ ಹೈ ( ಗುಲ್ಜಾರ್ ಹಾಡುಗಳು-3)
                 ಹಿಂದಿ  :  ಗುಲ್ಜಾರ್ ಜಿ ( ಆಂಧೀ) 1975
               - ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ನಿನ್ನಾಗಮನಕೆ   ಬೆಳಕದು ಬಂದಿದೆ
ಬರದಿರೆ, ದೀಪದ ಜ್ವಾಲೆ ನಂದಲಿತ್ತು
ಅರ್ಥವು ಜೀವಕೆ ನಿನ್ನಿಂದೊರೆತಿದೆ
ಅನಿಮಿತದ ಬದುಕದು  ಹೊರಟು ಹೋಗಲಿತ್ತು

ನಡೆಯೆಲಿಂದ, ಯಾಕದು ಯಾಣವು, ವಿದೆಚ್ಚರವಿರದರೂ
       ಆವ ದಾರಿಯದೋ ಮಿಳಿತ ಹೊಂದುವಲಿ   ಸಿಗುವೆ ನೀನಲ್ಲೆ
ನಡೆಯೆಲಿಂದ, ಯಾಕದು ಯಾಣವು,  ವಿದೆಚ್ಚರವಿರದರೂ
       ಆವ ದಾರಿಯದೊ ಮಿಳಿತ ಹೊಂದವಲಿ,   ಸಿಗುವೆ ನೀನಲ್ಲೆ

ಎನವರೆ ಗಾರಾಧನವದು ಕೇಳಿಬರುತಲಿತ್ತು
 
ನಿನ್ನಾಗಮನಕೆ   ಬೆಳಕದು ಬಂದಿದೆ
ಬರದಿರೆ, ದೀಪದ, ಜ್ವಾಲೆ ನಂದಲಿತ್ತು

ದಿನ ಮುಳುಗಿಲ್ಲವು ನಿಶೆ ಕರಗಿಲ್ಲವು ಅರಿಯೆ ಯಾತರವಿಯಾಣವು
ಕನಸು ನೀಡಿದ ಕಣ್ಣುಗಳಲಿ ಬರುತಿರುವೆನಾ ನಲ್ಲೆ
ದಿನ ಮುಳುಗಿಲ್ಲವು ನಿಶೆ ಕರಗಿಲ್ಲವು ಅರಿಯೆ ಯಾತರವಿಯಾಣವು
ಕನಸು ನೀಡಿದ ಕಣ್ಣುಗಳಲಿ ಬರುತಿರುವೆನಾನಲ್ಲೆ

ಅದೋ ಬರುತಿರುವಾ ನಿನ್ನ ದನಿಯಿರುವತ್ತ

      ನಿನ್ನಾಗಮನಕೆ    ಬೆಳಕದು ಬಂದಿದೆ
       ಬರದಿರೆ, ದೀಪದ, ಜ್ವಾಲೆ ನಂದಲಿತ್ತು
*****************************************

      ನಿನ್ನಾ ಗಮನಕೆss ಬೆಳಕದು ಬಂದಿದೆ

ನಿನ್ನಾ ಗಮನಕೆss   ಬೆಳಕದು ಬಂದಿದೆ
ಬರದಿರೆ, ದೀss ಪದ ಜ್ವಾಲೆ ನಂದಲಿತ್ತು
ಅರ್ಥವು ಜೀssವಕೆ ನಿನ್ನಿಂss ದೊರೆತಿದೆ
ಅನಿಮಿತದ ಬದುಕದುss  ಹೊರಟುss ಹೋssಗಲಿತ್ತು

ನಡೆಯೆ ಲಿಂದ, ಯಾಕದು ಯಾಣವು, ವಿ ದೆಚ್ಚರ ವಿರ ದರೂss
       ಆವ ದಾರಿಯದೋss ಮಿಳಿತ ಹೊಂದುವಲಿss   ಸಿಗುss ವೆ ನೀನಲ್ಲೆss
ನಡೆಯೆ ಲಿಂದ, ಯಾಕದು ಯಾಣವು,  ವಿ ದೆಚ್ಚರ ವಿರ ದರೂss
       ಆವ ದಾರಿಯದೊss ಮಿಳಿತ ಹೊಂದವಲಿ,   ಸಿಗುss ವೆ ನೀನಲ್ಲೆss

ಎನss ವರೆ ಗಾss ರಾಧನವದು ಕೇss ಳಿಬರುತss ಲಿತ್ತು
 
ನಿನ್ನಾಗಮನಕೆ   ಬೆಳಕದು ಬಂದಿದೆ
ಬರದಿರೆ, ದೀss ಪದ, ಜ್ವಾಲೆ ನಂದಲಿತ್ತು

ದಿನ ಮುಳುಗಿಲ್ಲವು ನಿಶೆ ಕರಗಿಲ್ಲವು ಅರಿಯೆ ಯಾತ ರವಿ ಯಾssಣವು
ಕನಸು ನೀಡಿದ ಕಣ್ಣುಗಳಲಿ ಬರುತಿರು ವೆನಾs ನಲ್ಲೆss
ದಿನ ಮುಳುಗಿಲ್ಲವು ನಿಶೆ ಕರಗಿಲ್ಲವು ಅರಿಯೆ ಯಾತ ರವಿ ಯಾssಣವು
ಕನಸು ನೀಡಿದ ಕಣ್ಣುಗಳಲಿ ಬರುತಿರು ವೆನಾs ನಲ್ಲೆss

ಅದೋss ಬರುತಿರುವಾ ನಿನ್ನss ದನಿ ಯಿರುs  ವತ್ತ

ನಿನ್ನಾಗಮನಕೆ   ಬೆಳಕದು ಬಂದಿದೆ
ಬರದಿರೆ, ದೀss ಪದ, ಜ್ವಾಲೆ ನಂದಲಿತ್ತು

Rating
No votes yet

Comments

Submitted by partha1059 Tue, 11/20/2012 - 14:02

ಇಟ್ನಾಳರೆ
ನಾನು ತುಮಕೂರಿಗೆ ಬ0ದು ಪಿಯುಸಿ ಸೇರಿದ‌ ನ0ತರ‌ ಮೊದಲು ನೋಡಿದ‌ ಸಿನಿಮಾ
ಅಷ್ಟೆ ಅಲ್ಲ ನಾನು ನೋಡಿದ‌ ಪ್ರಥಮ‌ ಹಿ0ದಿ ಸಿನಿಮಾ
ನೆನಪಿದೆ , ಹಾಗೆ ನಿಮ್ಮ ಕನ್ನಡಾನುವಾದ‌ ಕೂಡ‌ ಸೊಗಸಾಗಿದೆ
http://en.wikipedia.org/wiki/Aandhi

Submitted by lpitnal@gmail.com Tue, 11/20/2012 - 14:38

In reply to by partha1059

ಪ್ರಿಯ ಮಿತ್ತ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಗುಲ್ಜಾರ್ ಜಿಯವರ ಹಾಡು ತಮ್ಮನ್ನು ತಮ್ಮ ಪಿಯುಸಿ ದಿನಗಳಿಗೆ ಕರೆದೊಯ್ದದ್ದು ಸಂತೋಷವನ್ನುಂಟು ಮಾಡಿತು, ಹಾಡಿನ ಕನ್ನಡ ಅನುವಾದವನ್ನು ಮೆಚ್ಚಿಕೊಂಡ ಸಹೃದಯದ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Tue, 11/20/2012 - 19:27

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
" ಆಂಧಿ " ಚಿತ್ರಕ್ಕೆ ಕವಿ ಗುಲ್ಜಾರ ಬರೆದ ಮೂರು ಹಾಡುಗಳನ್ನು ಆಗಲೆ ಕನ್ನಡೀಕರಿಸಿ ಕೊಟ್ಟಿದ್ದೀರಿ.ತಮ್ಮ ಬರವಣೀಗೆಯ ವೇಗ ಹಿಂದಿ ಮತ್ತು ಉರ್ದು ಭಾಷೆಗಳ ಮೇಲಿನ ತಮ್ಮ ಹಿಡಿತ ಮಜಬೂತಾಗಿದೆ. ಬಹಳ ಸಮರ್ಥ ಅನುವಾದ, ಗೀತೆಗಳ ಸಾಲುಗಳು ಬಹಳ ಕಾಡುತ್ತವೆ. ಮತ್ತೆ ಮತ್ತೆ ಓದ ಬೇಕೆನಿಸುವಂತಹವು. ಬಂಗಾಳಿ ನಟಿ ಸುಮಿತ್ರ ಸೇನ ನಟ ಸಂಜೀವ ಕುಮಾರರ ಅಭಿನಯ ಆರ್.ಡಿ.ಬರ್ಮನ್ ರ ಸುಮಧುರ ಸಂಗೀತ ಆ ಹಾಡುಗಳ ಚಿತ್ರೀಕರಣಕ್ಕೆ ಆಯ್ದುಕೊಂಡ ಲೊಕೇಶನ್ ಗಳು ಹಾಡುಗಳನ್ನು ಅಜರಾಮರ ಗೊಳಿಸಿವೆ. ಎಷ್ಟು ಸಲ ಕೇಳದರೂ ಬೇಸರವೆಸುವುದಿಲ್ಲ. ಅಷ್ಟು ಅರ್ಥಗರ್ಭಿತ ಹಾಡುಗಳು, ಎಮರ್ಜನ್ಸಿ ಕಾಲದಲ್ಲಿ ಈ ಚಿತ್ರಕ್ಕೆ ಪ್ರದರ್ಶಿಸದಂತೆ ತಡೆ ನೀಡಿದ್ದು ಎಲ್ಲ ನೆನಪಿಗೆ ಬಂದವು ನನ್ನ ಕೋರಿಕೆ ಮನ್ನಿಸಿ ಕವಿ ಗುಲ್ಜಾರರ ಹಾಡುಗಳನ್ನು ಅನುವಾದಿಸಿ ಕೊಟ್ಟಿದ್ದೀರಿ. ತಮ್ಮ ಅಭಿಮಾನಕ್ಕೆ ಧನ್ಯವಾದಗಳು

Submitted by lpitnal@gmail.com Tue, 11/20/2012 - 20:02

ಆತ್ಮೀಯ ಹನುಮಂತ ಅನಂತ ಪಾಟೀಲರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪ್ರತಿಕ್ರಿಯೆ ನೋಡಿದೆ, ತಮ್ಮ ಪ್ರೀತಿ ತುಂಬಿದ ಮಾತುಗಳ ಮುಂದೆ ಕುಬ್ಜನಾಗಿ ನಿಂತೆ, ಅದೆಷ್ಟು ದೊಡ್ಡ ಮನಸ್ಸಿನಿಂದ ಹರಸಿದ್ದೀರಿ ಸರ್, ಹಾಡನ್ನು ತಾವು ಇನ್ನೊಂದು ಹಾಡಿನ ಪ್ರತಿಕ್ರಿಯೆಯಲ್ಲಿ ಆಂಧಿ ಚಿತ್ರದ ಹಾಡುಗಳನ್ನು ಅನುವಾದಿಸಲು ಕೇಳಿದ್ದರಿಂದ ಮನದಲ್ಲಿ ಆದಷ್ಟು ಬೇಗ ನನ್ನ ಮೆಚ್ಚಿನ ಕವಿಯ ಹಾಡುಗಳನ್ನು ಅನುವಾದಿಸಲು ಅನುವಾದೆ. ಈ ಕವಿ ನನ್ನ ಉಸಿರಿನಲ್ಲೂ ಇರುತ್ತಾರೆ, ಅದಕ್ಕಾಗಿ ನನಗವರು ಅರ್ಥವಾಗುತ್ತಾರೆ ಎಂದು ಸ್ವಲ್ಪ ಸಲುಗೆಯಿಂದ ಹೇಳಬಯಸುತ್ತದೆ ಮನ. ಆದರೂ ಕಾಪಿರೈಟ್ ಸಲುವಾಗಿ ಒಂದೈವತ್ತು ಹಾಡುಗಳೊಂದಿಗೆ ಅವರನ್ನು ಸಂಪರ್ಕಿಸಿ ಪ್ರಕಟಿಸುವಾಸೆ, ನೋಡಬೇಕು, ಮೆಚ್ಚಿನ ಕವಿಯ ಮನದಲ್ಲೇನಿದೆಯೋ! ತಮ್ಮ ಪ್ರೀತಿತುಂದಿದ ಮಾತುಗಳಿಗೆ ಮತ್ತೊಮ್ಮೆ ವಂದಿಸುವೆ ಸರ್.

Submitted by H A Patil Tue, 11/20/2012 - 20:15

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ಮರುವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ. ತಮ್ಮ ಸಂಕೋಚವನ್ನು ಬದಿಗೊತ್ತಿ ಸಾರ್ ..ಗುಲ್ಜಾರ ನಿಮಗೆ ಅರ್ಥವಾಗಿದ್ದಾರೆ, ಐವತ್ತು ಕವನಗಳ ಅನುವಾದ ಇರಲಿ. ಇದು ಪ್ರಕಟಗೊಂಡರೆ ಆ ವರ್ಷದ ಅತ್ಯತ್ತಮ ಕೃತಿ ಇದಾಗುತ್ತದೆ ಎನ್ನುವ ಅನಿಸಿಕೆ ನನ್ನದು. ಆಗದಿದ್ದರೂ ಪರವಾಇಲ್ಲ ನಾವು ನಿಮ್ಮದು ಒಳ್ಳೆಯ ಅನುವಾದಗಳ ಪುಸ್ತಕ ಎಂದು ಈಗಲೆ ಒಪ್ಪಿ ಕೊಂಡಿದ್ದೇವೆ, ನನ್ನದು ಅತಗಿರೇಕದ ಅನಿಸಿಕೆ ಎನ್ನಬೇಡಿ, ಧನ್ಯವಾದಗಳು.