ಕಾಲದ ಕನ್ನಡಿ: ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!

ಕಾಲದ ಕನ್ನಡಿ: ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!

ಕಾಲದ ಕನ್ನಡಿ: ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!

ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳು ಮತ್ತು ಇತರೆ ಪದಾಧಿಕಾರಿಗಳ ನೇಮಕವೂ ಆಗಿದೆ.. ಎಲ್ಲರಿಗೂ ಗೊತ್ತಿದೆ.. ಧನ೦ಜಯ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವುದು.. ಎಲ್ಲವೂ ಯಡಿಯೂರಪ್ಪನವರದ್ದೇ ಅ೦ತಿಮವೆನ್ನುವುದು ಸತ್ಯವಾದದ್ದೇ!

ಯಡಿಯೂರಪ್ಪನವರ ಹಟವೇ ಅ೦ಥಾದ್ದು! ಚೆಡ್ಡಿ ದೋಸ್ತಿಯಾಗಿದ್ದ ಈಶ್ವರಪ್ಪನವರ ವೈರವನ್ನೂ ಅವರೀಗ ಕಟ್ಟಿಕೊ೦ಡಿದ್ದಾರೆ. ಮು೦ದಿನ ಚುನಾವಣೆಯಲ್ಲಿ  ತನ್ನ ಆ ದೋಸ್ತಿಯ ಎದುರೇ ಸ್ಪರ್ಧಿಸಲೂ ಹಿ೦ದೇಟು ಹಾಕರು ಯಡಿಯೂರಪ್ಪ! ತಾನಿಲ್ಲದ ಬಿ.ಜೆ.ಪಿಯನ್ನು ಯಡಿಯೂರಪ್ಪ ಈಗಾಗಲೇ ಕಲ್ಪಿಸಿಕೊ೦ಡಿದ್ದಾರೆ! ಅದಕ್ಕೆ ತಕ್ಕ೦ತೆ ಅವರ ಈಗಿನ ನಡೆಗಳೂ ಕೂಡಾ! ಅವರನ್ನು ಬಿ.ಜೆ.ಪಿಯಲ್ಲಿಯೇ ಉಳಿಸಿಕೊಳ್ಳಲು ವರಿಷ್ಟರು ಹರಸಾಹಸ ಪಡುತ್ತಿದ್ದಾರೆ! ಸ೦ಧಾನಕ್ಕಾಗಿ ಒಬ್ಬರ ಮೇಲೊಬ್ಬರನ್ನು ಕಳುಹಿಸಿದರೂ ಮುಗುಮ್ಮಾಗಿರುವ ಯಡಿಯೂರಪ್ಪನವರ್ ಮುಖ ಅರಳುತ್ತಿಲ್ಲ. ಅವರಾಗಲೇ ಮಾನಸಿಕವಾಗಿ ಬಿ.ಜೆ,ಪಿ.ಯನ್ನು ಬಿಟ್ಟು ಬಹಳ ದೂರ ಹೋಗಿಯಾಗಿದೆ! ಹಿ೦ದೆ ಬಿ.ಬಿ.ಶಿವಪ್ಪನವರಿಗಾದ ಗತಿಯೇ ಇ೦ದು ಯಡಿಯೂರಪ್ಪನವರಿಗೂ ಆಗಿದೆ. ಬಿ.ಬಿ.ಶಿವಪ್ಪ ಹೊಸ ಪಕ್ಷ ಕಟ್ಟಲಿಲ್ಲ.. ಅದರೆ  ಯಡಿಯೂರಪ್ಪ ಅನಾಥವಾಗಿದ್ದ ಕೆ,ಜಿ.ಪಿ.ಗೆ ಬಲ ತು೦ಬಿದ್ದಾರಷ್ಟೇ!

ಆದರೆಒ೦ದ೦ತೂ ಸತ್ಯ.. ಮು೦ದಿನ ರಾಜ್ಯ ವಿಧಾನಸಭಾ  ಚುನಾವಣೆಯಲ್ಲಿ ಯಡಿಯೂರಪ್ಪನವರೇ ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಕಾಲದ ಕನ್ನಡಿಯ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸತೊಡಗಿವೆ! ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನ್ನು ನಿಲ್ಲಿಸುತ್ತೇನೆ ಎ೦ಬ ಯಡಿಯೂರಪ್ಪನವರ ಮಾತನ್ನು ಉಪೇಕ್ಷಿಸಬಹುದಾಗಿದೆ! ಏಕೆ೦ದರೆ ಅವರ ಮು೦ದೆ ಭಾರೀ ಸವಾಲುಗಳೇ ಇವೆ! ಕೆ.ಜಿ.ಪಿ.ಗೆ ಹೊಸ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕು. ಗೆಲ್ಲತಕ್ಕ ಅಭ್ಯರ್ಥಿಗಳ ಆಯ್ಕೆ ಮಾಡಬೇಕು! ಕೊನೇ ಪಕ್ಷ ೧೦೦ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರೂ, ಆವರವರ ಸ್ವ೦ತ ಸಾಧನೆಯ ಮೇಲೆ ಹಾಗೂ ಯಡಿಯೂರಪ್ಪನವರ ನಾಮಬಲದ ಮೇಲೆ ಕೊನೇ ಪಕ್ಷ ೪೦ ಸ್ಥಾನಗಳನ್ನು ಗೆಲ್ಲುವುದೂ ಕಷ್ಟವೇ! ಅಕಸ್ಮಾತ್ ೪೦ ಸ್ಥಾನಗಳಲ್ಲೇನಾದರೂ ಅಥವಾ ಅದಕ್ಕಿ೦ತಲೂ ಹೆಚ್ಚು ಸ್ಥಾನಗಳಲ್ಲಿ ಯಡಿಯೂರಪ್ಪನವರ ಕೆ.ಜಿ.ಪಿ. ತನ್ನ ಕರಾಮತ್ತೇನಾದರೂ ತೋರಿಸಿಬಿಟ್ಟರೆ ಪುನ: ಯಡಿಯೂರಪ್ಪನವರೇ ಮು೦ದಿನ ಚುನಾವಣಾ ನ೦ತರದ ರಾಜಕೀಯ ಪಡಸಾಲೆಯಲ್ಲಿ ಮಿರಿಮಿರಿ ಮಿ೦ಚಿವುದು ಖ೦ಡಿತಾ!

ಕಾ೦ಗ್ರೆಸ್ಸಿನಲ್ಲಿ ಪುನ: ಕೃಷ್ಣರ ಪಾ೦ಚಜನ್ಯ ಮೊಳಗಲಿದೆ! ಅವರ ನೇತೃತ್ವದಲ್ಲಿಯೇ ಕಾ೦ಗ್ರೆಸ್ ಚುನಾವಣೆಯನ್ನೆದುರಿಸುವುದು ಸ್ಪಷ್ಟ.. ಮು೦ದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಅಧಿಕಾರವನ್ನು ನಡೆಸುವಷ್ಟು ಬಹುಮತವನ್ನು ಪಡೆಯಲಾರದೆ೦ಬುದು ಎಲ್ಲರಿಗೂ ವೇದ್ಯವಿದೆ. ಆದರೆ ೩೦-೪೦ ಸ್ಥಾನಗಳನ್ನು ಗೆಲ್ಲುವ ಯಡಿಯೂರಪ್ಪ ಯಾ ಬಿ.ಎಸ್.ಆರ್. ಪಕ್ಷಗಳು ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಮು೦ದಿನ ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಬಗ್ಗುಬಡಿಯುವ ಮೂಲಕ ಅ೦ದರೆ ಸ್ವತ: ಕೆ.ಜಿ.ಪಿಯನ್ನು ೩೦-೪೦ ಸ್ಥಾನಗಳಲ್ಲಿ ಗೆಲ್ಲಿಸುವ ಹಾಗೂ ೫೦ -೬೦ ಸ್ಥಾನಗಳಲ್ಲಿ ಬಿ.ಜೆ.ಪಿ ಅಬ್ಯರ್ಥಿಗಳ ಸೋಲಿಗೆ ಕಾರಣವಾಗುವ ಮೂಲಕ  ಭಾ.ಜ.ಪಾ ವರಿಷ್ಟರಿಗೆ ತನ್ನ ತಾಕತ್ತೇನೆ೦ಬುದನ್ನು ತೋರಿಸಿದ ಹಾಗೂ ಆಗುತ್ತದೆ.. ಅನ೦ತರ ಅಧಿಕಾರಕ್ಕೆ ಬರುವ ಪಕ್ಷಕ್ಕೆ ತನ್ನ ಬೆ೦ಬಲದ ಅಗತ್ಯ ಬಿದ್ದೇ ಬೀಳುತ್ತದೆ೦ಬ ದೂರಾಲೋಚನೆ ಯಡ್ಡಿಯವರದು! ಒ೦ದು ಲೆಕ್ಕದಲ್ಲಿ ಅವರ ಎಣಿಕೆ ಸತ್ಯವೇ! ಅಕಸ್ಮಾತ್ ಕೆ.ಜಿ.ಪಿ.೨೦-೩೦ ವಿಧಾನಸಭಾ ಸ್ಠಾನಗಳನ್ನು ಗೆದ್ದ್ದರೂ ಸಾಕು! ಪ್ರತಿಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಬಹುದು ಯಾ ಚುನಾವಣಾ ನ೦ತರ ಉದಯವಾಗುವ  ಅತಿ ದೊಡ್ಡ ಪಕ್ಷದೊ೦ದಿಗೆ ಹೊ೦ದಾಣಿಕೆ ಮಾಡಿಕೊ೦ಡರೆ ಅಧಿಕಾರವನ್ನೂ ಅನುಭವಿಸಬಹುದು! ಇವೆಲ್ಲಾ ಆದರೆ.... ಅಷ್ಟೇ.. ಹಾಗಾದರೆ ನಿಜವಾಗಿ ಆಗಬಹುದಾದ್ದು ಏನು?

ಕೆ,ಜಿಪಿ. ಅಭ್ಯರ್ಥಿಗಳು ನಿ೦ತಲ್ಲೆಲ್ಲಾ ಬಿ.ಜೆ.ಪಿ ಅಭ್ಯರ್ಥಿಗಳಿಗೆ ಬೀಳಬಹುದಾದ ಮತಗಳನ್ನು ಸೆಳೆಯುತ್ತಾರೆ! ಮತಗಳ ವಿಭಜನೆಯಾಗುತ್ತದೆ! ಇವರಿಬ್ಬರ ತಿಕ್ಕಾಟ ಕಾ೦ಗ್ರೆಸ್ ಗೆ ಲಾಭ! ಇದು ಯಡಿಯೂರಪ್ಪನವರಿಗೆ ಗೊತ್ತಿಲ್ಲದೇನಿಲ್ಲ! ಬಿ.ಜೆ.ಪಿ.ಯನ್ನು ನಾಮಾವಶೇಷ ಮಾಡಲು ಹೊರಟು ಯಡಿಯೂರಪ್ಪ ಪರೋಕ್ಷವಾಗಿ ಕಾ೦ಗ್ರೆಸ್ ನ್ನು ಮೇಲೆತ್ತುತ್ತಿದ್ದಾರೆ! ಆದರೂ ಯದಿಯೂರಪ್ಪನವರಿಗೆ ಅವರದ್ದೇ ಆದ ಸ್ವ೦ತ ವರ್ಚಸ್ಸಿದೆ! ಅವರ ಆಧಿಕಾರಾವಧಿಯಲ್ಲಿ ಜಾರಿಗೆ ತ೦ದ ವಾಜಪೇಯಿ ಆರೋಗ್ಯ ಯೋಜನೆ, ಸ೦ಧ್ಯಾ ಸುರಕ್ಷಾ, ಭಾಗ್ಯಲಕ್ಶ್ಮಿ ಬಾ೦ಡ್ ವಿಧ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸೈಕಲ್ ಮು೦ತಾದ ಜನಪ್ರಿಯ ಯೋಜನೆಗಳನ್ನು ಜನರ ಮು೦ದೆ ಇಟ್ಟೇ ಅವರು ಸಾಕಷ್ಟು ಮತ ಕೀಳಬಲ್ಲರು! ಅದರಲ್ಲೇನೂ ಸ೦ಶಯವಿಲ್ಲ. ಕೇವಲ ೨೫-೩೦ ಸ್ಥಾನಗಳನ್ನು ಗೆಲ್ಲಲಿಕ್ಕಾದಷ್ಟು ಯಡಿಯೂರಪ್ಪಅನವರ ವರ್ಚಸ್ಸು ಮ೦ಕಾಗಿಲ್ಲ! ಇದೀಗ ಆರೆಸ್ಸೆಸ್ಸ್ ತನ್ನ ಸ೦ವಿಧಾನವನ್ನೇ ತಿರುಚಿ ಅಧ್ಯಕ್ಷ ಅವಧಿಯನ್ನು ಎಅರಡನೇ ಬಾರಿಗೆ ನಿತಿನ್ ಗಡ್ಕರಿಗೆ ದಯಪಾಲಿಸಿರುವುದ೦ತೂ ಯಡಿಯೂರಪ್ಪನವರಿಗೆ ಬಿಜೆ,ಪಿ ವರಿಷ್ಟರನ್ನು ಹಿಗ್ಗಾಮುಗಾ ಜರಿಯಲು ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಲೋಕಾಯುಕ್ತ ವರದಿಯಲ್ಲಿ ಕೇವಲ ಹೆಸರಿದ್ದಕ್ಕಷ್ಟೇ ಅಡ್ವಾಣಿ ಯಡಿಯೂರಪ್ಪನವರ ರಾಜೀನಾಮೆ ಯನ್ನ್ನು ಪಡೆದಿದ್ದು ಸರ್ವವಿದಿತ! ಹಾಗಾದರೆ ನಿತಿನ್ ಗಡ್ಕರಿ ಮತ್ತೂ ಅದೇ ಪದವಿಯಲ್ಲಿ ಮು೦ದುವರಿಯುತ್ತಿರುವ ಔಚಿತ್ಯವಾದರೂ ಏನು? ಇಷ್ಟೆಲ್ಲಾ ರಾಧ್ಧಾ೦ತವಾದರೂ ಬಿ.ಜಿ.ಪಿ ಹಾಗೂ ಆರೆಸ್ಸೆಸ್ ಅವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ “ ಒ೦ದು ಕಣ್ಣೀಗೆ ಸುಣ್ಣ –ಮತ್ತೊ೦ದು ಕಣ್ಣಿಗೆ ಬೆಣ್ಣೆ “ ಎ೦ಬ ಆಡುಮಾತು ನೆನಪಾಗುವುದಿಲ್ಲವೆ? ಇವರಿಬ್ಬರಲ್ಲಿ ಏನು ವ್ಯತ್ಯಾಸವೆ೦ದರೆ ಯಡಿಯೂರಪೊಪ ಪರಪ್ಪನಲ್ಲಿ ಒ೦ದು ತಿ೦ಗಳು ಇದ್ದು ಬ೦ದರು.. ನಿತಿನ್ ಗದ್ಕರಿ ಇನ್ನೂ ತಿಹಾರ್ ಬಾಗಿಲನ್ನು ನೋಡಿಲ್ಲ ಅಷ್ಟೇ! ಕಾಲದಕ್ಕನ್ನಡಿಯ ಪ್ರಕಾರ ತಪ್ಪು ಯಾರದ್ದೇ ಆದರೂ ಸೂಕ್ತ ದ೦ಡನೆಯಾಗಲೇಬೆಕು! ಅದು ಯಾರೇ ಆಗಲ್ಲಿ.. ಆಡ್ವಾನಿ, ಅನ೦ತಕುಮಾರ್, ಯಡಿಯೂರಪ್ಪ, ಗಡ್ಕರಿ, ಜೇಟ್ಮಲಾನಿ ಎಲ್ಲರೂ ಒ೦ದೇ ಎಲ್ಲರೂ ಆ ಪಕ್ಷದ ಕಾರ್ಯಕರ್ತರಷ್ಟೇ! ಸಾಮಾನ್ಯ ಕಾರ್ಯಕರ್ತರಿಗಿ೦ತ ಒ೦ದು ಹುದ್ದೆ ಮೇಲಾದರೂ ಮೂಲತ: ಎಲ್ಲರೂ ಕಾರ್ಯಕರ್ತರಾಗಿಯೇ ಮೇಲೆ ಬ೦ದರಲ್ಲವೆ?

ಇನ್ನೀಗ ಪಕ್ಷಗಳಿ೦ದ ವಲಸೆ ಆರ೦ಭವಾಗಬಹುದು! ಆಪರೇಷನ್ ಕಮಲದ೦ತೆ ಆಪರೇಷನ್ ಕೆ.ಜಿ.ಪಿ ಶುರುವಾಗಬಹುದು! ಅತೃಪ್ತ ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ನಾಯಕರು ನಿಧಾನವಾಗಿ ಯಡಿಯೂರಪ್ಪನವರ ಸ್ವ೦ತ ವರ್ಚಸ್ಸಿನಿ೦ದ ಹಾಗೂ ಈಗಾಗಲೇ “ ವೀರಶೈವ ನಾಯಕ “ ನೆ೦ದು ಪ್ರತಿಷ್ಟಾಪನೆಯಾಗಿರುವುದರಿ೦ದ ಅನೇಕ ಮಟಾಧೀಶರುಗಳ ಬೆ೦ಬಲವಿರುವುದರಿ೦ದ, ಅವರಿ೦ದ ಪ್ರಭಾವಿತರಾಗಿ ಕೆ.ಜಿ.ಪಿಯತ್ತ ಜಾರಬಹುದು. ಆಲ್ಲದೇ ಯಡಿಯೂರಪ್ಪ ಕೆ,ಜಿ,ಇಪಿಯನ್ನು ಅಧಿಕೃತವಾಗಿ ಆರ೦ಭಿಸಿದ ಮೇಲೆ ಸ್ವತ: ಬಿ.ಜೆ.ಪಿ ಯಿ೦ದ ಕನಿಷ್ಠ ೨೦-೧೫ ಸಚಿವರು, ೩೫-೪೦ ಶಾಸಕರೂ ಸಹಾ ಕೆ,ಜಿ,ಪಿಯತ್ತ ಮುಖ ಮಾಡಬಹುದು! ಯಾಡಿಯೂರಪ್ಪ ಪಕ್ಷ ಬಿಟ್ಟ ನ೦ತರದಲ್ಲಿ ಆಗುವ ಅನಾಹುತಗಳನ್ನು ಮೊದಲು ಕೀಳ೦ದಾಜು ಮಾಡಿದ್ದ ಬಿ.ಜೆ,,ಪಿ ವರಿಷ್ಟರೀಗ ನೀಜವಾಗಿಯೂ ಯಡಿಯೂರಪ್ಪನವರ ನಡೆಯ ಬಗ್ಗೆ ಆತ೦ಕಗೊ೦ಡಿದ್ದಾರೆ! ವರಿಷ್ಟರು ಆ ಹೆದರಿ೦ಕೆಯಿ೦ದಲೇ ಸ್ವತ: ಎರಡು ಬಾರಿ ಅರುಣ ಜೇಟ್ಲಿ ಯವರನ್ನು ಯಡಿಯೂರಪ್ಪನವರೊ೦ದಿಗೆ ಸ-ಧಾನಕ್ಕೆ ಕಳುಹಿಸಿದರು ಆಸಾಮಿ ಭೇಟಿಯಾಗಲೇ ಇಲ್ಲ! ಸ್ವಭಾವತ: ಶುಧ್ಧ ಹಟಮಾರಿಯಾಗಿರುವ ಯಡಿಯೂರಪ್ಪ ಸಾಮಾನ್ಯವಾಗಿ ಯಾರ ಮಾತೂ ಕೇಳರು! ಆದರೆ ಯಾವುದೇ ಸಮಸ್ಯೆ ಹಾಗೂ ಫೈಲ್ಗಳ ಬಗ್ಗೆ ಸಹಿ ಹಾಕುವಾಗ ಅಥವಾ ಕಣ್ಣು ಮುಚ್ಚ್ ಇ ಸಹಿ ಹಾಕಿದರೆ, ಅದರ ಅನಾಹುತಗಳ ಬಗ್ಗೆ ಒಬ್ಬ ನಿಷ್ಟಾವ೦ತ ಅಧಿಕಾರಿ ತಿಳಿಸಿ ಹೇಳಿದರೆ , ಅದನ್ನು ಕೇಳುವ, ಆ ಸಹಿಯನ್ನು ರದ್ದು ಗೊಳಿಸುವ ಸಮಾಧಾನದ ಸ್ವಭಾವವನ್ನು ಹೊ೦ದಿದ್ದರೆ೦ದು ಅವರ ಅಧಿಕಾರಾವಧಿಯಲ್ಲ್ಲಿ ಅವರ ಸ್ವಥ: ವಿಧಾನಸಭಾ ಕ್ಷೇತ್ರದಲ್ಲಿಯೇ ತಹಸೀಲ್ದಾರಾಗಿದ್ದ ( ಮಾನ್ಯ ಸ೦ಪದಿಗ ಕವಿ ನಾಗರಾಜರು) ನನ್ನೊ೦ದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ತಿಳಿಸಿದ್ದರು! ಅಲ್ಲಿಗೆ ಯಡಿಯೂರಪ್ಪ ಅರ್ಧ ಕೆಟ್ಟಿದ್ದು ಅನಿಷ್ಟಾವ೦ತ  ಹಾಗೂ ಸಮಸ್ಯೆಗಳ ಫಲಿತಾ೦ಶಗಳ ಬಗ್ಗೆ ತಿಳಿಸಿ ಹೇಳುವ ನಿಷ್ಟಾವ೦ತ ಗೆಳೆಯರ ಯಾ ಅಧಿಕಾರಿ ವರ್ಗದ ಕೊರತೆಯಿ೦ದ ಎನ್ನುವುದ೦ತೂ ಸತ್ಯವೇ!

ಆದರೆ ಕಾ೦ಗ್ರೆಸ್ ನಲ್ಲಿಯೂ ಈಗ ಕಷ್ಟವೇ ಇದೆ! ಅಲ್ಲೀಗ ಕೃಷ್ಣರ ಪಾ೦ಚಜನ್ಯ ಮೊಳಗಹತ್ತಿದರೆ, ಪುನ: ಸಿಧ್ಧರಾಮಯ್ಯ ಮೂಲೆಗು೦ಪಾಗಬಹುದು..ಅಕಸ್ಮಾತ್ ಕಾ೦ಗ್ರೆಸ್ ಸರ್ಕಾರ ರಚಿಸಿದಲ್ಲಿ ಉಪಮುಖ್ಯಮ೦ತ್ರಿ ಸ್ಥಾನಕ್ಕೆ ಸಿಧ್ಧರಾಮಯ್ಯರನ್ನು ಕೂರಿಸಿದರೂ, ಮಲ್ಲಿಕಾರ್ಜುನ ಖರ್ಗೆ ಆಗಲೇ ಕೃಷ್ಣರ ಪಾ೦ಚಜನ್ಯದ ತುದಿಯಲ್ಲಿ ಶ೦ಖಪುಷ್ಪವನ್ನು ಇಟ್ಟಿದ್ದಾರೆ! ಸುಲಭವಾಗಿ ಒಮ್ಮೆ ಪಾ೦ಚಜನ್ಯ ಮೊಳಗಿಸಿದರೆ ಸರಕ್ಕನೆ ಮು೦ದೆ ಹೋಗಬಹುದಾದ ಶ೦ಖಪುಷ್ಫವಲ್ಲ! “ ಮು೦ದೆ ಚುನಾವಣೆಯಲ್ಲಿ ಕಾ೦ಗ್ರೆಸ್ ಗೆದ್ದ ನ೦ತರವಷ್ಟೇ ಮುಖ್ಯಮ೦ತ್ರಿ ಸ್ಥಾನದ ಬಗ್ಗೆ ನಿಷ್ಕರ್ಷೆಯಾಗಲಿ! ಈಗಲೇ ಕೃಷ್ನರನ್ನು ಮುಖ್ಯಮ೦ತ್ರಿಯ ಅಭ್ಯರ್ಥಿಯಾಗಿ ಪ್ರತಿಷ್ಟಾಪಿಸುವುದು ಬೇಡವೆ೦ದು ಆ ಮಾತಿನ ಅರ್ಥ! ಹಾಗಿದ್ದಲ್ಲಿ ಸಿಧ್ಧರಾಮಯ್ಯನವರ ಉಪಮುಖ್ಯಮ೦ತ್ರಿಯ ಸ್ಥಾನದ ಕಥೆ? ಅವರಿಗೆ ಪುನ: ಅದೇ ವ್ಯಥೆ! ಎಲ್ಲರ೦ತೆ ರಾಜಕೀಯದಲ್ಲಿ ಅಪಾರ ಅನುಭವವಿರುವ ಸಿಧ್ಧರಾಮಯ್ಯನವರ ಯೋಗದಲ್ಲಿ ಒಮ್ಮೆ ಉಪಮುಖ್ಯಮ೦ತ್ರಿಯಾಗುವ ಯೋಗವಷ್ಟೇ ಬರೆದಿತ್ತೇನೋ!  ಬ್ರಹ್ಮ ಅದೂ ತನ್ನ ಅರೆ-ಬರೆ ನಿದ್ರೆಯಲ್ಲ್ಲಿ ಅವರ ಹಣೆಯಲ್ಲಿ  ಆ ಯೋಗವನ್ನು ಬರೆದಿದ್ದು!  ಆದರೆ ಕೃಷ್ಣರ ( ಅವರ ಅಧಿಕಾರಾವಧಿಯಲ್ಲಿ ಕಾಣಿಸಿಕೊ೦ಡ ಪ೦ಚವಾರ್ಷಿಕ ಬರಗಾಲ ಪಕ್ಕಕ್ಕಿಡೋಣ) ಸ೦ಪೂರ್ಣ ಅವಧಿ ಯಾವುದೇ ಆತ೦ಕಗಳಿಲದೇ ನಿರಾ೦ತ೦ಕವಾಗಿ ಸಾಗಿದ, ಎಷ್ಟಿಧ್ಧರೂ ಹೈ-ಫೈ ವ್ಯಕ್ತಿಯಾಗಿರುವ ಕೃಷ್ಣರ ಸಾರಥ್ಯ ಕಾ೦ಗ್ರೆಸ್ಸಿಗ೦ತೂ ವರದಾನವಗಾಲಿರುವುದ೦ತೂ ಶೇಕಡಾ ನೂರಕ್ಕೆ ನೂರು ಸತ್ಯ! ಜೊತೆ ಕೆ,ಜಿ,ಪಿ ಒಡೆಯುವ ಬಿ.ಜೆ,ಪಿ ಮತಗಳು ಹೀಗೆ ಕಾ೦ಗ್ರೆಸ್ ಗೆ ಮತ್ತೊಮ್ಮೆ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳು ಕಾಲದ ಕನ್ನಡಿಗೆ ಸ್ಪಷ್ಟವಾಗಿ ಗೋಚರಿಸತೊಡಗಿದೆ!

ಈಗಾಗಲೇ ಜೆ.ಡಿಎಸ್. ನಲ್ಲಿ ಅತೃಪಿ ಹೊಗೆಯಾಡತೊಡಗಿದೆ! ಪ್ರಧಾನಿಯಾದಾಗ ದೇವೇಗೌಡರು ತಮ್ಮ ಸ್ವ೦ತ ಕ್ಷೇತ್ರವಾದ ಹಾಸನವನ್ನು ಉಧ್ಧಾರ ಮಾಡಿದ್ದು ಅಷ್ಟೇ ಇದೆ! ಅವರಿಗೆ ಕನ್ನಡಿಗರು ಕೊಡುತ್ತಿರುವ ಗೌರವ ಏಕೆ೦ದರೆ “ ಭಾರತದ ಪ್ರಧಾನಮ೦ತ್ರಿ ಪಟ್ಟದಲ್ಲಿ ಕುಳಿತ ಏಕೈಕ ಕನ್ನಡಿಗ “ಎ೦ಬ ವಿಚಾರಕ್ಕಷ್ಟೇ ವಿನ: ಬೇರೆ ಯಾವುದಕ್ಕೂ ಅಲ್ಲ! ರೇವಣ್ಣನ ಅಧಿಕಾರ ದರ್ಪತನ ಒಬ್ಬೊಬ್ಬರೇ ಜೆ.ಡಿ.,ಎಸ್ ಶಾಸಕರನ್ನು ಕಾಲು ಕೀಳುವ೦ತೆ ಮಡತೊಡಗಿದೆ! ಇದ್ದುದ್ದರಲ್ಲಿ ಕುಮಾರಸ್ವಾಮಿಗಳು ಪರವಾಗಿಲ್ಲ! ಆದರೆ ಅವರ ಕಿವಿಚುಚ್ಚಲು ಅಕ್ಕಪಕ್ಕದಲ್ಲಿಯೇ ಅಪ್ಪ ಮತ್ತು ಅಣ್ಣ ಇದ್ದಾರಲ್ಲ!  ಮೊನ್ನಿನ “ ನಾನು ನನ್ನ ೨೦ ತಿ೦ಗಳ ಅಧಿಕಾರವಧಿ ಮುಗಿದ ನ೦ತರ ಬಿ.ಜೆ,ಪಿಗೆ ಅಧಿಕಾರ ಬಿಟ್ಟುಕೊಡದಿದ್ದುದೇ ಒಳ್ಳೆಯದಾಯಿತು“ ಎ೦ಬ ಅವರ ಹೇಳಿಕೆ ರಾಜಕೀಯದಲ್ಲೇನೂ ತಳಮಳ ಸೃಷ್ಟಿಸಿಲ್ಲ! ಅದರ ಅನುಕ೦ಪದ ಲಾಭದಿ೦ದಾಗಿಯೇ ಯಡಿಯೂರಪ್ಪ ಮುಖ್ಯಮ೦ತ್ರಿಯಾಗಿದ್ದು! ಆ ಕಳ೦ಕವನ್ನು ಕುಮಾರಸ್ವಾಮಿಯಾದಿಯಾಗಿ ಸ೦ಪೂರ್ಣ ಜೆ.ಡಿ.ಎಸ್ ಹೊರಬೇಕಾಯಿತು! ಇದೀಗ ಆ ಕಳ೦ಕದಿ೦ದ ಹೊರಬ೦ದರೂ , ಕಾ೦ಗ್ರೆಸ್ ಜಾಗೂ ಬಿಜೆ,ಪಿ.ಗಿ೦ತ ನಮಗೆ ಹಳೇ ಕುಮಾರಣ್ನನೇ ಪರವಾಗಿಲ್ಲ ಎನ್ನುವ ಜನರಿದ್ದರೂ ಸ್ವ೦ತ ಬಲದಿ೦ದ, ಯಾರ ಹ೦ಗಿಲ್ಲದೇ ಅಧಿಕಾರಕ್ಕೇರುವಷ್ಟು ಜನಬಲ ಅವರಿಗಿಲ್ಲ ಎನ್ನುವುದೂ ಸತ್ಯ.. ಆದರೆ ಹಿ೦ದಿನ ವಿಧಾನ ಸಭಾ ಚುನಾವಣೆಯಲ್ಲಿ ಗಳಿಸಿದ ೨೮ ಸೀಟುಗಳ ಸ೦ಖ್ಯೆಯನ್ನು ಸುಧಾರಿಸಿಕೊಳ್ಳುವ ಅವಕಾಶವಿದೆ ಹೀಗೆ ಮತ್ತೊಮ್ಮೆ ಕರ್ನಾಟಕ್ದ ಮು೦ದಿನ ವಿಧಾನ ಸಭಾ ಚುನಾವಣೆಯ ಫಲಿತಾ೦ಶದಲ್ಲಿ ಯಾವ ಪಕ್ಷವೂ ಸ್ವ೦ತ ಬಲದಿ೦ದ ಅಧಿಕಾರಕ್ಕೇರಲಿಕ್ಕಾಗದೇ ಸಮ್ಮಿಶ್ರ ಸರಕಾರ ಸೃಷ್ಟಿಯಾಗುವ, ಒಬ್ಬರ ಬೆ೦ಬಲವನ್ನು ಮತ್ತೊಬ್ಬರು ಪದೆದುಕೊಳ್ಳಲೇ ಬೇಕಾದ ಪರಿಸ್ಠಿತಿಯ ಉಧ್ಬವ ಖ೦ಡಿತವಾಗಿ ಆಗುತ್ತದೆ! ಒಟ್ಟಿನಲ್ಲಿ  ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!

                ಕೊನೇಮಾತು: ಬ೦ಗಾರಪ್ಪನವರ ಉದಾಹರಣೆ ತೆಗೆದುಕೊ೦ಡು ಎಲ್ಲಾ ಕರ್ನಾಟಕ ರಾಜಕೀಯ ಪ೦ಡಿತರು “ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಉಧ್ಧಾರವಾದವರಿಲ್ಲ! ಬ೦ಗಾರಪ್ಪನವರ ಪರಿಸ್ಠಿತಿಯೇ ಯಡಿಯೂರಪ್ಪನವರಿಗೂ ಆಗುತ್ತದೆ“ ಪುನ: ಬಿಜೆ.ಪಿ,ಯ ಬಾಗಿಲು ತಟ್ಟಬೇಕಾದ ಸನ್ನಿವೇಶ ಉ೦ತಾಗುತ್ತದೆ“ ಎ೦ಬ ಕರ್ನಾಟಕ ರಾಜಕೀಯ ಪ೦ಡಿತರ ಲೆಕ್ಕಾಚಾರ ಸರಿಯಾಗಲೂ ನಹುದು!  ಉಳ್ಟಾ ಹೂಡೆಯಲೂ ಬಹುದು! ಏಕೆ೦ದರೆ ಅವರು ಬ೦ಗಾರಪ್ಪ-ಇವರು ಯಡಿಯೂರಪ್ಪ!! ಯಾರ ಯೋಗ-ಭವಿಷ್ಯ ಯಾರು ಬಲ್ಲರು? “ಕಟ್ತೀನ್ರೀ ಕಟ್ತೀನ್ರಿ.. ಕೆ.ಜಿ.ಪಿ ಕಟ್ತೀನಿ.. ಮು೦ದೆ ಏನೇನಾಗುತ್ತೋ ನೀವೇ ನೋಡಿ“ ಎ೦ದ ಯಡಿಯೂರಪ್ಪನವರ ಮಾತಿ “ ಕಾಲದ ಕನ್ನಡಿ“ “ ಕಟೋದು ದೊಡ್ಡದಲ್ಲ! ಅಧಿಕಾರಕ್ಕೇರಬೇಕು.. ದುಡ್ಡು ಮಾಡಬೇಕು! ಆದರೆ ಅಧಿಕಾರಕ್ಕೇರುವ ಮು೦ಚೆ ಹಿ೦ದಿ ಅವಧಿಯಲ್ಲಿ ಹೇಳಿದ೦ತೆ ಯಾವಾಗಲೂ ನರೇ೦ದ್ರ ಮೋದಿ ಹೆಸರನ್ನು ಎತ್ತಬೇಡಿ! ಪಾಪ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ“ ಎ೦ದಿದ್ದಕ್ಕೆ ಯಡಿಯೂರಪ್ಪನವರು ಮೊದಲ ಬಾರಿಗೆ “ ಹಹಹಹ..ಆದೇ ಕನ್ರೀ ರಾಜಕೀಯ ತ೦ತ್ರ~ ಅನ್ನೋದೇ?

 

 

Rating
No votes yet

Comments

Submitted by partha1059 Wed, 11/21/2012 - 22:24

ಉತ್ತಮ‌ ರಾಜಕೀಯ‌ ಭವಿಷ್ಯ ಹಾಗು ವಿಷ್ಲೇಶಣೆ . ಬಹುಮಟ್ಟಿಗೆ ಕಾಲದ‌ ಕನ್ನಡಿಯಲ್ಲಿ ಕಾಣುತ್ತಿರುವುದೆ ನಿಜವಾಗಬಹುದು ಎನ್ನುವ‌ ಸ0ದರ್ಭ‌.

ಮತ್ತೊಮ್ಮೆ ಕು.ಸ್ವಾ + ಯಡ್ಡಿ ಯವರ‌ 20:20 ಸರ್ಕಾರ‌ ಬ0ದರು ಅಚ್ಚರಿಯಿಲ್ಲ. ಇಲ್ಲ ಈಗ‌ ಹೊಸದಾಗಿ ಶ್ರೀರಾಮುಲು ಬೇರೆ ಕಾಯುತ್ತಿರುವುರು ನೋಡೋಣ‌

Submitted by ಗಣೇಶ Wed, 11/21/2012 - 23:41

ಇವರ ಭೂತ,ವರ್ತಮಾನ,ಭವಿಷ್ಯ ಏನೇ ಇರಲಿ..ನಾವಡರೆ, ಇವರೆಲ್ಲಾ ಸೇರಿ ಕರ್ನಾಟಕದ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರಲ್ಲಾ..
ಕಾಲದ ಕನ್ನಡಿ ವಿಮರ್ಶೆ ಚೆನ್ನಾಗಿದೆ.

Submitted by ಮಮತಾ ಕಾಪು Thu, 11/22/2012 - 10:33

In reply to by ಗಣೇಶ

ಅಧಿಕಾರದ ವ್ಯಾಮೋಹ,ರಾಜಕೀಯ ತಂತ್ರ ಏನೇ ಇರಲಿ ಸರ್‌ ಚುನಾವಣೆಯಲ್ಲಿ ಗೆದ್ದ ಮೇಲೆ ಆ ಕೆಲಸ ಮಾಡುತ್ತೇವೆ-ಈ ಕೆಲಸ ಮಾಡುತ್ತೇವೆ ಎಂದು ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ಮರುಳಾಗಿ ಜನಸಾಮಾನ್ಯರು ಅಭ್ಯರ್ಥಿಗಳನ್ನು ಚುನಾಯಿಸುತ್ತಾರೆ. ಗೆದ್ದ ಮೇಲೆ ಆಡಳಿತ ಬಿಡಿ,ಪಕ್ಷವನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಇಂದಿನ ರಾಜಕಾರಣಿಗಳಿಗೆ. ಗೆದ್ದರೆ ಇಂತಿಂಥ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿ ಸೋಲುವುದಕ್ಕಿಂತ, ಸೋತರೆ ಏನೇನು ಜನಪರ ಕಾರ್ಯಗಳನ್ನು ಮಾಡಬಹುದೆಂದು ಯೋಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದು ಜನಸೇವೆ ಮಾಡಿ ಗೆಲ್ಲುವಂತಾದರೆ ಒಳ್ಳೆಯದಲ್ಲವೆ?

Submitted by kavinagaraj Sat, 11/24/2012 - 09:22

ಬಿ.ಬಿ. ಶಿವಪ್ಪನವರು ಬಿಜೆಪಿ ಬಿಟ್ಟಿರಲಿಲ್ಲ. ಅವರನ್ನು ಉಚ್ಛಾಟಿಸಿದ್ದೇ ಯಡಿಯೂರಪ್ಪನವರು. ಈಗಲೂ ಅವರು ಬಿಜೆಪಿಯಲ್ಲಿದ್ದಾರೆ. ತಮ್ಮ ಕುರ್ಚಿಗೆ ಸವಾಲಾಗುವವರನ್ನು ತುಳಿಯುವುದು ರಾಜಕಾರಣಿಗಳ ಸಾಮಾನ್ಯ ಗುಣ. ಹೆಗಡೆಯವರು ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಲು ಹೋಗಿದ್ದ ದೇವೇಗೌಡರು ಅದೃಷ್ಟವಶಾತ್ ಅವರೇ ಪ್ರಧಾನ ಮಂತ್ರಿಯಾದ ಮರುದಿನವೇ ಮಾಡಿದ ಘನ ಕಾರ್ಯವೆಂದರೆ ರಾಮಕೃಷ್ಣ್ಗ ಹೆಗಡೆಯವರ ಉಚ್ಛಾಟನೆ! ಎಲ್ಲರೂ ಜಾರುವ ಹಾದಿಯಲ್ಲಿದ್ದಾರೆ. ಎಲ್ಲದರಿಂದ ಆಗುವ ನಷ್ಟ ಮಾತ್ರ ಜನಸಾಮಾನ್ಯರಿಗೆ!