ಮೊಬೈಲ್ ಮಾತು...

ಮೊಬೈಲ್ ಮಾತು...

ಅನಾದಿ ಕಾಲದಿಂದಲೂ ಪ್ರೇಮಿಗಳು ಭೇಟಿಯಾದಾಗ ನಡೆಸುವ ಪ್ರೀತಿ ಸಂಭಾಷಣೆ ಸಾಲದಾಗಿ ತಮ್ಮ ಮನದ ಮಾತುಗಳಿಗೆ ಪರ್ಯಾಯವಾದ ವ್ಯವಸ್ಥೆಯಾಗಿ ಮೇಘ ಸಂದೇಶ/ಪ್ರೇಮ ಪತ್ರ/ದೂರವಾಣಿ ಕರೆಗಳನ್ನು ಬಳಸಿತ್ತುದುದು  ಎಲ್ಲರಿಗು ತಿಳಿದ ವಿಚಾರ. ಆದರೆ ಈ ಡಿಜಿಟಲ್ ಯುಗದಲ್ಲಿ ಪ್ರೇಮಿಗಳು ಮೊಬೈಲನ್ನು ಉಪಯೋಗಿಸುವ ರೀತಿ ಎಲ್ಲರನ್ನು ಧಂಗು ಪಡಿಸುವ ಹಾಗಿದೆ. ಮೊಬೈಲ್ ಕರೆ/ ಮೊಬೈಲ್ ಸಂದೇಶಗಳನ್ನು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗಿಂತ ಮಿಗಿಲಾಗಿ ಬಳಸುತ್ತಿರುವುದು ಹೊಸ ವಿಚಾರವೇನಲ್ಲ. ಆದರೆ ಇದರ ಉಪಯೋಗ ಮತ್ತು ಪರಿಣಾಮಗಳು ಧನಾತ್ಮಕವಾಗಿರದೆ, ಹೆಚ್ಚಿನ ಪ್ರತಿಶತ ಪರಿಣಾಮಗಳು ಋಣಾತ್ಮಕವಾಗಿರುವುದು ತಂತ್ರಜ್ಞಾನದ ಉಪಯೋಗದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂಬ ಸಂಗತಿಯನ್ನು ಕೂಗಿ ಹೇಳುವಂತಿದೆ.

ಮೊಬೈಲ್ ತಂತ್ರಜ್ಞಾನದ ಉಪಯೋಗ ಜನರಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಸುವ ಅಗತ್ಯ ಇಲ್ಲ, ಅದು ಅವರವರ ವ್ಯಕ್ತಿಗತೆಗೆ, ವೃತ್ತಿಪರತೆಗೆ ಬಿಟ್ಟ ವಿಚಾರ. ಆದರೆ ಈ ಮೊಬೈಲ್ ತಂತ್ರಜ್ಞಾನದ ಸಕಾರಾತ್ಮಕ ಉಪಯೋಗ ಕಿವುಡು ಮತ್ತು ಮೂಗ ಮಿತ್ರರಿಗೆ ಆಗಿದೆ. ನಾನು ಇಲ್ಲಿ ಮೊಬೈಲ್ ಸಂದೇಶಗಳ ಬಗ್ಗೆ ಮತನಾಡುತಿದ್ದೇನೆ. 
 
ಇಷ್ಟೆಲ್ಲಾ ಪೀಟಿಕೆಯ ನಂತರ ಅಸಲಿ ವಿಷಯಕ್ಕೆ ಬರುತ್ತೇನೆ. ಮೊನ್ನೆ ನಾನು ಪಾರ್ಕಿನಲ್ಲಿ ಒಬ್ಬನೇ ಕುಳಿತು ಯಾವುದೊ ವಿಚಾರದ ಬಗ್ಗೆ ಯೋಚಿಸುತ್ತಿದ್ದಾಗ, ನನಗೆ ಸ್ವಲ್ಪದೆ ದೂರದಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು (ಒಬ್ಬ ಗಂಡು, ಒಬ್ಬ ಹೆಣ್ಣು)  ಯಾವುದೊ ಸನ್ನೆ ಮಾಡುತ್ತಿದ್ದರು, ಆ ತಕ್ಷಣಕ್ಕೆ ನನಗೆ ಇವರಿಗೆ ಹುಚ್ಚು ಹಿಡಿದಿಯೇನೋ ಅಂದನಿಸಿತು. ಆದರೆ ಅವರ ಸನ್ನೆ ಮತ್ತು ಪರಿಸ್ಥಿತಿಯ ವಿಚಾರ ಹೊಳೆಯುತ್ತಿದ್ದಂತೆ ನನಗೆ ನಾನೇ ಶಪಿಸಿಕೊಂಡೆ.  
ಅವರಿಬ್ಬರೂ ಮೂಗ ಮತ್ತು ಕಿವುಡು ಪ್ರೇಮಿಗಳು (ಮುಂದೆ ನಿಮಗೆ ತಿಳಿಯುತ್ತದೆ ಅವರನ್ನು ಪ್ರೇಮಿಗಳು ಎಂದು ಏಕೆ ಉಲ್ಲೇಕಿಸಿದೆ ಎಂದು), ಯಾವುದೊ ವಿಚಾರವಾಗಿ ಸನ್ನೆಗಳ ಮೂಲಕ ಜಗಳವಾಡುತ್ತಿದ್ದಂತೆ ಕಾಣಿಸುತ್ತಿತ್ತು. ಏನೆಂದು ನನಗೆ ಅರ್ಥವೇ ಆಗಲಿಲ್ಲ. ಸ್ವಲ್ಪ ಹೊತ್ತು ಜಗಳವಾಡಿದ ಮೇಲೆ ಇಬ್ಬರು ಮೌನವಾಗಿ ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರು, ಇಬ್ಬರ ಕಣ್ಣಲ್ಲೂ ನೋವಿನ ಕಂಬನಿ ಧಾರಾಕಾರವಾಗಿ ಇಳಿಯುತ್ತಿತ್ತು. ಆ ದೃಶ್ಯ ಎಂತಾ ಕಟುಕರ ಮನಸ್ಸನ್ನು ಕರಗಿಸುವಂತಿತ್ತು. ಹಾಗೆ ನೋಡುತ್ತಿದ್ದ ಪ್ರೇಮಿಗಳು ಮೊಬೈಲ್ ತೆಗೆದು ಒಬ್ಬರಿಗೊಬ್ಬರು ಸಂದೇಶ ರವಾನೆ ಮಾಡಲು ಪ್ರಾರಂಬಿಸಿದರು. ಸ್ವಲ್ಪ ಸಮಯ ಸಂದೇಶಗಳ ರವಾನೆಯ ನಂತರ, ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸುತ್ತಾ ಅವರು ಕುಳಿತಿದ್ದ ವಿರುದ್ದ ದಿಕ್ಕಿಗೆ ನಿದಾನವಾಗಿ ನಡೆಯುತ್ತಾ ಹೊರಟು ಹೋದರು.
 
ಅವರ ನಡುವೆ ಏನಾಗಿದೆ? ಯಾವ ವಿಚಾರವಾಗಿ ಜಗಳವಾಡುತ್ತಿದ್ದರೋ ಅಥವಾ ಮಾತನಾಡುತ್ತಿದ್ದರೋ? ಅರ್ಥವಾಗದೆ ಗೊಂದಲದಲ್ಲಿದ್ದೆ, ನನಗೆ ನಾನೇ ಅವರ ಬಗ್ಗೆ ಏನೇನೋ ಕಲ್ಪಿಸಿಕೊಂಡು ಯೋಚಿಸಿದರೂ  ಅವರ ಜೀವನದ ವಾಸ್ತವತೆ ನನ್ನ ಅರಿವಿಗೆ ಬರಲೇ ಇಲ್ಲ. ನನ್ನದೇ ಕೆಲವು ವಯಕ್ತಿಕ ವಿಚಾರಗಳ ಬಗ್ಗೆ ಯೋಚಿಸಿ ನಿರ್ಧರಿಸಲು ಏಕಾಂತವನ್ನ ಬಯಸಿ ಬಂದ ನಾನು ಅವರಿಬ್ಬರ ವಯಕ್ತಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತ ಪರಿಸ್ಥಿತಿ ಬಂತು. ಇನ್ನು ಯೋಚಿಸಿ ಫಲವಿಲ್ಲ, ನನ್ನ ಆ ದಿನದ ಉಳಿದ ಕೆಲಸಗಳ ಕಡೆ ಗಮನ ಹರಿಸೋಣವೆಂದು ಎದ್ದು ಹೊರಡಲು ಮುಂದಾದ ನನಗೆ ಸಂತಸದ ಕ್ಷಣ ಒಂದು ಕಾದಿತ್ತು. ಆ ಅಗಲಿ ಹೋದ ಪ್ರೇಮಿಗಳು ಮತ್ತೆ ತಾವಿದ್ದ ಅದೇ ಜಾಗಕ್ಕೆ ಬಂದು ನಗುತ್ತಾ ತಬ್ಬಿಕೊಂಡರು,  ಇನ್ಯಾರು ನಮ್ಮನ್ನು ಬೇರೆ ಮಾಡಲು ಆಗದು, ನೀವು ನಮ್ಮ ಚಿಂತೆ ಬಿಟ್ಟು ನಿಮ್ಮ ಕಾಯಕದ ಚಿಂತೆ ಮಾಡಿ ಎಂದು ಹೇಳುವಂತಿತ್ತು ಆ ದೃಶ್ಯ. ಮನಸ್ಸಿನಲ್ಲಿ ಏನೋ ಸಮಾದಾನ, ಏನನ್ನೋ ಪಡೆದ ಸಂತೋಷ ನನಾಗಾಗುತ್ತಿತ್ತು. ಅವರ ಜೀವನದಲ್ಲಿ ಏನೊಂದು ತೊಡಕುಗಳನ್ನು ಕೊಡದೆ, ಸುಖ, ಶಾಂತಿ, ನೆಮ್ಮದಿಯನ್ನು ಅವರಿಗೆ ದಯಪಾಲಿಸು ಎಂದು ದೇವರಲ್ಲಿ ಬೇಡಿ ನನ್ನ ದಾರಿ ಹಿಡಿದು ನಡೆದೆ. ಸ್ವಲ್ಪ ದೂರ ನಡೆದು ಮತ್ತೆ ಅವರನ್ನು ನೋಡುವಾಸೆ ಆಯಿತು. ತಿರುಗಿ ನೋಡಿದೆ, ಆದೆ ಜಾಗದಲ್ಲಿ ಕುಳಿತು ಅವರಿಬ್ಬರೂ ನಗುನಗುತ್ತಾ ಒಬ್ಬರಿಗೊಬ್ಬರು ಸಂದೇಶಗಳನ್ನು ರವಾನಿಸುತ್ತಿದ್ದರು... ಮನಸ್ಸಿನ ಭಾವಗಳನ್ನು ವ್ಯಕ್ತಪಡಿಸಲು ಬಳಸಿದ ಮೊಬೈಲ್ ಎಂಬ ತಂತ್ರಜ್ಞಾನದ ಸಾಧನಕ್ಕೆ ಒಂದು ಪ್ರಾಮಾಣಿಕ ಸಲಾಮು ಹಾಕಿ, ನನ್ನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ನೋಡುತ್ತಾ ನನ್ನ ದಾರಿ ಹಿಡಿದೆ....

 

Comments

Submitted by ಗಣೇಶ Sat, 11/24/2012 - 00:15

>>ಅವರಿಬ್ಬರೂ ಮೂಗ ಮತ್ತು ಕಿವುಡು ಪ್ರೇಮಿಗಳು ಮುಂದೆ ನಿಮಗೆ ತಿಳಿಯುತ್ತದೆ ಅವರನ್ನು ಪ್ರೇಮಿಗಳು ಎಂದು ಏಕೆ ಉಲ್ಲೇಕಿಸಿದೆ ಎಂದು), .........................................................................................................................................................ಯಾವುದೊ ವಿಚಾರವಾಗಿ ಸನ್ನೆಗಳ ಮೂಲಕ ಜಗಳವಾಡುತ್ತಿದ್ದಂತೆ ಕಾಣಿಸುತ್ತಿತ್ತು. :) ಮೂಕಹಕ್ಕಿಗಳ ಪ್ರೇಮಕತೆಯನ್ನು ಚೆನ್ನಾಗಿ ಹೇಳಿದಿರಿ. -ಗಣೇಶ.
Submitted by venkatb83 Sun, 12/02/2012 - 17:07

ಮಾತು ಬರದಿದ್ದರೆನಾಯ್ತು ಭಾವನೆಗಳಿಗೆ ಬರವೇ? ಅಂತೂ ಕಥೆ ಸುಖಾನ್ತ್ಯವಾಗಿದ್ದು ಖುಷಿ ತಂತು... ನೀವೇ ಕಣ್ಣಾರೆ ಕಂಡ ಆ ಸನ್ನಿವೇಶವನ್ನು ಕಲಿಸ್ಪಿಕೊಂಡೆ.ಓದಿದೆ .. ದಿನಂಪ್ರತಿ ಬಸ್ಸಲಿ ಬರುವಾಗ ಕೋರಮಂಗಲಕ್ಕೆ ಮತ್ತು ಮಲ್ಲೇಶ್ವರಂ ಬೀ ಈ ಎಲ್ ಹತ್ತಿರ ಹೀಗೆ ಮೂಕ ಭಾಷೆ (ಸನ್ನೆ ಮೂಲಕ) ಆಡುವ ಹಲವು ಜನ ಬಸ್ಸು ಹತ್ತುವರು.. ಕೆಲವು ಸನ್ನೆ ಗಳು ಅವ್ರಿಗೆ ಮಾರ ಅರ್ಥ ಆಗುತ್ತೆ, ಕೆಲವು ಮಾತ್ರ ನಮಗೆ ಅರ್ಥ ಆಗುತ್ತೆ...ಆಗಾಗ ನಾ ಕುತೂಹಲಗೊಂಡು ಅವರನ್ನು ಗಮನಿಸಿದ್ದೆ ಅದೊಂದು ಅಚ್ಚರಿಯ ಸಂಗತಿ... ಸನ್ನೆ ಭಾಷೆ ಹೊಸತಲ್ಲ ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. http://www.google.c… http://en.wikipedia… https://itunes.appl… ಶುಭವಾಗಲಿ.. \|