ಸಂಪದಿಗರಿಗೆ ಆತ್ಮೀಯ ಆಹ್ವಾನ
ಆತ್ಮೀಯ ಸಂಪದಿಗ ಮಿತ್ರರೇ,
ನನ್ನ ಸೇವಾಕಾಲದ ಅನುಭವಗಳನ್ನು 'ಸೇವಾಪುರಾಣ' ಶೀರ್ಷಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟಿಸಿದಾಗ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹವನ್ನು ನಾನು ಮರೆಯಲಾರೆ. ಅದರಲ್ಲೂ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳಿಗೆ ತೋರಲಾದ ಸ್ಪಂದನ, ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮಾಡಿದ ಒತ್ತಾಯ ಸಹ ನನ್ನನ್ನು ಪುಳಕಿತಗೊಳಿಸಿತ್ತು. ಈಗ ಅದಕ್ಕೆ ಸಮಯ ಒದಗಿ ಬಂದಿದೆ. 'ಸರಳುಗಳ ಹಿಂದಿನ ಲೋಕ' ಎಂಬ ಹಿಂದಿನ ಶೀರ್ಷಿಕೆ ಬದಲಿಗೆ ಸಂಪದಿಗ ಹರಿಹರಪುರ ಶ್ರೀಧರ್ ಸಲಹೆಯಂತೆ 'ಆದರ್ಶದ ಬೆನ್ನು ಹತ್ತಿ . . " ಎಂಬ ಶೀರ್ಷಿಕೆ ಹೊತ್ತ ಪುಸ್ತಕ ದಿನಾಂಕ 29-11-2012 ರಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ ಸಭಾಂಗಣದಲ್ಲಿ ಸಾ. 6-00ಕ್ಕೆ ಬಿಡುಗಡೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಆಂತರಿಕ ಭದ್ರತಾ ಶಾಸನದ ಅನ್ವಯ ಬಂದಿಯಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಪುಸ್ತಕದ ಲೋಕಾರ್ಪಣೆ ಮಾಡಲಿದ್ದಾರೆ.
ವಿಶೇಷವೆಂದರೆ, ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದವರೆಲ್ಲರನ್ನೂ ಒಟ್ಟುಗೂಡಿಸಿ ಅಂದು ಮ. 4-00 ರಿಂದ 6-00 ರವರೆಗೆ ಸಮಾವೇಶ ನಡೆಸಲು ನಮ್ಮದೇ ಆದ ಮಂಥನ ವೇದಿಕೆಯಿಂದ ವ್ಯವಸ್ಥೆಯಾಗಿದೆ. ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ನೆನಪು ಮಾಡಿಕೊಡಲಿದ್ದಾರೆ. ಸಮಾವೇಶದಲ್ಲಿ ಪಾಲುಗೊಂಡವರು ತಮ್ಮ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.
ಸಂಪದಿಗ ಮಿತ್ರರೆಲ್ಲರಿಗೂ ಇದು ನನ್ನ ಆತ್ಮೀಯ ಆಹ್ವಾನ. ಬನ್ನಿ, ಜಾಗರಣ ಕಾರ್ಯದಲ್ಲಿ ಪಾಲುಗೊಳ್ಳಿ.
Comments
ಕವಿ ನಾಗರಾಜ ರವರಿಗೆ ವಂಧನೆಗಳು '
ಕವಿ ನಾಗರಾಜರಿಗೆ ನಮಸ್ಕಾರಗಳು.
In reply to ಕವಿ ನಾಗರಾಜರಿಗೆ ನಮಸ್ಕಾರಗಳು. by swara kamath
ಧನ್ಯವಾದಗಳು ಸ್ವರ ಕಾಮತರೇ.
In reply to ಧನ್ಯವಾದಗಳು ಸ್ವರ ಕಾಮತರೇ. by kavinagaraj
ಕವಿ ನಾಗರಾಜರಿಗೆ ನಮಸ್ಕಾರಗಳು.
ಕವಿ ನಾಗರಾಜರೆ,
In reply to ಕವಿ ನಾಗರಾಜರೆ, by ಗಣೇಶ
ಆತ್ಮೀಯ ಗಣೇಶರೇ, ಧನ್ಯವಾದಗಳು.
ಕವಿ ನಾಗರಾಜ ರವರಿಗೆ ವಂಧನೆಗಳು
In reply to ಕವಿ ನಾಗರಾಜ ರವರಿಗೆ ವಂಧನೆಗಳು by saraswathichandrasmo
ವಂದನೆಗಳು, ಸರಸ್ವತಿಯವರೇ.
ತುರ್ತುಪರಿಸ್ಥಿತಿಯ ತುರಂಗವಾಸದ
In reply to ತುರ್ತುಪರಿಸ್ಥಿತಿಯ ತುರಂಗವಾಸದ by jayaprakash M.G
ವಂದನೆಗಳು, ಜಯಪ್ರಕಾಶರೇ.
ಶುಭ ಹಾರೈಕೆಗಳು ನಾಗರಾಜ್ ರವರೇ
In reply to ಶುಭ ಹಾರೈಕೆಗಳು ನಾಗರಾಜ್ ರವರೇ by sathishnasa
ವಂದನೆಗಳು, ಸತೀಶರೇ.
ಅಭಿನ0ದನೆಗಳು, ಅ0ತೆಯೆ
In reply to ಅಭಿನ0ದನೆಗಳು, ಅ0ತೆಯೆ by RAMAMOHANA
ನಮೋ, ರಾಮೋ ರವರಿಗೆ.
In reply to ನಮೋ, ರಾಮೋ ರವರಿಗೆ. by kavinagaraj
ಹಿರಿಯರೇ ನಮ್ಮೆಲ್ಲರ ಒತ್ತಾಸೆಯಂತೆ