' ಐ ಮೇರೆ ವತನ್ ಕೆ ಲೋಗೋ'.......ರೂಪುಗೊಂಡದ್ದು ಹೀಗೆ.
‘ಐ ಮೇರೆ ವತನ್ ಕೆ ಲೋಗೋ……..’ ರೂಪುಗೊಂಡದ್ದು ಹೀಗೆ
- ಲಕ್ಷ್ಮೀಕಾಂತ ಇಟ್ನಾಳ.
ಅದು 1963 ರ ದಿನಗಳು. ಕವಿ ಪ್ರದೀಪ್ ‘ಐ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರಾಗಿದ್ದು, ಅದರ ಟ್ಯೂನ್ ಅಳವಡಿಸಿದ್ದುದನ್ನು, ಸಿ, ರಾಮಚಂದ್ರ ಅವರು ದೆಹಲಿ ಗಣರಾಜ್ಯ ದಿನದ ವಿಶೇಷ ಗೀತೆಯನ್ನಾಗಿ ಪ್ರಸ್ತುತ ಪಡಿಸಲು ರಿಕಂಪೋಸ್ ಮಾಡುತ್ತಾರೆ ವಿಶೇಷವಾಗಿ ಸಜ್ಜುಗೊಳಿಸಲು ಅಣಿಯಾಗುತ್ತಾರೆ,
ಚಿತಲಕರ ರಾಮಚಂದ್ರರು ಮೊದಲು ಯುಗಳ ಗೀತೆಯನ್ನಾಗಿ ಕಂಪೋಸ್ ಮಾಡಿ, ಲತಾಜಿ ಹಾಗೂ ಆಶಾಜಿ ಅವರಿಂದ ಹಾಡಿಸಲು ಎಲ್ಲ ಟ್ಯೂನ್ ರೆಡಿಯಾಗಿ ರಿಹರ್ಸಲ್ ಸುಮಾರು ದಿನ ನಡೆಯುತ್ತದೆ. ‘ಐ ಮೇರೆ ವತನ ಕೆ ಲೋಗೋ ‘ ಹಾಡಿನ ಮೊದಲ ಸಾಲನ್ನು ಆಶಾಜಿ ಪ್ರಾರಂಭ ಮಾಡಿದರೆ, ಲತಾಜಿ ಅದನ್ನು ‘ಝರಾ ಆಂಖ್ ಮೇ ಭರ್ ಲೋ ಪಾನೀ’ ಎಂದು ಎರಡನೇ ಲೈನ್ ಹಾಡುವ ಯುಗಳ ಗೀತೆಯಾಗಿ ರಿಹರ್ಸಲ್ ನಡೆಯಿತು. ಮೂಲವಾಗಿ ಕವಿ ಪ್ರದೀಪ ಅದನ್ನು ಕಂಪೋಸ್ ಮಾಡಿದ್ದು ಸ್ವಲ್ಪ ಸ್ಲೋ ಎನಿಸಿ. ರಾಮಚಂದ್ರರು ದೆಹಲಿಯ ಲೈವ್ ಆಡಿಯನ್ಸ್ಗೆ ಅದು ಫಾಸ್ಟ್ ಟ್ಯೂನ್ ನಲ್ಲಿ ಇದ್ದರೆ ಚನ್ನ ಎಂದು ಅದರ ಕೆಲವು ಸಾಲುಗಳಿಗೆ ಫಾಸ್ಟ್ ಟ್ಯೂನ್ ನೀಡುತ್ತಾರೆ, ಇನ್ನೇನು ಟ್ಯೂನ್ ಸೆಟ್ ಆಗಿ ರಿಹರ್ಸಲ್ ಮುಂದುವರೆದಾಗ, ಲತಾಜಿ ತಾವೊಬ್ಬರೇ ‘ಸೋಲೋ’ ಗೀತೆಯನ್ನಾಗಿ ಹಾಡಲು ಇಷ್ಟ ಪಟ್ಟು ಅದನ್ನು ಕವಿ ಪ್ರದೀಪರ ವಿಲೇಪಾರ್ಲೆ ಮನೆಗೆ ಹೋಗಿ ನಿವೇದಿಸಿಕೊಳ್ಳುತ್ತಾರೆ, ಮೂಲವಾಗಿ ಲತಾಜಿ ಅವರಿಗಾಗಿಯೇ ಬರೆದ ಕವಿ ಪ್ರದೀಪ, ಕೂಡಲೇ ಲತಾಜಿ ಮನದಿಂಗಿತವನ್ನು ರಾಮಚಂದ್ರ ಅವರಿಗೆ ತಿಳಿಸಿ, ಅವರನ್ನು ಒಪ್ಪಿಸುತ್ತಾರೆ, ಮತ್ತೆ ಲತಾಜಿ ಅವರಿಂದ ಸೋಲೋ ಗೀತೆಯ ರಿಹರ್ಸಲ್ ಅಂತಿಮವಾಗಿ, 1963 ರ ಗಣರಾಜ್ಯೋತ್ಸವದಲ್ಲಿ ಲತಾಜಿ ಈ ಹಾಡನ್ನು ಹಾಡುತ್ತಾರೆ. ಹೀಗಾಗಿ ಹಾಡಿನಲ್ಲಿ ಲತಾಜಿ ಹಾಡುವ ಮೊದಲ ಸಾಲುಗಳು ಕವಿ ಪ್ರದೀಪರ ಟ್ಯೂನ್ ನ ಸಾಲುಗಳು, ನಂತರ ಫಾಸ್ಟ್ ಸಾಲುಗಳು ರಾಮಚಂದ್ರರ ಟ್ಯೂನ್ ನ ಸಾಲುಗಳು.
ನೆರೆದ ಸಭಿಕರೆಲ್ಲರ ದೇಶಪ್ರೇಮವನ್ನು ಬಡಿದೆಬ್ಬಿಸಿ, ದೀರ್ಘಕರತಾಡನದೊಂದಿಗೆ, ಇಡೀ ಸಮೂಹದ ಕಣ್ಣೀರು ಧಾರೆಯಾಗಿ ಹರಿದದ್ದು ಇತಿಹಾಸ. ಚೀನಾ ಯುದ್ಧದ ಮಡುಗಟ್ಟಿದ ಹತಾಶೆಯ ದು:ಖ ಕಣ್ಣೀರಾಗಿ ಹೊರಹೊಮ್ಮಿತ್ತೇನೋ! ಲತಾಜಿಯವರ ಕೋಗಿಲೆಯ ಕಂಠದಿಂದ ಹೊರಹೊಮ್ಮಿದ ‘ಐ ಮೇರೆ ವತನ್ ಕೆ ಲೋಗೋ’ ಗೀತೆ ನೇರವಾಗಿ ಹೀಗೆ ಸಭಿಕರ ಎದೆಯಾಳಕ್ಕೆ ಇಳಿದುಹೋಯಿತು. 1962 ರ ಚೀನಾ ಯುದ್ಧದ ದಟ್ಟ ನೋವಿನಲ್ಲಿದ್ದ ಪ್ರಧಾನಿ ನೆಹರೂ ಅವರು ಕಣ್ಣೀರು ಗರೆಯುತ್ತ ಎದ್ದು ಬಂದು ಲತಾಜಿ ಯವರನ್ನು ಮನದುಂಬಿ ತಬ್ಬಿ ಅಭಿನಂದಿಸಿದರು. ಒಂದೇ ಕ್ಷಣದಲ್ಲಿ ಹಾಡಿಗೊಂದು ರಾಷ್ಟ್ರೀಯ ಸ್ವರೂಪ ಬಂದು ಬಿಟ್ಟಿತು. ಒಂದೇ ಓಟಕ್ಕೆ ಮಾಸ್ಟರ್ ಟೇಪ್ ತೆಗೆದುಕೊಂಡು ಆಕಾಶವಾಣಿಯ ವಿವಿಧಭಾರತಿಯಿಂದ ಕೂಡಲೇ ರಾಷ್ಟ್ರೀಯ ಪ್ರಸಾರದಲ್ಲಿ ದೇಶದ ತುಂಬೆಲ್ಲ ಬಿತ್ತರಿಸಲಾಯಿತು. ಕೆಲವೇ ಸಮಯದಲ್ಲಿ ಹೆಚ್ ಎಮ್ ವಿ ಸಂಸ್ಥೆಯಿಂದ ಇದರ ಹಾಡಿನ ಧ್ವನಿಮುದ್ರಣ ದೇಶದ ತುಂಬೆಲ್ಲ ಶರವೇಗದಲ್ಲಿ ವಿತರಿಸಿತು. ಅಂದಿನಿಂದ ಇಂದಿಗೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಈ ಗೀತೆ ಒಂದು ದೇಶವನ್ನು ಹಿಡಿದಿಡುವ, ಹಿಡಿದಿಟ್ಟ ಅತ್ಯುತ್ತಮ ದೇಶಪ್ರೇಮದ, ದೇಶಭಕ್ತಿಯ ಗೀತೆಯಾಗುಳಿದಿದೆ. ಯುದ್ಧದ ನಿರಾಶೆ, ದು:ಖದ ಛಾಯೆಯಲ್ಲಿ ನಲುಗಿದ್ದ ದೇಶಕ್ಕೆ, ದೇಶದ ಜರ್ಜರಿತ ಮನಸುಗಳಲ್ಲಿ ಮತ್ತೊಮ್ಮೆ ದೇಶಪ್ರೇಮದ ಬೀಜ ಬಿತ್ತಿದ ಗೀತೆ, ‘ಐ ಮೇರೆ ವತನ ಕಿ ಲೋಗೋ’.. ಅಂದಿನ ಮುತ್ಸದ್ದಿ, ರಿಸರ್ವ ಬ್ಯಾಂಕ ಆಫ್ ಇಂಡಿಯಾ ಗವರ್ನರ್ ಸಿ. ಡಿ. ದೇಶಮುಖ ಈ ಹಾಡನ್ನು, ‘ರಾಷ್ಟ್ರೀಯ ಐಕ್ಯತೆಯ ರಾಗದುಂಬಿದ ಸಂಕೇತ’ ವೆಂದು ಕರೆದದ್ದು ಕೂಡ ಐತಿಹಾಸಿಕ.
ಹೀಗೆ ಈ ಹಾಡಿನ ನಿಜ ಶ್ರೇಯಸ್ಸು ಲತಾಜಿ, ಕವಿ ಪ್ರದೀಪ, ಸಿ, ರಾಮಚಂದ್ರ ಅವರಿಗೆ ಸಲ್ಲುತ್ತದೆ. ತೆರೆಯ ಮರೆಯಲ್ಲಿ ತ್ಯಾಗ ಮಾಡಿದ ಆಶಾಜಿ ಯವರಿಗೂ ಸಲ್ಲುತ್ತದಲ್ಲವೇ. ಅಂದಹಾಗೆ ಆ ದಿನ ಕವಿ ಪ್ರದೀಪ ಅವರಿಗೆ ಸಿ. ರಾಮಚಂದ್ರ ಅವರೊಂದಿಗೆ ಟ್ಯೂನ್ ಮಾಡಿದ ತಮ್ಮ ಹಾಡನ್ನು ‘ಲೈವ್’ ಕೇಳುವ ಅವಕಾಶ ಸಿಗಲಿಲ್ಲ. ಯಾಕೆ ಗೊತ್ತೇ! ಅವರಿಗೆ ಅಲ್ಲಿಗೆ ಬರಲು ಆಹ್ಹಾನ ಸಿಕ್ಕಿರಲಿಲ್ಲ. ‘ ಆವೋ ಬಚ್ಚೋ ತುಮ್ಹೇ ದಿಖಾಯೇ ಝಾಂಕೀ ಹಿಂದುಸ್ತಾನ್ ಕಿ, ಇಸ್ ಮಿಟ್ಟೀ ಸೆ ತಿಲಕ್ ಕರೋಂ ಯೇ ಧರತೀ ಹೈ ಬಲಿದಾನ ಕೀ, ವಂದೇ ಮಾತರಂ, ವಂದೇ ಮಾತರಂ ( ಜಾಗೃತಿ, 1955), ಹಾಗೂ ‘ ದೂರ ಹಟೋ ದೂರ ಹಟೋ ಏ ದುನಿಯಾ ವಾಲೋಂ ಹಿಂದುಸ್ತಾನ ಹಮಾರಾ ಹೈ (ಕಿಸ್ಮತ್, 1943)’ ಮುಂತಾದ ಅನೇಕ ದೇಶಪ್ರೇಮದ ಗೀತೆಗಳಿಂದ ಭಾರತೀಯರನ್ನು ಇಂದಿಗೂ ಒಂದಾಗಿಸಿದ ಕವಿ ಪ್ರದೀಪ, ಹೀಗೆ ವಂಚಿತರಾದದ್ದು ಇತಿಹಾಸ.
ಈ ದೇಶದ ಮನಸ್ಸುಗಳಲ್ಲಿ, ಹೃದಯಗಳಲ್ಲಿ ದೇಶಪ್ರೇಮದ ಬೀಜ ಬಿತ್ತಿದ, ‘ ಐ ಮೇರೆ ವತನ್ ಕೆ ಲೋಗೊ’ ಹಾಡನ್ನು ಮತ್ತೆ ಮತ್ತೆ ಈ ನಾಡು, ನೆಲ ನೆನಸುವಂತಾಗಲಿ.
Comments
ಇಟ್ನಾಳರೆ ನಮಸ್ಕಾರ. ನಿಮ್ಮ
ಇಟ್ನಾಳರೆ ನಮಸ್ಕಾರ. ನಿಮ್ಮ ಮತ್ತೊಂದು ಲೇಖನ (ಸಂಪದದಲ್ಲಿ ಬಂದಿದ್ದು) ದೇವರೂಪಿ ಮಕ್ಕಳು ಕಸ್ತೂರಿಯಲ್ಲಿ ಓದಿದೆ. ಅಭಿನಂದನೆಗಳು
In reply to ಇಟ್ನಾಳರೆ ನಮಸ್ಕಾರ. ನಿಮ್ಮ by partha1059
ಧನ್ವವಾದಗಳು ಪಾರ್ಥರೇ ದೇವರೂಪಿ
ಧನ್ವವಾದಗಳು ಪಾರ್ಥರೇ ದೇವರೂಪಿ ಮಕ್ಕಳನ್ನೂ ಓದಿದ್ದಕ್ಕೆ. ತಮ್ಮ ಅಭಿನಂದನೆಗೆ ಧನ್ಯವಾದಗಳು. ಬಹುಶ: ನಮ್ಮ ಸಂಪದಿಗರ ಪೈಕಿ ಮೊದಲ ಓದುಗರು ನೀವು, ನನ್ನನ್ನು ಹೊರತು ಪಡಿಸಿ,
ಶ್ರೀಯುತ ಇಟ್ನಾಳರಿಗೆ ನಮಸ್ಕಾರಗಳು
ಶ್ರೀಯುತ ಇಟ್ನಾಳರಿಗೆ ನಮಸ್ಕಾರಗಳು.
ತಮ್ಮ ಈ ಲೇಖನ ಓದುತ್ತಿದ್ದಂತೆ ಯಾವಕಾಲಕ್ಕೂ ಮನಮಿಡಿಯುವ ಈ ಸುಶ್ರಾವ್ಯ ಹಾಡನ್ನು ಮನಸ್ಸು ಗುನಗತೊಡಗಿತು ಜೊತೆಗೆ ಚಿನಾದ ಯುದ್ಧದಲ್ಲಿ ಬಲಿದಾನ ಗೈದ ಯೋಧರ ಗಾಗಿ ಮನ ಮರುಗಿತು.ನಿಮ್ಮ ಲೇಖನ ಗಳು ಸಹ ಸ್ನೇಹಿತ ಪಾಟಿಲರಂತೆ ಹಳಯ ಹಿಂದಿಚಿತ್ರಗಳ ಕುರಿತು ಅಪಾರ ವಾದ ಮಾಹಿತಿಯನ್ನು ನಮಗೆ ನೀಡಿ ರಸದೌತಣ ಉಣಬಡಿಸುತ್ತೀರಿ. ವಂದನೆಗಳು........ರಮೇಶ ಕಾಮತ್.
In reply to ಶ್ರೀಯುತ ಇಟ್ನಾಳರಿಗೆ ನಮಸ್ಕಾರಗಳು by swara kamath
ಧನ್ಯವಾದಗಳು swara kamath ,
ಧನ್ಯವಾದಗಳು swara kamath , ರಮೇಶ ಕಾಮತ್ ರವರಿಗೆ, ತಮ್ಮ ಆತ್ಮೀಯ ಮೆಚ್ಚುಗೆಯ ಸಹೃದಯತೆಯ ಆಪ್ತ ನುಡಿಗಳಿಗೆ ವಂದನೆಗಳು.
Vijay Aivalli, Toronto : Hi
Vijay Aivalli, Toronto : Hi Friends, this is in Kannada but I will translate in a day or two and post it(for those who don't know it yet). it is about "Ai mere watan ke logo" song....its History and it is beatiful too, just like ths song. It is still one of my lost hummed song.
In reply to Vijay Aivalli, Toronto : Hi by lpitnal@gmail.com
Dattatraya Kulkarni :
Dattatraya Kulkarni : Dattatraya Kulkarni : sir very nice
In reply to Dattatraya Kulkarni : by lpitnal@gmail.com
Vijay Aivalli - Toronto :
Vijay Aivalli - Toronto : Thanks Lakshmikanth Itnal, very touching story behind the song
In reply to Vijay Aivalli - Toronto : by lpitnal@gmail.com
Mabu Dambal ·: Mabu Dambal:
Mabu Dambal ·: Mabu Dambal:
super sir
Glany Fernandes : Glany
Glany Fernandes : Glany Fernandes : ಈ ಹಾಡು ಕೇಳಿದಾಕ್ಶಣ ಎಲ್ಲಿಲ್ಲದ ಆನಂದ, ಇಂತಹ ದೇಶದಲ್ಲಿ ನಾ ಹುಟ್ಟಿದೆ ಎನ್ನುವ ಹೆಮ್ಮೆ...ನಿಮ್ಮ ಲೇಖನದಿಂದ ಬಹಳಷ್ಟು ವಿಶಯ ತಿಳಿದು ಬಂತು. ಧನ್ಯವಾದಗಳು.
Raja Gopal: Raja Gopal :
Raja Gopal: Raja Gopal : super sir,
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
" ಏ ಮೇರೆ ವತನ್ ಕೆ ಲೋಗೋ " ಹೆಡ್ಡಿಂಗನ್ನು ನೋಡುತ್ತಿದ್ದಂತೆ ನಾನು ಕವಿ ಪ್ರದೀಪರ ಶ್ರೇಷ್ಟ ರಚನೆಗಳ ಪೈಕಿ ಒಂದಾದ ಿದನ್ನು ಕನ್ನಡೀ ಕರಿಸಿದ್ದೀರಿ ಎಂದು ಭಾವಿಸಿದ್ದೆ. ನನ್ನ ಗ್ರಹಿಕೆ ಇದಕ್ಕೆ ಸಂಗೀತ ಸಂಯೋಜನೆ ಮದನ ಮೋಹನ ಎಂದಿತ್ತು, ನನ್ನ ತಪ್ಪು ಗ್ರಹಿಕೆಯನ್ನು ಸರಿ ಪಡಿಸಿಕೊಂಡೆ. ಈ ಕಾವ್ಯ ಹುಟ್ಟಿದ ಬಗೆಯನ್ನು ಮತ್ತು ಆ ಅಮೂಲ್ಯ ಕ್ಷಣಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದೀರಿ. ಇದೊಂದು ಶಾಶ್ವತ ದೇಶ ಭಕ್ತಿಗೀತೆಗಳ ಪೈಕಿ ಒಂದು, ಅದೇ ರೀತಿ ಪ್ರೇಮನಾಥ ಅಭಿನಯದ ಚಿತ್ರವೊಂದರ ಗೀತೆ " ಯಹಾಂ ಡಾಲ ಡಾಲ ಪರ ಸೋನೇಕಿ ಚಿಡಿಯಾಂ ಕರತೇ ಹೈ ಬಸೆರಾ ಏ ಭಾರತ ದೇಶ ಹೈ ಮೆರಾ " ಎನ್ನುವ ಗೀತೆ ಸಮ ನಿಲ್ಲುವಂತಹ ಕೃತಿ ಇದು. ಅತ್ಯುತ್ತಮ ಲೇಖನ ನೀಡಿದ್ದೀರಿ, ಧನ್ಯವಾದಗಳು.
ಆತ್ಮೀಯ ಹೆಚ್ ಏ ಪಾಟಲರಿಗೆ, ತಮ್ಮ
ಆತ್ಮೀಯ ಹೆಚ್ ಏ ಪಾಟಲರಿಗೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ಸರ್. ಹಾಗೆಯೇ ,ಯಹಾಂ ಡಾಲ್ ಡಾಲ್ ಪರ ಸೋನೇ ಕಿ ಚಿಡಿಯಾಂ ಕರತೀ ಹೈ ಬಸೇರಾ' ಹಾಡನ್ನು ನೆನಪಿಸಿದ್ದಕ್ಕೆ ವಂದನೆಗಳು.