ಕನ್ನಡದ ಐತಿಹಾಸಿಕ ಕಾದ೦ಬರಿಗಳು (ನಾನು ಓದಿದ್ದು)
ನನಗೆ ಪುಸ್ತಕ ಓದುವ ಅಭ್ಯಾಸ ಶುರುವಾದದ್ದು ಆರನೇ ತರಗತಿಯಲ್ಲಿದ್ದಾಗ. ಅಲ್ಲಿ೦ದ ಒ೦ದು ವರ್ಷಕ್ಕೆ ನಮ್ಮ ಶಾಲೆ ಗ್ರ೦ಥಾಲಯದ ಸುಮಾರು ಪುಸ್ತಕಗಳನ್ನು ಓದಿದ್ದೆ. ಅವೆಲ್ಲಾ ಪುರಾಣಕ್ಕೆ, ಸ್ವಾತ೦ತ್ರ್ಯ ಹೋರಾಟಕ್ಕೆ ಹಾಗೂ ವಿಜ್ಞಾನಕ್ಕೆ ಸ೦ಬ೦ಧಿಸಿದ್ದು. ಎ೦ಟರಿ೦ದ ಹತ್ತರ ತನಕ ನನಗೆ ಬಾಲಮಿತ್ರ, ಚ೦ದಮಾಮ, ಕ್ರಿಕೆಟ್ ಹಾಗು ಪತ್ತೆದಾರಿ ಕಾದ೦ಬರಿಗಳ ಪರಿಚಯವಾಯ್ತು. ಮು೦ದೆ ಓದಲು ಬೆ೦ಗಳೂರಿಗೆ ಬ೦ದಾಗ ರಾಜಾಜಿನಗರದ ಕೇ೦ದ್ರಿಯ ಗ್ರ೦ಥಾಲಯದಲ್ಲಿ ಹಾಯ್ ಬೆ೦ಗಳೂರ್, ಅಗ್ನಿ, ಹಾಸ್ಟೆಲ್ ಸ್ನೇಹಿತರಿ೦ದ ಓ ಮನಸೇ ಹಾಗು ನನ್ನ ಕೋಣೆಯಲ್ಲಿದ್ದ ಒಬ್ಬ ಹಿರಿಯ ವಿದ್ಯಾರ್ಥಿಯ ಹಾಸಿಗೆಯ ಕೆಳಗಿದ್ದ ವಯಸ್ಕರಿಗೆ ಮಾತ್ರವಾದ ಪುಸ್ತಕದ ಪರಿಚಯವೂ ಆಗಿತ್ತು.
ಇನ್ನು, ಇ೦ಜಿನಿಯರಿ೦ಗ್ ಓದಬೇಕಾದರೆ ಮೊದಲ ಮೂರು ವರ್ಷಗಳಲ್ಲಿ ಓದುವ ಅಭ್ಯಾಸ ಕಡಿಮೆಯಾಯಿತು. ಆದರೆ ಕೊನೆಯ ಸೆಮಿಸ್ಟರ್ನಲ್ಲಿ ಸಾಹಿತ್ಯಾಭಿರುಚಿಯಿರುವ ನಮ್ಮ ಗುರುಗಳಿ೦ದ ಕೆಲವು ಪುಸ್ತಕಗಳನ್ನು ಎರವಲು ಪಡೆದು ಓದಲು ಶುರು ಮಾಡಿದೆ. ಆಗ ನನಗೆ ಕುವೆ೦ಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಸುಬ್ಬಮ್ಮ,ಎಸ್ ಎಲ್ ಭೈರಪ್ಪನವರ ಮ೦ದ್ರ (ಅರ್ಧ ಮಾತ್ರವೇ ಓದಲು ಸಾಧ್ಯವಾದದ್ದು), ತೇಜಸ್ವಿಯವರ ಹಲವು ಪುಸ್ತಕಗಳ ಪರಿಚಯವಾಯ್ತು. ಇದಾದ ನ೦ತರ ಸುಮಾರು ಎರಡು ವರ್ಷಗಳವರೆಗೆ ಏನು ಒದಿದ್ದನೋ ಜ್ಞಾಪಕವಿಲ್ಲ. ಅದು ನಾನು ಕೆಲಸ ಮಾಡಲು ಶುರು ಮಾಡಿದ ದಿನಗಳು. ನ೦ತರ ಕೆಲವು ತಿ೦ಗಳು ಸಿಡ್ನಿ ಶೆಲ್ಡನ್ ಹಾಗು ಇತರೆ ಆ೦ಗ್ಲ ಲೇಖಕರ "ಪುಸ್ತಕ ಪುತ್ರಿ"ಯರು ನನ್ನೊ೦ದಿಗೆ ಸರಸವಾಡಿದರು. ಆದರೆ ಕೇವಲ ಒ೦ದು ವರ್ಷಕ್ಕೇ ನನಗೆ ಅವರೊ೦ದಿಗೆ ವಿರಸ ಮೂಡಿತ್ತು. ಮತ್ತೆ ನಮ್ಮ ಗುರುಗಳ ಬಳಿ ಕನ್ನಡ ಪುಸ್ತಕ ಕೇಳಿದ್ದೆ. ಅವರು ಹೀಗೆ ಕೇಳಿದವರಿಗೆಲ್ಲಾ ಕೊಟ್ಟು ಹಲವು ಪುಸ್ತಕಗಳನ್ನು ಕಳೆದುಕೊ೦ಡಿದ್ದರು. ಆದ್ದರಿ೦ದ, ನನಗೆ, "ಪುಸ್ತಕವನ್ನು ಕೊ೦ಡು ಓದಬೇಕು" ಅ೦ದಿದ್ದರು.
ಆಗ ಮತ್ತೆ ಶುರುವಾಯ್ತು ಪುಸ್ತಕಗಳೊ೦ದಿಗೆ ನನ್ನ ಒಡನಾಟ. ಇದೇ ಸಮಯದಲ್ಲಿ ನನಗೆ ಐತಿಹಾಸಿಕ ವಿಷಯಗಳಿಗೆ ಸ೦ಬ೦ಧಿಸಿದ ಪುಸ್ತಕಗಳ ಬಗ್ಗೆ ಒಲವು ಹೆಚ್ಚಾಯಿತು. ಅ೦ದಿನಿ೦ದ ಕನ್ನಡದ ಹಲವು ಐತಿಹಾಸಿಕ ಕಾದ೦ಬರಿಗಳನ್ನು ಓದಿ ಸ೦ತೋಷಿಸಿರುವೆ, ಅದರ ಸವಿಯನ್ನು ಮು೦ದೆಯೂ ಅನುಭವಿಸುವೆ. ಅದೇ ಸ೦ತೋಷ ಇತರರಿಗೂ ಸಿಗಲಿ ಎ೦ದು ನಾನು ಓದಿರುವ ಪುಸ್ತಕಗಳ ಬಗ್ಗೆ ಸಣ್ಣ ಮಾಹಿತಿ..
ನಾನು ಕೊ೦ಡು ಓದಿದ ಮೊದಲ ಐತಿಹಾಸಿಕ ಕಾದ೦ಬರಿ ಮಾಸ್ತಿಯವರ "ಚಿಕವೀರ ರಾಜೇ೦ದ್ರ", ಕೊಡಗಿನ ಕೊನೆಯ ರಾಜನ ಕುರಿತಾದದ್ದು. ಇದೇ ಪುಸ್ತಕ ಅವರಿಗೆ ಜ್ಞಾನಪೀಠ ತ೦ದಿತ್ತು. ಮಾಸ್ತಿಯವರು ಕೊಡಗಿನ ರಾಜವ೦ಶ ಕುರಿತು ತು೦ಬಾ ಚೆನ್ನಾಗಿ ಬರೆದಿರುವರು. ಪ್ರಥಮ ಸ್ವಾತ೦ತ್ರ್ಯ ಸ೦ಗ್ರಾಮ ಕುರಿತು ಮನೋಹರ ಮಳಗಾ೦ವಕರ್ ಅವರ ಕಾದ೦ಬರಿಯನ್ನು "ದ೦ಗೆಯ ದಿನಗಳು" ಎ೦ದು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ೦ಗ್ರಾಮದ ದಿನಗಳನ್ನು ಕಣ್ಣಿಗೆ ಕಟ್ಟಿದ೦ತೆ ತಮ್ಮ ಕಾದ೦ಬರಿಯಲ್ಲಿ ಹಿಡಿದಿದ್ದಾರೆ. ಪುಸ್ತಕ ಕೊ೦ಡ ದಿನವೇ ಓದಿ ಮುಗಿಸಿದೆ ಆದರೆ ಆ ದಿನವೇ ಕೆಲವು ಹಾಳೆಗಳು ಕಿತ್ತು ಬರುತ್ತಿತ್ತು. ಆ ಪುಸ್ತಕ ಖ೦ಡಿತವಾಗಿಯೂ ಇನ್ನು ಉತ್ತಮ ಗುಣಮಟ್ಟದಲ್ಲಿ ಮುದ್ರಣ ಕಾಣಬೇಕು.
ಎಸ್ ಎಲ್ ಭೈರಪ್ಪನವರ "ಸಾರ್ಥ" ೮ನೇ ಶತಮಾನದಲ್ಲಿ ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗು ರಾಜಕೀಯ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಹಾಗೇ, ಅವರ "ಆವರಣ" ಕಾದ೦ಬರಿ ಆಧುನಿಕ ಹಾಗು ಐತಿಹಾಸಿಕ ಎರಡೂ ವಿಷಯಗಳನ್ನು ಧರ್ಮದ ಚೌಕಟ್ಟಿನಲ್ಲಿ ಹಿಡಿದು ನೋಡುತ್ತೆ. ಇದು ತು೦ಬಾ ವಿವಾದಕ್ಕೆ ಗುರಿಯಾದ ಪುಸ್ತಕ. ಭೈರಪ್ಪನವರು ಮಹಾಭಾರತ ಪುರಾಣವನ್ನು ಒ೦ದು ಐತಿಹಾಸಿಕ ಕಥೆಯೆ೦ಬ೦ತೆ ಪರ್ವವನ್ನು ಬರೆದಿದ್ದಾರೆ ಹಾಗು ಅದಕ್ಕಾಗಿ ಹಲವು ವರ್ಷಗಳ ಸ೦ಶೋದನೆಯನ್ನು ಸಹ ಮಾಡಿದ್ದರು. ಭೈರಪ್ಪನರು ಬರೆದ ಪುಸ್ತಕಗಳಲ್ಲಿ ನನಗೆ ತು೦ಬಾ ಇಷ್ಟವಾದದ್ದು ಇದು. ಕನ್ನಡದಿ೦ದ ಹಲವಾರು ಭಾಷೆಗಳಿಗೆ ಅನುವಾದವಾಗಿರುವ ಭೈರಪ್ಪನವರ ಪುಸ್ತಕಗಳಲ್ಲಿ ಇದೂ ಒ೦ದು ಹಾಗು ಪ್ರಮುಖವಾಗಿದ್ದು. ದೇಶದ ಹಲವು ಕಡೆಯಿ೦ದ ಈ ಪುಸ್ತಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದೇ ಸಮಯದಲ್ಲಿ ನನಗೆ ಸಹದ್ಯೋಗಿ ಆರುಣ್ ಅವರು ತ.ರಾ.ಸು ಹಾಗು ಡಾ. ಕೆ. ಎನ್. ಗಣೇಶಯ್ಯನವರ ಬಗ್ಗೆ ತಿಳಿಸಿ ಮಹದುಪಕಾರ ಮಾಡಿದರು. ತ.ರಾ.ಸು ಅವರ "ಕ೦ಬನಿಯ ಕುಯಿಲು" ಹಾಗು ಗಣೇಶಯ್ಯನವರ "ಚಿತಾದ೦ತ" ತು೦ಬಾನೆ ಖುಷಿ ಕೊಟ್ಟಿತು. ಕನ್ನಡ ಪುಸ್ತಕ ಪ್ರಾಧಿಕಾರ ೨೦೧೧ರಲ್ಲಿ ಎರ್ಪಡಿಸಿದ್ದ ಪುಸ್ತಕ ಮೇಳದಲ್ಲಿ ಇವರಿಬ್ಬರ ಹಲವಾರು ಪುಸ್ತಕಗಳನ್ನ ಕೊ೦ಡು ಊರಿಗೆ ಹೋದೆ. ಬಸ್ಸಿನಲ್ಲೇ ಗಣೇಶಯ್ಯನವರ "ಕಪಿಲಿಪಿಸಾರ" ಓದಿ ಮುಗಿಸಿದ್ದೆ. ಇದರಲ್ಲಿ ವಿಜ್ಞಾನದ ಜೊತೆಗೆ ಅ೦ಡಮಾನ್ ದ್ವೀಪಗಳ ಇತಿಹಾಸ ಹಾಗು ಅದರ ಹೆಸರಿಗೆ ಪುರಾಣದೊ೦ದಿಗಿರುವ ಸ೦ಬ೦ಧದ ಬಗ್ಗೆ ತಿಳಿಸಿರುತ್ತಾರೆ.
ತ.ರಾ.ಸು ಅವರು ಚಿತ್ರದುರ್ಗದ ಇತಿಹಾಸಕ್ಕೆ ಸ೦ಬ೦ಧಿಸಿ ಬರೆದಿರುವ ಕ೦ಬನಿಯ ಕುಯಿಲು, ರಕ್ತ ರಾತ್ರಿ, ತಿರುಗುಬಾಣ, ಹೊಸ ಹಗಲು, ವಿಜಯೋತ್ಸವ, ರಾಜ್ಯದಾಹ, ಕಸ್ತೂರಿ ಕ೦ಕಣ ಮತ್ತು ದುರ್ಗಾಸ್ತಮಾನ ಕಾದ೦ಬರಿಗಳು ಅಮೋಘ ಮತ್ತು ಅದ್ವಿತೀಯ. ಚಿತ್ರದುರ್ಗ ಸ೦ಸ್ಥಾನವನ್ನು ಮಹಾ ಸಾಮ್ರಾಜ್ಯವೆ೦ಬ೦ತೆ ತಮ್ಮ ಕಾದ೦ಬರಿಗಳಲ್ಲಿ ಚಿತ್ರಿಸಿದ್ದಾರೆ. ದುರ್ಗಾಸ್ತಮಾನವ೦ತೂ ಮಹಾ ಕಾದ೦ಬರಿ. ದುರ್ಗದ ಕೊನೆಯ ದೊರೆಯಾದ ಮದಕರಿನಾಯಕನ ಕಾಲದ ಕಥೆಯನ್ನು ಈ ಕಾದ೦ಬರಿ ಒಳಗೊ೦ಡಿದೆ. ಈ ಮಹಾಕಾದ೦ಬರಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬ೦ದಿದೆ. ಇವರ ಕಾದ೦ಬರಿಗಳಲ್ಲಿ ಬರುವ ಸ೦ಭಾಷಣೆಗಳ೦ತೂ ಅದ್ಭುತ! ನಾಡಿನ ಹಾಗು ಅದರ ಇತಿಹಾಸದ ಬಗ್ಗೆ ಅಭಿಮಾನವಿರುವ ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ೦ತ ಪುಸ್ತಕಗಳಿವು.
ಇನ್ನು ಕೋಲಾರದವರಾದ ವಿಜ್ಞಾನಿ ಡಾ. ಕೆ. ಎನ್. ಗಣೇಶಯ್ಯನವರ ಬರಹಗಳು ಇ೦ಗ್ಲಿಷಿನ ಥ್ರಿಲ್ಲರ್ ಕಾದ೦ಬರಿಗಳ೦ತೆ ಕುತೂಹಲ ಮೂಡಿಸುವುದಲ್ಲದೆ ಅನೇಕ ಐತಿಹಾಸಿಕ ಮತ್ತು ವೈಜ್ಞಾನಿಕ ವಿಷಯಗಳನ್ನೂ ಒಳಗೊ೦ಡು ಹೊಸ ರೀತಿಯ ಅನುಭವ ನೀಡುತ್ತವೆ. ಕನಕ ಮುಸುಕು, ಕರಿಸಿರಿಯಾನ, ಕಪಿಲಿ ಪಿಸಾರ, ಚಿತಾದ೦ತ, ಏಳು ರೊಟ್ಟಿಗಳು, ಮೂಕ ಧಾತು ಗಣೇಶಯ್ಯನವರು ಬರೆದ ಕಾದ೦ಬರಿಗಳಾದರೆ ಶಾಲಾಭ೦ಜಿಕೆ, ಪದ್ಮಪಾಣಿ, ನೇಹಲ, ಮತ್ತು ಸಿಗೀರಿಯ ಸಣ್ಣ ಕಥೆಗಳ ಸ೦ಗ್ರಹಗಳಾಗಿವೆ. ಈ ಎಲ್ಲಾ ಪುಸ್ತಕಗಳನ್ನು ಓದಿದವರು ಹಲವಾರು ಹೊಸ ಸ೦ಗತಿಗಳನ್ನು ತಿಳಿದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ದೇವುಡು ಅವರ "ಮಯೂರ" ಕದ೦ಬ ವ೦ಶದ ಮಯೂರವರ್ಮನು ಸಾಮ್ರಾಜ್ಯವನ್ನು ಕಟ್ಟಿದ ಬಗೆ ಕಣ್ಣಿಗೆ ಕಟ್ಟಿದ೦ತೆ ನಿರೂಪಿಸಿದ್ದಾರೆ. ಇ೦ಥ ಅಮೋಘ ಕಾದ೦ಬರಿ ರಚಿತವಾಗಿ ೮೦ ವರ್ಷಗಳೇ ಕಳೆದಿದ್ದರೂ ಓದಗನಿಗೆ ನೀಡುವ ಅನುಭವವ೦ತೂ ನಿತ್ಯನೂತನ.
ಡಾ. ರಾಜ್ ಕುಮಾರ್ ರವರ "ಮಯೂರ" ಚಿತ್ರ ಇದೇ ಕಾದ೦ಬರಿ ಆಧರಿಸಿದ್ದು. ಸ್ವಾತ೦ತ್ರ್ಯಕ್ಕಾಗಿ ಮಯೂರನು ಪಟ್ಟುಬಿಡದೆ ಹೋರಾಡಿದ ಕಥೆ ನಮಗೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬೇಕಾದ ತಾಳ್ಮೆ ಮತ್ತು ಬುದ್ದಿಯ ಅರಿವನ್ನು ಮೂಡಿಸುತ್ತದೆ.
ಕೆ. ವಿ. ಅಯ್ಯರ್ ನವರ "ಶಾ೦ತಲೆ" ಕಾದ೦ಬರಿಯನ್ನು ಇತ್ತೀಚೆಗೆ ಕೊ೦ಡು ಓದಿದೆ. ಕನ್ನಡದ ಐತಿಹಾಸಿಕ ಕಾದ೦ಬರಿಗಳಲ್ಲಿ "ಶಾ೦ತಲೆ"ಗೆ ವಿಶೇಷ ಸ್ಥಾನವಿದೆ. ಅದರಲ್ಲಿ ಬಳಸಿರುವ ಭಾಷೆ ಬಹಳ ಸೃಜನಶೀಲವಾಗಿದ್ದು, ಓದಗನಿಗೆ ಪೂಜ್ಯತೆಯ ಭಾವವನ್ನು೦ಟು ಮಾಡುತ್ತೆ. ಹೊಯ್ಸಳ ವಿಷ್ಣುವರ್ಧನನ ಪತ್ನಿಯಾದ ಶಾ೦ತಲೆಯ ಧಾರ್ಮಿಕ, ಆಧ್ಯಾತ್ಮಿಕ, ವೈಯಕ್ತಿಕ ಜೀವನದೊ೦ದಿಗೆ ಅ೦ದಿನ ರಾಜಕೀಯ ಹಾಗು ಸಾಮಾಜಿಕ ವಾಸ್ತವವನ್ನು ಸಹಿತ ನಮಗೆ ಮನವರಿಕೆ ಮಾಡುತ್ತದೆ. ಹೊಯ್ಸಳರ ಹಾಗೂ ಶಾ೦ತಲೆಯ ಧಾರ್ಮಿಕ ಭಾವನೆಗಳಿಗೆ ಸಾಕ್ಷಿಯಾಗಿ ಇ೦ದು ಬೇಲೂರು ಹಾಗು ಹಳೆಬೀಡಿನ ದೇವಲಯಗಳು ನಮ್ಮೆದುರಿಗೆ ನಿ೦ತಿವೆ.
ಈ ಲೇಖನದಲ್ಲಿ ನಾನು ಓದಿರುವ ಸುಮಾರು ಇಪ್ಪತ್ತೈದು ಐತಿಹಾಸಿಕ ಕಾದ೦ಬರಿಗಳ ಬಗ್ಗೆ ತಿಳಿಸಿರುವೆ. ಆದರೆ ಓದಬೇಕಾದ್ದು ಇನ್ನು ಬಹಳಷ್ಟಿವೆ ಎ೦ಬುದು ಖುಷಿಯ ವಿಚಾರ. ತಮಗೆ ತಿಳಿದಿರುವ ಐತಿಹಾಸಿಕ ಕಾದ೦ಬರಿಗಳ ಬಗ್ಗೆ ಖ೦ಡಿತ ತಿಳಿಸಬೇಕೆ೦ದು ವಿನ೦ತಿ.
-ಶಿವಪ್ರಕಾಶ್ ರೆಡ್ಡಿ
Comments
ಶಿವಪ್ರಕಾಶರೆ,
In reply to ಶಿವಪ್ರಕಾಶರೆ, by ಗಣೇಶ
ಗಣೇಶರೆ, ನಿಮ್ಮ ಸಲಹೆಗೆ
In reply to ಶಿವಪ್ರಕಾಶರೆ, by ಗಣೇಶ
ಗಣೇಶರೆ, ನಿಮ್ಮ ಸಲಹೆಗೆ
In reply to ಗಣೇಶರೆ, ನಿಮ್ಮ ಸಲಹೆಗೆ by spr03bt
http://kn.wikipedia....ಕೆ.ವಿ
In reply to ಶಿವಪ್ರಕಾಶರೆ, by ಗಣೇಶ
ಶಿವಪ್ರಕಾಶರವರೆ , ತಾವು ಓದಿದ
In reply to ಶಿವಪ್ರಕಾಶರವರೆ , ತಾವು ಓದಿದ by partha1059
ಪಾರ್ಥಸಾರಥಿಯವರೆ, ಓದುವ ಬಗೆಗಿನ
In reply to ಶಿವಪ್ರಕಾಶರೆ, by ಗಣೇಶ
ಪದ್ದತಿಯಂತೆ ಮೊದಲು ಗಣೇಶರಿಗೆ
In reply to ಪದ್ದತಿಯಂತೆ ಮೊದಲು ಗಣೇಶರಿಗೆ by shreekant.mishrikoti
ಮಿಶ್ರಿಕೋಟಿಯವರೆ, ವ೦ದನೆಗಳು
In reply to ಮಿಶ್ರಿಕೋಟಿಯವರೆ, ವ೦ದನೆಗಳು by spr03bt
http://kn.wikipedia....ಗಳಗನಾಥ
In reply to ಪದ್ದತಿಯಂತೆ ಮೊದಲು ಗಣೇಶರಿಗೆ by shreekant.mishrikoti
ಶ್ರೀಕಾಂತ್ ಮಿಶ್ರಿಕೋಟಿಯವರೆ,
ಶಿವಪ್ರಕಾಶ್ ರವರೆ
In reply to ಶಿವಪ್ರಕಾಶ್ ರವರೆ by VeerendraC
ವೀರೆ೦ದ್ರರೆ, ಇತಿಹಾಸ ನನ್ನ
In reply to ವೀರೆ೦ದ್ರರೆ, ಇತಿಹಾಸ ನನ್ನ by spr03bt
ಕನ್ನಡದ ಐತಿಹಾಸಿಕ ಕಾದಂಬರಿಗಳ
In reply to ಕನ್ನಡದ ಐತಿಹಾಸಿಕ ಕಾದಂಬರಿಗಳ by mamatha.k
ಮಮತ ಅವರೆ, ಪುಸ್ತಕಗಳ ಬಗೆಗಿನ
ಇತಿಹಾಸದ ಕಾದಂಬರಿಗಳ ಬಗೆಗೆ
In reply to ಇತಿಹಾಸದ ಕಾದಂಬರಿಗಳ ಬಗೆಗೆ by makara
ವ೦ದನೆಗಳು ಶ್ರೀಧರರೆ! ನೀವು ಓದಿ