ಸಂಸತ್ತಿನೊಳಕ್ಕೆ ಮತ್ತೊಂದು ಛಿದ್ರ

ಸಂಸತ್ತಿನೊಳಕ್ಕೆ ಮತ್ತೊಂದು ಛಿದ್ರ

ಚಿತ್ರ

(ಚಿತ್ರ, ಪ್ರಜಾವಾಣಿಯಿಂದ ಸ್ಕ್ಯಾನ್ ಮಾಡಿದ್ದು

ತಪ್ಪು-ಸರಿಗಳ ಜಿಜ್ಞಾಸೆ ಪಕ್ಷ ಮತ್ತು ನೇತಾರರಿಗೆ ಬಿಟ್ಟಿದ್ದು. ಆದರೆ ವೋಟಿಗ ಸಾಮಾನ್ಯರ ಸಂಕಟವೆಂದರೆ, ಮೊದಲೇ ಬಹುವಿಧ ಅಸ್ಥಿಭಂಗ ಅನುಭವಿಸಿರುವ ಸಂಸತ್ತಿಗೆ, ಹತಾಶ ರಾಜಕೀಯ ಶಕ್ತಿಯ ಛಿದ ಸೇರ್ಪಡೆಯಾಗಲಿರುವುದು.
 ಸಮ್ಮಿಶ್ರತೆಯ ಸಂಕಷ್ಟ ಎಂಬ ಅಸಹಾಯಕ ಅನಿಷ್ಟ, ನಮ್ಮ ರಾಜಕೀಯ ವ್ಯವಸ್ಥೆಗೆ ಇದಾಗಲೇ ತಗಲಾಕಿಕೊಂಡಿದೆ; ಆಡಳಿತಕ್ಕೆ, ಬೆರಕೆ ಸಂಖ್ಯೆ ಅನಿವಾರ್ಯವಾಗಿದೆ; ಆ ಪೌರುಷಹೀನತೆಯ ದುರ್ಬಳಕೆಗಾಗಿಯೇ ಹೊಸ-ಹೊಸ ಪಕ್ಷಗಳು ಹುಟ್ಟಿಕೊಳ್ಳತ್ತಿವೆ. ಇದ್ದಲ್ಲಿ ಅಷ್ಟಾಗಿ ಗಿಟ್ಟಿಸಿಕೊಳ್ಳಲಾರದ ಹತಾಶ ಮಹತ್ವಾಕಾಂಕ್ಷಿಗಳು ಪಕ್ಷಗಳೆಂಬ ತಮ್ಮದೇ ಪಾಳೆಯ-ಪಟ್ಟು ಕಟ್‌ಇಕೊಳ್ಳುತ್ತಾರೆ. ಒಂದೊಂದು ಗುಂಪುಗುಳಿಯ ಉದ್ದೇಶವೂ, ಇನ್ನೊಂದಕ್ಕೆ ಟ್ಯಂಗ್ ಕೊಟ್ಟು ಬೀಳಿಸುವುದು. ಕ್ಯಾಮರಾ ಮುಂದೆ ಭಾಯಿ-ಭಾಯಿಯಾಗಿ, ಅಡಳಿತ ಸಂಖ್ಯೆ ತೋರಿಸಿಕೊಂಡರೂ, ಛಿದ್ರ ಪಕ್ಷಗಳು ಸರಕಾರದ ಮೇಲೆ ಸವಾರಿ ಮಾಡುತ್ತಲೇ ಇರುತ್ತವೆ. ತೂಗುಕತ್ತಿಡಿಯಲ್ಲಿ, ನಡು-ನಡುಗುತ್ತಲೇ ಆ ಸರಕಾರ, ಉಗುಲು ನುಂಗಿಕೊಳ್ಳುತ್ತಿರುತ್ತದೆ. ಇದು ಅವಿವೇಕವೆನ್ನುವುದು ಮುತ್ಸದ್ದಿಗಳಿಗೆಲ್ಲಾ ಗೊತ್ತು ಆದರೂ ಅದನ್ನೇ ಮಾಡುತ್ತಾರೆ.
 ಅವರು ಮಾಡಲಿ; ಆದರೆ ಚುನಾವಣಾ ಆಯೋಗವೊಂದು ಇದೆಯಲ್ಲಾ, ಅದು, ದಿಢೀರನೆ ಹುಟ್ಟಿಕೊಳ್ಳುವ ಒಂದು ಪಕ್ಷಗಳ ಮಾನ್ಯತೆಗಾಗಿ ಆರು ವರ್ಷಗಳ ಕನಿಷ್ಠ ಅಸ್ತಿತ್ವವನ್ನು ನಿಗದಿಗೊಳಿಸಬಾರದೇಕೆ? ಹೋಗಲಿ, ಪ್ರಸಕ್ತ ಸಂಸತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆ ಹೊಂದಿರುವ ಮೊದಲೆರಡು ಪಕ್ಷಗಳಾದರೂ ಸತತ ಬ್ಲಾಕ್‌ಮೇಲ್‌ನಲ್ಲೇ ಸೊರಗುವ ಸನ್ನಿವೇಶಕ್ಕೆ ವಿದಾಯ ಹೇಳಿ, ತಮ್ಮ ತಮ್ಮ ತನ ಉಳಿಸಿಕೊಳ್ಳಬಾರದೇಕೆ; ಛಿದ್ರ ಪಕ್ಷಗಳನ್ನು ನಿರಾಕರಿಸಬಾರದೇಕೆ?
 

Rating
No votes yet

Comments

Submitted by VeerendraC Sat, 12/01/2012 - 20:33

>>ಪೌರುಷಹೀನತೆಯ ದುರ್ಬಳಕೆಗಾಗಿಯೇ ಹೊಸ-ಹೊಸ ಪಕ್ಷಗಳು ಹುಟ್ಟಿಕೊಳ್ಳತ್ತಿವೆ.
ಇದು ಸ್ವಲ್ಪ‌ ಅತಿಯಾಯಿತು ನಿಮ್ಮ್ ಬರಹವನ್ನು ನೀವೇ ಮೆಚ್ಚಬೇಕು.