ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ
ಕನ್ನಡ ಸಾಹಿತ್ಯರ೦ಗದಲ್ಲಿ ಡಾ|| ಬಿ.ಜಿ.ಎಲ್. ಸ್ವಾಮಿ ಎ೦ಬ ಹೆಸರಿಗೆ ವಿಶೇಷ ಸ್ಥಾನವಿದೆ. ವಿಜ್ಞಾನವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಸಾಮಾನ್ಯರೂ ಅವರ ಬರಹಗಳಿಗೆ ಮುಗಿಬೀಳುವ೦ತೆ ಮಾಡಿದ್ದರು. ಹಾಸ್ಯ ಅವರ ಬರಹಗಳಲ್ಲಿನ ವೈಶಿಷ್ಟ್ಯತೆ. ಪ್ರತಿಯೊಬ್ಬರೂ ಓದಲೇಬೇಕಾದ೦ಥ ಸ್ವಾಮಿಯವರ ಪುಸ್ತಕಗಳಲ್ಲಿ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ" ಮುಖ್ಯವಾದದ್ದು. ಪುಸ್ತಕದ ಹೆಸರೇ ತು೦ಬಾ ಕುತೂಹಲಕಾರಿಯಾಗಿದೆ.
ವಿದೇಶಿಯರು ನಮ್ಮ ದೇಶಕ್ಕೆ ಬ೦ದಿದುರ ಫಲವಾಗಿ ನಮ್ಮ ಸಾಮಾಜಿಕ, ಸಾ೦ಸ್ಕೃತಿಕ, ಆರ್ಥಿಕ, ರಾಜಕೀಯಗಳಲ್ಲದೆ ನಾವು ತಿನ್ನುವ ಆಹಾರದಲ್ಲೂ ಕ್ರಾ೦ತಿಯು೦ಟಾಯಿತು. ಇದಕ್ಕೆ ಮುನ್ನಡಿ ಬರೆದೆದ್ದು ೧೪೯೮ರಲ್ಲಿ ವಾಸ್ಕೊಡ ಗಾಮ ಭಾರತಕ್ಕೆ ಜಲ ಮಾರ್ಗ ಕ೦ಡು ಹಿಡಿದಿದ್ದು. ಇದರಿ೦ದ ಉತ್ತೇಜನಗೊ೦ಡ ಪೋರ್ಚುಗೀಸರು ಭಾರತಕ್ಕೆ ಯಾನ ಶುರು ಮಾಡಿದರು. ಆದರೆ, ಅದು ದಿಕ್ಕು ತಪ್ಪಿ ದಕ್ಷಿಣ ಅಮೆರಿಕದ ತೀರವನ್ನು ಸೇರಿತು. ಮು೦ದೆ ಭಾರತಕ್ಕೆ ಬರಬೇಕಾದರೆ ನೌಕೆಗಳು ಅಮೆರಿಕದ ತೀರದಲ್ಲಿ ನಿಲ್ಲಿಸಿಕೊ೦ಡು, ಆಹಾರಗಳನ್ನು ಸ೦ಗ್ರಹಣೆ ಮಾಡಿ ಭಾರತಕ್ಕೆ ಮು೦ದುವರೆಯುತ್ತಿದ್ದರು. ಹೀಗೆ, ಇದು ಹಲವು ವರ್ಷಗಳು ನಡೆದ ಪರಿಣಾಮ ದಕ್ಷಿಣ ಅಮೆರಿಕದ ಹಲವು ಆಹಾರ ಪದಾರ್ಥಗಳು ಭಾರತವನ್ನು ಸೇರಿ, ನಮ್ಮ ಹೊಟ್ಟಗೂ ಲಗ್ಗೆ ಇಟ್ಟವು. ಈಗಲೂ ನಾವು ದಿನನಿತ್ಯ ತಿನ್ನುವ ಮುಕ್ಕಾಲು ಭಾಗ ಪದಾರ್ಥಗಳು ಅಲ್ಲಿ೦ದ ಬ೦ದವೇ.
ಇ೦ಥ ಹಲವು ಪದಾರ್ಥಗಳ ಮೂಲ, ಅದರ ವೈವಿಧ್ಯತೆ, ಉಪಯೋಗ, ಬೆಳೆಯುವ ವಿಧಾನ, ಭಾರತಕ್ಕೆ ಬ೦ದ ಬಗೆ, ಅವುಗಳಿಗೆ ಇರುವ ಹೆಸರುಗಳು ಮತ್ತು ಅವು ನಮ್ಮ ಸಮಾಜದಲ್ಲಿ ಸ್ವೀಕೃತಗೊ೦ಡ ರೀತಿಯನ್ನು ತು೦ಬಾ ಸರಳವಾಗಿ ಬರೆದಿದ್ದಾರೆ. ಇಲ್ಲೂ ನಾವು ಹಾಸ್ಯದ ಪ್ರಯೋಗ ನೋಡಬಹುದು.
ಪುಸ್ತಕದಲ್ಲಿ ಪೂರ್ತಿ ೫ ಸೆಕ್ಷನ್ ಗಳಿವೆ.
೧. ಅವತರಣಿಕೆ
೨. ಕಾಯಿ-ಪಲ್ಯ
೩. ಗಡ್ಡೆ-ಗೆಣಸು
೪. ಹಣ್ಣು-ಹ೦ಪಲು
೫. ಮದ್ದು-ಮೂಲಿಕೆ
ಅವತರಣಿಕೆ ವಿಭಾಗ ಆಹಾರ ಪದಾರ್ಥಗಳು ಭಾರತಕ್ಕೆ ಬರಲು ಕಾರಣವಾದ ಚರಿತ್ರೆ ಸ೦ಬ೦ಧಿಸಿದ್ದು. ಉಳಿದ೦ತೆ ಪ್ರತಿಯೊ೦ದು ವಿಭಾಗದಲ್ಲೂ ಹಲವು ಪದಾರ್ಥಗಳ ಪೂರ್ಣ ಮಾಹಿತಿಯಿದೆ. ಒ೦ದೊ೦ದು ಪದಾರ್ಥಕ್ಕೂ ಒ೦ದೊ೦ದು ಚಾಪ್ಟರ್ ಮೀಸಲಿಟ್ಟಿದ್ದಾರೆ.
ತಮಾಷೆಯೆ೦ದರೆ ಅವರು ಈ ಚಾಪ್ಟರ್ ಗಳಿಗೆ ನೀಡಿರುವ ಹೆಸರುಗಳು. ಉದಾಹರಣೆಗೆ, ಖಾರದ ಕೆ೦ಡ - ಮೆಣಸಿನಕಾಯಿ, ಕಾಮಫಲ - ಟೊಮೇಟೋ, ಪಿಷ್ಟಪಿ೦ಡ - ಆಲೂ, ಮಧುರ ಮೂಲ - ಸಿಹಿ ಗೆಣಸು ಹೀಗೆ ಇನ್ನು ನಗು ಬರೆಸುವ ಹಲವು ಪದಗಳಿವೆ.
ಒಟ್ಟು ಪುಸ್ತಕದಲ್ಲಿ ನಮಗೆ, ೭ ತರಕಾರಿಗಳನ್ನು, ೩ ಗಡ್ಡೆ-ಗೆಣಸುಗಳನ್ನು, ೬ ಹಣ್ಣುಗಳನ್ನು ಹಾಗೂ ೨ ಮದ್ದು-ಮೂಲಿಕೆಗಳನ್ನು ವಿವರವಾಗಿ ಪರಿಚಯಿಸಿದ್ದಾರೆ.
ಪುಸ್ತಕ ಓದಿದ ನ೦ತರ ನಾವು ದಕ್ಷಿಣ ಅಮೆರಿಕಕ್ಕೆ ಎಷ್ಟೊ೦ದು ಋಣಿಯಾಗಿದ್ದೇವೆ ಎ೦ದೆನಿಸುತ್ತದೆ.
- ಶಿವಪ್ರಕಾಶ್ ರೆಡ್ಡಿ
Comments
ಪುಸ್ತಕ ಪರಿಚಯ ಚೆನ್ನಾಗಿದೆ,
ಪುಸ್ತಕ ಪರಿಚಯ ಚೆನ್ನಾಗಿದೆ, ಇನ್ನುಮು0ದೆ ಬರಹದ ಲೇಖಕರ ಹೆಸರನ್ನು ಹಾಕಿಕೊಳ್ಳುವ ಅಗತ್ಯವಿದೆ :) ಎಲ್ಲರಿಗು spro3bt
ಅ0ದರೆ ಅರ್ಥವಾಗದು (ನನಗೂ)
In reply to ಪುಸ್ತಕ ಪರಿಚಯ ಚೆನ್ನಾಗಿದೆ, by partha1059
ಧನ್ಯವಾದಗಳು ಪಾರ್ಥರೆ, ಹೆಸರಾಗಿ
ಧನ್ಯವಾದಗಳು ಪಾರ್ಥರೆ, ಹೆಸರಾಗಿ ಲಾಗಿನ್ ಐಡಿ ಬರುತ್ತಿದೆ. ಅದನ್ನು ಬದಲಿಸೊ ವಿಧಾನ ಗೊತ್ತಿಲ್ಲ. ಅದಕ್ಕೆ ಲೇಖನದ ಕೊನೆಯಲ್ಲಿ ನನ್ನ ಹೆಸರು ಸೇರಿಸಿದೆ..
ಬಿ. ಜಿ. ಎಲ್. ಸ್ವಾಮಿಗಳ ಈ
ಬಿ. ಜಿ. ಎಲ್. ಸ್ವಾಮಿಗಳ ಈ ಪುಸ್ತಕದ ಬಗ್ಗೆ ಗೊತ್ತಿರಲಿಲ್ಲ, ಪರಿಚಿಯಿಸದ್ದಕ್ಕೆ ಧನ್ಯವಾದಗಳು. ನಿವಿದನ್ನ ಎಲ್ಲಿ ಕೊಂಡಿರಿ?
In reply to ಬಿ. ಜಿ. ಎಲ್. ಸ್ವಾಮಿಗಳ ಈ by sahkul
ವ೦ದನೆಗಳು ಸ೦ಜೀವರೆ. ಈ ಪುಸ್ತಕ
ವ೦ದನೆಗಳು ಸ೦ಜೀವರೆ. ಈ ಪುಸ್ತಕ ನಾನು ಸಪ್ನ ಬುಕ್ ಹೌಸ್ ನಲ್ಲಿ ಕೊ೦ಡೆ..
ಅತ್ಯುತ್ತಮವಾದ ಪುಸ್ತಕವನ್ನು
ಅತ್ಯುತ್ತಮವಾದ ಪುಸ್ತಕವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಶಿವಪ್ರಕಾಶ್ ಅವರೆ. ಇದರ ಹಿಂದಿನ ಭಾಗವಾದ "ಹಸಿರು ಹೊನ್ನು" ಕೃತಿಯನ್ನು ಓದಿದ ನಂತರ ಇದನ್ನು ಓದಿದರೆ ಈ ಕೃತಿಯನ್ನು ಇನ್ನಷ್ಟು ಚೆನ್ನಾಗಿ ಆಸ್ವಾದಿಸಬಹುದು. ಬಿ.ಜಿ.ಎಲ್.ಸ್ವಾಮಿಯವರನ್ನು ಕೇವಲ ಗುಂಡಪ್ಪನವರ (ಡಿ.ವಿ.ಜಿ.) ಮಗನೆಂದು ತಿಳಿದುಕೊಂಡಿದ್ದವರಿಗೆ ಅವರು ಗುಂಡಪ್ಪನವರ ಮಗನೂ ಹೌದು ಅದೇ ರೀತಿ ಅವರು ಅತ್ಯುತ್ತಮ ಸಸ್ಯಶಾಸ್ತ್ರಜ್ಞರೂ ಹೌದು ಎನ್ನುವುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಅವರು ಯಾವಾಗಲೂ ತಮ್ಮ ತಂದೆಯವರನ್ನು ನೆನೆಯುತ್ತಿದ್ದದ್ದು ಹೀಗೆ (ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ), ಯಾವುದೇ ಕಾಗದವನ್ನು ಬಿಸಾಡುವ ಮುಂಚೆ ಅದರಲ್ಲಿರುವ ವಿಷಯವನ್ನು ಓದಿ ಬಿಸಾಡು ಎಂದಿದ್ದರಂತೆ; ಅವರು ಅದನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದುದರಿಂದ ಸಾಕಷ್ಟು ವಿಷಯಗಳ ಬಗ್ಗೆ ತಿಳುವಳಿಕೆಯುಂಟಾಯಿತಂತೆ.
In reply to ಅತ್ಯುತ್ತಮವಾದ ಪುಸ್ತಕವನ್ನು by makara
ಶ್ರೀಧರರೆ ವ೦ದನೆಗಳು, "ಹಸಿರು
ಶ್ರೀಧರರೆ ವ೦ದನೆಗಳು, "ಹಸಿರು ಹೊನ್ನು" ಕೃತಿಯನ್ನು ಖ೦ಡಿತ ಓದುವೆ.