ದಿ ಕರಾಟೆ ಕಿಡ್ ಚಲನ ಚಿತ್ರ -2010 -ನೋಡಿದ್ದೀರಾ?

ದಿ ಕರಾಟೆ ಕಿಡ್ ಚಲನ ಚಿತ್ರ -2010 -ನೋಡಿದ್ದೀರಾ?

ಚಿತ್ರ

 

 
 
ದಿ ಕರಾಟೆ  ಕಿಡ್  ಚಲನ ಚಿತ್ರ -2010   -
ದಿ ಗ್ರೇಟ್  ಜಾಕಿ ಚಾನ್ ಮತ್ತು ಜಡೇನ್ ಸ್ಮಿತ್  ಜುಗಲ್ಬಂಧಿ ..!!
 
ಮಕ್ಕಳ ಚಿತ್ರಗಳು  ವಯಸ್ಕರನ್ನು -ಸೆಳೆಯಬಲ್ಲವೇ? 
ಮಕ್ಕಳ ಚಿತ್ರಗಳು ಮಕ್ಕಳಿಗಾಗಿ ಮಾತ್ರವೇ? 
ಆ ಚಿತ್ರಗಳನ್ನು ದೊಡ್ಡವರು ನೋಡಿ ಆನಂದಿಸಲು ಸಾಧ್ಯವೇ? 
ಎಂಬುದು  ನನ್ನ ತಲೆಯಲ್ಲಿ ಆಗಾಗ ಬರುತಿದ್ದ   ಒಂದು ಜಿಜ್ಞಾಸೆ ..!!
 
ನಾ ಅಂತೂ ಚಿಕ್ಕವನಾಗಿದ್ದಾಗ  ಮಕ್ಕಳ ಚಿತ್ರಗಳನ್ನು  ನೋಡಿದ್ದೇ  ವಯಸ್ಕನಾದ ಮೇಲೂ ನೋಡಿದೆ  ಈಗಲೂ  ನೋಡುತ್ತಿರುವೆ-ಮುಂದೆಯೂ ನೋಡುವೆ!! ಮಕ್ಕಳ ಅಭಿನಯದ  ಆ ಮಕ್ಕಳ ಚಿತ್ರಗಳನ್ನು  ಅದು ಮಕ್ಕಳಿಗಾಗಿ ಮಾತ್ರ ನಮಗಲ್ಲ  ಎಂದೂ  ಮೂಗು ಮುರಿಯುವರಿದ್ದರೆ  ಒಮ್ಮೆ ಕೆಳಗಿನ ಲಿಂಕ್ನಲ್ಲಿರುವ  ಮಕ್ಕಳ  ಚಿತ್ರಗಳತ್ತ  ಕಣ್ಣು ಹಾಯಿಸಿ  ಸಾಧ್ಯವಾದಾಗ್ಗ  ನಿಮ್ಮ ಮಕ್ಕಳೊಡನೆ  ನೋಡಿ -ಬೆರಗಾಗದೆ ಇದ್ರೆ ಆಗ ಹೇಳಿ...
 
ಕಪ್ಪು ಬಿಳುಪಿನಾ ಟೀವಿ ಯಲ್ಲಿ  ಊರ  ಗೌಡರ ಮನೆಯಲ್ಲಿ  ನಾ ನೋಡಿದ ಮೊದಲ ಮಕ್ಕಳ ಚಿತ್ರ -ಭಕ್ತ ಪ್ರಹ್ಲಾದ  (ಅಲ್ಲಿ ರಾಜ್ಕುಮಾರ್  ಪಾತ್ರದ  ನಂತರ ಗಮನಾರ್ಹ ಪಾತ್ರ ಅಪ್ಪು-ಪುನೀತ್  ಪ್ರಹ್ಲಾದನ ಪಾತ್ರ  ಅದಕಾಗಿ ಅದು ನಂಗೆ ಮಕ್ಕಳ ಚಿತ್ರ..!!) ಆಮೇಲೆ  ಎರಡು ನಕ್ಷತ್ರಗಳು ,ಬೆಟ್ಟದ ಹೂವು,ಚಿನ್ನಾರಿ ಮುತ್ತ (ಆಮೇಲೇ  ಮಕ್ಕಳ ಚಿತ್ರಗಳು ಎಂದು ಹೆಸರು ಹೊತ್ತ ಯಾವದೇ  ಚಿತ್ರಗಳು  ಗಮನ ಸೆಳದಿಲ್ಲ:()) ..
ಅದರಲ್ಲೋ  ಬೆಟ್ಟದ ಹೂವು , ಚಿನ್ನಾರಿ ಮುತ್ತ  ನನ್ನನು ಬಹು ಸೆಳೆದ  ಚಿತ್ರಗಳು..ನಿಜವಾದ ಅರ್ಥದಲ್ಲಿ  ಮಕ್ಕಳ ಚಿತ್ರಗಳು,ಈಗೀಗ ಮಕ್ಕಳ ಚಿತ್ರಗಳು ಎಂದು ಹೆಸರು ಹೊತ್ತು ಬರುವ  ಚಿತ್ರಗಳು ಕೇವಲ ಪ್ರಶಸ್ತಿ  ಪಡೆಯಲು  ಸಬ್ಸಿಡಿ  ಪಡೆಯಲು ಎಂಬುದು ನನ್ನ  ವಯುಕ್ತಿಕ ಅಭಿಪ್ರಾಯ ..
   ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿ  ಇಟ್ಟುಕೊಂಡು  ಬರುವ ಚಲನ ಚಿತ್ರಗಳು ವಿಶ್ವದ  ಚಿತ್ರ ಜಗತ್ತಿನಲ್ಲಿಯೇ ಕಡಿಮೆಯೇ ,ಪರವಾಗಿಲ್ಲ ಅನ್ನುವನ್ಥಾದ್ದೆನಾರ ಇದ್ರೆ ಅದು ಹಾಲಿವುಡ್ದಲ್ಲಿ  ಮಾತ್ರ  ಅನ್ಸುತ್ತೆ..:(( ಭಾರತ ದೇಶದಲ್ಲೂ  ಹಲವು ಭಾಷೆಗಳಲ್ಲಿ ಮಕ್ಕಳ ಚಿತ್ರಗಳು  ತಯಾರಾಗುವವು  ,  ಹಲವು ಚಿತ್ರಗಳು  ಉತ್ತಮವಾಗಿದ್ದು  ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿವೆ ..
 
ಚಲನಚಿತ್ರಗಳ ಬಗ್ಗೆ  ವಿಶೇಷ  ಅಕ್ಕರೆ ಆಸ್ಥೆ  ಇರುವ ನನಗೆ ಓದಿನ ನಂತರ ಅತಿ ಹೆಚ್ಚು  ಮನರಂಜನೆ  ನೀಡುವ  ಮಾಧ್ಯಮ ಸಿನೆಮ ವೀಕ್ಷಣೆ .. ನೆಟ್ನಲ್ಲಿ  ಉತ್ತಮ ಅತ್ತ್ಯುತ್ತಮ  ಅಸಾಧಾರಣ  ಅಮೋಘ ಎಂದು ಹಣೆ ಪಟ್ಟಿ ಹೊತ್ತ  ಚಲನ ಚಿತ್ರಗಳ ಬಗ್ಗೆ ಮಾಹಿತಿ ಹುಡುಕಿ  ಆ ಬಗ್ಗೆ ಮತ್ತಸ್ತು  ಜಾಲತಾಣಗಳಲ್ಲಿ  ಓದಿ  ಆಗ ಇದನ್ನು ನೋಡಬೇಕು  ಎಂದು  ಆ ಸಿನೆಮಾಗಳನ್ನು  ಡೌನ್ಲೋಡ್  ಮಾಡಿಯೋ (ಕೆಲವು ಸಿನೆಮಾಗಳು ನೆಟ್ನಲ್ಲಿ ಮಾತ್ರ ಲಬ್ಯ -ಸ್ಟೋರ್ನಲ್ಲಿ  ಸಿಗಲಿಕ್ಕಿಲ್ಲ) ಡೀವಿಡಿ  ಕೊಂಡೋ ನೋಡುವೆ...
ಸಾಮಾನ್ಯವಾಗಿ  ದೆವ್ವ ಭೂತ -ಪಿಶಾಚಿ -ಅದ್ಬುತ  ಹೊಡೆದಾಟ -ರೋಚಕ  ಸಾಹಸ ದೃಶ್ಯಗಳ -ಪ್ರಾಣಿ ಪಕ್ಷಿಗಳ  ಬಗೆಗಿನ  ಚಿತ್ರಗಳೇ  ನನ್ ಪ್ರಥಮ ಆದ್ಯತ ಪಟ್ಟಿಯಲಿ ಸ್ಥಾನ ಪಡೆವವೂ .!!
ಆದರೂ ಹಲವೊಮ್ಮೆ ಆಕಸ್ಮಿಕವಾಗಿ (ಒಂದು ಚಿತ್ರದ ಬಗ್ಗೆ ಮಾಹಿತಿ ಹುಡುಕುವಾಗ  ಹಲವು ಅತ್ಯುತ್ತಮ ಚಿತ್ರಗಳ ಮಾಹಿತಿ ಅಚಾನಕ್ಕಾಗಿ ದೊರ್ತದ್ದಿದೆ) ಕೆಲವು ನನ್ನ ಪಟ್ಟಿಯ ಹೊರತಾದ  ವಿಧದ ಉತ್ತಮ ಚಿತ್ರಗಳು ಸಿಕ್ಕಿವೆ  ಅವುಗಳಲ್ಲಿ ಕೆಲವು  ಚಿತ್ರಗಳನ್ನು ಅವುಗಳ ಟ್ರೇಲರ್  ನೋಡಿ, ಅವುಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿಯೂ  ನೋಡದೆ ಇದ್ದು ಆಮೇಲೆ ಈ ತರಹ ಯಾವತ್ತೋ ನೆಟ್ನಲ್ಲಿ  ನೋಡಿ  ಆ ಸಿನೆಮ ನೋಡಿದ್ದಿದೆ.!! 
 
ಈ ಮೇಲಿನ ಪೀಠಿಕೆಗೆ ಕಾರಣ-ಈಗ ನಾ ಬರೆಯಹೊರಟ  ಚಿತ್ರ  ದಿ ಕರಾಟೆ  ಕಿಡ್ -2011 ಸಿನೆಮಾವನ್ನು ನಾ ಅತಿ ಮೆಚ್ಚುವ  ನಟ ಜಾಕಿ ಚಾನ್  ಆ ಚಿತ್ರದಲ್ಲಿರುವನು  ಎಂದು ತಿಳಿದು ಆ ಚಿತ್ರದ ಬಗ್ಗೆ   ಆಸ್ಥೆ ತಾಳದೆ  ಸುಮ್ಮನಿದ್ದೆ, ಆದ್ರೆ ಮೊನ್ನೆ ಮೊನ್ನೆ  ನೆಟ್ನಲ್ಲಿ  ಉತಮ ಮಕ್ಕಳ  ಚಿತ್ರಗಳಿಗಾಗಿ  ತಡಕಾಡುವಾಗ  ಸಿಕ್ಕ ಪಟ್ಟಿಯಲ್ಲಿ  ಇದ್ದುದು ಇದರ ಹಿಂದಿನ  (ಮೂಲ ಚಿತ್ರ) ಸಿನೆಮ ಹಾಗೂ ಇನ್ನು ಹತ್ತು ಹಲವು ಉತ್ತಮ ಚಿತ್ರಗಳು ,ಅವುಗಳಲ್ಲಿ ಹಲವನ್ನು ನಾ ಆಗಲೇ ನೋಡಿರುವೆ.(ಹ್ಯೂಗೋ -ಸ್ಟೂವರ್ಟ್  ಲಿಟಲ್,ರಿಚೀ ರಿಚ್ ಇತ್ಯಾದಿ)
 
ಅಮೆರಿಕಾದ  ನಗರ ಡೆಟ್ರಾಯಿಟ್ ನಲ್ಲಿ ವಾಸವಿರುವ  ನಮ್ ಕಥಾ ನಾಯಕ (ಈ ಚಿತ್ರದ ಮಗುವೆ  ಕಥಾ ನಾಯಕ..!!) ಅವರ ತಾಯಿ ಉದ್ಯೋಗವನ್ನು ಚೀನಾದ  ಪಟ್ಟಣವೊಂದಕ್ಕೆ  ಬದಲಾಯಿಸಿದ ಕಾರಣವಾಗಿ  ಅತಿ ಅಪರಿಚಿತ  ದೇಶ/ನಗರಕ್ಕೆ  ಒತ್ತಾಯಪೂರ್ವಕವಾಗಿ  ಹೋಗಬೇಕಾಗುತ್ತೆ..
ಹೊಸ ದೇಶ  ವಿಚಿತ್ರ ಭಾಷೆ ,ಜನರ ಹಾವ ಭಾವ  ನೋಟ  ಇರಿಸು ಮುರುಸು  ಉಂಟುಮಾಡುತ್ತೆ ..
 
ಮಾಮೂಲಿ ಚಿಕ್ಕ ಮಕ್ಕಳಂತೆಯೇ  ಇರುವ ಸಹಜ  ಗುಣಗಳಲ್ಲಿ ಒಂದಾದ ಬಟ್ಟೆಗಳನ್ನು ಎಲ್ಲೆಂದರಲ್ಲಿ  ಬೀಸಾಕುವ  ಒಂಥರಾ ಡೋಂಟ್ ಕೇರ್  ಮನೋಭಾವದ ಈ ಹುಡುಗನ  ಬದಲಾವಣೆಗೆ  ಅವನ ಕರಾಟೆ ಗುರು  ಜಾಕಿ ಚಾನ್  ಈ ಬಟ್ಟೆ  ಬೀಸಾಕುವ ಅವನ  ಮನೋಭಾವವನ್ನೇ  ಅವನ ಕಲಿಕೆಗೆ(ಕರಾಟೆ)ಸಾಧನ -ವಿಧಾನ ಮಾಡಿಕೊಳ್ಳುತ್ತಾನೆ...!! ಅದು ನೋಡಲು ಭಲೇ ಮಜವಾಗಿದೆ ..
 
ಮೆಯ್ ಯಿಂಗ್ ಎನ್ನುವ  ಚೀನೀ ಸಹಪಾಟಿ ಯ ಪ್ರೇಮಪಾಶದಲ್ಲಿ(ವಿದೇಶದಲಿ  ಎಳೆಯರ ಪ್ರೇಮ ಪುರಾಣ ಮಾಮೂಲು..!!)ಬೀಳುವ ಈ ಹುಡುಗನಿಗೆ ಆ ಹುಡುಗಿಯನ್ನು  ಇಷ್ಟ  ಪಡುವ ಚೀನೀ ಹುಡುಗರಿಂದ  ಎಚ್ಚರಿಕೆ  ನಂತರ  ಎಗ್ಗ ಮಗ್ಗ  ಹೊಡೆತ ,ಅದು ಶಾಲೆಗೇ ಸೇರಿದ ಹೊಸತರಲ್ಲೇ ..!! 
ಆ ಸನ್ನಿವೇಶಗಳಲ್ಲಿ  ಆ ಹುಡುಗರಿಗೆ  ಜಾಡೇನ್  ಮೇಲಿನ ಸಿಟ್ಟು -ಈರ್ಷ್ಯೆ -ಹೊಟ್ಟೆಕಿಚ್ಚಿನತನವನ್ನು ಗಮನಿಸಿದ  ನನಗೆ ಅನ್ನಿಸಿದ್ದು -ಈ ತರಹದ ಪ್ರಸಂಗಗಳಲ್ಲಿ  ಇಡೀ ಜಗತ್ತಿನಾದ್ದ್ಯಾಂತ  ಬಹುತೇಕ  ಇದೆ ಮನೋಭಾವ  ಬರುವುದೇನೋ.!!
 
ತಾ ಇಷ್ಟ ಪಟ್ಟ  ತನ್ನನ್ನು ಇಷ್ಟ ಪಡುವ  ಹುಡುಗಿ-ಅವಳನ್ನು ಇಷ್ಟ ಪಡುವ  ಚೀನೀ ಹುಡುಗರು  ಅವರು ತನ್ನ ಬಗ್ಗೆ ಪಡುತ್ತಿರುವ  ಅಸೂಯೆ ಈರ್ಷ್ಯೆ  ಪ್ರತಿಕಾರದ ಭಾವನೆಗಳ ಅರಿವಿದ್ದೂ  ತಾ ಇಷ್ಟ ಪಡುವ  ಆ ಹುಡುಗಿಯನ್ನ  ಗೆಲ್ಲುವ ಬಗೆಗೆ  ಚಿಂತಿಸುತ್ತಾ  ಮತ್ತು ದಿನಂಪ್ರತಿ  ಈ ಚೀನೀ ಹುಡುಗರನ್ನ  ಹೆಂಗಪ್ಪ  ಎದುರಿಸುವುದು  ಎಂದು ಚಿಂತಿಸಿದವನಿಗೆ  ಹೊಳೆಯುವುದು-ತಾ ಸಹಾ ಕರಾಟೆ ಕಲಿತರೆ ಅವರೆಲ್ಲರನ್ನ ಎದುರಿಸಬಹುದು  ಎಂದು ಒಮ್ಮೆ  ಕರಾಟೆ ಕಲಿಸುವ ಶಾಲೆಗಳಿಗೆ ಎಡತಾಕಿದರೂ  ಕಲಿಸಲು ಯಾರೂ ಒಪ್ಪದೇ ಹೀಯಾಳಿಸಿ  ಕಳಿಸಿದಾಗ ಹುಡುಗನ ಮುಖದಲ್ಲಿ ಬೇಜಾರು ಭಾವ ಕನಸು ನನ್ಸಾಗದೆಂಬ  ಚಿಂತೆ..
 
ಹೀಗೆಯೇ ಅದೊಮ್ಮೆ  ತನ್ನನ್ನು ಹೊಡೆದಿದ್ದ  ಹುಡುಗರು  ಬೀದಿಯಲ್ಲಿ ಹೋಗುವಾಗ  ಅವರ ಮೇಲೆ  ಆಯಿಲ್  ಚೆಲ್ಲಿ  ಚೀನಾದ ಬೀದಿಗಳಲ್ಲಿ  ತಪ್ಪಿಸಿಕೊಳ್ಳಲು  ಓಡುವನು ,ಈ ಸಂದರ್ಭದ  ಓಟ  ಅದರ ಚಿತ್ರೀಕರಣ  ಚಕ ಚಕ್  ಎಂದು ಸಾಗುವುದು.ಕೊನೆಗೆ ಕೊನೆಯಾದ ಬೀದಿಯಲ್ಲಿ  ಒಂಟಿಯಾಗಿ 5-6 ಹುಡುಗರ ಮಧ್ಯೆ ಸಿಕ್ಕುಇವನನ್ನು ಫುಟ್ಬಾಲ್  ಮಾಡಿಕೊಂಡು  ಬೇಜಾನ್ ಆಟ ಆಡುವರು..!! ಹೆಚ್ಚು  ಕಡಿಮೆ ಜೀವ  ಹೋಗುವಸ್ಟು  ಒದೆ  ತಿಂದು  ಕುಪ್ಪೆಯಾಗಿ ನೆಲದಲ್ಲಿ ಬಿದ್ದ  ಜಾಡೇನ್  ರಕ್ಷಣೆಗೆ  ಜಾಕಿ ಚಾನ್ ಬಂದು  ಆ ಹುಡುಗರ ಜೊತೆ ಹೊಡೆದಾಡಿ (ಈ ಸನ್ನಿವೇಶದಲ್ಲಿ  ನೋಡುವವರಿಗೆ ಇವು ಹುಡುಗರ? ಅನ್ನಿಸದೆ ಇರದು-ಕಾರಣ  ಜಾಕಿ ಚಾನ್ ಅಂತ ಜಾಕಿ ಚಾನ್ಗೆ  ಅವರನ್ನೆಲ್ಲ ಮಣಿಸಲು  ಹರ ಸಾಹಸ ಮಾಡಬೇಕಾಗಿ ಬರುವುದು..!!) ಈ ಹುಡುಗನನ್ನು  ತನ ಮನೆಗೆ ಕರೆದೊಯ್ದು  ಆದ ಗಾಯಗಳಿಗೆ ಉಪಚರಿಸುವನು... ಧುತ್ತನೆ ಪ್ರತ್ಯಕ್ಷ ಆಗಿ  ಕರಾಟೆ ಹೊಡೆತ  ಕೊಟ್ಟು ಕಾಪಾಡಿದ  ಇವರೇ (ಜಾಕಿ ಚಾನ್) ತನಗೆ ಗುರು ಎಂದು ಭಾವಿಸಿ  ತನಗೆ ಕರಾಟೆ ಕಲಿಸುವಂತೆ ಕೇಳಲು  ಜಾಕಿ ಚಾನ್ ನಿರಾಕರಿಸುವನು..ಆಮೇಲೂ  ಛಲ ಬಿಡದ ತ್ರಿವಿಕ್ರಮನಂತೆ  ಹಿಂದೆ ಮುಂದೆ  ಓಡಾಡಿ  ಕಾಡಿ  ಬೇಡಿ ಪೀಡಿಸಿದ ಹುಡುಗನ ಹಠಮಾರಿತನಕ್ಕೆ   ಮೆಚ್ಚಿ ಕರಾಟೆ ಕಲಿಸಲು ಒಪ್ಪುವನು..
 
ಮಾರನೆ ದಿನದಿಂದಲೇ  ಅಭ್ಯಾಸ ಶುರು-ಜಾಕಿ ಚಾನ್ ಮನೆಯಲ್ಲಿ  ಮರ ಒಂದಕ್ಕೆ  ಗೂಟ  ಹೊಡೆದು ತಾ ಹಾಕಿಕೊಂಡ  ಜಾಕೆಟ್ ಬಿಚ್ಚುವುದು  ಗೂಟಕ್ಕೆ ನೇತು ಹಾಕುವುದು-ತೆಗೆಯುವುದು ಹಾಕಿಕೊಳ್ಳುವುದು  ಮತ್ತೆ ಕಾಲ ಬುಡದಲ್ಲಿ  ಬಿಸಾಕುವುದು ಇದೇ  ಅಭ್ಯಾಸ ವಾರಗಟ್ಟಲೇ  ಮಾಡಿ  ಮುಂದಿನ ಅಭ್ಯಾಸ  ಶುರು ಆಗದೆ ಇದ್ದಾಗ  ರೇಗಿ ಹೋದ ಬಾಲಕ ಈ ಅಭ್ಯಾಸವನ್ನು ಯಾಂತ್ರೀಕ್ರುತವಾಗಿ  ಮಾಡುವುದನ್ನು  ನೋಡುವ ಜಾಕಿ ಚಾನ್  ಬಳಿ  ಬಂದಾಗ  ಜಾಡೇನ್ -ಇದೆಂಥ ಅಭ್ಯಾಸ? ಜಾಕೆಟ್  ಬಿಚ್ಚುವುದು  ಕಾಲ ಬುಡದಲ್ಲಿ ಬಿಸಾಕುವುದು  ಎತ್ತಿಕೊಳ್ಳುವುದು  ಗೂಟಕ್ಕೆ  ನೇತು ಹಾಕುವುದು  ಮತ್ತೆ ತೆಗೆಯ್ವುದು...ಎಂದಾಗ  ಜಾಕಿ ಚಾನ್  ನಸು ನಕ್ಕು  ಅದೇ ಅಭ್ಯಾಸ ಎನ್ನುವನು..
ಜಾಡೇನ್ -ಇದೊಂದು ಅಭ್ಯಾಸವೇ? ಅಸಲು ನಿಮಗೆ ಕರಾಟೆ ಗೊತ್ತ? ಅಥವಾ ಬಿಲ್ಡಪ್ಪ ? ಎಂದಾಗ  ಆ ಅಭ್ಯಾಸದ ಹಿಂದಿನ  ಹಕೀಕತ್ತು  ಜರೂರತ್ತು  ಖುದ್ದು ಹೊಡೆದಾಟದ ಮೂಲಕ ತೋರಿಸುವನು ಆಗ ಜಾಡೇನ್ ಗೆ  ಅರಿವಾಗುವುದು .ತನ್ನ ದುರಭ್ಯಾಸ- ತಾ ಹಾಕಿದ  ಜಾಕೆಟ್  ಬಿಚ್ಚಿ ಗೂಟಕ್ಕೆ ನೇತು ಹಾಕದೆ ಮನೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುವುದು ..!! ಆ ದುರಭ್ಯಾಸದ ಮೂಲಕವೇ  ಈ ಕರಾಟೆ ಅಭ್ಯಾಸ...!!
 
ಏನನ್ನಾದರೂ ಸಾಧಿಸಲು  ಶಿಸ್ತು   -ಪರಿಶ್ರಮ-ಅರ್ಪಣಾ ಮನೋಭಾವ-ಗುರಿ-ಹಠ-ಏಕಾಗ್ರತೆ-ತಾಳ್ಮೆ  ಬೇಕು ಎನ್ನುವ ಅರಿವು  ಜಾಡೇನ್ ಗೆ  ಈ ಅಭ್ಯಾಸದ  ಮೂಲಕ ತಿಳಿ ಹೇಳುವ  ಜಾಕಿ ಚಾನ್  ವಿಧಾನ  ಆ ಸನ್ನಿವೇಶ  ಸಖತ್ ....
 
ಆಮೇಲೆ ಆರಂಭಿಕ ಹಂತದಿಂದ  ಪೂರ್ಣ ಹಂತದವರೆಗಿನ  ಶಿಕ್ಷಣವನ್ನು  ಕಟ್ಟುನಿಟ್ಟಾಗಿ  ಕೊಟ್ಟು  ಹುಡುಗನನ್ನು  ವರ್ಷಾಂತ್ಯದಲ್ಲಿ  ನಡೆಯುವ  ಕರಾಟೆ ಚಾಮ್ಪಿಯನ್ಸ್ಹಿಪ್ಗೆ  ರೆಡಿ ಮಾಡುವನು... ಈ ಮಧ್ಯೆ  ವರ್ಣಬೇಧ ನೀತಿ  ಮೇಲು ಕೀಳು  ಭಾವ ಈ ಮುಗ್ಧ ಮಕ್ಕಳನ್ನು (ಜಾಡೇನ್  ಮತ್ತು ಮೆಯ್ ಲಿಂಗ್ ) ಪೀಡಿಸದೇ  ಬಿಡೋಲ್ಲ..:(( ಮೆಯ್ ಅಪ್ಪ  ಶ್ರೀಮಂತ  ಉಧ್ಯಮಿ ತನ್ನ ಮಗಳಿಗೆ  ಜಾಡೇನ್ ನಿಂದ  ದೂರ ಇರಲು ಸೂಚಿಸುವನು... ಆ ಕ್ಷಣದಲ್ಲಿ ಮತ್ತು  ಮತ್ತೊಮ್ಮೆ ಜಾಕಿ ಚಾನ್ ಸಹಾಯದಿಂದ  ಮೆಯ್ ಅಪ್ಪನ  ಮನ ಗೆದ್ದು  ಮರಳಿ ಮೆಯ್  ಸ್ನೇಹ  ಸಂಪಾದಿಸುವ  ಸಮಯದ  ಸನ್ನಿವೇಶಗಳು  ಭಾವೋತ್ಕರ್ಷ  ಹರ್ಷ ಉಂಟು ಮಾಡಿ  ಮನ ದುಂಬಿ ಬರದಿದ್ದರೆ  ಆಗ ಹೇಳಿ ...
ಕರಾಟೆ ಚಾಂಪಿಯನ್ಶಿಪ್ ನಲ್ಲಿ ಇವನು ಸೆಣ ಸಬೇಕಾಗಿರುವುದು  ಹಿಂದೊಮ್ಮೆ  ತನಗೆ ಬೇಜಾನ್  ಪೇಮೆಂಟ್  ದಯಪಾಲಿಸಿದವರ ಜೊತೆಯೇ ...!!
ಸಿನೆಮಾದ ಅಂತ್ಯದ ಹೊಡೆದಾಟ -ಅಲ್ಲಿ ಭಯಂಕರ ಪೆಟ್ಟು  ತಿಂದೂ (ಚೀನೀ ಹುಡುಗ  ಅವನ ಗುರುವಿನ ಸಲಹೆಯಂತೆ  ಜಾಡೇನ್  ಮೊಣಕಾಲಿಗೆ  ಒದ್ದು ಅಲ್ಲಿ ಪ್ರಾಕ್ಚರ್ ಆಗಿ ಆಸ್ಪತ್ರೆವಾಸಿಯಾಗಿ ಮತ್ತೆ ಕರಾಟೆ ಅಂಗಳಕ್ಕೆ ಮರಳುವನು)ಒಂಟಿ ಗಾಲಲ್ಲೇ ಸೆಣಸಾಡುವನು ... ಕರಾಟೆ ಪಂಧ್ಯ  ಗೆಲ್ಲುವನೆ? ಅವನ ಸಹಪಾಟಿ  ಅವನಿಗೆ ಸಿಗುವಳೇ?  ಉತ್ತರಗಳಿಗಾಗಿ  ಸಿನೆಮಾ ನೋಡಿ....!!
 
ಇಡೀ ಚಿತ್ರವನ್ನು ಆವರಿಸಿರುವ  ಪಾತ್ರಗಳಲ್ಲಿ  ಜಾಕಿ ಚಾನ್(ಗುರು -ನಲ್ಲಿ  ರಿಪೇರಿ ಮಾಡುವವ ) ಜಾಡೇನ್  ಸ್ಮಿತ್  ಮತ್ತು  ಮೆಯ್  ಲಿಂಗ್  ಮಿಂಚುವರು ..
ಈ ಚಿತ್ರ ಅದಾಗಲೇ 1984ರಲ್ಲಿ  ಬಂದು  ಹಿಟ್ ಆದ  ಇದೇ  ಹೆಸರಿನ ಚಿತ್ರದ  ರಿಮೇಕ್... ರಿಮೇಕ್ ಚಿತ್ರಗಳನ್ನು  ದ್ವೇಷಿಸುವ  ನನಗೆ (ಕೆಲ ರಿಮೇಕ್ ಚಿತ್ರಗಳು ಅತ್ಯಂತ ಕೆಟ್ಟದಾಗಿದ್ದು ಯಾಕಾಗ್ ತೆಗೆದರೋ ಅನ್ನಿಸಿದೆ) ಇದರ ಮೂಲ ಚಿತ್ರ ಮತ್ತು ಇದನ್ನು  ನೋಡಿದಾಗ  ಮೂಲ ಚಿತ್ರಕ್ಕೆ  ನ್ಯಾಯ  ಒದಗಿಸಿರುವರು  ಅನ್ನಿಸಿತು.
ಅಂದ್  ಹಾಗೆ ಈ ಜಾಡೇನ್  ಸ್ಮಿತ್  ಹಾಲಿವುಡ್ಡಿನ ಹೆಸರಾಂತ ನಟ  ವಿಲ್ ಸ್ಮಿತ್  ಮಗ,ಹಿಂದೆಯೇ ತನ್ನ ತಂದೆ ಜೊತೆ ಪರ್ಸ್ಯೂಟ್  ಆಫ್ ಹ್ಯಾಪ್ಪಿನೆಸ್ -2006 ಚಿತ್ರದಲ್ಲಿ ಗಮನಾರ್ಹ  ಪಾತ್ರದಲ್ಲಿ ತಂದೆಗೆ  ಸರಿಸಮನಾಗಿ ನಟಿಸಿ  ಹೆಸರುವಾಸಿ ಆದವನು...
 
ನಟನೆ ಎನ್ನುವುದು  ಸಹಜವಾಗಿ ರಕ್ತದಲ್ಲೇ ವಂಶದಲ್ಲೇ  ಬರುವುದು ಎಂಬುದು ಕೇವಲ ಭಾರತ   ಮಾತ್ರ ಅಲ್ಲದೆ  ಜಗತ್ತಿನ ಹಲವು ಚಿತ್ರರಂಗಗಲ್ಲಿ  ಸಾಬೀತಾಗಿದೆ. 
ಚಿತ್ರದಲ್ಲಿ  ಭಾವೊಲ್ಲಾಸಗಳ ಭುಗ್ಗೆ  ಎಬ್ಬಿಸಿ  ಕೆಲವೊಮ್ಮೆ ಮನ  ಕ್ಚೋಭೆಗೊಳಿಸಿ  ಇನ್ನೊಮ್ಮೆ  ನಕ್ಕು ನಲಿಸಿ  ಕೆಲವೊಮ್ಮೆ  ತುದಿಗಾಲ ಮೇಲೆ  ನಿಂತು  ಸೀಟಲ್ಲಿ  ಕೂತು ನೋಡುವ  ಹಾಗೆ ಮಾಡುವ ಕೆಲ ಸನ್ನಿವೇಶಗಳು:
 
1.ಚಿತ್ರದ ಶುರುವಿನಲ್ಲಿ ಬಾಲಕನ ತಾಯಿ ಕೆಲಸ ನಿಮಿತ್ತವಾಗಿ  ಚೀನಾಕ್ಕೆ ಹೋಗಬೇಕು ಎಂದು ಹೇಳಿ  ಮಗನನ್ನು ಕಾರಲ್ಲಿ ಕೂರಿಸುವಾಗ  ಆವನ ಸ್ನೇಹಿತ ಬಂದು  ಗಿಟಾರ್ ಒಂದನ್ನ ನೆನಪಿನ ಕಾಣಿಕೆಯಾಗಿ ಕೊಟ್ಟು ಕಣ್ಣೀರು ಹಾಕುವುದು.
 
2. ಜಾಡೇನ್  ಹಠ -ಕೇರ್ಲೆಸ್ ಮನೋಭಾವ  ತನ್ನ ಉದ್ಯೋಗ  ಒತ್ತಡ  ನಿಭಾಯಿಸುವಲ್ಲಿ  ಅವನ ತಾಯಿ  ತೋರುವ ಸಂಯಮ -ದುಖ ಖುಷಿಯ ಸನ್ನಿವೇಶಗಳು  ಕಣ್ಣೀರು ತರಿಸದೇ ಇರವು. 
 
3.ಹೊಸ ದೇಶ ವಿಚಿತ್ರ ಭಾಷೆ -ನೋಟ ದ ಮಧ್ಯೆ  ಕಳೆದುಹೋದಂತೆ  ಏಕಾನ್ಗಿಯಾದಂತೆ  ಅನ್ನಿಸಿದವನಿಗೆ  ಅಮೆರಿಕಾದ ಒಬ್ಬ  ಹುಡುಗ ಶಾಲೆಯಲ್ಲಿ ಸಿಕ್ಕುವುದು  ಮತ್ತು ಪ್ರಥಮ ಬಾರಿಗೆ  ಮೆಯ್ ಲಿಂಗ ಜೊತೆಗಿನ ಭೇಟಿ -ಹೃದಯ ಜಾರುವುದು.!!
 
4.ಮೆಯ್ ಲಿಂಗ್  ಜಾಡೇನ್  ನಡುವಿನ ಸಂಭಾಷಣೆ  ಸನ್ನಿವೇಶಗಳು-ಮೆಯ್ ಲಿಂಗ್  ಪಾತ್ರಧಾರಿ ನಟಿಯ  ನಟನೆಗೆ ಮುಗ್ಧ  ಮುಖಕ್ಕೆ  ಮಾರು ಹೋಗದೆ ಇರಲು ಸಾಧ್ಯವೇ ??
 
5. ಜಾಕಿ ಚಾನ್ ಹುಡುಗನನ್ನು  ಉಪಚರಿಸುವುದು-ಅವನ ಎಡೆಬಿಡದ ಪ್ರಶ್ನಾವಳಿಗೆ ಸಮಾಧಾನ ಹೇಳುವುದು ,ಹಿಂದೊಮ್ಮೆ ಕಾರ್ ಅಪಘಾತದಲ್ಲಿ  ಮಗಳು ಹೆಂಡತಿ ಕಳೆದುಕೊಂಡ  ಬಗ್ಗೆ ಹೇಳುವಾಗಿನ  ಸನ್ನಿವೇಶ  ಮತ್ತು ಕರಾಟೆ  ತರಭೇತಿ  ಕೊಡುವಾಗಿನ  ಕಾಟಿಣ್ಯತೆ -ಗಂಭೀರತೆ  ಮತ್ತು ಮುಕ್ತ ಸಮಯದಲಿ  ಹುಡುಗನ ಜೊತೆ ನಗು  ಆಟ ಪಾಠ ದ  ಅಭಿನಯ  ಸೂಪರ್ಬ್ 
 
6.ಸಿನೆಮ ಅಂತ್ಯದ  ಮಾಡು ಇಲ್ಲವೇ  ಮಡಿ ಹೋರಾಟ -ಆ  ಜಾಕಿ ಚಾನ್  ಮೊಗದಲ್ಲಿನ ಆತಂಕ -ಕೆಲವೊಮ್ಮೆ  ಕಾಟಿಣ್ಯತೆ ಸಖತ್ ...
ಇದಲ್ಲದೆ ಇನ್ನು ಹತ್ತು ಹಲವು  ಸನ್ನಿವೇಶಗಳು ಚಿತ್ರದಲ್ಲಿದ್ದು  ನೋಡುವಾಗ  ಮನ ತಟ್ಟುವವು ..
 
ಇದಕ್ಕೂ ಮುಂಚೆ ನಾ ನೋಡಿದ  ಮಕ್ಕಳ  ಸಿನೆಮ-ಹ್ಯೂಗೋ.
ಅದ್ಭುತ  ಛಾಯಾಗ್ರಹಣ-ನಟನೆ-ನಿರ್ಮಾಣ -ಮಕ್ಕಳ ಸಿನೆಮಾವನ್ನು ಸೀರಿಯಸ್ಸಾಗಿ ಮಾಡುವ  ಹಾಲಿವುಡ್ಡಿನ ಜನರ  ಮನೋಭಾವಕ್ಕೆ  ಸಾಕ್ಚಿ...
ಅದೂ ಸೂಪರ್ ಸಿನೆಮ ಆ ಬಗ್ಗೆ  ಮುಂದೊಮ್ಮೆ ಬರೆವೆ ..
 
ಬಹುಪಾಲು  ಕಾಮೆಡಿ  ಬೆರೆತ ಯಾಕ್ಚನ್  ಚಿತ್ರ ಮಾಡುತ್ತಾ  ಜಗತ್ತಿನ  ಹಿರಿ ಕಿರಿಯರ  ಮನ ಗೆದ್ದ  ಜಾಕಿ ಚಾನ್ಗೆ  ಈ ಪಾತ್ರ  ಭಲೇ ಸೂಟ್ ಆಗಿದ್ದು -ಮೊದಲ ಬಾರಿ  ವಿಶೇಷ ಪಾತ್ರದಲ್ಲಿ  ಅದ್ಬುತವಾಗಿ ನಟಿಸಿರುವರು... ಈ ಚಿತ್ರದಲ್ಲಿನ  ಜಾಕಿ ಚಾನ್ ಹಿಂದಿನ ಚಿತ್ರಗಳ  ಜಾಕಿ ಚಾನ್ಗಿಂತ ಭಿನ್ನ ..
 
ಈ ಚಿತ್ರಕ್ಕಾಗಿ  ಜಾಡೇನ್  ಸ್ಮಿತ್  ಮತ್ತು ಜಾಕಿ ಚಾನ್ ವಿಪರೀತ  ಪ್ರಯಾಸ ಪಟ್ಟಿರುವುದು-ಅಭ್ಯಾಸ ನಡೆಸಿರುವುದು  ತೆರೆ ಮೇಲೆ ಕಾಣಿಸುವುದು -ಅದರಲ್ಲೂ ಜಾಡೇನ್  ಅಭ್ಯಾಸ (ಕೆಲ ಕಠಿಣ ಸನ್ನಿವೇಶಗಳಲ್ಲಿ) ಎದ್ದು ಕಾಣುವುದು ..ಅಮೇರಿಕ ನಟ ಮತ್ತು  ಚೈನೀ ನಟನ  ಜುಗಲ್ಬಂಧಿ  ಸೂಪರ್ರೋ ಸೂಪರ್.. 
 
ಇದರ ಮುಂದಿನ ಭಾಗ  ಕರಾಟೆ ಕಿಡ್ -2013ರಲ್ಲಿ ತೆರೆಗೆ ಬರುವ  ಸಂಭವ ಇದೆ.ಬಹುಪಾಲು ಇದೆ ನಟ ವರ್ಗ ಇರುವ ಸಾಧ್ಯತೆ ಇದೆ..
 
 
 
 
 
 
 
ಐ  ಎಂ ಡೀ ಬಿ  ಲಿಂಕ್: 
 
 
 
ವಿಡಿಯೋ  ಲಿಂಕ್:http://www.imdb.com/video/imdb/vi1258882073/
 
ವಿಕಿಪೀಡಿಯ ಲಿಂಕ್:http://en.wikipedia.org/wiki/Karate_Kid
 
ಇನ್ನಿತರ ಅದ್ಭುತ  ಮಕ್ಕಳ ಚಿತ್ರಗಳ ಬಗೆಗಿನ  ಲಿಂಕ್: 
 
 
 
 
 
 
 
 
==========================================================================================================
 
 
 
 
  
 
      
 
 
Rating
No votes yet

Comments

Submitted by ಮಮತಾ ಕಾಪು Mon, 12/03/2012 - 10:02

ಚಿತ್ರ ವಿಮರ್ಶೆ ಚೆನ್ನಾಗಿದೆ. ಒಮ್ಮೆಯಾದರೂ ನೋಡಲೇಬೇಕು, ಮಕ್ಕಳ ಚಿತ್ರ ನೋಡಿದಾಗ ನಾವೂ ಮಕ್ಕಳ ಲೋಕಕ್ಕೆ ಹೋಗಿಬರುವುದು ಸಹಜ. ಯಾವತ್ತಿದ್ದರೂ ಬಾಲ್ಯವೇ ಚೆನ್ನ್.

Submitted by venkatb83 Tue, 12/04/2012 - 17:07

In reply to by ಮಮತಾ ಕಾಪು

ಮಮತಾ ಅವ್ರೆ ಮಕ್ಕಳ ವಯಸ್ಸು, ಆಟೋಟ, ಆ ರಮ್ಯ ಲೋಕವೇ ಸೂಪರ್... ಮತ್ತೊಮ್ಮೆ ನಾವಂತೂ ಮಕ್ಕಳಾಲಗಲಿಕ್ಕಿಲ್ಲ ಆದ್ರೆ ಮಕ್ಕಳೊಡನೆ ಬೆರೆತು ಆ ಅನುಭವ ಮರಳಿ ಪಡೆಯುವ,....ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..

Submitted by H A Patil Mon, 12/03/2012 - 13:04

ವೆಂಕಟ ಬಿ ಯವರಿಗೆ ವಂದನೆಗಳು
ದಿ ಕರಾಡೆ ಕಿಡ್ ಚಲನಚಿತ್ರವನ್ನು ನೋಡಿಲ್ಲ, ಆ ಕುರಿತು ತಾವು ಬರೆದ ಬರಹ ಕುತೂಹಲವನ್ನು ಇಮ್ಮಡಿಸಿದೆ, ಆ ಚಿತ್ರ ಕುರಿತ ಸಶಕ್ತ ಬರಹ ನಿಮ್ಮದು, ಧನ್ಯವಾದಗಳು.

Submitted by swara kamath Wed, 12/05/2012 - 12:49

ಸಪ್ತಗಿರಿಅವರೆ,
'' ಸಂಪದ" ಗೆಳೆಯರಿಗೆ ಇನ್ನೊಂದು ಆಂಗ್ಲ ಚಿತ್ರವನ್ನು ಪರಿಚಯಿಸುತ್ತಾ ಕಥೆಯ ಸಾರವನ್ನು ಚೆಂದವಾಗಿ ವರ್ಣಿಸಿದ್ದೀರಿ. ಈ ಚಿತ್ರವನ್ನು ನಾನು ಒಂದು ವರ್ಷದ ಹಿಂದೆಯೆ ನೋಡಿ ತುಂಬಾ ಹರ್ಷಿತ ನಾಗಿದ್ದೆ. ಮುಂದೊಂದು ದಿನ ಬೇಸರ ಕಳೆಯಲು ಚಿತ್ರದ ನಕಲನ್ನು ನಾನು ಹಾರ್ಡ ಡಿಸ್ಕನಲ್ಲಿ ಸಂಗ್ರಹಿಸಿದ್ದೀನಿ. ತಮ್ಮ ಚಿತ್ರ ಪರಿಚಯ ಲೇಖನ ಮುಂದುವರೆಯಿಲಿ. ....... ವಂದನೆಗಳು.

Submitted by venkatb83 Sat, 12/08/2012 - 15:54

In reply to by santhu_lm

ಹಿರಿಯರೇ(ಸ್ವರ ಕಾಮತ್)
ನಿಮ್ಮ ಪ್ರತಿಕ್ರಿಯೆಯನ್ನು ತಡವಾಗಿ ನೋಡಿ ಮರು ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ....
ಈ ತರಹದ ಚಿತ್ರಗಳು ಅದರಲ್ಲೂ ಮಕ್ಕಳ ಚಿತ್ರಗಳು ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡುವ ಹಾಗೆ ಮಾಡುವವು.. ನಮ್ಮನ್ನು ಆ ಪಾತ್ರದಲ್ಲಿ ಕಲ್ಪ್ಸಿಕೊಳ್ಳುವ ಹಾಗೆ ಮಾಡುವವು.. ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.

\|

Submitted by venkatb83 Sat, 12/08/2012 - 15:57

In reply to by santhu_lm

ಸಂತೋಷ್ ಕುಮಾರ್ ಅವ್ರೆ ತಮ್ಮ ಪ್ರತಿಕ್ರಿಯೆಗೆ ನನ್ನಿ

ನಿಮ್ಮ ಬ್ಲಾಗ್ ನೋಡಿದೆ ಅಲ್ಲಿನ ಒಂದು ಕವನ ನೋಡಿದೆ ಓದಿದೆ ,ಅದು ಸಂಪದದಲ್ಲಿ ಸೇರಿಸಿಲ್ಲವೇ? ಚೆನ್ನಾಗಿದೆ..!!

ಶುಭವಾಗಲಿ..

\|