ಗ್ರಾಮ ಯೋಧ

ಗ್ರಾಮ ಯೋಧ

ಕವನ



ನಮ್ಮ ರೈತನು ಅನ್ನದಾತನು
ದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನು
ಕಳೆದ ದಿನದಲ್ಲೂ ಸುಖವ ಕಾಣುತ್ತಾ
ಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನು

ಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನು
ನಮಗೆಲ್ಲಾ ಅನ್ನನೀಡೊ  ಪ್ರೀತಿ ಪಾತ್ರನು
ಬೆಳೆವ ಪೈರಲ್ಲೂ ಕೀಳೊ ಕಳೆಯಲ್ಲೂ
ಒಂದೇ ಶ್ರಮದಿ ದುಡಿದ ಗ್ರಾಮ ಯೋಧನು

ಒಳ್ಳೇ ಬೆಲೆಯೂ ಸಿಗದೆ ಫಲವ ಉಳಿಸಲಾಗದೆ ಎಂತೋ ಮಾರ್ವನು
ಸಿಕ್ಕ ಬೆಲೆಗೂ ಬೆನ್ನ ತಟ್ಟಿ ಹೆಮ್ಮೆ ಪಡುವನು
ಕಳೆದ ವರ್ಷ ಪಟ್ಟ ಕಷ್ಟವನೆಲ್ಲಾ ಮರೆವನು
ಹೊಸ ಬೆಳೆಗೆ ನೇಗಿಲೊತ್ತು ಮತ್ತೆ ನಡೆವನು
ನಮ್ಮ ರೈತನು ಅವನೇ ಅನ್ನದಾತನು.|

                      ಸೋಮೇಶ್ ಗೌಡ

Comments

Submitted by venkatb83 Tue, 12/04/2012 - 17:24

ಕವನ ಚೆನ್ನಾಗಿದೆ. ಆದರೆ ರೈತನ ಪರಿಸ್ಥಿತಿ ವರ್ಷಂಪ್ರತಿ ಘೋರವಾಗುತ್ತಿದೆ .. ಸಾಲ ಶೂಲೆ ಬಾಧಿಸುತ್ತಿದೆ. ಹೆಹ್ಚುತ್ತಿರುವ ಜನಸಂಖ್ಯೆ -ಆಹಾರ ಬೇಡಿಕೆ ಆದರೂ ಫಸಲಿಗೆ ಕಡಿಮೆ ಬೆಲೆ-ಮಧ್ಯವರ್ತಿಗಳ ಹಾವಳಿ -ರಾಜಕಾರಣಿಗಳ ಪೊಳ್ಳು ಸುಳ್ಳು ಆಶ್ವಾಸನೆ., ಒಂದೇ ಎರಡೇ...???
ಸರಯಾದ ವಿಧಾನದಲ್ಲಿ ಅರಿತು ಬೆಳೆದು ಮಾರಿದರೆ ಬಾಳಿದರೆ ರೈತನೇ ನೈಜ ಅರ್ಥದಲಿ ರಾಜ.

ಶುಭವಾಗಲಿ.

\|