ಧಾವಂತ -ಜೀವಂತ

ಧಾವಂತ -ಜೀವಂತ

ಇದೆ ಪಟಾಕಿಗಳ ರಾಶಿ
ಇದೇ ಶಿವಕಾಶಿ
ಹೊಟ್ಟೆಪಾಡು
ದಾರಿಯಿಲ್ಲ ಅನ್ಯ
ಉಳ್ಳವರಿಗೆ ಹಬ್ಬ
ತುಂಬಲು ಹಾಸ
ನಭದಲಿ ಬಣ್ಣ
ಬಣ್ಣದ ಚಿತ್ತಾರ
ಬದುಕಾಯ್ತು  ಛಿದ್ರ

ನಿರ್ಲಕ್ಷ್ಯ , ಲಕ್ಷ ಲಕ್ಷ
ಗಳಿಸೋ ಧಾವಂತ
ಸುಟ್ಟು ಕರಕಲು ಜೀವಂತ
ಸಾವು ನೋವಿನ ನರಳಾಟ
ಕೊಡುತ್ತಾರಂತೆ ಪರಿಹಾರ
ಇತ್ತರೆ ಅಂದೇ ಇತ್ತ ಗಮನ.....

 

Rating
No votes yet

Comments

Submitted by venkatb83 Wed, 12/05/2012 - 16:05

In reply to by Premashri

ಶಿವಕಾಶಿಯಲ್ಲಿ ವರ್ಷವೂ ಆ ರೀತಿ ದುರ್ಘಟನೆ ನಡೆಯೋದು , ಇತ್ತೀಚಿಗೆ ಹೆಚ್ಚಿನ ಜನ ಬಲಿಯಾಗಿ ಅಪಾರ ನಸ್ಟ ಆಗಿ, ಅದರ ಅರಿವಿದ್ದೂ ಜನ ಪಟಾಕಿ ಸಿಡಿಸ ಸಂಭ್ರಮಿಸಿದ್ದು ?????

ಸಕಾಲಿಕ ಬರಹ-ನಾ ಓದಿ ಪ್ರತಿಕ್ರಿಯಿಸಿದ್ದು ಲೇಟು....

ಮುಂದೆಂದು ಈ ರೀತಿಯ ದುರ್ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು....

ಶುಭವಾಗಲಿ..

\|