ಯೋಚಿಸಲೊ೦ದಿಷ್ಟು... ೬೩
೧.ತಪ್ಪನ್ನು ಮಾಡುವ ಮೊದಲೇ ಆಪೇಕ್ಷಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
೩. ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು!
೪. ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ- ಪರಾಶರ ಸ್ಮೃತಿ
೫. ರಾಜಕೀಯವನ್ನು ಹಾಗೂ ನೀತಿಯನ್ನು ಎರಡೂ ಬೇರೆ ಬೇರೆ ಎ೦ದು ಎಣಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು- ಜಿ.ವಿ. ಮಾರ್ಲೆ
೬. ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ!- ಕುವೆ೦ಪು
೭. ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ!
೮. ಪ್ರಯತ್ನಿಸುವವರೆಗೂ ಯಾರಿಗೂ ತಾನೇನು ಮಾಡಬಲ್ಲೆ ಎ೦ಬುದರ ಅರಿವಿರದು!
೯. ಜನರನ್ನು ಅರ್ಥೈಸಿಕೊಳ್ಳಬೇಕಾದರೆ ನಾವೇ ಅವರ ಬಳಿ ಹೋಗಬೇಕು!
೧೦. ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ ಅ೦ತರ೦ಗದಲ್ಲಿ ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಆ ರೀತಿಯ ಯೋಚನೆಗಳೂ ಬರುತ್ತವೆ!
೧೧. ನಾನು ಬೇರೆ- ದೇಹ ಬೇರೆ ಎ೦ದು ತಿಳಿವು ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ- ಎಮ್.ವಿ.ಸೀತಾರಾಮಯ್ಯ
೧೨. ಯಾವುದೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಠಾನ- ಸ೦ತ ಕಬೀರರು
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
೧೪. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ೦ದು ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
೧೫. ನಾಸ್ತಿಕರಿಗಿ೦ತಲೂ ತಮ್ಮ ತಪ್ಪುಗಳಿಗೆ ದೇವರನ್ನು ಗುರಿಯನ್ನಾಗಿಸುವವರು ಅತ್ಯಲ್ಪರು!
Comments
1ರಲ್ಲಿ 'ಅಪೇಕ್ಷಿಸುವುದು'
1ರಲ್ಲಿ 'ಅಪೇಕ್ಷಿಸುವುದು' ಎನ್ನುವುದರ ಬದಲಿಗೆ 'ಆರೋಪಿಸುವುದು' ಎಂದಾಗಬೇಕೇನೋ!
In reply to 1ರಲ್ಲಿ 'ಅಪೇಕ್ಷಿಸುವುದು' by kavinagaraj
ಅದು ಆಕ್ಷೇಪಿಸುವುದು
ಅದು ಆಕ್ಷೇಪಿಸುವುದು ಎ೦ದಾಗಬೇಕಿತ್ತು! ಪ್ರಮಾದವಶಾತ್ ತಪ್ಪಾಗಿದೆ. ಆದರೆ ಅದನ್ನು ತಿದ್ದುವ ಸೌಲಬ್ಯ ಹೊಸ ನಮೂನೆಯ ಈ ಪಧ್ಧತಿಯಲ್ಲಿ ಹುಡುಕಾಡುತ್ತಿದ್ದೇನೆ! ಬದಲಾಯಿಸುವ ಸೌಲಭ್ಯ ಎಲ್ಲಿದೆ?
In reply to ಅದು ಆಕ್ಷೇಪಿಸುವುದು by ksraghavendranavada
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
ನಾವಡ ಅವ್ರೆ- ಈ ಹಿಂದೆ ನೀವ್ ಬರೆದ ಕೆಲ 'ಯೋಚಿಸಲೊಂದಿಸ್ಟು ' ಸರಣಿಯ ಕೆಲ ಭಾಗಗಳನ್ನು ನಾ ಓದಿಲ್ಲವೇನೋ? ಅನ್ನಿಸಿದೆ..
ಈ ಸರಣಿಯ ಸಾಲುಗಳು ಸಂಗ್ರಹಯೋಗ್ಯ ...ಇವು ನೀವೇ ಸ್ವರಚಿತ ಬರಹಗಳೇ? ಅಥವಾ ತರ್ಜುಮೆಯೇ? ಏನಾದರಾಗಲಿ ಈ ಸರಣಿ ಪುಸ್ತಕ ರೂಪದಲ್ಲಿ ಅಚ್ಚಾಗಿ ಜನರ ಕೈ ಸೇರಿದರೆ ನಡೆ ನುಡಿ ಬದಲಾದೀತು...ಒಳಿತಾದೀತು..
>>>ಏಕಾಂಗಿತನದ ಬಗ್ಗೆ ನೀವು ಹೇಳಿದ ಆ ಸಾಲು ನನ್ನ ಮಟ್ಟಿಗೆ ಹಾಗೆ ಅನ್ನಿಸಿಲ್ಲ...
ಏಕಾಂಗಿಯಾಗಿದ್ದು ರಸಮಯ ಕ್ಷಣಗಳು ಇತ್ಯಾದಿ ಅನುಭವ ನನಗಾಗಿದೆ..ಹಾಗಾದ್ರೆ ನಾ ಏಕಾನ್ಗಿಯಾಗಿರಲಿಲವ? ಎನ್ನುವ ಸಂಶಯ ನನಗೆ ಆಗಿದೆ...!!
ಮೊದಲ ಸಾಲು ಓದಿದಾಗ ನನಗೂ ಅನ್ನಿಸಿತು ಇಲ್ಲಿ ಏನೋ ಮಿಸ್ ಆಗಿದೆ ಅಂತ-ಆದರೆ ಅಲ್ಲಿ ಯಾವ ವಾಕ್ಯ ಇರಬೇಕಿತ್ತು ಅಂತ ಊಹಿಸಲು ಆಗಲಿಲ್ಲ.!!
ಈಗ ಸಂಪದದಲ್ಲಿ ಎಡಿಟ್ ಅಪ್ಚನ್ ಇಲ್ಲ....ಹಾಗಾಗಿ ಬರಹ ಸೇರಿಸುವ ಮೊದಲೇ ಚೆನ್ನಾಗಿ ನೋಡಿ (ಮುನ್ನೋಟ) ಸೇರಿಸಬೇಕು.!! ಅದ್ಯಾಗ್ಗೂ ನನ್ನಂತೆ ನಿಮಗೂ ಅವಸರದಲ್ಲಿ ಗಮನಿಸಲು ಆಗಿಲ್ಲ ಅನ್ಸುತ್ತೆ..!! ಪರವಾಗಿಲ್ಲ ಬಿಡಿ ತಪ್ಪಿದ್ದುದನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದರೆ ತಿದ್ದಿ ಓದುವೆವು...ಕೆಲವೊಮ್ಮೆ ತಪ್ಪು ಇದ್ದರೂ ಅದನ್ನ ಮನದಲ್ಲೇ ಸರಿ ಮಾಡಿಕೊಂಡು ಓದುವೆವಲ್ಲ..!! ಕೆಲ ಅಕ್ಷರಗಳು ಹಿಂದೂ ಮುಂದು ಮಾಡಿ ಬರೆದರೂ ಓದುವಾಗ ಮನ ಥಟ್ಟನೆ ಅದರ ನಿಜ ಅರ್ಥ -ವನ್ನೇ ಗ್ರಹಿಸಿ ತಿದ್ದಿಕೊಳ್ಳುವುದು
ಉದಾಹರಣೆಗೆ : ಗಮರ (ಗಮಾರ), ನರಗ (ನಗರ ),ಬರದ (ಬರೆದ -ಬರದ)ಹೀಗೆ....!!
ಶುಭವಾಗಲಿ..
\|
ನಿಮ್ಮ ನೇರ ನುಡೀ ಹಾಗೂ ಒಳ್ಳೆಯ
ನಿಮ್ಮ ನೇರ ನುಡೀ ಹಾಗೂ ಒಳ್ಳೆಯ ಮನಸ್ಸಿಗೆ, ನಿರ೦ತರ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು ವೆ೦ಕಟರೇ..
ಇನ್ನು ಮು೦ದೆ ಗಮನಿಸಿಯೇ ಪ್ರಕಟಿಸುತ್ತೇನೆ.
ನಿರ೦ತರ ಹರೈಕೆಯಿರಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ತು೦ಬಾ ಒಳ್ಳೆಯ ನುಡಿ ಮುತ್ತುಗಳು.
ತು೦ಬಾ ಒಳ್ಳೆಯ ನುಡಿ ಮುತ್ತುಗಳು. ಅಭಿನ೦ದನೆಗಳು.