Androidನಲ್ಲಿ ಕನ್ನಡದ ಭಗವದ್ಗೀತೆ

Androidನಲ್ಲಿ ಕನ್ನಡದ ಭಗವದ್ಗೀತೆ

ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸತನ್ನು ಅನ್ವೇಷಿಸುತ್ತಿರುವ ಇಂದಿನ ಯುಗದಲ್ಲಿ ಸಮಯವೆಂಬುದು ಎಲ್ಲರಿಗೂ ಬಂಗಾರಕ್ಕಿಂತಲೂ ಬೆಳೆಬಾಳುವಂತಾದ್ಧಾಗಿದೆ. ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆ ತಾವೇ ಚಿಂತಿಸಲು ಬಿಡುವಿಲ್ಲದಂತಿರುವಾಗ, ಈ ದಿನ "ಶುಭವಾಗಿರಲಿ" ಎಂದು ದೇವರನ್ನು ಒಂದು ನಿಮಿಷ ಪ್ರಾರ್ಥಿಸಿ ಹೊರಡುವುದೇ ಹೆಚ್ಚು. ಧಾರ್ಮಿಕ ಗ್ರಂಥಗಳನ್ನು ಓದಬೇಕೆಂಬ ಮನಸ್ಸಿದ್ದರೂ ಸಮಯದ ಅಭಾವ, ಅಥವಾ ಕಚೇರಿಗೆ ತಡವಾಗುವುದು, ಬಸ್ಸು ಎಲ್ಲಿ ಮಿಸ್ಸಾಗಿ ಬಿಡುತ್ತೋ ಅನ್ನುವ ಭಯದಿಂದ ಅವನ್ನೆಲ್ಲಾ ಬದಿಗೆ ಸರಿಸುವಂತಾಗುತ್ತದೆ. ಆದರೆ ಇನ್ನುಮುಂದೆ ತಮ್ಮ ಮೊಬೈಲ್ ಫೋನ್‌ಗಳಲ್ಲೇ ಭಗವದ್ಗೀತೆಯ ಕನ್ನಡ ಅನುವಾದವನ್ನು ಓದುವ ಅವಕಾಶವನ್ನು ಮಿಥುನ್ ಗುಡ್ಡೆತೋಟ ಅವರು Android ಅಪ್ಲಿಕೇಶನ್‌ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಮೊಬೈಲ್ ನಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿರುವ ಇದನ್ನು ಬಸ್ಸಿನ ಪ್ರಯಾಣದ ಸಂದರ್ಭದಲ್ಲಿ, ಕೆಲಸದ ಒತ್ತಡದಲ್ಲಿ ಬಿಡುವು ಬೇಕೆಂದೆನಿಸಿದಾಗ ಓದಿ ಮನಸ್ಸನ್ನು ನಿರಾಳಗೊಳಿಸಿಕೊಳ್ಳಬಹುದು.
ಪ್ರಥಮ ಬಾರಿಗೆ ಕನ್ನಡದಲ್ಲಿ ಅಳವಡಿಸಿಕೊಂಡಿರುವ ಈ ಗೀತಾ ಸಾರದಲ್ಲಿ 18 ಅಧ್ಯಾಯಗಳಲ್ಲಿ  700 ಶ್ಲೋಕಗಳ ಸರಳ ಕನ್ನಡ ಅನುವಾದವನ್ನು ಹೇಳಲಾಗಿದೆ. ಕನ್ನಡದ ಜನತೆಗೆ ಸರಳವಾಗಿ ಗೀತಾ ಸಾರವನ್ನು ತಲುಪಿಸುವ ಉದ್ದೇಶ ಹೊಂದಿರುವ ಪ್ರಯತ್ನ ಈ ಅಪ್ಲಿಕೇಶನ್ ಮುಖಾಂತರ ಸಫಲಗೊಂಡಿದೆ.
ಒಳಗೊಂಡಿರುವ ಅಂಶಗಳು:
- ಅಕ್ಷರಗಳ ಗಾತ್ರವನ್ನು ಬೇಕಾದ ರೀತಿಯಲ್ಲಿ (ದೊಡ್ಡದಾಗಿ/ಸಣ್ಣದಾಗಿ) ಬದಲಾಯಿಸಬಹುದು.
- ಅತಿ ಸುಲಭವಾಗಿ ಅಧ್ಯಾಯ ಹಾಗೂ ಶ್ಲೋಕಗಳನ್ನು ಗುರುತಿಸಬಹುದು.
- ಲ್ಯಾಂಡ್‌ಸ್ಕೇಪ್ ಹಾಗೂ ಪೋರ್ಟ್ರೈಟ್ ವಿಧಾನ ಎರಡರಲ್ಲೂ ಓದಬಹುದು.
- ಆಫ್‌ಲೈನ್‌ನಲ್ಲೂ ಉಪಯೋಗಿಸಿಕೊಳ್ಳಬಹುದು.
- ಯಾವುದೇ ಜಾಹಿರಾತುಗಳು ಹಾಗೂ ಪಾಪ್ ಅಪ್ಲಿಕೇಶನ್‌ಗಳು ಇಲ್ಲ.
  

ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಈ ಲಿಂಕ್ ನ್ನು ಬಳಸಿ.

Comments

Submitted by sasi.hebbar Fri, 12/07/2012 - 15:52

ಭಗವದ್ಗೀತೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿ ಓದುವ ಈ ಅವಕಾಶದ ಕುರಿತು ನೀಡಿದ ಮಾಹಿತಿ ಉತ್ತಮವಾಗಿದೆ. ಧನ್ಯವಾದಗಳು.