ನೆನಪು

ನೆನಪು

ಕವನ


ಇ೦ದು ನೆನ್ನೆಯದಲ್ಲ ಈ ನೆನಪು
ಆದರೆ, ಇ೦ದೇ ಆದ೦ತಿದೆ
ನೆನ್ನೆ ಇ೦ದಿಗೆ ನೆನಪು, ಇ೦ದು ನಾಳೆಗೆ ನೆನಪು


ತುಪ್ಪ-ಅನ್ನವ ಕಲಿಸಿದ ಕೈ ತುತ್ತಿನ ರುಚಿ
ಮೊದಲ ಹೆಜ್ಜೆಯನಿಟ್ಟ ಆನ೦ದ
ಮೊದಲ ಮಾತು ಆಡಿದಾಗಿನ ಸ೦ಕೋಚ
ಇ೦ದು ನೆನ್ನೆಯದಲ್ಲ ಈ ನೆನಪು


ಬಾಲ್ಯಮಿತ್ರರ ಆಟ - ಹೊಡೆದಾಟ
ತಾತ ಹೇಳಿದ ಕಥೆ, ಹಾಡಿದ ಪದ್ಯ
ತಮ್ಮನೊ೦ದಿಗೆ ಕಿರುಚಾಟ, ದೊಡ್ಡಮ್ಮನ ನೀತಿ ಪಾಠ
ಇ೦ದು ನೆನ್ನೆಯದಲ್ಲ ಈ ನೆನಪು


ಎತ್ತಿನ ಗಾಡಿಯಲ್ಲಿನ ಅಲುಗಾಟ
ಗೋಲಿ - ಬುಗುರಿಯೊ೦ದಿಗಿನ ಒಡೆನಾಟ
ತಪ್ಪು ಮಾಡಿ ಎಟು ತಪ್ಪಿಸಿಕೊಳ್ಲಲು ಒದ್ದಾಟ
ಇ೦ದು ನೆನ್ನೆಯದಲ್ಲ ಈ ನೆನಪು


ಅಆಇಈ ತಿದ್ದಿದ ಕ್ಷಣ
ಶಾಲೆಯ ಮೆಟ್ಟಿಲು ಹತ್ತಿದ ದಿನ
ರಸ್ತೆಯಲ್ಲಿ ಸಿಕ್ಕಿದ ಹಣ
ಇ೦ದು ನೆನ್ನೆಯದಲ್ಲ ಈ ನೆನಪು


ಇ೦ದು ನೆನ್ನೆಯದಲ್ಲ ಈ ನೆನಪು
ಆದರೆ, ಇ೦ದೇ ಆದ೦ತಿದೆ
ನೆನ್ನೆ ಇ೦ದಿಗೆ ನೆನಪು, ಇ೦ದು ನಾಳೆಗೆ ನೆನಪು


                                                                                                 


                                                                                ಶಿವಪ್ರಕಾಶ್ ರೆಡ್ಡಿ


 

Comments