ಪತ್ರ.... ನಾಸ್ಟಾಲ್ಜಿಯಾ

ಪತ್ರ.... ನಾಸ್ಟಾಲ್ಜಿಯಾ

ಯಾಕೋ ಈ ಮೈಲ್ ಬಿಟ್ಟು ಪತ್ರ ಬರೆಯೋಣ ಅನುಸ್ತಾಯಿದೆ....
ಇದ್ದಕಿದ್ದ ಹಾಗೆ ಈ ವಿರಕ್ತಿ ಯಾಕಪ್ಪಾ ಅಂತ ಆಶ್ಚರ್ಯ ಆಗಬಹುದು. ಸಾಕಾಗೋಗಿದೆ ರೀ ಸಾಕಾಗೋಗಿದೆ...ಎರಡು ತಿಂಗಳಿಂದ Hi.......Regards ಅಂತ ಬೆಳಗ್ಗೆ ಇಂದ ಸಾಯಂಕಾಲದವರೆಗೆ ಕುಟ್ಟೀ ಕುಟ್ಟೀ, inbox ನೋಡುದ್ರೆ ಬೇಜಾರಾಗತ್ತೆ. :-(

ಆಫೀಸ್ ಗೆ ಬಂದ ಕೂಡಲೇ ಮಾಡೋದು laptop ತೆಗೆದು microsoft outlook open ಮಾಡಿ inbox ನೋಡೋದು. ಅಯ್ಯೋ ಇವತ್ತೂ ಇಷ್ಟೊಂದು ಮೈಲ್ ಬಂದಿವೆಯಲ್ಲಾ ದೇವ್ರೇ ಅನ್ನುಸ್ತು. ಎಷ್ಟೊಂದು ದಪ್ಪ ಅಕ್ಷರದಲ್ಲಿದ್ದು ನನ್ನ ಓದು, ನನ್ನ ಓದು ಅಂತ ಕರೀತ ಇರೋಹಾಗಿದೆ.ಇಲ್ಲಾ ನನ್ನ ಮ್ಯಾನೇಜರ್ ಕಲ್ಸಿರ್ತ್ತಾರೆ ಇಲ್ಲಾ ನನ್ನ ಕೊಲ್ಲೋ ಲೀಗ್ಸ್...

ನಮ್ಮ ಮ್ಯಾನೇಜರ್ದಂತೂ ಯಾವಾಗ್ಲೂ importance high ಅಂತಾನೆ ಇರತ್ತೆ. ಅವರಿಗೂ ಗೊತ್ತು ಯಾರು ಓದೋದಿಲ್ಲ ಅಂತ ಅದಕ್ಕೆ ಈ ರೀತಿ ಕಳುಸ್ತಾರೆ. ಇನ್ನ ನನ್ನ ಕೊಲ್ಲೋ ಲೀಗ್ಸ್, ಚಿಕ್ಕ ಚಿಕ್ಕ ಪ್ರಶ್ನೆಗೂ ಮೈಲ್ ಮಾಡ್ತಾರೆ...ನಾನು ಇಲ್ಲಿ ಆರಮಾಗಿದ್ದೀನಿ ಅದಿಕ್ಕೆ ನನಗೆ ಕಾಟ ಕೊಡೋಣ ಅಂತನೋ ಅಥವಾ ನಿಜವಾಗ್ಲು ನಾನು ಅಂದು ಕೊಂಡದಕ್ಕಿಂತ....ಬೇಡ ಬಿಡಿ....

ಅದಕ್ಕೆ ಇವತ್ತು ಪತ್ರ ಬರೀಬೇಕು ಅನ್ನುಸ್ತಿದೆ. ನಾನಾಗೇ ಯಾರಿಗೂ ಪತ್ರ ಬರೆದಿಲ್ಲ. ನನ್ನ ಸ್ನೇಹಿತೆಯರು ಎಲ್ಲಾ ನಮ್ಮೂರಲ್ಲೇ ಇದ್ರು ದಿನ ಸೇರುತ್ತ ಇದ್ವಿ ಹಾಗಾಗಿ ಪತ್ರ ಬರೆಯೋ ಅವಶ್ಯಕತೆ ಇರ್ಲಿಲ್ಲ. ಇನ್ನ ಎಲ್ಲಾ ದೂರ ಹೋದಮೇಲೆ ಈ ಈ-ಮೈಲ್ ಶುರು ಆಗಿತ್ತು....ನಾನು ಅದನ್ನೂ ಸರಿಯಾಗಿ ಮಾಡುತ್ತಿರಲಿಲ್ಲ...ಅದಿಕ್ಕೆ ನನಗೆ ಈಗ ಕಷ್ಟ ಅನ್ನುಸ್ತಿದ್ಯೋ ಏನೋ...

ಆದರೆ ನಾನು ನಮ್ಮ ಅಮ್ಮನಿಗೆ ಪತ್ರ ಬರೆದು ಕೊಡುತ್ತೀದ್ದೆ. ಅಮ್ಮ ಹೇಳೋದಿಕ್ಕೆ ಮುಂಚೇನೇ ಶ್ರೀ, ನಾವು ಕ್ಷೇಮ ನಿಮ್ಮ ಕ್ಷೇಮಕ್ಕೆ ಕಾಗದ ಬರೆಯುವುದು ಅಂತ ಬರೆದು ಮುಂದೆ ಏನೋ ಹೇಳ್ತಾರೆ ಅಂತ ಕಾಯುತ್ತಿದೆ. ಮೂರು ಸಾಲು ಎಲ್ಲಾ ಪಾತ್ರಕ್ಕೂ ಸ್ಟ್ಯಾಂಡರ್ಡ್ ಒಂದು ತರಹ default. ಅಮ್ಮ ಯಾವಾಗ್ಲೂ ದೊಡ್ದಮ್ಮನಿಗೆ ಪತ್ರ ಬರೆಯೋರು...ಅವ್ರ secrets ಎಲ್ಲಾ ನನಗೆ ಗೊತ್ತಾಗೋದು. ಯಾರಿಗೋ ಹೇಳಬೇಡ ಅಂತಾನು ಹೇಳೋರು..ನಂಗೆ ಏನೋ ಹೆಮ್ಮೆ...ದೊಡ್ಡೋರ ವಿಷ್ಯ ಎಲ್ಲಾ ನನಗೆ ಗೊತ್ತು ಅಂತ.... ಹ್ಹ ಹ್ಹ ಹ್ಹ ....

ಈಗ ಅಮ್ಮನೂ ಪತ್ರ ಬರೆಯೋಲ್ಲ, ನಾನೂ ಅಮ್ಮನ ಹತ್ರ ಇಲ್ಲ ಪತ್ರ ಬರೆಯೋದಿಕ್ಕೆ....ಯವಾಗ್ಲಾದ್ರು ಊರಿಗೆ ಹೋದಾಗ ಪತ್ರ ಬರೀಲಾ ಅಂದ್ರೆ ಫೋನ್ ಇದ್ಯಲ್ಲ ಅಂತಾರೆ :-(....

ಈಗ ನನ್ನ ಮ್ಯಾನೆಜರ್ ಗೂ ಪತ್ರ ಬರೆಯೋಣ ಅನ್ನುಸ್ತಿದೆ.... ಅಲ್ಲಿಗೂ ಇಲ್ಲಿಗೂ timezone ಬೇರೆ ಅಂತ ಗೊತ್ತೀದ್ರೂ ಬೇಗ reply ಮಾಡು ಅಂತ ಒಂದೆರಡು reminders ಬೇರೆ bonus ಕಳುಸ್ತಾರೆ, ಇನ್ನ ಪತ್ರ ಬರೆದ್ದಿದ್ದೀನಿ ಅಂದ್ರೆ ಮುಗೀತು "ನಿಮ್ಮ ಸೇವೆ ನಮಗೆ ಸಾಕು" ಅಂತ ಇನ್ನೊಂದು ಮೈಲ್ನಲ್ಲಿ ಆಚೆಗಟ್ತಾರೆ ಅಷ್ಟೆ :-(

p.s: ಯಾಕೋ ನನ್ನ english ಪದ ಪ್ರಯೋಗ ಜಾಸ್ತಿ ಆಯ್ತು ಅಲ್ವ? ಏನು ಮಾಡೋದು ಈ ದೇಶದಲ್ಲಿ ಎಲ್ಲೆಲ್ಲೂ english ಮಯ...ನನಗೆ ಗೊತ್ತಿರೋ ಕನ್ನಡದವರೂ ಕೂಡ english ನಲ್ಲೇ ಮಾತಾಡುತ್ತಾರೆ...ಹಾಗಾಗಿ ಸ್ವಲ್ಪ adjust ಮಾಡ್ಕೊಳ್ಳಿ :-)

Rating
No votes yet

Comments