ವಾಲ್ಕಿರೀ -2008 :ಹಿಟ್ಲರನ ಹತ್ಯಾ ಯತ್ನದ ಸಿನೆಮಾ ಹೇಗಿದೆ?
ಚಿತ್ರ
ವಾಲ್ಕಿರೀ -2008
ಈ ಚಿತ್ರದ ಬಗ್ಗೆ ಜಾಹೀರಾತು ಒಂದನ್ನು ದಿನ ಪತ್ರಿಕೆಯಲ್ಲಿ ನೋಡಿ -ಕಪ್ಪು ಬಿಳುಪಿನ ಆ ಜಾಹೀರಾತು ಅಷ್ಟೇನು ಹಿಡಿಸದೆ ಈ ಚಿತ್ರ ಯಾವ್ದೋ ಹಳೆಯ ಕಾಲದ ವಿಷ್ಯ ವಸ್ತುವಿನ ಚಿತ್ರ ಇರಬಹದು ಎಂದು ಆ ಬಗ್ಗೆ ಹೆಚ್ಚಿಗೆ ಗಮನ ಹರಿಸದೆ ಸುಮ್ಮನಾದೆ...!!
ಆಮೇಲೆ ಮೊನ್ನೆ ಮೊನ್ನೇ-ಟಾಮ್ ಕ್ರೂಸ್ (ಈ ಚಿತ್ರದ ನಟ -ಹಾಲಿವುಡ್ ನ ಖ್ಯಾತ ನಟರಲ್ಲೊಬ್ಬ)ನ ಡೀ ವಿ ಡಿ ಕೊಂಡು ತಂದಾಗ ಅದರಲ್ಲಿದ್ದ ಚಿತ್ರಗಳಲ್ಲಿ ಇದೂ ಒಂದು...
ಹೇಗೂ ಇದೆಯಲ್ಲ ನೋಡುವ ಎಂದು ಇಷ್ಟವಿಲ್ಲದ ಇಷ್ಟದೊಡನೆ ಚಿತ್ರ ನೋಡಲು ಆರಂಭ ಬೋರ್ ಅನ್ನಿಸಿದರೂ , ಚಿತ್ರ ಮುಂದುವರೆಯುತ್ತಿದ್ದಂತೆ ತದೇಕಚಿತ್ತದೊಡನೆ ಗಲ್ಲಕ್ಕೆ ಕೈ ಆನಿಸಿ ಪೂರ್ತಿ ಮುಗಿಯುವವರೆಗೆ ನೋಡಿದೆ ...!!
ಈ ಚಿತ್ರವನ್ನು ಮತ್ತು ನಮ್ಮ 'ಕಾಲಾಪಾನಿ'-1996 ಚಿತ್ರವನ್ನು ಸರದಿಯಲಿ ಒಂದರ ನಂತರ ಒಂದು ದಿನ ಬಿಟ್ಟು ದಿನ ನೋಡಿದ್ದು ಎರಡು ಚಿತ್ರಗಳೂ ವಿಪರೀತ ಕಾಡಿದವು..
ಚಿತ್ರ ವೀಕ್ಷಣೆ ಮುಗಿಸಿ ಕೆಲ ಘಂಟೆಗಳವರೆಗೆ ಅದೇ ಸನ್ನಿವೇಶಗಳು -ಕಣ್ ಮುಂದೆ ಕುಣಿಯುತ್ತಿದ್ದವು ಮನಕೆ ಒಂಥರಾ ಭಾವ...
ಚಿತ್ರ ವೀಕ್ಷಿಸಿ ಮನದಲ್ಲಿ ಬಂದ ಭಾವ ?
ಸೂಪರ್...
ಸೋ ಫೈನ್ ...
ಇದಪ್ಪ ಚಿತ್ರ ಎಂದರೆ....
ವಾಹ್ವ್ ,ವಹ್ವ್ವ
ಅನ್ನದೆ ಇರದಾದೆ.....!!
ಕಥೆ :
2 ನೇ ಮಹಾಯುದ್ಧ ಸಂದರ್ಭದಲ್ಲಿ ಹಿಟ್ಲರ್ ಯುದ್ಧ ತಯಾರಿ ಗೆಲ್ಲುವ ಇರಾದೆಯಲ್ಲಿದ್ದರೆ ಅವನ ಆಶಾ ಭಂಗವಾಗಿ ಮಿತ್ರ ಪಡೆಗಳು ಯುದ್ಧ ಗೆಲ್ಲುತ್ತ ಮುಂದೆ ಸಾಗಿ ಬರುತ್ತಿರಲು ಹಿಟ್ಲರನ ಸೇನೆಯ ಕೆಲವರಿಗೆ ಈ ಯುದ್ಧ ಸೋತು ಹಿಟ್ಲರ್ ಮಾಡಿದ ತಪ್ಪುಗಳಿಗೆ ತಾವ್ ಜವಾಬ್ಧಾರಿ ಆಗಿ ಶಿಕ್ಷೆಗೆ ಗುರಿ ಆಗುವ ಭಾವ...
ಅದ್ಕೆ ಮೊದಲೇ ಸೇನಾ ಧಂಗೆ ಎಬ್ಬಿಸಿ ಹಿಟ್ಲರ್ ಪದ ಚ್ಯುತಿ ಇಲ್ಲವೇ ಹತ್ಯ ಮಾಡಿ ದೇಶವನ್ನು ತಮ್ ಕೈ ವಶ ಮಾಡಿಕೊಳ್ಳುವ ಇರಾದೆ...
ಹಲವು ತಪ್ಪುಗಳಿಗೆ ಕಾರಣ ಆಗಿ ದೇಶದ ಸಂಕಷ್ಟಕ್ಕೆ ಕಾರಣ ಆದ ಹಿಟ್ಲರನ ಹತ್ಯೆಗೆ ಕೆಲ ಮಿಲಿಟರಿ ಉನ್ನತ ಅಧಿಕಾರಿಗಳು ಸಂಚು ರೂಪಿಸುವರು..
ಅದರ ಮುಂದಾಳತ್ವ ಕರ್ನಲ್ ಕಾಸ್ ವ್ಯಾನ್ ಸ್ಟಫಾನ್ ಬರ್ಗ್ (Colonel Claus von Stauffenberg)ದು.
ಆದರೆ ಹಿಟ್ಲರ್ನನ್ನು ದ್ವೇಷಿಸುವ ಹಲವು ಜನ ಇರುವ ಹಾಗೆ ಅವನನ್ನು ರಕ್ಷಿಸಲು ಸಹಾ ಹಲವು ಜನ ಇರುವರು..
ಆವರೆಲ್ಲರ ದೃಷ್ಠಿಗೆ ಬೀಳದೆ ಸಂಶಯ ಬಾರದಂತೆ ಈ ಯತ್ನದ ಸಫಲತೆಗೆ ಯತ್ನಿಸುವ ಇವರಿಗೆ 108 ವಿಘ್ನಗಳು...
ಅಲ್ಲದೆ ಈ ಯತ್ನ ವಿಫಲ ಆದರೆ ಆಗುವ ಅಪಾಯ , ವಿಪ್ಲವದ ಚಿಂತೆ..
ಹಲವು ಜನರಿಗೆ ಸಾಕ್ಷಾತ್ ದೈವ ಸಮಾನ ಕೆಲವರಿಗೆ ದೆವ್ವ ಆಗಿರುವ ಫುಹರರ್(fuhrar ) -ಹಿಟ್ಲರ್ನನ್ನು ಸಾಯಿಸುವದು ಅಸ್ಟು ಸುಲಭ ಸಾಧ್ಯವೇ?
ಈ ವಿಷಯವನ್ನು ಕೆಲವೇ ಆಪ್ತರಿಗೆ ಹೇಳಿ-ಸಂಚು ರೂಪಿಸಿ ರಹಸ್ಯವಾಗಿ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಹಲವು ಅಡೆ ತಡೆಗಳು.
ಅಪಾಯದ ಸನ್ನಿವೇಶಗಳು..
ಕರ್ನಲ್ ಮತ್ತು ತಂಡ ಪಕ್ಕಾ ಪ್ಲಾನ್ ಮಾಡಿ ಕರಾರುವಾಕಾಗಿ ಗ್ರಹ್ಸಿ ಈ 'ಅಪರೇಷನ್ ವಾಲ್ಕಿರಿ' ಗೆ ಸಜ್ಜು ಆಗುವರು..
ಒಂದು ಅಪಾಯಕಾರಿ ಸನ್ನಿವೇಶದಲ್ಲಿ 'ಒಕ್ಕಣ್ಣ' ಆಗುವ ಟಾಮ್ ಕ್ರೂಸ್ -ಈ ಕಾರ್ಯಕ್ಕೆ ನಾಯಕ..!!
ಹಿಟ್ಲರನ ಮೇಲಿನ ಹತ್ಯ ಪ್ರಯತ್ನ ಯಶಸ್ವಿ ಆಯಿತೆ?
ವಿಫಲವೇ ?
ಕ್ಲೈಮಾಕ್ಸ್ ಮುಂಚಿನ ಈ ಸನ್ನಿವೇಶ ಹೃದಯ ಬಡಿತವನ್ನು ಹೆಚ್ಚು ಮಾಡುವುದು ಕೇವಲ ಕರ್ನಲ್ ಗೆ ಮಾತ್ರ ಅಲ್ಲ--ನಮಗೂ....!!
ಹೇಗೆ?
ಚಿತ್ರ ವೀಕ್ಷಿಸಿ...!!
ಈ ಚಿತ್ರ ಅಂದು ನಡೆದ ನಿಜ ಘಟನೆಯೊಂದರ ಚಿತ್ರ ರೂಪ...ಅಂದಿನ ಎಲ್ಲ ಸನ್ನಿವೇಶಗಳನ್ನು -ವೇಷ ಭೂಷಣ-ಹಾವ ಭಾವ-ಯುದ್ಧ-ವಿಮಾನಗಳು- ಇತ್ಯಾದಿ ಎಲ್ಲವನ್ನು ಆದಷ್ಟು ಸಹಜವಾಗಿ ನಿರ್ಮಿಸಿ ಚಿತ್ರ ತೆಗೆದಿರುವರು..
ಕಪ್ಪು ಬಿಳುಪು-ಕಲರ್ ಛಾಯಾಗ್ರಹಣ ಚಿತ್ರವನ್ನು ಆದಷ್ಟು ಸಹಜವಾಗಿಸಿದೆ ಹಿತ ಅನ್ನಿಸುವುದು ,ಚಿತ್ರದಲ್ಲಿ ಕಲರ್ ಅಂತ ಇದ್ದು ಹಲವು ಬಾರಿ ಕಣ್ಣಿಗೆ ಬಿದ್ರೆ ಅದು ಸ್ವ್ವಸ್ತಿಕ್ ಚಿಹ್ನೆ..!!
ನಟನೆ-ನಿರ್ಮಾಣ-ನಿರ್ದೆಶನ-ಪ್ರಸಾದನ,ಛಾಯಾಗ್ರಹಣ,ಬಹುತೇಕ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಕೆಲಸ..
ಟಾಮ್ ಕ್ರೂಸ್ -ನಟನೆ - ಹಲವು ಪಾತ್ರಧಾರಿಗಳ ಭಾಷ ಉಚ್ಚಾರಣೆ ಅಚ್ಚರಿಗೊಳಿಸುವುದು .
ಚಿತ್ರ ನೋಡಿ ಮುಗಿಸಿದ ಮೇಲೆ ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ ಇದ್ದು ಅಂತ್ಯ ಕಣ್ಣಾಲಿ ತುಂಬಿಸುವುದು...
ಚಿತ್ರ ನೋಡಿದ ಮೇಲೆ ನಮ್ಮ ದೇಶದ ಸ್ವಾತಂತ್ಯ್ರ ಸಂಗ್ರಾಮದ ಸಮಯದಲಿ ಕೆಲ ಹುತಾತ್ಮರಾದವರ ಸನ್ನಿವೇಶಗಳು ಘಟನೆಗಳು ನೆನಪಿಗೆ ಬಂದರೆ ಅಚ್ಚರಿ ಇಲ್ಲ....!!
ಹಿಟ್ಲರ್ ಮೇಲೆ ಹತ್ಯ ಪ್ರಯತ್ನ ಹೇಗೆ?
ಏನಾಯ್ತು?
ಎಂದು ಕಣ್ಣಾರೆ ಕಾಣಲು ಚಿತ್ರ ನೋಡಿ..
ನೋಡಲೇಬೇಕಾದ -ಚಿತ್ರ....
>>>ಮುಜುಗರದ ದೃಶ್ಯಗಳು ಅಷ್ಟಾಗಿ ಇಲ್ಲ..!!
ಆದರೂ ಮನೆ ಮಂದಿ ಎಲ್ಲ ಒಟ್ಟಾಗಿ ಕುಳಿತು ನೋಡಲು ರೆಕಮಂಡ್ ಮಾಡೋಲ್ಲ..
ಏಕಾಂಗಿಯಾಗಿ ನೋಡಿದರೆ ಚಿತ್ರ ಹೆಚ್ಚು ಆಪ್ತವಾದೀತು ಎನಿಸುತ್ತಿದೆ..
=======================================================================================
ಚಿತ್ರ ಮೂಲ:
ಐ ಎಂ ಡಿ ಬಿ ನನ್ನ ವಿಮರ್ಶೆ:
ಐ ಎಂ ಡಿ ಬಿ :
ವೀಡಿಯೊ ಟ್ರೇಲರ್ :
ವಿಕಿಪೀಡಿಯ ಲಿಂಕ್:
ಹಿಟ್ಲರ್ ಹತ್ಯ ಯತ್ನದ ಬಗ್ಗೆ ಇದ್ವರ್ಗು ಬಂದ ಚಿತ್ರಗಳು-ಧಾರವಾಹಿಗಳು:
Rating
Comments
ಅ0ಗ್ಲ ಚಿತ್ರ ವಿಮರ್ಶೆ ಹಾಗು
ಅ0ಗ್ಲ ಚಿತ್ರ ವಿಮರ್ಶೆ ಹಾಗು ಪರಿಚಯ ಮಾಡುವದರಲ್ಲಿ expert ಆಗಿತ್ತಿದ್ದೀರಿ !
ಗುರುಗಳೇ
ಗುರುಗಳೇ
ಈ ತರಹದ ಚ್ಹಿತ್ರಗಳ ಬಗ್ಗೆ ಯಾವತ್ತೋ ಬರೆಯಬೇಕಿತ್ತು ಆದರೆ ಈಗ ಸಮಯ ಕೂಡಿ ಬ0ತು..!!
ಇನ್ನಸ್ಟು ಬರಹಗಳು ನಿಮಗಾಗಿ ಕಾದಿವೆ....
ಪ್ರತಿಕ್ರಿಯೆಗೆ ನನ್ನಿ
ಒಳಿತಾಗಲಿ..
\|/
ಗುರುಗಳೇ(ಸಪ್ತಗಿರಿವಾಸಿಯ), ಹೀಗೆ
ಗುರುಗಳೇ(ಸಪ್ತಗಿರಿವಾಸಿಯ), ಹೀಗೆ ರಾಶಿ ರಾಶಿ ಸಿನೆಮಾ ವಿಮರ್ಶೆ ಮಾಡುವುದನ್ನು ನೋಡಿದರೆ, ಕನ್ನಡಕ್ಕೆ ಹೊಸ "ಸಿನೆಮಾ ಡೈರೆಕ್ಟರ್" ಬರುವ ಹಾಗೆ ಕಾಣಿಸುತ್ತಿದೆ.:) ಶುಭವಾಗಲಿ..
ವೆಂಕಟ್,ವಾಲ್ಕಿರೀ ವಿಮರ್ಶೆ ವೆರಿವೆರಿಗುಡ್.
In reply to ಗುರುಗಳೇ(ಸಪ್ತಗಿರಿವಾಸಿಯ), ಹೀಗೆ by ಗಣೇಶ
ಚಿತ್ರ ವಿಮರ್ಶೆಯನ್ನು ತುಂಬಾ
ಚಿತ್ರ ವಿಮರ್ಶೆಯನ್ನು ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ, ಅಭಿನಂದನೆಗಳು.
In reply to ಚಿತ್ರ ವಿಮರ್ಶೆಯನ್ನು ತುಂಬಾ by ಮಮತಾ ಕಾಪು
ಮಮತಾ ಅವ್ರೆ
ಮಮತಾ ಅವ್ರೆ
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|
In reply to ಗುರುಗಳೇ(ಸಪ್ತಗಿರಿವಾಸಿಯ), ಹೀಗೆ by ಗಣೇಶ
ಗಣೇಶ್ ಅಣ್ಣ -
ಗಣೇಶ್ ಅಣ್ಣ -
ಚಲನ ಚಿತ್ರ ವೀಕ್ಷಣೆ ನನಗೆ ಬಾಲ್ಯದಲೇ ಅಂಟಿದ
ಗೀಳು...!!
ಚಟ ...
ಹುಚ್ಚು..!!
ಈ ಕಾರಣವಾಗಿಯೇ ಅದೆಸ್ಟು ಸಾರಿ ಮನೆಯವರಿಂದ ಬೇಜಾನ್ ಪೇಮೆಂಟು ಪಡೆದಿರುವೇನೋ ಲೆಕ್ಕವಿಲ್ಲ...!!
ನನ್ನ ಸಿನೆಮ ಹುಚ್ಚು ನೋಡಿ -ಆ ಬಗ್ಗೆ ಗೆಳೆಯರೊಡನೆ ಚರ್ಚಿಸುವಾಗ ಹಲವರು ಹೇಳಿದ್ದರು(ಹಾಗೆ ಹೇಳಿದವರಲಿ ಒಬ್ಬ ಈಗ ಕನ್ನಡ ಚಿತ್ರ ರಂಗ ಮತ್ತು ಟೀ ವಿ ಲೋಕದಲಿ ಸಹಾಯಕ ನಿರ್ದೇಶಕ ಆಗಿರುವನು) ನೀ ನಿರ್ದೇಶಕ ಆಗಬಹ್ದು,ಇಲ್ಲವೇ ಚಲನ ಚಿತ್ರರಂಗದಲ್ಲಿ ಖಂಡಿತ ಸೇರುವೆ..!!
ಆದ್ರೆ ನಾ ಓದಿದ್ದು -ಮಾಡೋ ವೃತ್ತಿ ಬೇರೆಯೇ ಆಯ್ತು...!!
ಚಲನ ಚಿತ್ರಗಳ ಬಗ್ಗೆ ಬರೆಯೋದು ಪ್ರವೃತ್ತಿ ಆಯ್ತು..
ಈಗಲೂ ಏನಿಲ್ಲ ಅಂದರೂ ದಿನ ನಿತ್ಯ ಒಂದಾದರೂ ಚಿತ್ರ ಡೌನ್ಲೋಡ್ ಮಾಡೋದು ನೋಡೋದು ಇದ್ದದ್ದೇ....!!
ಊಟ-ನಿದ್ರೆ-ಓದು-ಚಿತ್ರ ವೀಕ್ಷಣೆ -ಪ್ರವಾಸ ನನ್ನ ಪ್ರಿಯ ಹವ್ಯಾಸಗಳು..!!
ತೋಚಿದ ಕಥೆ-ಕವನ-ಹಾಸ್ಯ ಬರಹ ಬರೆದು ಬರೆಯಲು ಹೊಸತಾಗಿ ಏನೂ ಸಿಗದೇ -ಹೊಳೆಯದೆ ನಾ ಎಂದೋ ಬರೆಯಬೇಕಾಗಿದ್ದ ಚಿತ್ರ ಗಳ ಬಗೆಗಿನ ಬರಹಗಳನ್ನು ಈಗ ಶುರು ಹಚ್ಚಿಕೊಂಡಿರುವೆ -ಬರೆಯೋದೋ ಬೇಜಾನ್ ಇದೆ..
ಹಾಗೆಯೇ ಅವುಗಳಿಗಾಗಿಯೇ ಒಂದು ಪ್ರತ್ಯೇಕ ಬ್ಲಾಗ್ ಮಾಡುವ ಇರಾದೆ ಇದೆ... ನೋಡುವ..
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.
\|