ದಿಕ್ಕೆಟ್ಟ ಹುಡುಗನ ದನಿ
ಕವನ
ಸುಮ್ ಸುಮ್ನೆ ಶುರುವಾಯ್ತು ಹಿಂಗೇ ಒಂದು ಪ್ರೀತಿ
ಮನಸಿನ ಒಳಗೆ ಕಾಡ್ತಿತ್ತು ಭೀತಿ
ಅವಳದ್ದು ನಂದು ಬ್ಯಾರೆ ಬ್ಯಾರೆ ಜಾತಿ
ಏನ್ಮಾಡೋದೀಗ ಬಲೇ ಪಜೀತಿ
ಅವಳೇನೋ ಓಕೆ ಅಂದ್ಲು
ಅವರ ಅಪ್ಪಂದು ಒಂದೇ ಪ್ರಶ್ನೆ: ಯಾವ್ ಜಾತಿ ನಿಂದು?
ಮುಚ್ಕೊಂಡು ಮನೆಗೋಗು ಮಾತಿಲ್ದೆ
ಮುಖ ಮೂತಿ ತಗ್ಗೋಯ್ತದೆ ಮಾತಾಡುದ್ರೆ
ಆದ್ರೂ ಸುಮ್ಮನಾಗಲಿಲ್ಲ ಈ ಹಾಳು ಮನಸ್ಸು
ಅವಳನ್ನ ಎದೇಲಿ ತುಂಬ್ಕೊಂಡು ಕಾಣ್ತದೆ ಕನಸು
ಏನಾರ ಮಾಡು ಹೆಂಗಾರ ಮಾಡು
ಬಿಡಬ್ಯಾಡ ಪ್ರೀತೀನ ಒದ್ದೋಡ್ಸು ಜಾತೀನ
ನಾನೋ ಪುಕ್ಕಲು ಈ ಪ್ರೀತಿನೋ ಕಗ್ಗಲ್ಲು
ಕೆತ್ತಕ್ಕಾಗಲ್ಲ ಬಿಡಕ್ಕಾಗಲ್ಲ
ಯಾವೋನೋ ಕೋತಿ ಮಾಡ್ಬುಟ್ಟ ಜಾತಿ
ಮನುಸ್ರು ಮಧ್ಯೆ ತಂದಿಟ್ಟ ಇಲ್ಲುದ್ ಕಿತಾಪತಿ
ಸಿಕ್ರೆ ವಸಿ ಬುದ್ಧಿ ಹೇಳಿ ಅವರಪ್ಪುಂಗೆ
ಬಟ್ಟೆ ಬಿಚ್ಕಂಡು ನಿಂತ್ಕಂಡ್ರೆ ನೀನೂ ಎಲ್ಲಾರಂಗೆ
ಬಿಸಾಕಯ್ಯ ನಿನ್ ಜಾತೀನ ಶುದ್ಧ ಮಾಡ್ಕಳಯ್ಯಾ ಹೃದಯಾನ
ಕಡೀಬ್ಯಾಡ ಪ್ರೀತೀನ ಒಡೀಬ್ಯಾಡ ಮನಸ್ಸನ್ನ
Comments
ತಿಮ್ಮಪ್ಪ ರವರಿಗೆ ವಂದನೆಗಳು
ತಿಮ್ಮಪ್ಪ ರವರಿಗೆ ವಂದನೆಗಳು
' ದಿಕ್ಕೆಟ್ಟ ಹುಡುಗ ' ಕವನ ಓದಿದೆ ಅದರ ಆಶಯ ಚೆನ್ನಾಗಿದೆ, ಧನ್ಯವಾದಗಳು.
In reply to ತಿಮ್ಮಪ್ಪ ರವರಿಗೆ ವಂದನೆಗಳು by H A Patil
ಧನ್ಯವಾದಗಳು ಸಾರ್.. ನಿಮ್ಮಂತಹ
ಧನ್ಯವಾದಗಳು ಸಾರ್.. ನಿಮ್ಮಂತಹ ಹಿರಿಯರ ಮೆಚ್ಚುಗೆಯಿಂದ ಸಂತಸವಾಗಿದೆ. ಧನ್ಯವಾದಗಳು.
>>>ಸಿಕ್ರೆ ವಸಿ ಬುದ್ಧಿ ಹೇಳಿ
>>>ಸಿಕ್ರೆ ವಸಿ ಬುದ್ಧಿ ಹೇಳಿ ಅವರಪ್ಪುಂಗೆ
ತಿಮ್ಮಪ್ಪಾ,
ವಸಿ ನಮ್ಮ ಪಾಯಿಂಟೂ ಕೇಳಿ,
>>ಮುಖ ಮೂತಿ ತಗ್ಗೋಯ್ತದೆ ಮಾತಾಡುದ್ರೆ
ಆಯಪ್ಪ ನಮ್ಮನ್ನು ಸುಮ್ಕೆ ಬಿಟ್ಟಾರಾ!?
>>>ಬಿಸಾಕಯ್ಯ ನಿನ್ ಜಾತೀನ ಶುದ್ಧ ಮಾಡ್ಕಳಯ್ಯಾ ಹೃದಯಾನ
-ಹೀಗನ್ಬೇಕಂದ್ರೆ...
ನಮ್ಮ ಪ್ರೇಮಶೇಖರ್‌ಗೆ ಮಾತ್ರ ಸಾಧ್ಯ :)
-ಗಣೇಶ.
In reply to >>>ಸಿಕ್ರೆ ವಸಿ ಬುದ್ಧಿ ಹೇಳಿ by ಗಣೇಶ
ಅಲ್ಲಾರೀ.. ಗಣೇಶವ್ರೇ.. ಮೊದ್ಲೇ
ಅಲ್ಲಾರೀ.. ಗಣೇಶವ್ರೇ.. ಮೊದ್ಲೇ ನಮ್ಮುಡ್ಗ ಪುಕ್ಕಲು.. ಅವ್ನಿಗೆ ನೀವೆಲ್ಲಾ ಸೇರಿ 'ಬಾರಲೇ ಅದ್ಯಾಕಂಗೆ ಹೆದುರ್ಕಂಡು ಸಾಯ್ತೀಯಾ..ಏನಾಯ್ತದೋ ನೋಡೆಬುಡಾನ' ಅಂತ ಧೆೈರ್ಯ ತುಂಬ್ತೀರ ಅಂದ್ಕಂಡ್ರೆ ಅವನನ್ನ ಇನ್ನೂ ಹೆದುರಿಸ್ತಿದೀರಲ್ಲಾ..
In reply to ಅಲ್ಲಾರೀ.. ಗಣೇಶವ್ರೇ.. ಮೊದ್ಲೇ by tthimmappa
ತಿಮ್ಮಪ್ಪ ಅವ್ರೆ ಗ್ರಾಮ್ಯ
ತಿಮ್ಮಪ್ಪ ಅವ್ರೆ ಗ್ರಾಮ್ಯ ಭಾಷೇಲಿ ,ಪ್ರೀತೀಲಿ ಬಿದ್ದು ದಿಕ್ಕೆಟ್ತವನ ಮನದಾಳದ ಹಾಡು ಸೊಗಸಾಗಿದೆ..
ರೈಮ್ಸ್ ರೀತಿ ಇದ್ದು ಓದಲು ಖುಷಿ ಎನಿಸುವ್ದು..
ಪ್ರೀತಿ ಮಾಡಬಾರದು -ಮಾಡಿದರೆ ಜಗಕೆ ಹೆದರಬಾರದು ಎಂದು ಕನಸುಗಾರ-ರವಿಚಂದ್ರನ್ 'ಅವತ್ತೇ' ಹೇಳಿಲ್ಲವೇ?
ಹುಡುಗನ ಪ್ರೀತಿ -ಹುಡುಗಿ ಸಿಗಲಿ..ಎಂದು ಮನದುಂಬಿ ಹಾರೈಸುವೆ.
ಶುಭವಾಗಲಿ..
\|
In reply to ತಿಮ್ಮಪ್ಪ ಅವ್ರೆ ಗ್ರಾಮ್ಯ by venkatb83
ವೆಂಕಟೇಶ್ ರವ್ರೇ ನಿಮ್ಮಂತೆ ನಾನೂ
ವೆಂಕಟೇಶ್ ರವ್ರೇ ನಿಮ್ಮಂತೆ ನಾನೂ ಸಹ ಪ್ರೀತಿಸುತ್ತಿರುವ ಎಲ್ಲಾ ಹುಡುಗ - ಹುಡುಗಿಯರು ಈ ಕಾಲ್ಪನಿಕ
ಜಾತಿ ವ್ಯವಸ್ತೆಯಿಂದ ತೊಂದರೆ ಅನುಭವಿಸದೆ ಅವರ ಪ್ರೀತಿ ಯಶಸ್ವಿಯಾಗಲಿ ಎಂದು ಹಾರೆೈಸುತ್ತೇನೆ. ತಮ್ಮ ಮನದಾಳದ ಪ್ರತಿಕ್ರಿಯೆಗೆ ಧನ್ಯವಾದಗಳು.