ಕಾಲಾಪಾನಿ-1996- ಚಿತ್ರ ಇನ್ನೂ ನೋಡಿಲ್ಲವೇ?
ಚಿತ್ರ
ಕಥೆ:
=====
ಬ್ರಿಟಿಷರ ವಿರುದ್ಧ ಹೋರಾಡುವ ಕ್ರಾಂತಿಕಾರಿಗಳಿಗೆ ತನ್ನ ಸ್ನೇಹಿತನ ಕಡೆಯವರು ಎಂದು ಮನೆಯಲ್ಲಿರಲು ಜಾಗ ಕೊಟ್ಟು ಅವರು ಟ್ರೇನ್ ಒಂದರ ಮೇಲೆ ಬಾಂಬು ಎಸೆದು ಸುಮಾರು 55 ಜನರ(ಬ್ರಿಟಿಷರೂ ಸೇರಿ) ಮರಣಕ್ಕೆ ಕಾರಣವಾಗಿ, ವಿಚಾರಣೆಯಲ್ಲಿ ಕಥಾ ನಾಯಕ ಡಾ: ಗೋವಿಂದನ್ ನಾಯರ್ (ಮೋಹನ್ ಲಾಲ್ )ನ ಕ್ರಾಂತಿಕಾರಿಗಳಿಗೆ ಸಹಕಾರ ನೀಡಿದ ಆರೋಪ ಸಾಭೀತಾಗಿ ಜೇಲು ಶಿಕ್ಷೆ ಜಾರಿ ಆಗಿ ನಮ್ಮ ದೇಶದ ಕುಖ್ಯಾತ ಅಂಡಮಾನ್ ನ ಸೇಲ್ಲ್ಯುಲರ್ ಜೇಲಿಗೆ ಇನ್ನಿತರ ಖೈದಿಗಳೊಡನೆ ಸೇರಲ್ಪಡುವನು ..
ತನ್ ಮನೆಯಲ್ಲಿದ್ದವರು ಕ್ರಾಂತಿಕಾರಿಗಳು-ಬಾಂಬು ಹಾಕುವ ಉದ್ದೇಶ ಹೊಂದಿದ್ದವರು ಎಂದು ಡಾ:ಗೋವಿಂದನ್ ನಾಯರ್ಗೆ ಅರಿವಿರುವುದಿಲ್ಲ.ಆದರೆ ಎಚ್ಚೆತ್ತು ಅವರನ್ನ ತಡೆಯುವುದರೊಳಗೆ ಅನಾಹುತ ನಡೆದು ಮಾಡದ ತಪ್ಪಿಗೆ ಜೇಲು ಶಿಕ್ಷೆ ಅನುಭವಿಸಬೇಕಾಗುವುದು -ದುರಂತ ಎಂದರೆ ಅಂದೇ ಆಗಲೇ ಸುಧಾರಣಾವಾದಿ ತರಹ ಮದ್ವೆಯಾಗಿ ಇನ್ನೇನು ಮನೆಗೆ ಹೋಗಬೇಕು ಆಗಲೇ ಪೋಲೀಸರ ಆಗಮನ -ವಿಚಾರಣೆ-ಶಿಕ್ಷೆ..:((
ಈ ಅಂಡಮಾನ್ ಜೇಲಿನ ಬಗ್ಗೆ ಈಗಾಗಲೇ ನಮಗೆಲ್ಲ ಗೊತ್ತು -ಸ್ವಾತಂತ್ರ್ಯಕ್ಕಾಗಿ ವಿದೇಶಿಯರ ತೊಲಗುವಿಕೆಗೆ ಚಳುವಳಿಯನ್ನ ಶಾಂತ ರೀತಿ -ಕ್ರಾಂತಿಕಾರಿ ಹೋರಾಟ ಮಾಡಿದವರನ್ನ ಸಹ ಹಾಗೆಯೇ ಕೆಲವು ಜನ ಅಮಾಯಕರನ್ನು ಸಹ ಅಲ್ಲಿಗೆ ಅಟ್ಟಿರುವರು...
ಸುತ್ಲೂ ನೀರಿಂದ ತುಂಬಿರುವ ಅಪಾಯಕಾರಿ ಶಾರ್ಕ್ ಮತ್ತು ಇನ್ನಿತರ ಪ್ರಾಣಿ ಜಲಚರ್ಗಳಿಂದ ತುಂಬಿರುವ ಆ ಜೇಲಿಗೆ ಹೋಗುವ ಬರುವ ವಿಧಾನ ವಿಮಾನ,ಅಥವಾ ಹಡಗು ಮಾತ್ರ..:((
ಆ ಜೇಲು ಸುಪರಿಂಡೆಂಟು ಮತ್ತು ಅವನ ಸಹಾಯಕರು ಕ್ರೂರಿಗಳಸ್ಟೇ ಅಲ್ಲ ಅತಿ ಕ್ರೂರಿಗಳು...:((
ಆ ಜೇಲು ಸುಪರಿಂಡೆಂಟು-ಡೇವಿಡ್ ಬೆರ್ರಿ ಮತ್ತು ಅವನ ಸಹಾಯಕ ಮಿರ್ಜಾ ಖಾನ್ (ಅಮರೀಶ್ ಪುರಿ) ಸೇರಿ ದುಷ್ಟಕೂಟದ ಮುಖ್ಯಸ್ಥರು..
ಅವರಿಬ್ಬರ ಸಂಗಮದಲ್ಲಿ ನಡೆವ ಮಸಲತ್ತು -ವಂಚನೆ -ದುರಾಡಳಿತ -ಹಿಂಸೆಗೆ ಎಣೆಯಿಲ್ಲ..:((
ಜೈಲು ಖೈದಿಗಳನ್ನು ಅತಿ ಕ್ರೂರವಾಗಿ ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುವ -ಕೊಳ್ಳುವ ದುರುಳರು .:((
ಜೇಲಿನ ಅವ್ಯವಹಾರ-ಅನೀತಿ -ದುರಾಡಳಿತದ ಬಗ್ಗೆ ಯಾರೂ ಸೊಲ್ಲೆತ್ತುವ ಹಾಗಿಲ್ಲ- ಎತ್ತಿದವರು ಸೀದಾ ಮೇಲಕ್ಕೆ..!!
ಚಕ್ರ ತುಳಿದು ,ನೊಗ ಹೊತ್ತು ಸುತ್ತಲೂ ಸುತ್ತಿ ಎಣ್ಣೆ ತೆಗೆವ ಕೆಲಸದ ಹೆಸರಿನ ಕಠಿಣ ಶಿಕ್ಷೆ ಜೊತೆಗೆ ಕೈ ಕಾಲಿಗೆ ಸರಪಳಿ ಬಿಗಿದು ನೇತು ಹಾಕಿ ಬೇಜಾನ್ ಬೆಂಡೆತ್ತುವ ಅನಿರೀಕ್ಷಿತ ಶಿಕ್ಷೆಗಳೂ ಸಹ...:((
ಇಂತಿಪ್ಪ ಈ ಜೇಲಿನಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳುವ ಮನ ಸ್ಥಿತಿಯ ಹಲವರು ಇದ್ದು ಹಲವು ಸಾರಿ ಪ್ರಯತ್ನಿಸಿ ಮತ್ತೆ ಸಿಕ್ಕು ಬಿದ್ದು ಕಠಿಣ ಶಿಕ್ಷೆ ಜೊತೆಗೆ ಸೆರೆ ವಾಸ ಹೆಚ್ಚಿದವರು ಮತ್ತು ಆ ಕಾರಣವಾಗಿ ಗಲ್ಲು ಶಿಕ್ಷೆಗೆ ಗುರಿ ಆದವರು ಇರುವರು..:((
ಈ ಜೇಲಿನಲ್ಲಿ ವೀರ ಸಾವರ್ಕರ್ (ಅನ್ನು ಕಪೂರ್)ಸಹಾ ಇದ್ದು ಜೇಲಿನ ಖೈದಿಗಳ ಮೇಲಿನ ದೌರ್ಜನ್ಯ -ಅನೀತಿ ಆಕ್ರಮಕ್ಕೆ ಪ್ರತಿಭಟಿಸುತ್ತ ದೇಶದ ಇತರ ಜನರ ಜೊತೆಗೂಡಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸಾಥ್ ನೀಡುವರು..
ಇಂಥಾ ಜೇಲಿಂದ ಪಾರಾಗಲು ಹವಣಿಸುವ ಜನರಲ್ಲಿ ಒಬ್ಬ (ಹಲವು ಸಾರಿ ಪ್ರಯತ್ನಿಸಿ ವಿಫಲ ಆಗಿ ಕಠಿಣ ಅತಿ ಕಠಿಣ ಶಿಕ್ಷೆಗೆ ಗುರಿ ಆಗಿರುವ-ಆದರೂ ಪಟ್ಟು ಬಿಡದ ವಿಕ್ರಮ..!!) ಮುಕುಂದ (ಶಿವಾಜಿ ಗಣೇಶನ್ ಪುತ್ರ-ಪ್ರಭು)ಒಬ್ಬ..
ಇವನೋ ತನ್ನದೇ ರೀತಿಯಲ್ಲಿ ಎಸ್ಕೇಪ್ ಆಗಲು ಸ್ಕೆಚ್ ಹಾಕುವವನು-ಇನ್ನಿತರ ಕೆಲವು ಜನ ಜೇಲಿನ ಗೋಡೆಗೆ ತಾವ್ ತಾಯಾರಿಸಿದ ಬಾಂಬ್ ಇಕ್ಕಿ ಗೋಡೆ ಹೊಡೆದು ದೋಣಿಯಲ್ಲಿ ಪರಾರಿ ಆಗುವ ಸ್ಕೆಚ್ ಹಾಕಿದವರು...!!
ಜೇಲು ದಾಟಿ ಹೊರ ಹೋಗುವ ಇವರ ಯತ್ನ ಸಫಲವೇ?
ವಿಫಲವೇ?
ಆ ದಿಷೆಯಲಿ ಎದುರಾಗುವ ಅಡ್ಡಿಗಳು -ಆಗುವ ಆತಂಕ- ಕಣ್ಣಾರೆ ನೋಡಿ..!!
ಕೆಲವು ಗಮನಾರ್ಹ -ಕಣ್ಣಾಲಿ ತುಂಬಿಸುವ ಸನ್ನಿವೇಶಗಳು :
-----------------------------------------------------
1. ಬ್ರಾಹ್ಮಣನಾದ ರಾಮ್ ಲಖನ್ (ಟೀನು ಆನಂದ್ )ಊಟದ ತಟ್ಟೆಯಲ್ಲಿ ಯಾವ್ದೋ ಸತ್ತ ಪ್ರಾಣಿ ಸಿಗುವುದು ಅದ್ಕೆ ಊಟ ನಿರಾಕರಿಸಿ ಪ್ರತಿಭಟಿಸುವ ಅವನಿಗೆ ಸಾಥ್ ನೀಡುವ ವೀರ ಸಾವರ್ಕರ್ -ಗೋವಿಂದನ್ ನಾಯರ್ ಮತ್ತು ಇನ್ನಿತರ ಖೈದಿಗಳು (ಮುಕುಂದನನ್ನ ಬಿಟ್ಟು..!!)
2. ತಮ್ಮ ವಿರುದ್ಧ ಸೋಲ್ಲೆತುವವರನ್ನು ನಿರ್ದಯರಾಗಿ ಹೀನಾತಿ ಹೀನವಾಗಿ ಕೊಲ್ಲುವ ದೃಶ್ಯಗಳು.ಅದ್ರಲ್ಲಿ ತಾವ್ ಪಟ್ಟಿ ಮಾಡಿದ ಕೆಲವೇ ಜನರ(ಮುಖ್ಯವಾಗಿ ಮುಕುಂದ ಮತ್ತು ಗೋವಿಂದನ್ ನಾಯರ್) ಹತ್ಯೆಗಾಗಿ ಜೇಲಿನಲ್ಲಿ ಹಿಂದೂ ಮುಸ್ಲಿಂ ಗಲಭೆ ಎಬ್ಬ್ಸಿ ಸಾಮೂಹಿಕ ಗುಂಡಿಟ್ಟು ಹತ್ಯೆಗೆಯ್ಯುವ ದೃಶ್ಯ..:(((
3. ರಾಮ್ ಲಖನ್ ಗೆ ಒತ್ತಾಯಪೂರ್ವಕವಾಗಿ ಮನುಸ್ಜ್ಯರ ಮಲವನ್ನು ನಳಿಕೆ ಮೂಲಕ ಕುಡಿಸುವ -ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲು ಜೈ ಮೇಲಿಂದ ಕೆಳಗೆ ಬಿದ್ದು ಸಾಯುವ ಅದನ್ನು ಜೇಲರು ಇನ್ನಿತರರು ಸೇರಿ ಮುಚ್ಚಿ ಹಾಕಲು ಪ್ರಯತ್ನಿಸುವ ದೃಶ್ಯ:((
4.ಸಾವರ್ಕರ್ ಬ್ರಿಟಿಷರ ವಿರುದ್ಧದ ಘೋಷಣೆಗೆ ಜೇಲರು ಕ್ರುದ್ಧನಾಗಿ ಬಾಯಿಗೆ ಒದೆವ ದೃಶ್ಯ-ಆದರೂ ಪ್ರಜ್ಞೆ ತಪ್ಪುವವರೆಗೆ ಘೋಷಣೆ ಏಕಾಂಗಿಯಾಗಿ ಕೂಗುವ ಸಾವರ್ಕರ್
5.ನಿಶ್ಯಕ್ತಿಯಿಂದ -ಬಳಲಿರುವ ಖೈದಿಗೆ ತನ್ನ ಬೂಟು ಕ್ಲೀನ್ ಮಾಡಲು ಹೇಳುವ ಮಿರ್ಜಾ ಖಾನ್ -ಆ ಖೈದಿ ಪರವಾಗಿ ತಾನು ಆ ಕೆಲಸ ಮಾಡುವುದಾಗಿ ಹೇಳುವ ಗೋವಿಂದನ್ ನಾಯರ್ (ಮೋಹನ್ ಲಾಲ್) ನ ಮಾತು ಉದ್ಧಟತನ-ಉಡಾಫೆ ತರಹ ಕಾಣಿಸಿ ಕೇಳಿಸಿ ಮಿರ್ಜಾ ಖಾನ್ ಗೋವಿಂದನ್ ನಾಯರ್ಗೆ ಅವನ ನಾಲಗೆಯಿಂದ ನೆಕ್ಕಿ ಬೂಟು ಸ್ವಚ್ಛ ಮಾಡುವ ದೃಶ್ಯ...:(( (ಮೋಹನ್ ಲಾಲ್ ಮತ್ತು ಅಮರೀಶ್ ಪುರಿಯ ಈ ದೃಶ್ಯ ಅತಿ ಸಹಜವಾಗಿ ಬಂದಿದ್ದು ಅಚ್ಚರಿ ಹುಟ್ಟಿಸಿ ಅಸಹ್ಯ ಅನ್ನಿಸುವುದು)..
6. ಇದೆಲ್ಲದಿಕ್ಕಿಂತ ಕೆಟ್ಟ ಮತ್ತು ಆ ಸಂದರ್ಭದ ಅಗತ್ಯದ ಮನದಟ್ಟು ಮಾಡಿಸುವ ಈ ದೃಶ್ಯ- ಜೇಲಿನಿಂದ ತಪ್ಪಿಸಿಕೊಂಡು ದೋಣಿಯಲ್ಲಿ ಪರಾರಿ ಆಗಿ ಬರುವಾಗ ದೊಡ್ಡ ಗಾಳಿ ಬೀಸಿ ದೋಣಿ ಮುಳುಗಿ ಒಂದಷ್ಟು ಜನ ನೀರಲ್ಲಿ ಈಜುತ್ತಾ ಬಂದು ಒಂದು ನಿರ್ಜನ ದ್ವೀಪ ತಲುಪಿದಾಗ ಒಬ್ಬ ಖೈದಿಗೆ ಹಸಿವಾಗಿ ಉಪ್ಪು ಮಣ್ಣು ತಿನ್ನಲು ಹೋದಾಗ ಗೋವಿಂದನ್ ನಾಯರ್ ತಡೆದು ಕುಡಿಯಲು ಶುದ್ಧ ನೀರು ತರುವುದಾಗಿ ಹೇಳಿ ಕೊಳ ಹುಡುಕಿ ನೀರು ತರುವುದರೊಳಗೆ ಆ ಹಸಿವಾದ ಖೈದಿ ತನ್ ಸಹ ಖೈದಿ ಒಬ್ಬನನ್ನು ಕಟ್ಟಿಗೆಯಲಿ ಹೊಡೆದು ಕೊಂದು ಅವನ ಮಾಂಸ ಭಕ್ಷಿಸುತ್ತ ರಕ್ತ ಕುಡಿವ ದೃಶ್ಯ..:((
7.ಕ್ರೂರಿ ಜೇಲರು ,ಅತಿ ಕ್ರೂರಿ ಸಹಾಯಕ ಮಿರ್ಜಾ ಖಾನ್ ಮಧ್ಯೆ ಖೈದಿಗಳಿಗೆ ಆಶಾಕಿರ್ಣವಾದ ಸ್ಪೂರ್ತಿ ತುಂಬುವ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ -ಅವರ ದಬ್ಬಾಳಿಕೆಗೆ ವಿರೋದಿಸುವ ಜೇಲಿನ ಡಾಕ್ಟರ್ (ವಿದೇಶಿಗ)ನ ಸನ್ನಿವೇಶಗಳು-ಮುಖ್ಯವಾಗಿ ಜೇಲಿನ ಈ ಅನೀತಿ ದುರಾಡಳಿತವನ್ನು ಮೇಲಿನವರಿಗೆ ತಿಳಿಸುವ ಕಾರ್ಯ ..
ಇದಲದೆ ಹಲವು ದೃಶ್ಯಗಳು ಅದ್ಕೆ ಹೆಚ್ಚಾಗಿ ಇಡೀ ಚಿತ್ರವೇ ಗಮ್ನಾರ್ಹವಾಗಿದ್ದು ಅಂದು ನಡೆದ (ಸ್ವಾತಂತ್ರ್ಯ ಪೂರ್ವದಲಿ) ಪ್ರತಿ ಘಟನೆ ಯ ದರ್ಶನವನ್ನು ಮಾಡಿಸುವದು.
ಮೋಹನಲಾಲ್ -ಕೇರಳದ ಖ್ಯಾತ ನಟ -ಈ ಹಿಂದೆ
ಮಣಿ ರತ್ನಂ ನಿರ್ದೇಶನದ 'ಇರುವರ್' ಚಿತ್ರದಲ್ಲಿ ಎಂ ಜೀ ಆರ್ ಪಾತ್ರದಲ್ಲಿ ಬ್ಯಾಲೆನ್ಸ್ ನಟನೆ ಮಾಡಿ ಸೈ ಅನ್ನಿಸಿಕೊಂಡವರು
(ಆ ಚಿತ್ರ ಎಂ ಜೀ ಆರ್ ಮತ್ತು ಕರುಣಾ ನಿಧಿ ಅವರ ಸ್ನೇಹ -ಅವರವರ ಕ್ಷೇತ್ರದಲ್ಲಿ (ರಾಜಕೀಯ-ಸಿನೆಮ)ನ ಬೆಳವಣಿಗೆ ,ವೈಮನಸ್ಯ-ಅಸೂಯೆ -ಶೀತಲ ಸಮರದ ಬಗ್ಗೆ ಇದೆ.).. ಆಷ್ಟೇ ಪವರ್ಫುಲ್ ಪಾತ್ರವನ್ನು ನೀಟಾಗಿ ಈ ಕಾಲಾಪಾನಿ ಚಿತ್ರದಲ್ಲಿ ನಿರ್ವಹಿಸಿರುವರು..
ಇಡೀ ಚಿತ್ರದಲ್ಲಿ ನಟನೆಯಲ್ಲಿ ಮಿಂಚಿ ಸದಾ ನೆನಪಲ್ಲಿ ಉಳಿಯುವವರು :
ಮೋಹನ್ ಲಾಲ್, ಟಬು (ಮೋಹನ್ಲಾಲ್ ಪತ್ನಿಯಾಗಿ ) ,
ಅಮರೀಶ್ ಪುರಿ,
ಆಂಗ್ಲ ಜೇಲರು ,
ಟೀನು ಆನಂದ್ (ರಾಮ್ ಲಕನ್ ಪಾತ್ರಧಾರಿ),
ಡಾಕ್ಟರ್(ಆಂಗ್ಲ ಪಾತ್ರಧಾರಿ ) ,
ಪ್ರಭು(ಮುಕುಂದ)..
ಅದರಲ್ಲೂ ಟಬು(ನಟಿ) ಬಗ್ಗೆ ಇಲ್ಲಿ ಉಲ್ಲೇಖಿಸಲೇಬೇಕು..
ಮದುವೆಯ ದಿನ ,ತಾಳಿ ಕಟ್ಟಿ ಕೆಲವೇ ಕ್ಷಣಗಳಲ್ಲಿ ಪೋಲೀಸರ ಅಗಮನ,ಮೋಹನ್ಲ್ಲಾಲ್ ಬಂಧನ-ಈಗ ಬರುವೆ ಎಂದು ಹೋದ ಮೋಹನ್ ಲಾಲ್ ಬರುವಿಕೆಗಾಗಿ ಕಾದು ಕುಳಿತ ಟಬು ಗೆ ಜೇಲು ಡಾಕ್ಟರ್ ಅವಳ ಗಂಡನ ಬಿಡುಗಡೆ ಪತ್ರ ತೋರಿಸಿ ಇನ್ನೇನು ಶೀಘ್ರ ಬರುವರು ಎಂದು ಹೇಳಿ ಹೋಗಿ ಏಷ್ಟೋ ದಿನಗಳಾದರೂ ಮೋಹನ್ಲಾಲ್ ಬಾರದೆ ಇದ್ದರೂ ರೈಲ್ವೆ ಸ್ಟೇಶನ್ ಹತ್ತಿರ ಮೋಹನ್ಲಾಲ್ ಬರುವಿಕೆಗಾಗಿ ದಿನವೂ ಕಾದು ಕುಳಿತು ಮುದುಕಿಯಾದ ಟಬು ವಿನ ಆ ನಟನೆ ಕಣ್ಣು ತೇವ ಮಾಡಿ ಹೃದಯ ಭಾರ ಮಾಡುವುದು...
ಚಿತ್ರ ನೋಡಿ ಹಲವು ದಿನಗಳವರೆಗೆ ಆ ಗುಂಗಿಂದ ಆಚೆ ಬರಲು ಆಗುವುದಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ...
ಸಶಕ್ತ ಕಥೆ-ನಿರ್ದೆಶನ,ನಟನೆ...
ಮೆಚ್ಚುಗೆಗೆ -ಅರ್ಹವಾದ ಸಿನೆಮ..
ಕಥೆ-
ಚಿತ್ರ ಕಥೆ-
ನಿರ್ಮಾಣ -
ನಿರ್ದೆಶನ-
ಛಾಯಾಗ್ರಹಣ(ಸಂತೋಷ್ ಸಿವನ್ )-
ಸಂಗೀತ(ಇರುವುದು 2 ಹಾಡುಗಳು ಮಧುರವಾಗಿವೆ-ಸಮಯ ಸೂಕ್ತವಾಗಿವೆ)-
ನಟನೆ ಎಲ್ಲವೂ ಅದ್ಭುತ... ಅಮೋಘ ..
ಹಲವು ಆಂಗ್ಲ ಚಿತ್ರಗಳನ್ನು (ಹೆಚ್ಚು ಕಡಿಮೆ ಇದೇ ತರಹದ ಕಥಾ ವಸ್ತು ) ನೋಡಿದ್ದ ನನಗೆ ನಮ್ ದೇಶದಲ್ಲಿ ಈ ತರಹದ ಏಷ್ಟೋ ಘಟನೆಗಳು ಆಗಿವೆ ಆ ಬಗ್ಗೆ ಇಸ್ಟೇ ಚೆನ್ನಾಗಿ ಸಿನೆಮ ತೆಗೆಯೋರು ಯಾಕಿಲ್ಲ-ಯಾಕ್ ಆಗೋಲ್ಲ? ಎನ್ನುವ ಭಾವವಿತ್ತು ,ಆದರೆ ಈ ಚಿತ್ರ ನೋಡಿದ ಮೇಲೆ (ಹಾಗೆಯೇ ಮಣಿ ರತ್ನಂ ಅವರ ಇರುವರ್ -ಬಾಂಬೆ-ರೋಜಾ -ದಿಲ್ ಸೆ)-ನಾವೇನೂ ಕಮ್ಮಿ ಇಲ್ಲ ಎಂದು ಸಾಭೀತಾಯ್ತು......
ಚಿತ್ರ ವೀಕ್ಷಿಸಿದಾಗ -ಮನದಲ್ಲಿ ಒಂಥರಾ ವಿಷಾಧ ಭಾವ ಮೂಡುವುದು -ಹಾಗೆಯೇ ಅಂದಿನ ಚರಿತ್ರೆ -ತ್ಯಾಗ ಬಲಿದಾನ ಮರೆತು ಗಳಿಸಿದ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿ ಪೋಲು ಮಾಡುತಿರುವ -ಆಮೋದ ಪ್ರಮೊಧಗಳಲ್ಲಿ ಮೈ ಮರೆತಿರುವ ದುಷ್ಟಕಾರ್ಯಗಳಲಿ ನಿರತರಾದ -ರಾಜಕೀಯಕ್ಕೆ ಪಕ್ಷಗಳಿಗೆ ದಾಳವಾಗುವ ಒಟ್ಟಿನಲ್ಲಿ ಇತಿಹಾಸದ ಬಗ್ಗೆ ಅಸಡ್ಡೆ ಹೆಚ್ಚಿದ ಇಂದಿನ ಅಯ್ ಡೋಂಟ್ ಕೇರ್ ಮನಸ್ಥಿತಿಯ ಯುವಜನತೆಯ ಬಗ್ಗೆ ದೇಶದ ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡುವುದು....
ಈ ತರಹದ ಚಿತ್ರಗಳ ನಿರ್ಮಾಣ -ಅವುಗಳ ಪ್ರದರ್ಶನ(ಯುವ ಜನತೆಗೆ ಅಂದಿನ ಕಾಲಘಟ್ಟದ ಹೋರಾಟ-ತ್ಯಾಗ -ಬಲಿದಾನ-ನಿಸ್ವಾರ್ಥ ಸೇವೆ ಪರಿಚಯ ಮಾಡಿಸುವ ಅವಶ್ಯಕತೆ ಇದೆ...
ಅಂಡಮಾನ್ ಜೇಲ್ -ಸ್ವಾತಂತ್ರ್ಯ ಹೋರಾಟದ ಪ್ರತ್ಯಕ್ಷ ಅನುಭವ ನಮಗಿಲ್ಲ(ಇಂದಿನ ಕಾಲದ ಯುವಕರು-ಸ್ವಾತಂತ್ರ್ಯ ನಂತರ ಜನಿಸಿದವರು) ಆ ಬಗ್ಗೆ ತಿಳಿಯಲು ತ್ಯಾಗ ಬಲಿದಾನಗಳ ನಿಸ್ವಾರ್ಥತೆಯ ಬಗ್ಗೆ ಅರಿಯಲು -ನಮ್ಮನ್ನು ನಾವ್ ಸರಿ ದಾರಿಯಲ್ಲಿ ಮುನ್ನಡೆಸಲು -ಸ್ವಾತಂತ್ರ್ಯದ ಪ್ರಭಾವ-ಅದರ ಮಹತ್ವತೆ -ಉಳಿಸುವಿಕೆ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಯತ್ನದಲ್ಲಿ ಒಂದು ಸಶಕ್ತ ಮಾಧ್ಯಮವಾಗಿ ಸಿನೆಮ ಖಂಡಿತ ಪರಿಣಾಮಕಾರಿ ಎನ್ನುವುದು ನನ್ನ ಅಭಿಪ್ರಾಯ. ..
ನೀವ್ ಇನ್ನೂ ಇದನ್ನು ನೋಡಿಲ್ಲವಾದರೆ -ನೋಡಲೇಬೇಕಾದ -ಇನ್ನಿತರರಿಗೂ ಆ ಬಗ್ಗೆ ತಿಳಿಸಿ ನೋಡಲು ಆಗ್ರಹಿಸಬಹುದಾದ ಸಿನೆಮ..
>>>> ಮನೆ ಮಂದಿ ಎಲ್ಲ ಕುಳಿತು ಮುಜುಗರವಿಲ್ಲದೆ ಆದರೆ ಕಣ್ಣೀರು ಸುರಿಸುತ್ತ ನೋಡುವ ಸಿನೆಮ...
ಈ ತರಹದ ಚಿತ್ರ ನ್ನೋಡಿದಾಗ ಇದು ನಮ್ಮದೇ ಭಾಷೆಯಲ್ಲಿ ಬಂದು (ಆಯಾಯ ಭಾಷೆಯಲ್ಲಿ ಎಲ್ಲ ಜನರನ್ನು ಮುಟ್ಟಿ -ತಟ್ಟಿ )ನೋಡಿದ್ದರೆ ಚೆನ್ನಾಗಿತ್ತೇನೋ ಅನ್ನಿಸಿತು...
ಚಿತ್ರ ಮಲಯಾಳಂ,ತೆಲುಗು-ತಮಿಳ್-ಹಿಂದಿಯಲ್ಲಿ -ಇಂಗ್ಲಿಷ್ ನಲ್ಲಿ ತಯಾರಾದ ಹಾಗಿದೆ.
ನಾ ನೋಡಿದ್ದು ಹಿಂದಿ ಭಾಷೆಯ ಚಿತ್ರ ....ಉಪ ಶೀರ್ಷಿಕೆ ಜೊತೆ...
ಅದು ಯೂಟೂಬ್ನಲಿ ಲಭ್ಯ..
ಚಿತ್ರ ಬಹು ದಿನ ಕಾಡದೆ ಇರದು..(ಮಿರ್ಜಾ ಖಾನ್ (ಅಮರೀಶ್ ಪುರಿ )-
ಜೇಲರು -
ವೀರ ಸಾವರ್ಕರ್-
ಮುಕುಂದ-
ಮೋಹನ್ಲಾಲ್ ರ ಸನ್ನಿವೇಶಗಳು )
ಚಿತ್ರ ನೋಡುವಿರ ?
>>>ಈ ಹಿಂದೆ ಹಿಂದಿಯ ಖ್ಯಾತ ನಟ ದೇವ್ ಆನಂದ್ ಅವರ ನಟನೆಯಲ್ಲಿ ಈ ಸೆಲ್ಲುಲಾರ್ ಜೇಲು ಮತ್ತು ಶಿಕ್ಷೆ ಬಗ್ಗೆ ಒಂದು ಸಿನೆಮ ಬಂದಿದೆ-ಅದರ ಹೆಸರೂ ಕಾಲಾಪಾನಿ (1958)..
================================================================================================
ಚಿತ್ರ ಮೂಲ:
http://www.fridaycinemas.com/Images/kala-pani_1996Tel.jpg
http://1.bp.blogspot.com/-XH8fs9NXnGo/UFCcm9rLGfI/AAAAAAAA0xI/NxP4fZkRi5I/s400/saza_e_kala_pani_1330430420.jpg
http://im.rediff.com/news/2006/mar/10nlook.jpg
ಐ .ಎಂ.ಡೀ.ಬಿ ನನ್ನ ವಿಮರ್ಶೆ:
http://www.imdb.com/title/tt0255289/
ಐ .ಎಂ.ಡೀ.ಬಿ :
http://www.imdb.com/title/tt0255289/
ಪೂರ್ತಿ ಸಿನೆಮ ಯೂಟೂಬ್ನಲ್ಲಿ(ಹಿಂದಿ) :
ಸಜಾ -ಎ -ಕಾಲಾಪಾನಿ-1, 2 ಹೆಸರಲ್ಲಿ
http://www.youtube.com/watch?v=75WN3YidezU
http://www.youtube.com/watch?v=z1LmCjIyQiI
ವೀಕಿಪೀಡಿಯ ಲಿಂಕ್:
http://en.wikipedia.org/wiki/Kaalapani_(1996_film)
Rating
Comments
ಸಂಪದಿಗರೇ ಈ ಚಿತ್ರ ಬರಹದ
ಸಂಪದಿಗರೇ ಈ ಚಿತ್ರ ಬರಹದ ಶೀರ್ಷಿಕೆಯಲ್ಲಿ ಕಣ್ತಪ್ಪಿನಿಂದ ಒಂದು ತಪ್ಪು ಆಗಿದೆ:
ಅದನ್ನು ಕಾಲಾಪಾನಿ -1996 ಎಂದು ಓದಿಕೊಳ್ಳಬೇಕಾಗಿ ಮನವಿ.
>>>ನಿರ್ವಾಹಕರೆ -ಈ ಶೀರ್ಷಿಕೆಯ ತಪ್ಪನ್ನು ಬದಲಾಯಿಸಲು ಸಾಧ್ಯವೇ?
In reply to ಸಂಪದಿಗರೇ ಈ ಚಿತ್ರ ಬರಹದ by venkatb83
Venkat sir,
Venkat sir,
ಈ ಚಿತ್ರದ ಬಗ್ಗೆ ಕಥೆಯನ್ನು ಯಾರಿಂದಲೋ ಕೇಳಿದ್ದೆ.
ಆದರೆ ಚಿತ್ರದ ಹೆಸರು ಗೊತ್ತಿರಲಿಲ್ಲ.
ಇದೀಗ ನಿಮ್ಮ ಲೇಖನ ಓದಿದ ಮೇಲೆ ಅದರ ಬಗ್ಗೆ ಗೊತ್ತಾಯಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಕ್ಕಿ ಜೈಲು ಸೇರಿದ ನಮ್ಮ ಹಿರಿಯರ ಪಾಡು ಹೇಗೆಯೇ ಇದ್ದಿರಬಹುದು.
ಖಂಡಿತ ಈ ಚಿತ್ರ ನೋಡುವ ಮನಸಾಗಿದೆ.
ಬಹಳ ಸೊಗಸಾಗಿ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೀರಿ.
ಧನ್ಯವಾದಗಳು.
ಸಂತು
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
' ಕಾಲಾಪಾನಿ ' ಚಿತ್ರ ಕುರಿತು ತಾವು ಬರೆದ ಬರಹದ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ, ಚಲನಚಿತ್ರಗಳ ಕುರಿತು ಅದ್ಭುತವಾಗಿ ಬರೆಯುತ್ತಿದ್ದಿರಿ, ಈ ಕಾಯಕ ಮುಂದುವರೆಸಿ, ಕಾಲಾಪಾನಿ ಎನ್ನುತ್ತಿದ್ದಂತೆ ನನ್ನ ನೆನಪು ಕಪ್ಪು ಬಿಳುಪು ಜಮಾನಾದ ದೇವ ಆನಂದ ಅಭಿನಯದ ಚಿತ್ರ ' ಕಾಲಾಪಾನಿ ' ಯನ್ನು ನೆನಪಿಸಿತು. ಆಸಕ್ತಿಪೂರ್ಣ ಲೇಖನಕ್ಕೆ ಧನ್ಯವಾದಗಳು.
In reply to ವೆಂಕಟೇಶ ರವರಿಗೆ ವಂದನೆಗಳು by H A Patil
ಹಿರಿಯರೇ-
ಹಿರಿಯರೇ-
ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ನನ್ನಿ ..
>>>ನೀವ್ ಹೇಳಿದ ಹಳೆಯ ಹಿಂದಿ ಚಿತ್ರ -ಕಾಲಾಪಾನಿ 1958 ಬಗ್ಗೆ ಇದೇ ಬರಹದಲ್ಲಿ ಕೊನೆಗೆ ಪ್ರಸ್ತಾಪಿಸಿರುವೆ...
ಶುಭವಾಗಲಿ..
\|
ವೆಂಕಟೇಶ್ ರವ್ರೇ ಹಿಂದಿ,
ವೆಂಕಟೇಶ್ ರವ್ರೇ ಹಿಂದಿ, ಇಂಗ್ಲೀಷ್ ಸಿನೆಮಾಗಳನ್ನು ಹೆಚ್ಚಾಗಿ ನೋಡಿರದ ನನ್ನಂತವ್ರಿಗೆ ಉತ್ತಮ ವಿಮರ್ಶೆ ಮತ್ತು ಕಥಾಹಂದರವನ್ನು ಪರಿಚಯಿಸಿ ಅವುಗಳನ್ನು ನೋಡಬೇಕೆನ್ನುವ ಕುತೂಹಲ ಮೂಡಿಸುತಿದ್ದೀರಿ.. ಧನ್ಯವಾದಗಳು.
In reply to ವೆಂಕಟೇಶ್ ರವ್ರೇ ಹಿಂದಿ, by tthimmappa
ತಿಮ್ಮಪ್ಪ ಅವ್ರೆ -
ತಿಮ್ಮಪ್ಪ ಅವ್ರೆ -
ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ನನ್ನಿ ..
ಇನ್ನು ಹಲವು ಚಿತ್ರಗಳ ಕುರಿತ ಬರಹಗಳು ಬರಲಿವೆ...ಹಾಗೆಯೇ ಅವುಗಳಿಗಾಗಿಯೇ ಒಂದು ಪ್ರತ್ಯೇಕ ಬ್ಲಾಗ್ ರೂಪಿಸುವ ಆಲೋಚನೆ ಬಂದಿದೆ..!
ನಿರೀಕ್ಷಿಸಿ -
ಓದಿ ಅಭಿಪ್ರಾಯ ತಿಳಿಸಿ..
ಶುಭವಾಗಲಿ..
\|
In reply to ತಿಮ್ಮಪ್ಪ ಅವ್ರೆ - by venkatb83
>>>ಸಂಪದ ನಿರ್ವಾಹಕರು-ಮತ್ತು
>>>ಸಂಪದ ನಿರ್ವಾಹಕರು-ಮತ್ತು ತಂಡಕ್ಕೆ :
ನನ್ನ ಈ ಬರಹದ ಶೀರ್ಷಿಕೆಯಲ್ಲಿನ ದೋಷವನ್ನು ತಿದ್ದಿ ಮಾರ್ಪಾಡು ಮಾಡಿದ್ದಕ್ಕೆ
ನನ್ನಿ ..
ಶುಭವಾಗಲಿ..
\|
In reply to >>>ಸಂಪದ ನಿರ್ವಾಹಕರು-ಮತ್ತು by venkatb83
ಉತ್ತಮ ವಿಮರ್ಶೆ, ಧನ್ಯವಾದಗಳು.
ಉತ್ತಮ ವಿಮರ್ಶೆ, ಧನ್ಯವಾದಗಳು.
In reply to ಉತ್ತಮ ವಿಮರ್ಶೆ, ಧನ್ಯವಾದಗಳು. by ಮಮತಾ ಕಾಪು
ಮಮತಾ ಅವ್ರೆ
ಮಮತಾ ಅವ್ರೆ
ತಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|
ಸಪ್ತಗಿರಿಯವರೆ ನಮಸ್ಕಾರಗಳು
ಸಪ್ತಗಿರಿಯವರೆ ನಮಸ್ಕಾರಗಳು
ಚಿತ್ರ ವಿಕ್ಷಣೆಗೆ ಕನಿಷ್ಟ ಎರಡುವರೆ ತಾಸು ಕುಳಿತು ನೋಡಬೇಕು .ಒಂದೇ ಬಾರಿ ಆಗುವುದಿಲ್ಲಾ ,ಮನಸ್ಸಿದ್ದರೂ ದೇಹ ಸಹಕರಿಸಲ್ಲಾ.
ಆದ್ದರಿಂದ ಚಿತ್ರ ವೀಕ್ಷಣೆ ಈಗ ತುಂಬಾ ಕಡಿಮೆಮಾಡಿದ್ದೇನೆ.ಕೆಲವು ಆಂಗ್ಲಚಿತ್ರಗಳನ್ನುತಾವುವಿಕ್ಷಿಸಲುತಿಳಿಸಿದ್ದಿರಿ.ನೋಡಲುಪ್ರಯತ್ನಿಸುತ್ತೇನೆ
"ಕಾಲಪಾನಿ" ಕೆಲವು ಸ್ಟಿಲ್ ಗಳ ಸಮೇತ ಕಥೆಯನ್ನು ಬರೆದಿದಿರುವಿರಿ .ತಮ್ಮ ವಿವರಣಾಶೈಲಿ ನನಗೆ ತಂಬಾ ಮೆಚ್ಚುಗೆ ಆಯ್ತು.
ವಂದನೆಗಳು.............ರಮೇಶ್ ಕಾಮತ್
In reply to ಸಪ್ತಗಿರಿಯವರೆ ನಮಸ್ಕಾರಗಳು by swara kamath
ಹಿರಿಯರೇ-
ಹಿರಿಯರೇ-
ನೀವು ಸಂಪದ ಮಾತ್ರ ಅಲ್ಲದೆ ಅಲ್ಲೂ (ವಿಸ್ಮಯನಗರಿ) ಸದಸ್ಯರಾಗಿ ನನ್ ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
ಈ ಚಿತ್ರದ ತೆಲುಗು-ಹಿಂದಿ-ಮಲಯಾಳಂ-ತಮಿಳ್ -ಇಂಗ್ಲಿಷ್ ಸಿ .ಡಿ ಸಿಗಬಹ್ದು...
ಸಿಗದೇ ಇದ್ದರೂ ನಿರಾಷೆಯಾಗಬೇಡಿ ..!!
>>2 ವರೆ ತಾಸು ಮೇಲ್ಪಟ್ಟ ಈ ಚಿತ್ರವನ್ನು ನೋಡಲು ಶ್ರಮ ಅನ್ನಿಸುವುದು ನಿಜ-
ಆದರೆ ಈ ಚಿತ್ರ ಎರಡು ಭಾಗಗಳಲ್ಲಿ ಲಭ್ಯ-ನೀವು ಒಂದನ್ನು ನೋಡಿ ಆಮೇಲೆ ಮತ್ತೊಂದನ್ನು ಯಾವಾಗರ ನೋಡಬಹ್ದು..
ಆದರೂ ಒಂದೇ ಸಮಯದಲ್ಲಿ ನೋಡಿದರೆ ಚೆನ್ನ ಅನ್ಸುತ್ತೆ...
ಕಾರಣ ಈ ಚಿತ್ರ ಅಫಿಸಿಯಲ್ ಆಗಿ ಯುಟುಬ್ ನಲ್ಲಿ ಸಜಾ-ಎ-ಕಾಲಾಪಾನಿ-1 ಮತ್ತು 2 ಹೆಸರಲ್ಲಿ ಲಭ್ಯ..
ಅದರ ಲಿಂಕ್ ಸಹಾ ಇಲ್ಲಿ ಕೊಟ್ಟಿರುವೆ...ಹಾಗೆಯೇ ಸಂಪದದಲ್ಲಿಯೂ ಆ ಸಿನೆಮ ಲಿಂಕ್ ಇದೆ..
ನಿಮ್ಮ ನೆಟ್ ಕನೆಕ್ಷನ್ ಫಾಸ್ಟ್ ಇದ್ರೆ ತೊಂದ್ರೆ ಇಲ್ದೆ ನೋಡಬಹ್ದು..
ಚಿತ್ರ ನೋಡಿ ಭಾವಪರವಶರಾಗಿ ಕಣ್ಣೀರು ಹಾಕದಿದ್ದರೆ ನೋಡಿ....!!
ಅತ್ಯುತ್ತಮ ಚಿತ್ರ -
ಇದು ಕೇವಲ ಮೂರುವರೆ ಕೋಟಿಯಲ್ಲಿ ನಿರ್ಮಿಸಿದ್ದು (1996) ಎಂದರೆ ಅಚ್ಚರಿ ಎನಿಸುವ್ದು. ಈ ಚಿತ್ರ ವಾಣಿಜ್ಯವಾಗಿ ಸೋತರೂ (ಆಗಿನ ಕಾಲದಲ್ಲಿ ಅದೇ ದೊಡ್ಡ ಬಜೆಟ್ ಚಿತ್ರ ಮತ್ತು ಹಾಕಿದ ಹಣ ಖರ್ಚಿನಸ್ಟು ಬರಲಿಲ್ಲ.:(( ) ) ಆದರೆ ಜನ ಮಾನಸದಲ್ಲಿ ಚಿತ್ರ ಯಾವತ್ತು ನೆನಪಿರುವುದು.
ನಿರ್ಮಾಪಕ ಮೋಹನ್ಲಾಲ್ (ನಟ ಸಹ) ಮತ್ತು ನಿರ್ದೇಶಕ ಪ್ರಿಯದರ್ಶನ್ ಶ್ರಮ ಸಾರ್ಥಕ..
ಶುಭವಾಗಲಿ.
\|/