ಬಿದಿರ ತೆನೆ.....ಬರಗಾಲದ ಮುನ್ಸೂಚನೆ
ಕವನ
ಬಿದಿರು ಬಿಟ್ಟು ಮೈತುಂಬ ತೆನೆ
ನೀಡಿತೆ ಬರಗಾಲದ ಮುನ್ಸೂಚನೆ
ಈ ವರುಷವೂ ಬರಲಾರದೆಂದು ಮಳೆ
ಮುನಿಸ ತೋರುತ್ತಿರುವಳೇ ಇಳೆ.
ಅವಳ ಮುನಿಸು ಸಹಜವೇನೆ
ಕಾರಣ ಮನುಜನ ಸ್ವಾರ್ಥ ತಾನೆ
ಎಷ್ಟು ಸಂಪತ್ತು ಕೊಟ್ಟರೇನೆ
ಅವನಿಗಿಲ್ಲ ಉಪಕಾರ ಸ್ಮರಣೆ.
ಕಡಿಯಲು ಮರ ಇವ ಬೆಳೆಸಿದ್ದೇನೆ
ಕಾಡಿದ್ದರೆ ನಾಡೆಂಬುದ ಮರೆತನೇನೆ
ಕಾಡಿದ್ದರೆ ಮಳೆ, ಮಳೆಯಾದರೆ ಬೆಳೆ,
ಬೆಳೆಯಾದರೆ ಸಂತೋಷದ ಹೊಳೆ.
ಕಾಲವಿನ್ನು ಮಿಂಚಿಲ್ಲ
ಪರಿಹಾರ ಮನುಜನ ಕೈಲೆ ಇದೆಯಲ್ಲ
ಗಿಡ ಬೆಳಸಿ, ಹಸಿರ ಉಳಿಸೋಣ
ಇಳೆಯು ನಳನಳಿಸಿ ನಗುವಂತೆ ಮಾಡೋಣ.
ಶಾರಿಸುತೆ
(ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಸ್ಪೂರ್ತಿ)
ಚಿತ್ರ ಕೃಪೆ : Moeng
ಚಿತ್ರ್
Comments
ಬಿದಿರ ತೆನೆ ಚಿತ್ರ
ಬಿದಿರ ತೆನೆ ಚಿತ್ರ ಸೇರಿಸಿದವರಿಗೆ ದನ್ಯವಾದಗಳು. ನಾವು ಬರೆದ ಲೇಖನಕ್ಕೆ ಬೇರೆಯವರು ಚಿತ್ರ ಸೇರಿಸಬಹುದ?
In reply to ಬಿದಿರ ತೆನೆ ಚಿತ್ರ by saraswathichandrasmo
ನಮಸ್ತೆ! ಈ ಚಿತ್ರವನ್ನು
ನಮಸ್ತೆ! ಈ ಚಿತ್ರವನ್ನು ಸೇರಿಸಿದವರು ಸಂಪದ ನಿರ್ವಹಣೆ ತಂಡದವರು
ಈ ಬಿದಿರು -
ಈ ಬಿದಿರು -
ಬಿದಿರಕ್ಕಿ ಬಗ್ಗೆ ಕೆಲ ತಿಂಗಳುಗಳ ಹಿಂದೆ ಪ್ರಸನ್ನ ಎಸ್ ಪಿ ಅವರೋ ಇಲ್ಲ ಶ್ರೀಪತಿ ಮ ಗೋಗಡಿಗೆ ಅವರು ಒಂದು ಬರಹ ಬರೆದ ಹಾಗೆ ನೆನಪು..!!
ಬಿದಿರು ಹೂ ಬಿಟ್ಟು ,ಅದರ ಅಕ್ಕಿಗೆ ಇಲಿಗಳು ಹೆಗ್ಗಣಗಳು ಮುಗಿ ಬಿದ್ದು ಸುತ್ತಮುತ್ತಲಿನ ಬೆಳೆಗಳನ್ನು ತಿಂದು ಹಾನಿ ಮಾಡುವುದು...
ಈ ಬಗ್ಗೆ ಒಳ್ಳೆ ಕವನ ಬರೆದಿರುವಿರಿ..
ಜೊತೆಗಿನ ಚಿತ್ರವೂ ಸೊಗಸಾಗಿದೆ.
>>>>ಈ ಭೂಮಿ ಮನುಷ್ಯನ ಆಶೆಗಳನ್ನು ಪೂರೈಸಬಲ್ಲದು -ದುರಾಸೆಗಳನ್ನಲ್ಲ ಎಂದ ಗಾಂಧೀಜಿ ಮಾತುಗಳನ್ನ ನಾವೆಲ್ಲಾ ಮರೆತಿದ್ದೆವೆಯೇ...:((
ಈ ಬೆಂಗಳೂರಲ್ಲೂ ಈಗ ಮಳೆಗಾಲ ಚಳಿಗಾ ಲ ಬೇಸಿಗೆಕಾಲದ ವ್ಯತ್ಯಾಸ ತಿಳಿಯುತ್ತಿಲ್ಲ...:(((
ಮನೆ ಸುತ್ತಮುತ್ತ ಸಾಧ್ಯವಾದಸ್ತು ಗಿಡ ಮರ ಸಸಿ ನೆಟ್ಟು ನೀರೆರದು ಬೆಳೆಸುವ ಕಾಲ -ಸಕಾಲ..
ಶುಭವಾಗಲಿ..
\|
In reply to ಈ ಬಿದಿರು - by venkatb83
> ಇಲ್ಲಿದೆ ನೋಡಿ. ಬಿದಿರಕ್ಕಿ
<< ಬಿದಿರಕ್ಕಿ ಬಗ್ಗೆ ಕೆಲ ತಿಂಗಳುಗಳ ಹಿಂದೆ ಪ್ರಸನ್ನ ಎಸ್ ಪಿ ಅವರೋ ಇಲ್ಲ ಶ್ರೀಪತಿ ಮ ಗೋಗಡಿಗೆ ಅವರು ಒಂದು ಬರಹ ಬರೆದ ಹಾಗೆ ನೆನಪು..!! >>
ಇಲ್ಲಿದೆ ನೋಡಿ.
ಬಿದಿರಕ್ಕಿ
In reply to > ಇಲ್ಲಿದೆ ನೋಡಿ. ಬಿದಿರಕ್ಕಿ by ಶ್ರೀನಿವಾಸ ವೀ. ಬ೦ಗೋಡಿ
HTML tag ಕೆಲಸ ಮಾಡ್ತಾ ಇಲ್ಲ
HTML tag ಕೆಲಸ ಮಾಡ್ತಾ ಇಲ್ಲ ಅನ್ಸುತ್ತೆ.
" ಬಿದಿರಕ್ಕಿ ಬಗ್ಗೆ ಕೆಲ ತಿಂಗಳುಗಳ ಹಿಂದೆ ಪ್ರಸನ್ನ ಎಸ್ ಪಿ ಅವರೋ ಇಲ್ಲ ಶ್ರೀಪತಿ ಮ ಗೋಗಡಿಗೆ ಅವರು ಒಂದು ಬರಹ ಬರೆದ ಹಾಗೆ ನೆನಪು..!!"
ಇಲ್ಲಿದೆ ನೋಡಿ.
ಬಿದಿರಕ್ಕಿ - http://sampada.net/blog/%E0%B2%AC%E0%B2%BF%E0%B2%A6%E0%B2%BF%E0%B2%B0%E0%B2%95%E0%B3%8D%E0%B2%95%E0%B2%BF/07/05/2012/36628
http://sampada.net/b...
http://sampada.net/blog/%E0%B2%AC%E0%B2%BF%E0%B2%A6%E0%B2%BF%E0%B2%B0%E0%B2%95%E0%B3%8D%E0%B2%95%E0%B2%BF/07/05/2012/36628
ಹುಡುಕಿ ಕೊಟ್ಟದ್ದಕ್ಕೆ ನನ್ನಿ
ಒಳಿತಾಗಲಿ..
\|
In reply to http://sampada.net/b... by venkatb83
ಬಿದಿರಕ್ಕಿ
href="http://sampada.net/blog/%E0%B2%AC%E0%B2%BF%E0%B2%A6%E0%B2%BF%E0%B2%B0%E0%B2%95%E0%B3%8D%E0%B2%95%E0%B2%BF/07/05/2012/36628"> ಬಿದಿರಕ್ಕಿ< /a>
In reply to ಬಿದಿರಕ್ಕಿ by partha1059
ನಿಮ್ಮ ಕವನ ಚೆನ್ನಾಗಿದೆ ಹಿ0ದೆ
ನಿಮ್ಮ ಕವನ ಚೆನ್ನಾಗಿದೆ ಹಿ0ದೆ ಪ್ರಸನ್ನ ಎಸ್ ಪಿ ರವರು ಲೇಖನ ಬರೆದಿದ್ದರು ಇದೆ ವಿಷಯದ ಬಗ್ಗೆ ಲಿ0ಕ್ ಕೊಡಲು ಪ್ರಯತ್ನಿಸಿದೆ, ಎಲ್ಲರಿ ರೀತಿ ಏನೊ ಸ್ವಲ್ಪ ತಪ್ಪು ಆಗುತ್ತಿದೆ ಏನು ಅ0ತ ಗೊತ್ತಾಗುತ್ತಿಲ್ಲ
ಕವನ ತಂಬಾ ಅರ್ಥಪೂರ್ಣವಾಗಿದೆ ಮೆಡಂ
ಕವನ ತಂಬಾ ಅರ್ಥಪೂರ್ಣವಾಗಿದೆ ಮೆಡಂ ಅವರೆ.
ಬಿದರಿಗೆ ಈ ಬಾರಿ ತೆನೆ ಬಂದು ನಮ್ಮೂರಿನ ಸುತ್ತಮುತ್ತ ನೋಡಲು ಒಂದೂ ಬಿದಿರ ಮೇಳೆ ಉಳಿದಿಲ್ಲಾ. ನಾನು ನೋಡಿದ ಹಾಗೆ ಐವತ್ತರೆಡು ವರ್ಷಗಳ ಹಿಂದೆ ಒಮ್ಮೆಬಿದಿರಿಗೆ ಹೂ ಬಂದಿತ್ತು.ಮತ್ತೆ ಈ ವರ್ಷ ಬಂದಿದೆ........ರಮೇಶ್ ಕಾಮತ್ ,ರಿಪ್ಪನ್ ಪೇಟೆ.
In reply to ಕವನ ತಂಬಾ ಅರ್ಥಪೂರ್ಣವಾಗಿದೆ ಮೆಡಂ by swara kamath
ಪ್ರತಿಕ್ರಿಯಿಸಿದ ಎಲ್ಲರಿಗು
ಪ್ರತಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು. ಫೋಟೊ ಸೇರಿಸಿದ ಸಂಪದ ನಿರ್ವಹಣೆ ತಂಡದವರಿಗೂ ಧನ್ಯವಾದಗಳು