ಕ್ರಾಂತಿಕಾರಿ ವಿಲಿಯಂ ಯೇಟ್ಸ್ ಮತ್ತು ನನ್ನ ತರಲೆ

Submitted by srinivasps on Wed, 12/05/2012 - 01:50

ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.
ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.
ಈ ನಾಟಕಗಳಿಂದಲೇ ಪ್ರಖ್ಯಾತನಾಗಿ ನೋಬಲ್ ಪ್ರಶಸ್ತಿಯನ್ನು ಕೂಡ ಪಡೆದವನು.
ನೊಬೆಲ್ ಪ್ರಶಸ್ತಿ ನಾಟಕಗಳಿಗೆ ಬಂತಾದರೂ, ಪ್ರಶಸ್ತಿಯ ನಂತರ ಇವನು ಅದೆಷ್ಟೋ ಕವನಗಳನ್ನು ರಚಿಸಿ ಮತ್ತಷ್ಟು ಪ್ರಖ್ಯಾತನಾದ.
ವಿಮರ್ಶಕರು ಹೇಳುವ ಹಾಗೆ ನಾಟಕದ ಕೃತಿಗಳಿಗಿಂತ ಇವನ ಕವನ ಮೇರು ಮಟ್ಟದ್ದು...
ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಮೊದಲಿನ ಭಾಗದಲ್ಲಿ ನಡೆದ ಹಲವಾರು ಯುದ್ಧಗಳು ಮತ್ತದರ ವಿದ್ಯಮಾನಗಳು ಇವನ ರಚನೆಗಳಿಗೆ ಸ್ಫೂರ್ತಿಯಾಗಿತ್ತು...
ಇವನ ಕ್ರಾಂತಿಕಾರಿ ಬರಹಗಳಿಂದ ಪ್ರೇರಿತರಾದವರು ಅದೆಷ್ಟೋ...

ಇತ್ತೀಚೆಗೆ ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ, ಯೇಟ್ಸ್ ನ "ಪೊಲಿಟಿಕ್ಸ್" ಕವನದ ಅನುವಾದವೊಂದು ನನ್ನ ಕಣ್ಣಿಗೆ ಬಿತ್ತು.
"ಪೊಲಿಟಿಕ್ಸ್" ಕವನವನ್ನು ಓದುತ್ತಿದ ಹಾಗೆ, ನನಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದೆ...

ಯೇಟ್ಸ್ ನ ಮೂಲ ಕವನ "ಪೊಲಿಟಿಕ್ಸ್" ಕೆಳಗಿದೆ.
ನೀವು ಅವನ ಈ ಕವನವನ್ನು ಓದುವಾಗ, ಅಂದಿನ ಕಾಲದ ರಾಜಕೀಯ ವಾತವರಣವನ್ನು ಮನದಲ್ಲಿಟ್ಟುಕೊಳ್ಳಬೇಕು.
ಹಲವಾರು ದೇಶಗಳ ನಡುವೆ ಯುದ್ಧ ಸಾಧ್ಯತೆಗಳಿತ್ತು ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು...

Politics

HOW can I, that girl standing there,
My attention fix
On Roman or on Russian
Or on Spanish politics?
Yet here's a travelled man that knows
What he talks about,
And there's a politician
That has read and thought,
And maybe what they say is true
Of war and war's alarms,
But O that I were young again
And held her in my arms!

- William Butler Yeats

ಮೇಲಿನ ಗಂಭೀರ ಕವನವನ್ನು ಓದುತ್ತಿದ ಹಾಗೆ, ನನ್ನ ತರಲೆ ಮನಸ್ಸಿಗೆ ಮತ್ತೇನೋ ಹೊಳೆದು,  ಕೆಳಗಿನ ಸಾಲುಗಳನ್ನು ಬರೆದಿದ್ದೇನೆ;
ನಿಮ್ಮ ಅನಿಸಿಕೆ  ಹೇಳಿ:
***
ಅಲ್ಲಿರುವ ಸುಂದರ ಹುಡುಗಿಯ
ಮೇಲಿಟ್ಟ ಕಂಗಳನ್ನು
ಸರಿಸಲಾಗದೆ
ನಿಂತಿಹನು - ರಾಜತಂತ್ರಜ್ಞ

ಇವನು ನೈಪುಣ್ಯತೆಯಿಂದ
ಕ್ಷಣದಲೇ ಗುರುತಿಸುವನು
ದೇಶದಲ್ಲಾಗುವ
ಯುದ್ಧ-ಅಪಾಯ ಮತ್ತಿತರ ವಿಘ್ನ

ಅವಳನ್ನು ನೋಡುತಲೇ
ಆತನಿಗೆ ಅನಿಸುತಿದೆ
ಅವಳ ರಮಿಸಬೇಕೆಂದು
ಮನದಲ್ಲೆಲ್ಲ ಅವಳದೇ ಯೋಚನೆ...

ಇವ, ಪಕ್ಕಾ
ಬ್ರಹ್ಮಚಾರಿಯೇ ಇರಬೇಕು
ಇಲ್ಲವಾದಲ್ಲಿ ಇವನಿಗೇಕೆ
ತಿಳಿಯದು ಮಹಾಯುದ್ಧದ ಸೂಚನೆ!
***

ಮಹಾಕವಿಯ ಕವನವನ್ನು ತಿರುಚಿ ತರಲೆ ಮಾಡಿದ್ದಕ್ಕೆ ಕ್ಷಮೆ ಇರಲಿ :-)

-ಶ್ರೀ
(೩-ಡಿಸೆಂಬರ್-೨೦೧೨)

ಕೊ:
ಯೇಟ್ಸ್ ನ "ಪೊಲಿಟಿಕ್ಸ್" ಕವನದ ಕೇಶವ ಕುಲಕರ್ಣಿಯವರ ಅನುವಾದ


ಕೊ.ಕೊ:
ಡಾ. ಯು.ಆರ್. ಅನಂತ ಮೂರ್ತಿಯವರು - "ಶತಮಾನದ ಕವಿ ಯೇಟ್ಸ್" ಎಂಬ ಪುಸ್ತಕವನ್ನೇ ಹೊರತಂದು, ಇವನ ಅದೆಷ್ಟೋ ಕವನಗಳ ಅನುವಾದ ಮಾಡಿದ್ದಾರೆ.
ಮೇಲಿನ ಕವನವನ್ನು ಯು,ಆರ್ ಅನಂತ ಮೂರ್ತಿಯವರು ಹೀಗೆ ಅನುವಾದಿಸಿದ್ದಾರೆ.
 

Comments

shashikannada

Wed, 12/19/2012 - 16:57

ನಮಸ್ಕಾರ ಶ್ರೀನಿವಾಸ್. ಯೇಟ್ಸನ್ನು ನೆನಪಿಸಿದ್ದಕ್ಕೆ ವಂದನೆಗಳು. ಯೇಟ್ಸನ್ನು ಇಶ್ಟಪಡದ ಸಹೃದಯರಿಲ್ಲ. ಅವನ ನಂತರದ ಜಗತ್ತಿನ್ನೆಲ್ಲ ಕವಿಗಳ ಮೇಲೂ ಅವನ ಪ್ರಭಾವವಾಗಿದೆ. ಈ ಕವನವನ್ನು ಇಲ್ಲಿ ಹಾಕಿ ನನ್ನಂತಹವರಿಗೆ ಮತ್ತೆ ಆತನನ್ನು, ಆತನ ಕವನವನ್ನು ನೆನಪಿಸಿಕೊಳ್ಳುವ, ಸವಿಯುವ ಅವಕಾಶ ನೀಡಿದ್ದೀರಿ. ಹೀಗೆ ಬರೆಯುತ್ತಿರಿ. ಒಳ್ಳೆಯದಾಗಲಿ.