ಫೆಂಟಾಸ್ಟಿಕ್ ವಾಯೇಜ್ -1966-ಚಿತ್ರ- ಒಂದು ಅದ್ಭುತ ಪ್ರಯಾಣಕ್ಕೆ ನೀವ್ ಸಿದ್ದರೇ ?
ಚಿತ್ರ
ಫೆಂಟಾಸ್ಟಿಕ್ ವಾಯೇಜ್ -1966 -ಚಿತ್ರ-ನಿಜಕ್ಕೂ ಅದ್ಭುತ ಪ್ರಯಾಣವೇ ಸೈ ....
ಆದ್ರೆ ಚಿತ್ರದ ಹೆಸರಿನ ಹಾಗೆ ಆ ಪ್ರಯಾಣ -ಪ್ರವಾಸ -ಎಷ್ಟು ಪ್ರಯಾಸಕರ ಎಂದು ಅರಿಯಬೇಕಾದರೆ ಚಿತ್ರ ನೋಡಲೇ ಬೇಕು..!!
ಸುಮಾರು ವರ್ಷಗಳ ಹಿಂದೆ (ಆ ಪತ್ರಿಕೆ ಕಟಿಂಗ್ ತಗೆದು ಇಕ್ಕಿರುವೆ )ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶ್ರೀಯುತ ಹಾಲ್ದೊಡ್ಡೆರಿ ಸುಧೀಂದ್ರ (ವಿಜ್ಞಾನ ಬರಹಗಾರರು-ಅಂಕಣಕಾರರು-ವಿಜ್ಞಾನಿ ಡಿ. ಆರ್.ಡಿ. ಓ )ಅವರು ವಿಜ್ಞಾನ ಸಂಬಂಧಿ ನ್ಯಾನೋ ಟೆಕ್ನಾಲಜಿ ಬಗ್ಗೆ ಬರೆಯುತ್ತ ಈ ಸಿನೆಮ ಬಗ್ಗೆ ವಿಸ್ತೃತ ಬರಹ ಬರೆದಿದ್ದರು ...
ಮೊದಲೇ ಸಿನೆಮ ಹುಚ್ಚು ಇರುವ ನನಗೆ ಸಹಜವಾಗಿ ಆ ಬರಹ ಇಷ್ಟ ಆಗಿ ಅದನ್ನು ಕಟ್ ಮಾಡಿ ಫೈಲ್ ಮಾಡಿ ಇಕ್ಕಿದ್ದೆ..
ಮೊದ ಮೊದಲು ಹಲವು ಸೀ ಡಿ - ಡೀ ವಿ ಡಿ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ವ್ಹಿಚಾರಿಸಿದರೂ ಈ ಸಿನೆಮ ಸಿಗದೇ ನಿರಾಶೆಯಾಗಿ ಕೊನೆಯದಾಗಿ ನೆಟ್ನಲ್ಲಿ ಹುಡುಕುವ ಅಂತ ಹುಡುಕಿದಾಗ ಸಿಕ್ಕಿಯೇ ಬಿಟ್ಟಿತು ......
ಚಿತ್ರ ನೋಡಿ ಮುಗಿಸಿದಾಗ ಬಂದ ಅಟೋಮ್ಯಾಟಿಕ್ ಉದ್ಘಾರಗಳು,
ಅಮೋಘ..!
ಅದ್ಭುತ ..!!
ವಾರೆ ವ್ಹಾವ್ ....!!
ಇದಪ್ಪ ಚಿತ್ರ ಅಂದ್ರೆ....
ಈ ಉದ್ಘಾರಗಳಲಿ ಅತಿಶಯೋಕ್ತಿ ಏನು ಇಲ್ಲ..
ನೀವ್ ನೋಡಿದರೆ ನಿಮ್ಮದೂ ಅದೇ ಉದ್ಘಾರ....!!
ಕಥೆ:
====
ಅಮೇರಿಕ-ರಷ್ಯನ್ನರ ಶೀತಲ ಯುದ್ಧ ನೆನಪಿದೆಯಲ್ಲ..!
ಆ ಕಾಲ ಘಟ್ಟದಲ್ಲಿ ಪ್ರತಿ ವಸ್ತು -ಮನುಷ್ಯ-ಪ್ರಾಣಿ ಪಕ್ಷಿಗಳಾದಿಯಾಗಿ ಎಲ್ಲವನ್ನು ಅಣು ಗಾತ್ರಕ್ಕೆ ಕುಗ್ಗಿಸುವ -ಹಿಗ್ಗಿಸುವ ತಂತ್ರಜ್ಞಾನವನ್ನು ಎರಡೂ ದೇಶಗಳ ವಿಜ್ಞಾನಿಗಳು ಕಂಡು ಹಿಡಿದಿರುತ್ತಾರೆ..
ಅಮೇರಿಕದವರ ಮತ್ತು ರಶ್ಯದವರ ಅನ್ವೇಷಣೆಯಲ್ಲಿ ರಷ್ಯನ್ನರಿಗೆ ಹೆಚ್ಚಿನ ಯಶಸ್ಸು ಲಭಿಸಿ, ಕೆಲ ಕ್ಷಣಗಳು ನಿಮಿಷಗಳು ಮಾತ್ರ ಎಫೆಕ್ಟ್ ಇರುವ ಆ ಗಾತ್ರ ಕುಗ್ಗಿಸುವಿಕೆ ಹಿಗ್ಗಿಸುವಿಕೆ ತಂತ್ರಜ್ಞಾನದಲ್ಲಿ ಮುನ್ನಡೆ ಲಭಿಸಿ ಅದು ಹೆಚ್ಚು ಕಾಲ ಪರಿಣಾಮಕಾರಿ ಆಗಿರುವುದು ಸಾಧ್ಯ ಆಗುವುದು..
ಈ ಮಧ್ಯೆ ಈ ಸ್ಪರ್ಧೆ -ಈರ್ಷ್ಯೆ ಗೆ ಗುರಿಯಾಗಿ ಮಾನಸಿಕವಾಗಿ ರಷ್ಯದಿಂದ ದೂರಾಗಲು ಪ್ರಯತ್ನಿಸುವ ವಿಜ್ಞಾನಿ ಒಬ್ಬ ಅಮೇರಿಕದವರಿಗೆ ಈ ಬಗ್ಗೆ ತಿಳಿಸಿ ಸೀ ಐ ಎ ಸಹಾಯದೊಂದಿಗೆ ಅಮೆರಿಕಾಗೆ ತೆರಳಲು ಯತ್ನಿಸುವನು..
ಆದರೆ ಇದು ಸಾಧ್ಯ ಆಗದೆ ಮಾರ್ಗ ಮಧ್ಯೆ ಇವನು ಹೋಗುತ್ತಿದ್ದ ಕಾರಿನ ಮೇಲೆ ಧಾಳಿ ನಡೆದು ಅದರಲ್ಲಿ ವಿಜ್ಞಾನಿಯ ತಲೆಗೆ ಪೆಟ್ಟು ಬಿದ್ದು ಜ್ಞಾನ ತಪ್ಪುವನು..ಅವನನ್ನು ಹೇಗೋ ಎತ್ತಾಕಿಕೊಂಡು ಅಮೆರಿಕಾಗೆ ಬಂದಿಳಿದ ಸೀ ಐ ಎ ತಂಡ ಈ ವಿಜ್ಞಾನಿ ಕಂಡು ಹಿಡಿದಿರುವ ಅ ತಂತ್ರಜ್ಞಾನವನ್ನು ಪಡೆದು ರಷ್ಯನ್ನರ್ರಿಗೆ ಪೈಪೋಟಿ ನೀಡಲು ನಿರ್ಧರಿಸುವರು. ಡಾಕ್ಟರರ ಸಲಹೆ ಮೇರೆಗೆ ಈ ವಿಜ್ಞಾನಿಯ ತಲೆ ಸ್ಕ್ಯಾನ್ ಮಾಡಿ ನೋಡಲು
ಮಿದುಳಿಗೆ ರಕ್ಸ್ತ ಸಾಗಿಸುವ ರಕ್ತನಾಳದಲ್ಲಿ ತಡೆ ಉಂಟಾಗಿ ಹೆಪ್ಪು ಗಟ್ಟಿರುವುದು ತಿಳಿವದು ,ಕಾಲ ಮಿಂಚಿ ಹೋಗುವುದರೊಳಗೆ ಹೇಗಾದರೂ ಮಾಡಿ ವಿಜ್ನಾನಿಯನು ಬದುಕಿಸಲು ನಿರ್ಧರಿಸಿ ಅದಕಾಗಿ ಆ ವಿಜ್ಞಾನಿ ಮತ್ತು ತಮ್ಮ ದೇಶದವರೇ ಕಂಡು ಹಿಡಿದ ಗಾತ್ರ ಕುಗ್ಗಿಸುವ ಹಿಗ್ಗಿಸುವ ತಂತ್ರಜ್ಞಾನವನ್ನು ಉಪಯೋಗಿಸಿ ಒಂದು ಯಂತ್ರವನ್ನು (ಸಬ್ ಮರೈನ್ )ನಿರ್ಮಿಸಿ ಅದ್ರಲ್ಲಿ ವಿಜ್ಞಾನಿಯ ದೇಹದೊಳಗೆ ಹೋಗಿ ಮೆದುಳಲ್ಲಿ ಸಾಗಿ ಆ ರಕ್ತ ನಾಳ ದುರಸ್ಥಿ ಮಾಡಿ ಬರುವ ಹಾಗೆ ಸಕಲ ಸಾಮಗ್ರಿ ವ್ಯವಸ್ಥೆ ಮಾಡುವರು....
ಆ ಯಂತ್ರ ಮತ್ತು ಅದ್ರಲ್ಲಿ ಹೋಗುವ ಪರಿಣಿತರ ತಂಡವನ್ನು ಅಣು ಗಾತ್ರಕ್ಕೆ ಕುಗ್ಗಿಸಿ ವಿಜ್ಞಾನಿಯ ದೇಹದೊಳಕ್ಕೆ ಬಿಡುವರು..ವಿಜ್ಞಾನಿಯ ದೇಹದೊಳಿದ್ದು ಚಿಕಿತ್ಸೆ ಮುಗಿಸಿ ಒಂದು ಘಂಟೆ ಒಳಗೆ ಹೊರಗೆ ಬರುವ ಗಡುವು ಕೊಟ್ಟಿರುವರು .. ಇಲ್ಲಿವರೆಗೆ ಎಲ್ಲವೂ ಚಕಾ ಚಕ್ ಎಂದು ಸಾಗುವುದು....!!
ಮುಂದೈತೆ ಹಬ್ಬ...!!
ವಿಜ್ಞಾನಿಯ ದೇಹದೊಳು ಹೋದ ಪರಿಣಿತರ ತಂಡಕ್ಕೆ ವಿಜ್ಞಾನಿಯ ದೇಹದೊಳಕ್ಕೆ ಕುತ್ತಿಗೆ ಹತ್ತಿರ ಗುರುತು ಮಾಡಿ ಯಂತ್ರ ಸಮೇತ ಪರಿಣಿತರನ್ನು ಇನ್ಜೆಕ್ಚನ್ ಮೂಲಕ ಒಳ ಸೇರಿಸುವರು ಆ ಸಮಯದಲ್ಲೇ ಒಬ್ಬ ಪರಿಣಿತ ಭಯ ಬಿದ್ದು ಯಂತ್ರದಿಂದ ಆಚೆ ಬಂದು ಹೊರಗೆ ಹೋಗಲು ಪ್ರಯ್ತ್ನಿಸುವನು...ಅವನನ್ನು ಸಮಾಧಾನ ಪಡಿಸಿ ಧೈರ್ಯ ತುಂಬಿ ಇನ್ಜೆಕ್ಚನ್ ಮೂಲಕ ವಿಜ್ಞಾನಿಯ ರಕ್ತನಾಳದೊಳಕ್ಕೆ ಪ್ರವೇಶಿಸುವ ಇವರಿಗೆ ಹೆಜ್ಜೆ ಹೆಜ್ಜೆಗೂ ಹಲವು ಅಡೆ ತಡೆಗಳು , ರಕ್ತ ನಾಳಗಳು-ನೀರು-ಕೆಂಪು ,ಬಿಳಿ ರಕ್ತ ಕಣಗಳು-ಕಲ್ಮಶಗಳು ಅಡ್ಡ ಬಂದು ಅವುಗಳನ್ನು ಒಂದೊಂದಾಗಿ ಸರಿಸಿ ಮುಂದೆ ಹೋದಂತೆ ಮತ್ತಸ್ತು ವಿಘ್ನಗಳು ಕೊನೆಗೆ ಬೇರೆ ದಾರಿಯಲಿ ಹೋಗುವ ಎಂದು ಹೊರಟವರಿಗೆ ದಾರಿ ತಪ್ಪಿದ ಅನುಭವ ಆಗಿ ಸಮಯವೂ ಉರುಳುತ್ತಿರೆ ಬೇಗ ಕೆಲಸ ಮುಗಿಸಿ ದೇಹದಿಂದ ಆಚೆ ಬರುವ ಅವಶ್ಯಕತೆ ಇಲ್ಲವಾದರೆ ಸಮಯ ಮೀರಿದರೆ ಆ ಯಂತ್ರ ಮತ್ತು ಇವರೂ ಮೊದಲಿನ ಗಾತ್ರದವರಾಗಿ ತಾವೂ ಸತ್ತು ವಿಜ್ಞಾನಿಯೂ ಸಾಯುವ ಭಯ.!
ತಮ್ಮ ಯಂತ್ರದಿಂದ ಇಳಿದು ವಿಜ್ಞಾನಿಯ ದೇಹದಲ್ಲಿನ ನೀರಲ್ಲಿ ತೇಲುತ್ತ -ಈಜುತ್ತಾ ಆ ವಿಜ್ಞಾನಿಯ ದೇಹದಲ್ಲಿ ಸಾಗುತ್ತ ಹೆಪ್ಪುಗಟ್ಟಿದ ಆ ಮಿದುಳ ನಾಳ ಕಂಡು ಹಿಡಿಯಲು ಹೊರಡುವ ಮೊದಲು ಇಬ್ಬರು ಆ ದೇಹದಲ್ಲಿ ತೇಲುತ್ತ ಈಜುತ್ತಾ ಮುಂದೆ ಸಾಗಲು ಒಬ್ರು ರಕ್ತ ನಾಳಗಳು ,ದೇಹದ ಗೋಡೆಗಳಿಗೆ ಜೋತು ಬಿದ್ದ ನರಗಳಿಗೆ ಸಿಕ್ಕಿ ವಿಲ ವಿಲ ಒದ್ದಾಡುವರು , ಮುಂದಕ್ಕೆ ಹೋಗಿ ಆ ಹೆಪ್ಪುಗಟ್ಟಿದ ರಕ್ತ ನಾಳ ಮತ್ತು ಜಾಗ ಸಿಕ್ಕಿ ಇನ್ನೇನು ತಮ್ ಕೆಲಸ ಶುರು ಮಾಡಬೇಕು ಅಸ್ತ್ರಲ್ಲಿ ಎರಡು ರೂಪದಲ್ಲಿ ವಿಲನ್ ಎಂಟರ್....!
ಆ ವಿಲನ್ಸ್ ಬೇರಾರು ಅಲ್ಲ ....
ಬ್ಯಾಕ್ಟೀರಿಯಗಳು ....!!
ಮತ್ತು 'ಅವ ...!!
ದೇಹದಲ್ಲಿ ಹೊರಗಿನ ಜಾಡ್ಹ್ಯ ಗಳು -ಇತ್ಯಾದಿ ನುಗ್ಗಲು ಪ್ರಯತ್ನಿಸುವಾಗ ದೇಹದ ಪ್ರಾಕೃತಿಕ ರಕ್ಷಕರು -ಶತ್ರುಗಳ(ಬ್ಯಾಕ್ಟೀರಿಯ-ವೈರಸ್ ಇತ್ಯಾದಿ) ವಿರುದ್ಧ ಹೋರಾಡುವ ಪರಿ ಗೊತಲ್ಲ..!!
ಇಲ್ಲೂ ಬ್ಯಾಕ್ಟೀರಿಯಗಳು ಗುಂಪು ಗುಂಪಾಗಿ ಇವರತ್ತ ಸಾಗಿ ಇವರ ಯಂತ್ರ ಮತ್ತು ಇವರನ್ನ ಮುಕ್ಕುವವು...:((
ಈ ಮಧ್ಯೆ ಇವರೆಲ್ಲ ಯಂತ್ರದಿಂದ ಆಚೆ ಬಂದು ವಿಜ್ಞಾನಿಯ ಹೆಪ್ಪು ಗಟ್ಟಿದ ಪ್ರದೇಶವನ್ನು ಲೇಸರ್ ಸಹಾಯದಿಂದ ನಿರ್ಮೂಲನೆ ಮಾಡುವಾಗ ಆ ವಿಘ್ನಪ್ರಿಯರು (ಬಿಳಿ ರಕ್ತ ಕಣಗಳು-ಮತ್ತು 'ಅವ ' )
ಪರಿಣಿತರು ಮತ್ತು ವಿರೋಧಿಗಳ ಮಧ್ಯೆ ಯಾರಿಗೆ ಜಯ?
ವಿಜ್ಞಾನಿಗೆ ಚಿಕಿತ್ಸೆ ನೀಡಲು ಸಾಧ್ಯ ಆಯ್ತೆ?
ಸೀಮಿತ ಸಮಯದೊಳಗೆ ಇವರೆಲ್ಲ ಯಂತ್ರ ಸಮೇತ ಆಚೆ ಬರುವರೆ?
ಹೇಗೆ?
ಆ ಸಮಯದೊಳಗೆ ಅಲ್ಲೇನು ನಡೆಯಲಿದೆ ?
ಕ್ಲೈಮ್ಯಾಕ್ಸ್ ಏನು??
ಇದೆಲ್ಲ ಹೇಳಲು ನನಗೂ ಇಷ್ಟ.....
ಅದರೂ ನೀವೇ ಕಣ್ಣಾರೆ ನೋಡಬೇಕು..
ಇದು ನೋಡಿ ಫೀಲ್ ಆಗಬೇಕಾದ ಸಿನೆಮ..!!
ಕೆಲವು ಅತ್ಯುತ್ತಮ ಸನ್ನಿವೇಶಗಳು:
===================
1.ವಿಜ್ಞಾನಿಯ ದೇಹದೊಳಕ್ಕೆ ಹೋಗುವ ಮೊದಲು ಯಂತ್ರ ಸಮೇತ ಪರಿಣಿತರನ್ನು ಕುಗ್ಗಿಸುವ ದೃಶ್ಯ
2.ಇಂಜೆಕ್ಷನ್ ಮೂಲಕ ಹೋಗುವಾಗ ಪರಿಣಿತ ಒಬ್ಬ ಸುತ್ತಮುತ್ತಲಿನ ದ್ರವ ಕಂಡು ಭಯಗೊಂಡು ಯಂತ್ರದಿಂದ ಆಚೆ ಹೋಗಲು ಹವಣಿಸುವ ಅವನನ್ನು ಸಮಾಧಾನ ಪಡಿಸುವ ದೃಶ್ಯ
3.ದೇಹದೊಳಕ್ಕೆ ಪ್ರವೇಶ ಪಡೆದ ಕೆಲ ಹೊತ್ತಿನ ನಂತರ ಯಂತ್ರದಲ್ಲಿ ಒಂದು ಎಲೆಕ್ಟ್ರಿಕಲ್ ಬೋರ್ಡ್ನಲ್ಲಿ ದೋಷ ಕಂಡು ಬರುವದು..:((
4. ವಿಜ್ಞಾನಿಯ ಕಿವಿಯ ತಮಟೆಯ ಹತ್ತಿರ ಕೆಲಸ ಶುರು ಮಾಡುವಾಗ ವಿಜ್ಞಾನಿಗೆ ಚಿಕಿತ್ಸೆ ನಡೆಸಲು ಸಜ್ಜಾಗಿರುವ ದೇಹದ ಹೊರಗಿನ ವೈದ್ಯರಿಗೆ ಮತ್ತು ತಂಡಕ್ಕೆ ಒಂದು ಸೂಚನೆ ಬರುವದು ಅದು: ದೇಹದ ಸೂಕ್ಷ್ಮ ಶ್ರವಣ ಅಂಗದ ಹತ್ತಿರ ಈಗ ಯಂತ್ರ ಸಮೇತ ಪರಿಣಿತರು ಇರುವರು ಹೀಗಾಗಿ ತುಟಿ ಪಿಟಕ್ ಅನ್ನದೆ ಜೋರಾಗಿ ಹೋಗಲಿ ಸಣ್ಣಗೆ ಸಹ ಶಬ್ದ ಮಾಡಬಾರದು ಎಂದು-ಆದ್ರೆ ಹಿರಿಯ ಡಾಕ್ಟರ್ ಗೆ ಕಿತ್ತುಕೊಂಡು ಬರುತಿರುವ ಬೆವರು ಒರೆಸಲು ನರ್ಸ್ ಒಬ್ಬಳು ಹಿಂದೆ ತಿರುಗಿ ನೋಡದೆ ಬಟ್ಟೆ ಎತ್ತಿಕೊಳ್ಳುವಳು ಆ ಸಮಯದಲ್ಲಿ ಕತ್ತರಿ ಒಂದು ಕೆಳಗೆ ಬಿದ್ದು ಅದು ದೇಹದ ಹೊರಗೆ ಇರವ ಇವರಿಗೆ ಏನೂ ಅನ್ನಿಸದೆ ಇದ್ರೂ -ದೇಹದ ಒಳಗೆ ಇರವ ಯಂತ್ರ ಸಮೇತ ಪರಿಣಿತರು ಆ ಕಂಪನದ ಪರಿಣಾಮವಾಗಿ ಎಲೆಲ್ಲೋ ಹೋಗಿ ಬೀಳುವರು ,ಆಗ ಅಲ್ಲಿ ಆಗುವ ಪರಿಣಾಮ ನೋಡಿಯೇ ಅನುಭವಿಸಬೇಕು..!
5.ಕಂಪನ ಪರಿಣಾಮ ಕೆಳಗೆ ಬಿದ್ದ ಇಬ್ಬರು ಪರಿಣಿತರನ್ನ ಮೇಲಕ್ಕೆ ಎತ್ತಿ ಕರೆ ತರುವಾಗ ಬ್ಯಾಕ್ಟೀರಿಯಗಳು ವೇಗವಾಗಿ ಹಿಂಬಾಲಿಸಿ ದೇಹಕ್ಕೆ ಅಂಟಿಕೊಳ್ಳುವುದು -ಬಾಗಿಲು ತೆರೆಯಲು ಯಂತ್ರದ ಒಳಗಿನ ಕೆಲವರು ನಿರಾಕರಿಸುವ್ದು..:((
6.ಅಂತ್ಯದಲ್ಲಿ ತಮ್ಮ ಕಾರ್ಯದಲಿ ಯಶಸ್ವಿ ಆದರೂ ಹೊರ ಹೋಗಲು ಯಂತ್ರ ನಾಶವಾಗಿ (ಅದ್ಕೆ ಕಾರಣ ಇದೆ -ಚಿತ್ರ ನೋಡಿದಾಗ ತಿಳಿವುದು) ತಾವೇ ಸ್ವಯಂ ಈಜುತ್ತಾ ದೇಹದಿಂದ ಆಚೆ ಬರಬೇಕು ಮತ್ತು ಅದ್ಕೆ ಕೇವಲ ಕೆಲವೇ ಸೆಕೆಂಡ್ ಬಾಕಿ!!
7.ವಿಜ್ಞಾನಿಗೆ ಆಪರೇಶನ್ ಆಚೆಯಿಂದ ಮಾಡಿ ಒಳಗಿನ ಇವರನ್ನು ಇವರು ತಮ್ಮ ದೇಹ ಆಕಾರ ಮೊದಲಿನ ಹಾಗೆ ಪಡೆವ ಮುಂಚೆ ಹೊರ ತೆಗೆವದು..ಆದ್ರೆ ಅಸ್ತ್ರಲ್ಲಿ ಜೆನರಲ್ ಒಬ್ಬ ಅದನ್ನು ನಿಲ್ಲಿಸಲು ಹೇಳಿ ವಿಜ್ಞಾನಿಯ ಕಣ್ಣು ಓಪನ್ ಮಾಡಿ ಅಲ್ಲಿಂದ ಪರಿಣಿತರನ್ನು ಆಚೆ ತೆಗೆವ ದೃಶ್ಯ...
ಚಿತ್ರ ಅದ್ಭುತವಾಗಿದ್ದು ತಂತ್ರಜ್ಞಾನ ಅಸ್ಟೇನೂ ಅಭಿವೃದ್ಧಿಯಾಗದ ಕಾಲಘಟ್ಟದಲ್ಲಿ (1966) ಈ ಚಿತ್ರವನ್ನು ಅಸ್ತು ಚೆನ್ನಾಗಿ ಹೇಗೆ ತೆಗೆದರೋ? ಎನ್ನಿಸುವಂತಿದೆ.
ಭೇಷ್ ಅನ್ನಲೇಬೇಕು.....
1966 ಮತ್ತು ಸರಿ ಸುಮಾರು 1990-ರವರೆಗೆ ಬಹುತೇಕರು ಇದು ಬರೀ ಕಲ್ಪನೆ ಶುದ್ಧ ಕಲ್ಪನೆ ಎಂದು ಮೂಗಳೆಯುತಿದ್ದರೆನೋ ಆದರೆ ನ್ಯಾನೋ ಟೆಕ್ನಾಲಜಿ ಅಭಿವೃದ್ಧಿ ಆಗಿ ಮಾನವನ ದೇಹದೊಳಕ್ಕೆ ನುಗ್ಗಿ ಶಶ್ತ್ರ ಚಿಕತ್ಸೆ ಮಾಡುವ -ನ್ಯಾನೋ ಉತ್ಪನ್ನಗಳನ್ನು ಆವಿಷ್ಕಾರ ಮಾಡಿದ ಈ ಕಾಲ ಘಟ್ಟದಲ್ಲಿರುವ ನಮಗೆ ಇದೇನೂ ಅಚ್ಚರಿ ಅನ್ನಿಸೊಲ್ಲ.. ಆದರೆ ಈ ತರಹದ ಸಾಧ್ಯತೆ ಒಂದನ್ನು ಊಹಿಸಿ ಆ ಬಗ್ಗೆ ಕಥೆ ಬರೆಯಲು ಹೇಳಿ ಅದನ್ನೇ ಚಿತ್ರ ಮಾಡಿದ ಅವರನ್ನು ಹೊಗಳದೆ ಇರೋಕೆ ಸಾಧ್ಯವೇ ಇಲ್ಲ....
ಯಂತ್ರ ಸಮೇತ ಪರಿಣಿತರು ವಿಜ್ಞಾನಿಯ ದೇಹದೊಳಕ್ಕೆ ನುಗ್ಗುವುದರಲ್ಲಿಂದ ಮುಂದೆ ನಾವ್ ನೀವ್ ಸೀಟ್ ತುದಿಗೆ ಕೂತು ಮುಂದೇನು ಎಂದು ಟೆನ್ಸ್ ಆಗದಿದ್ದರೆ ಆಗ ಹೇಳಿ...!
ಇದನ್ನು ಮತ್ತೊಮ್ಮೆ ನಿರ್ಮಿಸಲು ಹಲವು ಖ್ಯಾತ ನಿರ್ದೇಶಕರು ಪ್ರಯತ್ನಿಸಿದ್ದು ತಿಳಿಯಿತು..ಆದರದು ಇನ್ನೂ ಕಾರ್ಯಗತವಾಗಿಲ್ಲ..
ಹಾಗೊಮ್ಮೆ ಆದರೆ ಚಿತ್ರವನ್ನು ಇನ್ನಸ್ಟು ಆಧುನಿಕವಾಗಿ ಮಾಡಬಹುದು ನೋಡಿ ಆನಂದಿಸಬಹ್ದು...
ಈ ಚಿತ್ರವನ್ನು ನೀವ್ ನೋಡದಿದ್ದರೆ ಒಂದು ಒಳ್ಳೆ ಚಿತ್ರ ಮಿಸ್ ಮಾಡಿಕೊಂಡ ಹಾಗೆ.....!!
ಖಂಡಿತ ನೋಡಬಹುದಾದ ಸಿನೆಮ..
>>>> ಮನೆ ಮಂದಿ ಎಲ್ಲ ಮುಜುಗರವಿಲ್ಲದೆ ನೋಡಬಹ್ದು..:())
ನೋಡಿ- ಚಿತ್ರ ಜಗತ್ತಿನ ಒಂದು ಅದ್ಭುತ- ಅಚ್ಚರಿಗೆ ಸಾಕ್ಷಿ ಆಗಿ..
ಕೆಲವು ಚಿತ್ರ ಸಂಬಂಧಿ ಕೌತುಕಗಳು:
===========================
>>>ಸಿನೆಮ ಒಂದಕ್ಕಾಗಿ ಕಥೆ ಬರೆಸೋದು ಅದನ್ನ ಚಿತ್ರ ಮಾಡೋದು ಹೊಸತಲ್ಲ..ಈ ಚಿತ್ರ ನಿರ್ಮಾಣಕ್ಕಾಗಿ ಕಥೆ ರಚಿಸಿ -ಪುಸ್ತಕವೇ ಮೊದಲು ಬಿಡುಗಡೆ ಆಗಿ ಯಶಸ್ವಿ ಆಯ್ತು-ಆಮೇಲೆ ಚಿತ್ರ ಬಿಡುಗಡೆ ಆಯ್ತು..ಅದೂ ಯಶಸ್ವಿ...ಬಹುತೇಕ ವಿಮರ್ಶಾ ಬರಹಗಾರರಿಂದ ಭೇಷ್ ಅನ್ನಿಸಿಕೊಂತು ...
>>>>>ಈ ಚಿತ್ರದ ನಿರ್ದೇಶಕರು ಮೂಲತ ವೈದ್ಯರು-ಮತ್ತು ಈ ಚಿತ್ರವೇ ಪ್ರಥಮ ಚಿತ್ರ...!!
>>>>>>>ಈ ಚಿತ್ರಕ್ಕಾಗಿ ಹಲವು ಸನ್ನಿವೇಶಗಳಿಗಾಗಿ ಹಲವು ತಂತ್ರಜ್ನರ ವೈದ್ಯರ-ಆಯಾಯ ವಿಷ್ಯ ಪರಿಣಿತರ ಸಲಹೆ ಪಡೆಯಲಾಗಿದೆ...
>>>>>>>>>ಯ್ವ್ಯಾವ್ದನ್ನೋ ರಿಮೇಕ್ ಮಾಡುವ ಹಾಲಿವುಡ್ ಮಂದಿ (ಹಲವು ಖ್ಯಾತನಾಮರೂ ) ಜೇಮ್ಸ್ ಕ್ಯಾಮರೂನ್ ಆದಿಯಾಗಿ (ಅವತಾರ್-ಟೈಟಾನಿಕ್ -ಟರ್ಮಿನೆಟರ್ ನಿರ್ದೇಶಕ )ಹಲವರು ಇದನ್ನು ರಿಮೇಕ್ ಮಾಡಲು ಪ್ರಯತ್ನಿಸಿದರೂ ,ಹಿಂಜರಿದಿರುವರು ..!!
ಈಗಲೂ ಆ ಬಗ್ಗೆ ಹಲವರು ಚಿಂತನೆ ನಡೆಸುತ್ತಿರುವರು..ಯಾರಿಗ್ಗೊತ್ತು? ಅದು ಮತ್ತೊಮ್ಮೆ ಅದ್ಭುತ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿ ನಮ್ಮ ಮುಂದೆ ಬರಬಹ್ದು..! ಅದಾಗಲಿ..
ಈ ಚಿತ್ರವನ್ನು ನೀವ್ ಮಿಸ್ ಮಾಡಿಕೊಂಡಿದ್ದರೆ ನೋಡಲು ಇದೇ ಸಕಾಲ..
ನನಗನಿಸಿದ ನಾ ನೋಡಿದ ಹಾಗೆ ಇದು ಟೀ ವಿ ಯ ಯಾವುದೇ ಆಂಗ್ಲ ಚಾನೆಲ್ನಲ್ಲಿ ಇದ್ವರ್ಗೂ ಬಂದ ಹಾಗಿಲ್ಲ. ಸೊ ಖರೀದಿಸಿ ಇಲವೇ ಆನ್ಲೈನ್ ಡೌನ್ಲೋಡ್ ಮಾಡಿಯೇ ನೋಡಬೇಕು.!!
ಈ ಅದ್ಭುತ ಪ್ರಯಾಣ-ಪ್ರವಾಸವನ್ನು ಮಿಸ್ ಮಾಡಿಕೊಳ್ಳದಿರಿ...!!
>>>>ಈ ಚಿತ್ರದ ಬಗ್ಗೆ ಪ್ರಾಸ್ತಾವಿಕವಾಗಿ ಪ್ರಸ್ತಾಪಿಸಿ ನನ್ ಗಮನ ಸೆಳೆದ ಶ್ರೀಯುತ 'ಹಾಲ್ದೊಡ್ಡೆರಿ ಸುಧೀಂದ್ರ' ಅವರಿಗೆ ನಾ ಅಭಾರಿ...
ಅವ್ರಿಗೆ ನನ್ನ ನನ್ನಿ
==========================================================================================================
ಚಿತ್ರ ಮೂಲ:
ಐ ಎಂ ಡೀ ಬಿ ನನ್ ಬರಹ:
ಐ ಎಂ ಡೀ ಬಿ :
ವಿಕಿಪೀಡಿಯ :
ವೀಡಿಯೊ ಟ್ರೇಲರ್ :
Rating
Comments
ಸಪ್ತಗಿರಿ
ಸಪ್ತಗಿರಿ
ಅತ್ತಿ ಉತ್ತಮ ಸಿನಿಮಾ ಕತೆಯ ನಿರೂಪಣೆ ಹೆಚ್ಚು ಕಡಿಮೆ ಎದುರಿಗೆ ಸಿನಿಮಾ ನೋಡಿದ ಅನುಭವ
ಸೀಡಿ ಸಿಕ್ಕರೆ ತ0ದು ಖ0ಡೀತ ನೋಡುವೆ
ನಾವಿಬ್ಬರು ಬರಹ ಹಾಕಿದ ಕೆಲವೆ ಕಾಲದಲ್ಲಿ ಅತಿ ಉತ್ಸಾಹಿ ಬರಹಗಾರರೊಬ್ಬರು ಒಟ್ಟಿಗೆ ಹನ್ನೆರಡು ಲೇಖನಗಳನ್ನು ಹಾಕಿ ನಮ್ಮನ್ನು ಎರಡನೆ ಪುಟಕ್ಕೆ ಹಾಗು ಮೂರನೆ ಪುಟಕ್ಕೆ ದಬ್ಬಿರುವರು :)
ಏನುಮಾಡಲಾಗುವದಿಲ್ಲ !
ಸ್ವಯ0 ಶಿಸ್ತಿನ ನಿರೀಕ್ಶ್ಹೆ ಅಷ್ಟೆ!
ಪಾರ್ಥಸಾರಥಿ
ಸಪ್ತಗಿರಿ
ಸಪ್ತಗಿರಿ
ಅತ್ತಿ ಉತ್ತಮ ಸಿನಿಮಾ ಕತೆಯ ನಿರೂಪಣೆ ಹೆಚ್ಚು ಕಡಿಮೆ ಎದುರಿಗೆ ಸಿನಿಮಾ ನೋಡಿದ ಅನುಭವ
ಸೀಡಿ ಸಿಕ್ಕರೆ ತ0ದು ಖ0ಡೀತ ನೋಡುವೆ
ನಾವಿಬ್ಬರು ಬರಹ ಹಾಕಿದ ಕೆಲವೆ ಕಾಲದಲ್ಲಿ ಅತಿ ಉತ್ಸಾಹಿ ಬರಹಗಾರರೊಬ್ಬರು ಒಟ್ಟಿಗೆ ಹನ್ನೆರಡು ಲೇಖನಗಳನ್ನು ಹಾಕಿ ನಮ್ಮನ್ನು ಎರಡನೆ ಪುಟಕ್ಕೆ ಹಾಗು ಮೂರನೆ ಪುಟಕ್ಕೆ ದಬ್ಬಿರುವರು :)
ಏನುಮಾಡಲಾಗುವದಿಲ್ಲ !
ಸ್ವಯ0 ಶಿಸ್ತಿನ ನಿರೀಕ್ಶ್ಹೆ ಅಷ್ಟೆ!
ಪಾರ್ಥಸಾರಥಿ
In reply to ಸಪ್ತಗಿರಿ by partha1059
ಗುರುಗಳೇ- ಅದು
ಗುರುಗಳೇ- ಅದು ಉದ್ದೆಶಪೂರ್ವಕವಲ್ಲದ ತಪ್ಪು ಅನ್ಸುತ್ತೆ...!
ಒಂದು ಸಾರಿ ಸೇರಿಸಿದಾಗ ಅದು ಕಾಣಿಸದೆ ಅಥವಾ -ಇನು ಸೇರಿಲವೇನೋ ಎಂದು ಹಾಗೆ ನಾನು ಸಹ ಹಲವು ಬಾರಿ ಮಾಡಿದ್ದು ಉಂಟು...!!
ನಿರ್ವಾಹಕರ ಗಮನಕ್ಕೆ ತನ್ನಿ ಅವರು ಅಳಿಸಿ ಹಾಕುವರು....
ಶುಭವಾಗಲಿ.
\|/
In reply to ಸಪ್ತಗಿರಿ by partha1059
ಅಂದ್ ಹಾಗೆ ನಿಮಗೆ ಹಾ;ಸುಧೀಂದ್ರ
ಅಂದ್ ಹಾಗೆ ನಿಮಗೆ ಹಾ;ಸುಧೀಂದ್ರ ಅವರು ಪರಿಚಯಸ್ತರು ಅನ್ಸುತ್ತೆ...ಅವರ ಬಗ್ಗೆ ನೀವ್ ಬರಹದಲ್ಲಿ ಒಮ್ಮೆ ಹೇಳಿದ ನೆನಪು.....
ಅತ್ಯುತ್ತಮ ಚಿತ್ರ (ಫೆಂಟಾಸ್ಟಿಕ್ ವಾಯೇಜ್) ನೋಡಲು ಕಾರಣರಾದ ಅವರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ....
ಶುಭವಾಗಲಿ..
\|;
ನಿಮ್ಮ ಬರಹವನ್ನೋದಿ ಸಿನಿಮಾ
ನಿಮ್ಮ ಬರಹವನ್ನೋದಿ ಸಿನಿಮಾ ನೋಡಿದೆ. ಫೆಂಟಾಸ್ಟಿಕ್! ಧನ್ಯವಾದಗಳು ತಮಗೆ.
ನೀವು ಹೇಳೀದ ಉತ್ತಮ ಸನ್ನಿವೇಶಗಳನ್ನು ಅಲ್ಲದೇ ಗಮನ ಸೆಳೆದ ಸಿನಿಮಾದಲ್ಲಿನ ಒಂದು ದೃಶ್ಯ.
ಕರ್ನಲ್ ಇರುವೆಯನ್ನು ಹೊಸಕಿ ಹಾಕಲು ಹೋಗಿ ಆಮೇಲೆ ಮನಸ್ಸು ಬದಲಾಯಿಸುವನು. ಈ ಕಾರ್ಯಾಚರಣೆಯಿಂದ ಯುದ್ಧ ಮಾಡಲು ಹಿಂಜರಿಯದವನು ಒಂದು ಸಣ್ಣ ಇರುವೆಯ ಜೀವಕ್ಕೆ ಬೆಲೆ ಕೊಡುವದನ್ನು ಕಲಿಯುತ್ತಾನೆ. ಆಗ ಡಾಕ್ಟರ್ ಹೇಳುವ ಮಾತು:
You'll wind up a Hindu.
They respect all forms of life, however small.
೧೯೬೬ರಷ್ಟು ಹಿಂದೆ ಜಾಗತಿಕರಣದ ಸೊಂಕೂ ಇರದ ಕಾಲದಲ್ಲಿ, ನಮ್ಮ ಧರ್ಮದ ಬಗ್ಗೆ ಅಮೇರಿಕನ್ನರಿಗೆ ಇರುವ ಅನಿಸಿಕೆ ನೋಡಿ ತುಂಬಾ ಖುಷಿಯಾಯಿತು.
ಶ್ರೀ ನಿವಾಸ ಅವರೇ ಅಂದು ನಾ ಬರೆದ
ಶ್ರೀ ನಿವಾಸ ಅವರೇ ಅಂದು ನಾ ಬರೆದ ಬರಹವನ್ನು ಹುಡುಕಿ ಓದಿ-ಸಿನೆಮಾವನ್ನು ನೋಡಿ ಅದರಲ್ಲೂ ಆ ಸಿನೆಮಾದಲ್ಲಿನ ನಾ ಗಮನಿಸದ ಒಂದು ವಿಶೇಷ ಅಸಂಗತಿ ಬಗ್ಗೆ ನನ್ನ ಗಮನ ಸೆಳೆದಿರುವಿರಿ..!!
ಹಿಂದೂ ಪದ-ಹಿಂದೂ ಪ್ರದೇಶದ ಬಗ್ಗೆ ಮೊದಲಿಂದಲೂ ಜಗತ್ತಿನೆಲ್ಲೆಡೆ ಬಹುಪಾಲು ಜನರಿಗೆ ಆಧರ ಅಭಿಮಾನ ಕುತೂಹಲ ಇತ್ತೆಂದು ತೋರುತ್ತದೆ..
ಹಾಗೆ ನೋಡಿದರೆ ನನಗೆ ಆ ಸಿನೆಮಾದ ಭಾಷೆ ಅಷ್ಟಾಗಿ ಅರ್ಥ ಆಗಿರಲಿಲ್ಲ..!!
ನಾ ಅವರ ಹಾವ ಭಾವ ನಟನೆ ನೋಡಿ ಚಿತ್ರವನ್ನು ಎಂಜಾಯ್ ಮಾಡಿದ್ದೆ..!
ಈ ಹಿಂದೆಯೂ ನೀವು ಬಾಗ್ಬನ್-ಈ ಬಂಧನ ಚಿತ್ರಕ್ಕೆ ನೀಡಿದ ಪ್ರತಿಕ್ರಿಯೆ ಗಮನಿಸಿದಾಗ-ನೀವು ಚಿತ್ರಗಳನ್ನು ಆಳವಾಗಿ ನೋಡುವ -ಗಮನಿಸುವ ಸಂಗತಿ ಗೊತ್ತಾಯ್ತು..
ಚಿತ್ರಗಳ ಬಗ್ಗೆ ಬರೆವಾಗ ನಾ ಇನ್ನು ಮುಂದೆ ಈ ತರಹದ ವಿಶೇಷ ಸಂಗತಿಗಳನ್ನೂ ಗಮನಿಸಬೇಕಿದೆ.
ಪ್ರತಿಕ್ರಿಯೆಗೆ ಈ ಗಮನ ಸೆಳೆವಿಕೆಗೆ ನನ್ನಿ
ಶುಭವಾಗಲಿ...
\।
In reply to ಶ್ರೀ ನಿವಾಸ ಅವರೇ ಅಂದು ನಾ ಬರೆದ by venkatb83
ಈಗೀಗ ನಿಮ್ಮ ಬರಹಗಳನ್ನೋದಿ ಆ
ಈಗೀಗ ನಿಮ್ಮ ಬರಹಗಳನ್ನೋದಿ ಆ ಸಿನಿಮಾಗಳನ್ನು ಹುಡುಕಿ ನೋಡುತ್ತಿದ್ದೇನೆ! ಅದಕ್ಕಾಗಿ ನನ್ನಿಗಳು.
"ಹಾಗೆ ನೋಡಿದರೆ ನನಗೆ ಆ ಸಿನೆಮಾದ ಭಾಷೆ ಅಷ್ಟಾಗಿ ಅರ್ಥ ಆಗಿರಲಿಲ್ಲ.."
ನಾನು ಅಡಿ-ಶಿರ್ಷಿಕೆ ಹಾಕಿಕೊಂಡೇ ನೋಡಿದ್ದು.
ನೀವು ಚಿತ್ರವನ್ನು ಇನ್ನೊಂದ್ಸಲ ನೋಡುವ ಹಾಗಿದ್ದರೆ, srt ಕಡತ ಕಳಿಸ್ತಿನಿ.
ಶ್ರೀನಿವಾಸ್ ಜಿ-ಈ ಎಸ ಆರ್ ಟಿ
ಶ್ರೀನಿವಾಸ್ ಜಿ-ಈ ಎಸ ಆರ್ ಟಿ ಫೈಲ್ಸ್ ಅಯ್ಯಾಯ ಸಿನೆಮ ಫೈಲುಗಳ ಸೈಜ್ಗೆ ತಕ್ಕಂತೆ ವರ್ಕ್ ಆಗುತ್ತವೆ-ಅಂದರೆ ೭೦೦ಎಂ ಬಿ ಸಿನೆಮ ಫೈಲ್ಗೆ ೩೫೦ ಎಂ ಬಿ ಎಸ್ ಆರ್ ಟಿ ವರ್ಕ್ ಆಗೊಲ್ಲ ಕಾರಣ ಕಂಪ್ರೆಸ್ಸ್ ಆಗಿರೋದು..!!(ಹಿಂದೊಮ್ಮೆ ತಿಳಿಯದೆ ಹೀಗೆ ಮಾಡಿ ಯಾವ್ದುದೋ ದೃಶ್ಯಕ್ಕೆ ಇನ್ಯಾವುದೋ ಅಡಿ ಬರಹ ಬರುತ್ತಿತ್ತು..!!)
ನನ್ನದು ಸುಮಾರು ೬೦೦ ಎಂ ಬಿ ಸಿನೆಮ ಅನ್ಸುತ್ತೆ...
ನಾ ನೋಡಿದ ಸಿನೆಮಾಗಳಲ್ಲಿ ಕೆಲವು ಸನ್ನಿವೇಶಗಳು ಇತ್ಯಾದಿ ಅರ್ಥ ಆಗದಿದ್ದರೆ ಆಗ ನಾನು ಆ ಸಿನೆಮ ಬಗ್ಗೆ ವಿಕಿಪೀಡಿಯ ಇತ್ಯಾದಿ ಕಡೆ ಹುಡುಕಾಡಿ ಸಂಪೂರ್ಣ ಮಾಹಿತಿ ಅರಿತುಕೊಳ್ಳುವೆ ..!!
ನಿಮಗೆ ನನ್ನ ಮಿಂಚೆ ವಿಳಾಸ ಇಲ್ಲಿ ಕೊಟ್ಟರೆ ಸ್ಪಾಮ್ ಭಯ..! ಅದ್ಕೆ ನಾನು ನೆಟ್ನಲ್ಲಿ ಆ ಫಿಲಂ ಎಸ್ ಆರ್ ಟಿ ಫೈಲ್ ಹುಡುಕುವ ಯತ್ನ ಮಾಡುವೆ...!!
ಮರು ಪ್ರತಿಕ್ರಿಯೆಗೆ ನನ್ನಿ ..
ಶುಭವಾಗಲಿ..
\।
In reply to ಶ್ರೀನಿವಾಸ್ ಜಿ-ಈ ಎಸ ಆರ್ ಟಿ by venkatb83
ನೀವು ಹೇಳಿದ್ದು ಸರಿ, ಈ srt
ನೀವು ಹೇಳಿದ್ದು ಸರಿ, ಈ srt ಕಡತಗಳು ಎಲ್ಲಾ ಸಿನಿಮಾ ಕಡತಗಳಿಗೆ ಕೆಲಸ ಮಾಡೋಲ್ಲ. ಆದರೆ ಅದಕ್ಕೆ ಕಾರಣ ಕಂಪ್ರೆಸ್ಸ್ ಅಲ್ಲ, timing differences.
ನಿಮ್ಮ ಫೈಲ್ ಹುಡುಕುವ ಪ್ರಯತ್ನಕ್ಕೆ ಶುಭವಾಗಲಿ!