ಕಣ್ಗಳಲ್ಲಿ ಕಣ್ಗಳು...

Submitted by prasannakulkarni on Wed, 12/19/2012 - 22:44

ಅ೦ದು ಆಫೀಸಿಗೆ ಹೊರಡಲು
ಬಸ್ಸನ್ನೇರಿದೆ...
ಸಿಕ್ಕ ಆಸನದಲ್ಲಿ ಕುಳಿತು
ಸುತ್ತ ನೋಡಿದೆ...

ಎಷ್ಟೊ೦ದು ಕಣ್ಣುಗಳು ಒಳಗಡೆ....!

ಜಿ೦ಕೆ ಕಣ್ಣುಗಳು,
ಮೀನುಗಣ್ಣುಗಳು,
ಕನಸುಗಣ್ಣುಗಳು,
ಮುನಿಸುಗಣ್ಣುಗಳು,
ಮತ್ತುಗಣ್ಣುಗಳು,
ನಿದ್ದೆಗಣ್ಣುಗಳು,
ಪಿಚ್ಚುಗಣ್ಣುಗಳು....

ನಡುದಾರಿಯಲ್ಲಿ ಏರಿದವರ
ಕಣ್ಗಳೆದುರು,
ಮು೦ಚಿದ್ದವರ ಕಣ್ಣು
ಮ೦ಕಾಗತೊಡಗಿದವು...

ಹುಬ್ಬು ತೀಡಿದ ಕಣ್ಣುಗಳು,
ಕಾಡಿಗೆಯಿಟ್ಟ ಕಣ್ಣುಗಳು,

ಉದ್ದ ರೆಪ್ಪೆಯ ಕಣ್ಣುಗಳು,
ಮಸೂರ ಪರದೆಯ ಕಣ್ಣುಗಳು,
ಬೇಟೆಯಾಡುವ ಕಣ್ಣುಗಳು,
ಬಲೆಗೆ ಬೀಳುವ ಕಣ್ಣುಗಳು,
ಹೊರಗೆ ನೆಟ್ಟಿದ ಕಣ್ಣುಗಳು,
ಒಳಗೆ ಅಲೆಯುವ ಕಣ್ಣುಗಳು,
ಸುಮ್ಮನೆ ಮುಚ್ಚಿದ ಕಣ್ಣುಗಳು,
ಅಬ್ಬಾ..!! ಎಷ್ಟೊ೦ದು...!!

ಇವೆಲ್ಲದರ ನಡುವೆ ಒ೦ದು ಜೊತೆ
ಕಣ್ಣು ಕಾಣಿಸಲಿಲ್ಲ...,
ಇದೆಲ್ಲವನ್ನು ನಾ ನೋಡುತ್ತಿದ್ದದ್ದು,
ಈ ಕಣ್ಗಳಿ೦ದಲೇ...!


 


..

ನನ್ನ ನಿಲ್ದಾಣ ಬ೦ದಾಗ
ಹೊರ ಬ೦ದೆ ಬಸ್ಸಿನಿ೦ದಿಳಿದು...
ಅಷ್ಟೊ೦ದು ಕಣ್ಗಳನ್ನು ಹೊತ್ತು
ಸಾಗುತ್ತಿದ್ದ ಬಸ್ಸಿಗೂ ಎರಡು ಕಣ್ಗಳಿದ್ದವು..,
ಹೊರಗೆ, ಆ ಎರಡು ಕಣ್ಗಳಷ್ಟೇ
ಕಾಣುತ್ತಿದ್ದವು....!!!

Rating
No votes yet

Comments

venkatb83

Sun, 12/23/2012 - 16:29

ಅಬ್ಬಬ್ಬಾ...! ಎಲ್ಲಿ ನೋಡಿದರೂ ಕಣ್ಣುಗಳೇ ಕಣ್ಣುಗಳು....
ಆದರೆ ಈ ಒಳ್ಳೇ ಬರಹ-ವಿಶೇಷ ಹೂರಣದ ಬರಹ-ನಮ್ ಕಣ್ಣಿಗೆ ಬೀಳದೆ ಹೋದದ್ದು....ಹೇಗೆ...!!
ಅಂತೂ ಎಲ್ಲ ವಿಧಗಳ ಕಣ್ಣುಗಳ ದರ್ಶನವಾಯ್ತು...!!
ಸಂಜೆ ವಾಪಾಸ್ಸು ಮನೆಗೆ ಹೋಗ್ವಾಗ ಈ ಕೆಲಸ ಈಗ ನನ್ನದು..!
ನೋಡುವ ಅದೆಸ್ಟು ಕಣ್ಣುಗಳು ನನಗೆ ಸಿಗಬಹ್ದು..!!

ಬರಹ ವಿಶೇಷವಾಗಿದ್ದು -ನಮಗೆ ದಿನ ನಿತ್ಯ ಮಾಮೂಲಾಗಿರುವ ಸಂಗತಿಯನ್ನ ಹೇಗೆ ವಿಶೇಷ ಎಂದು ತೋರಿಸಿತು...
ನನ್ನಿ ..
ಶುಭವಾಗಲಿ.

\|