ಲೈಫ್ ಆಫ್ ಪೈ-2012. ದೇವರ ಹುಡುಕಾಟ -ಬದುಕಲು ಹೋರಾಟ !ಎಲ್ಲಿಂದ ಎಲ್ಲಿಗೋ ಪಯಣ..
ಚಿತ್ರ
![](https://saaranga-aws.s3.ap-south-1.amazonaws.com/s3fs-public/styles/large/public/Life_of_Pi_2012_Poster.jpg?itok=h1-U65UB)
![](https://saaranga-aws.s3.ap-south-1.amazonaws.com/s3fs-public/styles/large/public/life-of-pi.jpg?itok=o8lD61az)
![](https://saaranga-aws.s3.ap-south-1.amazonaws.com/s3fs-public/styles/large/public/images_32.jpg?itok=DOa2FG6q)
![](https://saaranga-aws.s3.ap-south-1.amazonaws.com/s3fs-public/styles/large/public/Life_of_Pi_movie_wallpapers-1680x1050.bmp-001.jpg?itok=t3Lvcr1V)
![](https://saaranga-aws.s3.ap-south-1.amazonaws.com/s3fs-public/styles/large/public/life-of-pi-movie-poster-14.jpg?itok=Kf8DvKL9)
![](https://saaranga-aws.s3.ap-south-1.amazonaws.com/s3fs-public/styles/large/public/life-of-pi-9.jpg?itok=d_3M_Fxp)
![](https://saaranga-aws.s3.ap-south-1.amazonaws.com/s3fs-public/styles/large/public/life-of-pi02.jpg?itok=zfhaxHxs)
![](https://saaranga-aws.s3.ap-south-1.amazonaws.com/s3fs-public/styles/large/public/review_life-of-pi-e1353441124712.jpg?itok=5gEX4Bwe)
![](https://saaranga-aws.s3.ap-south-1.amazonaws.com/s3fs-public/styles/large/public/lifeofpi.jpg?itok=bW-F7YkV)
![](https://saaranga-aws.s3.ap-south-1.amazonaws.com/s3fs-public/styles/large/public/life-of-pi-movie-still-21.jpg?itok=Yn2pA3a0)
ಲೈಫ್ ಆಫ್ ಪೈ -2012 -ಎಲ್ಲಿಂದ ಎಲ್ಲಿಗೋ ಪಯಣ.!
ಈ ಲೈಫ್ ಆಫ್ ಪೈ -2012 ರ ಬಿಡುಗಡೆಯ ಚಿತ್ರವನ್ನು ಮಾಮೂಲಿ ಪರದೆಯ ಚಿತ್ರ ಮಂದಿರದಲ್ಲಿ ಹಿಂದಿ ಭಾಷೆಯಲ್ಲಿ ನೋಡಿದೆ. ಭಾರತದ ಪಾಂಡಿಚೆರಿಯಲ್ಲಿ ಖಾಸಗಿ ಝೂ ನಡೆಸುವ (ಈ ತರಹದ ಖಾಸಗಿ ಝೂ ನಡೆಸಲು ನಮ್ ದೇಶದ ಕಾನೂನಲ್ಲಿ ಅವಕಾಶವಿದೆಯೇ?) ಕುಟುಂಬ ಝೂ ನ ಕೆಲ ಪ್ರಾಣಿಗಳನ್ನು ಮಾರಾಟ ಮಾಡಿ ವಿದೇಶದಲ್ಲಿ (ಕೆನಡ)ಹೋಗಿ ನೆಲೆಸುವ ತೀರ್ಮಾನಕ್ಕೆ ಬಂದು ಕೆಲವು ಪ್ರಾಣಿಗಳ ಸಹಿತ ಒಂದು ಹಡಗು ಹತ್ತುವರು.
ಈ ಮಧ್ಯೆ ಭಾರತದಲ್ಲಿ ಹುಡುಗಿ ಒಂದನ್ನ ಪ್ರೇಮಿಸಿ ಆಗಷ್ಟೆ ಆ ಬಗ್ಗೆ ಹೇಳಿ ಅವಳೂ ಒಪ್ಪಿ ಖುಷಿಯಲಿರುವ ನಾಯಕನಿಗೆ ಈ ಅಗಲಿಕೆ ಸಹಿಸಲಾಗದ್ದು, ಹಾಗಂತ ಹೋಗದೆ ಇರಲು ಸಾಧ್ಯವೂ ಇಲ್ಲ..! ಮಾರ್ಗ ಮಧ್ಯೆ ಬಿರುಗಾಳಿ ಮಳೆ ಬಂದು ಇವರ ದೊಡ್ಡ ಹಡಗು ಪಲ್ಟಿ ಹೊಡೆದು ಪ್ರಾಣಿಗಳ ಸಮೇತ ಸಮುದ್ರಕ್ಕೆ ಬೀಳುವರು. ಈ ಅವಘಡದಲ್ಲಿ ತಾಯಿ-ತಂದೆ-ತಮ್ಮ ಅಗಲುವರು .
ಒಂದು ಲೈಫ್ ಬೋಟ್ನಲ್ಲಿ ತೇಲುತ್ತ ಹೋಗುವ ಇವನ ಜೊತೆ ಮೊದಲಿಗೆ ಒಂದು ಜೀಬ್ರ ಕಾಣಿಸುವುದು. ಆಮೇಲೆ ಒಂದು ಹೈನ ಪ್ರಾಣಿ-ಇಸ್ಟೇನಾ ಎಂದು ನಿಟ್ಟುಸಿರು ಬಿಡುವಾಗ ಧುತ್ತನೆ ಬಂಗಾಳದ ಹುಲಿ ಬೋಟಿನ ಒಳಗಿಂದ ಆಚೆ ಬರುವದು...
ಇಲ್ಲಿಂದ ಅಸಲಿ ಕಥೆ ಶುರು....!!
ಭಲೇ ಮಜಾ...!!
ಆ ಲೈಫ್ ಬೋಟಿನಲ್ಲಿ ಇರಬೇಕೆಂದರೆ ಆ ಸದಾ ಕಿರುಚುವ ಹೈನ ಮತ್ತು ಅಪಾಯಕಾರಿ ಹುಲಿ ಜೊತೆ ಇರಬೇಕು, ಆ ಜೀಬ್ರ ತಿನ್ನಲು ಹುಲಿ ಮತ್ತು ಹೈನ ಮಧ್ಯೆ ಪೈಪೋಟಿ. ಮೊದಲಿಗೆ ಹೈನಗೆ ಬಲಿ ಆಗುವುದು ಗೊರಿಲ್ಲಾ...!
ಆಮೇಲೆ ಹುಲಿಗೆ ಬಲಿ ಆಗುವದು ಜೀಬ್ರಾ. ತನ್ನ ಕಣ್ಣೆದುರೇ ನಡೆವ ಆ ದಾರುಣವನ್ನು ನಿಲ್ಲಿಸಲಾಗದ ಅಸಹಾಯಕತೆ ಹುಡುಗನದು. ಅವನ ಹೆಸರು ಪೈ -ಅದೊಂತರಹ ಶಾರ್ಟ್ ಕಟ್ ಹೆಸರು. ಅವನ ಮೈಲುದ್ದದ ಪೂರ್ಣ ಹೆಸರು(Piscine Molitor Patel ) -ಹೇಳಲು ಕಷ್ಟ ಅಂತ ಮನೆ ಮಂದಿ ಇಟ್ಟ ಹೆಸರು ಪೈ. ಅದನ್ನೇ ಶಾಲಾ ಕಾಲೆಜುಗಳಲ್ಲಿ ತಮಾಷೆ ಮಾಡುವ ಸಹಪಾಠಿಗಳು ..!!
ಪೈ ಮಹತ್ವವನ್ನು ವಿವರಿಸುವ ಹುಡುಗನ ಪ್ರಯತ್ನಗಳ ದೃಶ್ಯ ಮನರಂಜನಕಾರಿ.!
ರಿಚರ್ಡ್ ಪಾರ್ಕರ್ ಹೆಸರಿನ ಹುಲಿ ಮತ್ತು ಪೈ ಸಹಬಾಳ್ವೆ-ಸಾಮರಸ್ಯ ಜೀವನದ ಕಥೆ ಇರುವ ಈ ಚಿತ್ರದ ಹುಲಿ ನಿಜವಾದದ್ದು ಅಲ್ಲ! ಅದು ಒಂದು ಗ್ರಾಫಿಕ್ ಹುಲಿ. ದೇಶ ವಿದೇಶಗಳ ಗ್ರಾಫಿಕ್ ತಂತ್ರಜ್ಞರು / ನಮ್ಮ ನಾಡಿನ ಧಾರವಾಡದ ಒಬ್ಬ ತಂತ್ರಜ್ಞನ ಪಾಲೂ ಇದೆ... !
ನಿಜವಾದ ಹುಲಿಯೋ ಅದರ ಮುಂದೆ ಏನೂ ಅಲ್ಲ..!!
ಬೋಟಿನ ಒಳಗೆ ಹುಲಿ ಜೊತೆ ಇರಲು ಸಾಧ್ಯವಾಗದು ಎಂದು ಒಂದು ಪುಟ್ಟ ರಾಫ್ಟ್ ಒಂದನ್ನು ತಯಾರಿಸಿ ಅದಕ್ಕೆ ಮತ್ತು ಬೋಟಿಗೆ ಒಂದು ಹಗ್ಗ ಕಟ್ಟಿ ಅದರಲ್ಲಿ ಕುಳಿತು ಆಗಾಗ ಹುಲಿ ಇರುವ ಬೋಟಿಗೆ ಬಂದು ತಿನ್ನುವ ತಿಂಡಿ -ನೀರು ಇತ್ಯಾದಿ ತೆಗೆದುಕೊಳ್ಳುವನು..
ಹುಲಿಗೆ ಹೈನ -ಜೀಬ್ರ ತಿಂದು ಇನ್ನು ಸಮಾಧಾನವಾಗಿಲ್ಲ.. ಆಗಾಗ ಇವನತ್ತ ನೋಡಿ ತಿನ್ನುವ ಹವಣಿಕೆ...! ಯಾವುದೇ ಸಹಾಯ ಸಿಗದೇ ಇತ್ತ ಆಹಾರ ನೀರು ಸಹಾ ಖಾಲಿ ಆಗುವ ಸಂಭವದ ಪರಿಸ್ಥಿತಿಯಲ್ಲಿ ಈ ಹುಲಿ ಜೊತೆ ಏಗುವ ಪರಿಸ್ಥಿತಿ..!!
ಅವ್ನ ಜೊತೆಗೆ ತಂದ ಬ್ಯಾಗಲ್ಲಿ ಒಂದು ಸಹಾಯದ ಪುಸ್ತಕ ಸಿಗುವುದ್ -ಅದರಲ್ಲಿ ಇಂಥಾ ಅಪಾಯಕಾರಿ ಸ್ಥಿತಿಯಲ್ಲಿ-ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು? ಹೇಗೆ ಮನೋ ದಾರ್ಡ್ಯ ಬೆಳೆಸಿಕೊಳ್ಳಬೇಕು ಕೂಲ್ ಕಾಂ ಆಗಿರಬೇಕು ಎಂಬ ಸಲಹೆಗಳು ಇದ್ದವು.
ಆ ಸಂದರ್ಭ ಭಲೇ ನಗು ತರಿಸುವ್ದೂ...
ಆ ಮಧ್ಯೆ ಮೀನುಗಳು ಹಿಡಿಯಲು ಹುಲಿ ನೀರಿಗೆ ಜಿಗಿದು ಇವನ ರಾಫ್ಟ್ ಕಡೆ ಬಂದಾಗ ಇವನು ಬೋಟಿಗೆ ಜಿಗಿವನು. ಅಲ್ಲಿ ಸಿಕ್ಕ ಒಂದು ಕೋಲು ಮೂಲಕ ಹುಲಿ ಪಳಗ್ಸಿ ತಾ ಹೇಳಿದ ಹಾಗೆ ಕೇಳುವ ಹಾಗೆ ಮಾಡುವನು. ಅಲ್ಲಿಂದ ಹುಲಿ ಮತ್ತು ಇವನ ಮಧ್ಯೆ ಸ್ನೇಹ ಶುರು...!!
ಒಂದು ನಿರ್ಮಾನುಷ ದ್ವೀಪಕ್ಕೆ ಬಂದು ಅಲ್ಲಿನ ಹಣ್ಣು -ಗೆಣಸು ಗೆಡ್ಡೆ ತಿಂದು ನೀರು ಕುಡಿದು -ಮರ ಹತ್ತಿ ಇವನು ಕುಳಿತರೆ, ಕೆಳಗೆ ಸುತ್ತ ಮುತ್ತ ಇರುವ ಪ್ರಾಣಿಗಳನ್ನು ಬೇಟೆ ಆಡಿ ತನ್ನ ಹಸಿವು ಇಂಗಿಸಿಕೊಳ್ಳುವ ಹುಲಿ.
ಆಮೇಲೆ ಮತ್ತೆ ಪ್ರವಾಸ ಮುಂದುವರೆಸಬೇಕಲ್ಲ, ಹುಲಿಯನ್ನು ಕರೆದುಕೊಂಡು ಬೋಟ್ ನಲ್ಲಿ ಹೊರಡುವಾಗ ವಿಪರೀತ ಮಳೆ ಗಾಳಿಯ ಭಯಕ್ಕೆ ಏನಾರ ಅಗಲಿ ಎಂದು ಕಣ್ಣು ಮುಚ್ಚಿ ಮಲಗಿ ಎದ್ದಾಗ ಯಾವ್ದೋ ತೀರ ಪ್ರದೇಶಕ್ಕೆ ಮನುಷ್ಯ ನಿವಾಸಗಳಿಗೆ ಹತ್ತಿರ ತಾನು ಬಿದ್ದು ಪಕ್ಕದಲ್ಲಿ ಹುಲಿ ನಡೆದು ಬರುವದು ಹಾಗೆಯೇ ಇವನು ಕರೆದರೂ ಇವನಿಗೆ ತನಗೆ ಯಾವದೇ ಸಂಬಂಧ ಇಲ್ಲ ಎನ್ನುವ ಹಾಗೆ ಹೊರಟು ಹೋಗಿ ಕಣ್ಮರೆ ಆಗುವದು. ಪೈ ನಿಶ್ಯಕ್ತಿಯಿಂದ ಮಲಗಿ ಎದ್ದಾಗ ಆಸ್ಪತ್ರೆಯಲ್ಲಿ ಇವನು, ಇವನ ಮುಂದೆ ಇಬ್ಬರು ತನಿಖಾ ಅಧಿಕಾರಿಗಳು- ಅವ್ರಿಗೆ ಏನು ನಡೆಯಿತು ಹೇಗೆ ನಡೆಯಿತು ಎಂದು ಹೇಳಬೇಕಿದೆ.
ಒಂದು ನಿಜ ಕಥೆ ಹೇಳಿದರೆ ಅವರು ನಂಬರು, ಸುಳ್ಳು ಕಥೆ ಸೃಷ್ಟಿ ಮಾಡಿ ಹೇಳಿದರೆ ಅದನ್ನು ನಂಬಲು ತಯಾರಿಲ್ಲ. ಕೊನೆಗೆ ಯಾವುದನ್ನಾರ ನಂಬಲು ಹೇಳಿದಾಗ ನಿಜ ಕಥೆಯನ್ನೇ ಒಪ್ಪುವರು...ಪೈ ಜೀವನ ಕಥೆ ಇಲ್ಲಿಗೆ ಕೊನೆ.
ಸನ್ನಿವೇಶಗಳು
1.ದೇವರ ಹುಡುಕಾಟ-3 ಧರ್ಮಗಳ ಬಗ್ಗೆ ಅರಿಯುವ-3 ನ್ನು ಒಪ್ಪುವ ಹಾಗೆ ಬಾಳುವ ಪೈ.
2.ಝೂ ಮತ್ತು ಪ್ರಾಣಿಗಳನ್ನು ಮಾರಿ ವಿದೇಶಕ್ಕೆ ಹೋಗಿ ನೆಲೆಸುವ ಎಂಬ ತಂದೆಯ ಆಜ್ಞೆಯ ಸಂಧರ್ಭ -ಹೆಂಡತಿ ಮಕ್ಕಳ ಪ್ರಾಣಿಗಳನ್ನು ಅಗಲುವ ನೋವು.
3.ಅದೇ ತಾನೇ ಪ್ರೀತಿಸಿದ ಹುಡುಗಿಗೆ ಪ್ರೀತಿ ಹೇಳಿಕೊಳ್ಳಲು ಆಗದೆ ಚಡಪಡಿಸುವ - ಅವಳೇ ಹೇಳುವ, ಹಿಂದೆಯೇ ತಂದೆಯ ಆಜ್ಞೆಯಿಂದ ಆಗುವ ಅಗಲಿಕೆ.
4.ಹುಲಿ ಮತ್ತು ಪೈ ನ ಮೊದಲ ಭೇಟಿ -ತಮ್ ಝೂ ನಲ್ಲಿ .
5. ಏನಾರ ಸಂದೇಹ ಇದ್ದರೆ ಅದ್ನ ಆಗಲೇ ನಿವಾರಿಸುವ , ಯಾವ್ಯಾವದ್ರ ಬಗ್ಗೆ ಏನೇನೋ ಹೇಳುವ ಪೈ ತಂದೆ -ತಾಯಿಯ ವಿರೋಧದ ದೃಶ್ಯಗಳು.
6.ಸಮುದ್ರ ಪ್ರಯಾಣದಲ್ಲಿ ಹಡಗು ಮುಳುಗಿ ಪ್ರಾಣಿಗಳ ಸಮೇತ ಕೆಲವೇ ಕ್ಷಣಗಳಲ್ಲಿ ನೀರಿಗೆ ಬಿದ್ದು ತಂದೆ ತಾಯಿ ಅಣ್ಣನ ಕಳೆದುಕೊಳ್ಳುವ ದೃಶ್ಯ.
7.ಏಕಾಂಗಿಯಾಗಿ ಅಪಾಯಕಾರಿ ಪ್ರಾಣಿಗಳು -ಹೈನ -ಹುಲಿ ಮಧ್ಯೆ ಜೀವಿಸುವ ಕ್ಷಣಗಳು.
8.ಕಣ್ಣ ಮುಂದೆಯೇ ಹೈನ ದಿಂದ ಗೊರಿಲ್ಲಾ ಭೇಟೆ . ಹುಲಿಯಿಂದ ಹೈನ ಮತ್ತು ಜೀಬ್ರ ಸ್ವಾಹ. ಅದು ನೋಡಿ ಪೈ ಪಡುವ ಭಯದ ದೃಶ್ಯಗಳು.
9.ತಾ ಬದುಕಲು ಹುಲಿಗೆ ನಿತ್ಯ ಆಹಾರ ಬೇಕು ಅಂತ ಮೀನುಗಳನ್ನು ಹಿಡಿದು ಹುಲಿ ಬಾಯಿಗೆ ಎಸೆವ ದೃಶ್ಯಗಳು!
10.ದೊಡ್ಡ ದೊಡ ಮೀನುಗಳು ಪೈ ಮೊರೆ ಕೇಳಿಸಿದಂತೆ ತಾವಾಗೆ ಗುಂಪು ಗುಂಪಾಗಿ ಹುಲಿ ಬಾಯಿ ಕಡೆ ಜಿಗಿವ ದೃಶ್ಯ!
11. ವ್ಹೇಲ್ ಒಂದು - ಎರಡು ಸಾರಿ ನೀರಿಂದ ಹೊರ ಬಂದು ಇವನ ಸುತ ಸುತ್ತುವ ಆ ಕ್ಷಣದಲ್ಲಿ ಆಕಾಶ ಮತ್ತು ನೀರಿನಲಿ ಬೆಳಕಿನ ಚಿತ್ತಾರ...
12.ಹುಲಿ ಪಳಗಿಸುವ, ತಾನೂ ಮತ್ತು ಹುಲಿ ಆಹಾರ ಇಲ್ದೆ , ಇರುವ ಸ್ವಲ್ಪ ನೀರನ್ನೇ ಹಂಚಿಕೊಳ್ಳುವ ದೃಶ್ಯ.
13.ದ್ವೀಪ ಸಿಕ್ಕಲ್ಲಿ ಆಹಾರ ನೀರು ಸಿಕ್ಕಿ ಇಷ್ಟವಿಲ್ಲದ ಇಷ್ಟದೊಡನೆ ಮರಳಿ ಹೋಗುವ ಸಂದರ್ಭ.
14.ಏನೂ ಸಂಬಂಧ ಇಲ್ಲ ಎಂಬಂತೆ ತಿರುಗಿಯೂ ನೋಡದೆ ಹುಲಿ , ಕಾಡಲಿ ಮರೆ ಆದಾಗ ಪೈ ಗೆ ಆಗುವ ಆಘಾತ ಅಚ್ಚರಿ..!
15.ನಿಜ ಕಥೆ-ಸುಳ್ಳು ಕಥೆ ತನಿಖಾದಿಕಾರಿಗಾಳಿಗೆ ಹೇಳುವ ಸಂದರ್ಭ.
16.ಅಪಾಯಕಾರಿ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಪುಸ್ತಕದ ಸಾಲುಗಳು ಅದನ್ನು ಓದಿ ಪೈ ಪ್ರತಿಕ್ರಿಯಿಸುವ ಸಂದರ್ಭ.
ಪೈ ಪಾತ್ರಧಾರಿಯಾಗಿ ಯುವ ನಟ-ಸೂರಜ್ ಶರ್ಮ ಮತ್ತು ಪ್ರೌಢ ಪೈ ಆಗಿ ಹಾಲಿವುಡ್ ಫೇವರೀಟ್ ನಟ ನಮ್ ದೇಶದ ನಟ ಇರ್ಫಾನ್ ಖಾನ್ ಅವರದು ಸಖತ್ ಅಭಿನಯ. ಹಿಂದಿಯಲ್ಲಿ ನೋಡಿದ್ದರಿಂದ ಅಲ್ಲಲ್ಲಿ ನಗೆ ಉಕ್ಕಿಸುವ ಪಂಚಿಂಗ್ ಸಂಭಾಷಣೆಗಳು ಇದ್ದವು -ಸಿನೆಮ ಮಂದಿರದಲ್ಲಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು ಆಯ್ತು.
ಈಗಾಗಲೇ ಹಲವು ಪ್ರಶಸ್ತಿಗಳನ್ನು ಗಳಿಸಿ ವಿಪರೀತ ದುಡ್ಡು ಬಾಚಿದ ಈ ಚಿತ್ರ ಮುಂದಿನ ಆಸ್ಕರ್ ಪ್ರಶಸ್ತಿಗಳ ಪಟ್ಟಿಯಲ್ಲಿ ಇತರ ಚಿತ್ರಗಳಿಗೆ ಪ್ರಬಲ ಸ್ಪರ್ಧೆ ಒಡ್ಡಿ ಹಲವು ಪ್ರಶಸ್ತಿಗಳನ್ನು ಬಾಚುವುದು ಗ್ಯಾರಂಟಿ.
* ಮನೆ ಮಂದಿ ಸಹಿತ ಯಾವದೇ ಮುಜುಗರ ಇಲ್ಲದೆ ಕೂಲ್ ಆಗಿ ನೋಡಿ ಎಂಜಾಯ್ ಮಾಡಬಹುದಾದ ಸಿನೆಮಾನೋಡಿ ಎಂಜಾಯ್ ಮಾಡಿ...(3 ಡಿ ಆದರೆ ಇನ್ನೂ ಚೆನ್ನ)
* ಈ ಚಿತ್ರ ಮತ್ತು ತಲಾಶ್ ಬಗ್ಗೆ ಈಗ ಬರೆಯಲು ಕಾರಣ-
ಈ ಎರಡೂ ಚಿತ್ರಗಳು ಚಿತ್ರಮಂದಿರದಲ್ಲಿ ಈಗಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು ನೀವು ಈ ಸಮಯಕ್ಕೆ ನೋಡಬಹುದು ಎಂದು.
ಚಿತ್ರ ಮೂಲ:
ಐ ಎಂ ಡಿ ಬಿ ನನ್ನ ಬರಹ :
ಐ ಎಂ ಡಿ ಬಿ:
ವಿಕಿಪೀಡಿಯ :
ವೀಡಿಯೊ ಟ್ರೇಲರ್ :
Rating
Comments
ವೆಂಕಟೇಶ್
ವೆಂಕಟೇಶ್
ಪೈ ಚಿತ್ರ ನಾನೂ ನೋಡಿದೆ
ನಿಮ್ಮ ಗ್ರಾಹ್ಯ ಗಮನಾರ್ಹ
ನನಗೂ ಗ್ರಾಫಿಕ್ ಮತ್ತು ಅನಿಮೇಶನ್ ತುಂಬಾನೇ ಖುಷಿಯಾಗುತ್ತೆ ನೋಡಲು.
ಬರಹ ಓದಿ ಇನ್ನೊಮ್ಮೆ ಚಿತ್ರ ನೋಡಿದ ಹಾಗೆ ಆಯ್ತು.
In reply to ವೆಂಕಟೇಶ್ by gopinatha
ವೆಂಕಟೇಶ್ ಪೈ!:)
ವೆಂಕಟೇಶ್ ಪೈ!:)
ಸಪ್ತಗಿರಿವಾಸಿ, ನಿಮ್ಮ ವಿಮರ್ಶೆ ಓದಿದ ಮೇಲೆ ನಾನು ಚಿತ್ರ ನೋಡಬೇಕಿತ್ತು. :) ಚಿತ್ರ ವಿಮರ್ಶೆ ಚೆನ್ನಾಗಿದೆ.
-ಗಣೇಶ.
In reply to ವೆಂಕಟೇಶ್ ಪೈ!:) by ಗಣೇಶ
ಗಣೇಶ್ ಅಣ್ಣ -ಈ ಚಿತ್ರ ಇನ್ನೂ
ಗಣೇಶ್ ಅಣ್ಣ -ಈ ಚಿತ್ರ ಇನ್ನೂ ಚಿತ್ರ ಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.
ನಿಮ್ಮ ಮೆಚ್ಚಿನ ಮಲ್ಟಿ ಪ್ಲೆಕ್ಸ್ನಲ್ಲಿ 3 ಡಿ ನಲಿ ನೋಡಿ ..!!
ನೀವ್ ಆರಾಮವಾಗಿ ಸಿನೆಮ ನೋಡಬಹ್ದು...
ನಾವಂತೂ ನಿಮ್ಮನ್ನು ಹಿಡಿಯಲು ಅಲ್ಲಿಗೆ ಬರುವುದಿಲ್ಲ...!!
ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|/
In reply to ವೆಂಕಟೇಶ್ ಪೈ!:) by ಗಣೇಶ
ಗಣೇಶರೇ
ಗಣೇಶರೇ
ಉದ್ದೇಶಪೂರ್ವಕವಾಗಿ ವೆಂಕಟೇಶ ಅವರ ಹೆಸರಿನ ಜತೆ "ಪೈ" ಸೇರಿಸಿದ್ರಾ ಅಂತ ಸಂಶಯ ಬರುತ್ತಿದೆ ನನಗೆ.
In reply to ವೆಂಕಟೇಶ್ by gopinatha
ರಾಯರೇ -ಸಿನೆಮ ಒಂದು ಅತ್ಯುತ್ತಮ
ರಾಯರೇ -ಸಿನೆಮ ಒಂದು ಅತ್ಯುತ್ತಮ ಮನರಂಜನಾ ಮಾಧ್ಯಮ-
ಕೊಟ್ಟ ಕಾಸು-ಸಮಯ ವ್ಯರ್ಥ ಆಗದಿದ್ದರೆ ಅದೇ ಉತ್ತಮ ಚಿತ್ರ...!!
ಬಹುಪಾಲು ಎಲ್ಲ ಸಿನೆಮಾಗಳ ಬಗ್ಗೆ ಪತ್ರಿಕೆಯಲ್ಲಿ-ಜಾಲತಾಣಗಳಲಿ ಬರುವ ವಿಮರ್ಶೆಯನ್ನು (ಕೆಟ್ಟದಾಗಿ-ಒಳ್ಳೆಯದ್ದು ಎಂದೂ)ಓದಿ -ಹಲವು ಕೆಟ್ಟ ಸಿನೆಮ ಎಂದು ಬರೆದ ಒಳ್ಳೆಯದ್ದು ಎಂದು ಬರೆದ ಚಿತ್ರಗಳನ್ನು ನೋಡಿ ವಿರುದ್ಧ ಅನುಭವಗಳೂ ಆಗಿವೆ...!!
ನಿಮ್ಮ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..
\|