ಸಂಪದ ಸಮ್ಮಿಲನ ಡಿಸೆಂಬರ್ ೩೦ರ ವೀಡಿಯೋ

ಸಂಪದ ಸಮ್ಮಿಲನ ಡಿಸೆಂಬರ್ ೩೦ರ ವೀಡಿಯೋ

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣಾಂತರಗಳಿಂದ ಸಾಧ್ಯವಾಗದವರಿಗಾಗಿ ಸಂಪದ ಸಮ್ಮಿಲನ ಡಿಸೆಂಬರ್ ೩೦ರ ಕಾರ್ಯಕ್ರಮದ ವೀಡಿಯೋ ಇಗೋ ಇಲ್ಲಿದೆ:

ವೀಡಿಯೋ ೧

ವೀಡಿಯೋ ೨

Comments

Submitted by bhalle Fri, 01/04/2013 - 21:34

ವೀಡಿಯೋ ಬಹಳ ಚೆನ್ನಾಗಿ ಮೂಡಿ ಬ೦ದಿದೆ ... ಧನ್ಯವಾದಗಳು ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ವೀಡಿಯೋ ನೋಡಿ ಸಂತಸವಾಯಿತು ಅಡೂರ'ರ ಮಾತುಗಳು ಮತ್ತು ಸಲಹೆಗಳು ಉಪಯುಕ್ತವಾಗಿವೆ ... ಬರೀಬೇಕು ಎಂದು ಬರೆದಾಗ ಅದು ಕೇವಲ ಬರಹವಾಗುತ್ತದೆಯೇ ವಿನಹ ಒಂದು ಕೃತಿಯಾಗದು ಎಂಬ ವಿಷಯ ಗಮನಾರ್ಹ ... ಧನ್ಯವಾದಗಳು ಹನಿಹನಿಯಾಗಿ ನಿರಂತರವಾಗಿ ಬೀಳ್ವ ಮಳೆ ಭೂಮಿಯಲ್ಲಿ ಇಳಿದು ಬೆಳೆಗೆ ಸಹಕಾರಿಯಾಗುತ್ತದೆ. ನಿಧಾನಗತಿಯಲ್ಲಿ, ತೂಕವುಳ್ಳ ಮಾತುಗಳಿಂದ ಹೇಳುವ ವಿಷಯ ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂಬ ಮಾತು ನಾಡಿಗರ ಮಾತುಗಳಿಗೆ ಅನ್ವಯಿಸುತ್ತದೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಾಗ ಅದನ್ನು ಸಮರ್ಪಕವಾಗಿ ನೆರವೇರಿಸಬೇಕೆಂಬ ಮಾತುಗಳು ನಿಜಕ್ಕೂ ಉತ್ತಮವಾಗಿದೆ. "DOS and DDOS attack"ಗಳು ಸಂಪದಕ್ಕೂ ನುಗ್ಗಿದ್ದು ವಿಷಾದನೀಯ ... ಸಂಪದಕ್ಕೆ ನೂರೆಂಟು ದಿಕ್ಕುಗಳಿಂದ ನುಗ್ಗಿ ಓದುಗರಿಗೆ ಲಭ್ಯವಾಗದಂತೆ ಮಾಡುವ ವಿಕೃತ ಮನಸಿನ ಜನರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ :-(
Submitted by ಗಣೇಶ Fri, 01/04/2013 - 23:23

ಹರಿಪ್ರಸಾದ ನಾಡಿಗರೆ, ತಮ್ಮ ಮಾತು ಕೇಳುವುದರಲ್ಲಿ ಎಷ್ಟು ತನ್ಮಯನಾಗಿದ್ದೆನೆಂದರೆ-ನಿಮ್ಮ ಎದುರಿಗಿದ್ದ ಮೇಜಿನ ಮೇಲೆ ತಂದಿಟ್ಟ ನೀರಿನ ಬಾಟಲ್ ಮುಚ್ಚಳ ತೆಗೆದುಕೊಡಲು ಹೊರಟಿದ್ದೆ :). ಸಂಪದದ ಹುಟ್ಟು+ಬೆಳವಣಿಗೆಗೆ ತಾವು ಪಟ್ಟಿರುವ (ಈಗಲೂ ಪಡುತ್ತಿರುವ) ಶ್ರಮಕ್ಕೆ (ಕವಿನಾಗರಾಜರೊಂದಿಗೆ ನನ್ನದೂ) ಹ್ಯಾಟ್ಸ್ ಆಫ್. ಅಡೂರರ ಭಾಷಣವೂ ಚೆನ್ನಾಗಿತ್ತು. ಲೇಖನ ಬರೆಯಲು ಬೇಕಾದ ತಯಾರಿ ಇತ್ಯಾದಿ ಬಗ್ಗೆ ವಿವರವಾಗಿ ಹೇಳಿದರು. ಈಗಿನ ಲೇಖಕರಿಗೂ, ಉದಯೋನ್ಮುಖ ಬರಹಗಾರರಿಗೂ ಉಪಯುಕ್ತ ಮಾಹಿತಿ. ಆದರೆ...........ಒಂದು ರಿಕ್ವೆಸ್ಟ್....ಈ ಬರಹಗಳನ್ನು ತಿದ್ದಿ ತೀಡಿ ಮೇಕಪ್ ಮಾಡಿ ಬರೆಯವುದು ಬಹಳ ಕಷ್ಟ. ಅದರ ಬದಲು -ಲೇಖನ-ಬ್ಲಾಗ್ ಬರಹ-ಕವನ-..-..-ದ ನಂತರ ಒಂದು "ಜೊಳ್ಳು ಬರಹಗಳು" ಎಂದು ಸೇರಿಸಿ- ಆ ವಿಭಾಗದಲ್ಲೇ ಬರೆಯುವೆ. :)