ಮೆಕನ್ನೆಸ್ ಗೋಲ್ಡ್ (1969) ಬಂಗಾರದ ಬೆನ್ನು ಹತ್ತಿ, ಬೆಟ್ಟಗಳ ಸುತ್ತಿ.. ಸಿಕ್ಕಿದ್ದೇನು?

ಮೆಕನ್ನೆಸ್ ಗೋಲ್ಡ್ (1969) ಬಂಗಾರದ ಬೆನ್ನು ಹತ್ತಿ, ಬೆಟ್ಟಗಳ ಸುತ್ತಿ.. ಸಿಕ್ಕಿದ್ದೇನು?

ಚಿತ್ರ
ಹಳದಿ ಲೋಹದ ಹಿಂದೆ  ಬಿದ್ದು, ಅದು ಸಿಕ್ಕಿ ಅಮೀರರಾದವರು, ಅದು ಸಿಗದೇ ಅದರ ಹುಡುಕಾಟದಲ್ಲಿ ನೀರು - ಆಹಾರ ಇಲ್ದೇ  ನಿತ್ರಾಣರಾಗಿ ಅಮರರಾದವರು ಎಷ್ಟೋ ಜನ!
ಅನಾದಿ ಕಾಲದಿಂದಲೂ ಈ ಹಳದಿ ಲೋಹ ಮಾಡಿದ ಮೋಡಿ -ಜಾದೂ  ಆಷ್ಟಿಷ್ಟಲ್ಲ .. ಆಗಿಂದ ಈಗೂ -ಮುಂದೂ ಈ ಸ್ವರ್ಣದ ಬಗೆಗಿನ ಮೋಹ ಕಡಿಮೆ ಆಗಲಿಕ್ಕಿಲ್ಲ...!
 
ಈ ಹಳದಿ ಲೋಹದ  ಬೆಟ್ಟ-ಮತ್ತು ಸ್ವರ್ಣ ಆಭರಣಗಳನ್ನು  ಗೋರಿಯೊಂದರಲ್ಲಿ  ಹೂತು ಹಾಕ್ಕಿದ್ದನ್ನು  ದಕ್ಕಿಸಿಕೊಳ್ಳಲು  ಹಲವು ಜನ ನಡೆಸುವ   ಪ್ರಯತ್ನಗಳು
ಅವರು ಆ ಸ್ವರ್ಣ ಪಡೆಯಲು  ಮಾಡುವ ಹೂಡುವ ತಂತ್ರ, ಕುತಂತ್ರ , ಮಸಲತ್ತು, ಸಂಚು, ಕೊಲೆ, ಮೋಸ, ವಂಚನೆ, ದ್ರೋಹ ಕೊನೆಗೆ ಅವರಿಗೆ ಆ ಸ್ವರ್ಣ ದಕ್ಕಿತೇ?
ಅವರ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿತೇ? ಆ ಬಗೆಗಿನ ಚಿತ್ರಗಳೇ,
 
1. ಮೆಕನ್ನೆಸ್ ಗೋಲ್ಡ್-1969 ಮತ್ತು 
 
2. ದಿ ಗುಡ್ ,ದಿ ಬ್ಯಾಡ್, & ದಿ ಅಗ್ಲಿ-1966
 
ಮೆಕನ್ನೆಸ್ ಗೋಲ್ಡ್ ಚಿತ್ರದ ಆ ಕಾದಂಬರಿಯ ಕುರಿತು ಹಲವು ಬಾರಿ ಹಲವು ಪತ್ರಿಕೆಗಳಲ್ಲಿ  ಓದಿ ಟೀವಿಯಲ್ಲಿ ಕೇಳಿ ಕೆಲ ತುಣುಕು ನೋಡಿ ಇದು ಹಳೆಯ ಚಿತ್ರ ಬಂಗಾರ ಹುಡುಕೋದು ಏನೋ ಹೆಂಗೋ  ಎಂದು ಯೋಚಿಸಿ  ಆ ಚಿತ್ರವನ್ನು ಮರೆತೇ ಬಿಟ್ಟಿದ್ದೆ.
 
ಆಮೇಲೆ ವರ್ಷದ  ಹಿಂದೆ  ಅತ್ಯುತ್ತಮ  ಚಿತ್ರಗಳ ಪಟ್ಟಿಗಾಗಿ  ಅವುಗಳ ಚಿತ್ರ ಕಥೆ  ನಟವರ್ಗದ  ಬಗ್ಗೆ ಹುಡುಕಾಡುವಾಗ  ಸಿಕ್ಕಿದ್ದೇ ಈ ಚಿತ್ರ.  ಅದರ ಬಗ್ಗೆ  ಅಷ್ಟೆಲ್ಲ  ಉತ್ತಮ ವಿಮರ್ಶೆ ಅದರ ಬಗೆಗಿನ  ಹಲವು ಬರಹಗಳು ಫ್ಯಾನ್ ಪೇಜ್ ನೋಡಿ  ಇದು ನೋಡದೆ ಇದ್ದುದಕ್ಕೆ  ಹಳಿದುಕೊಂಡು  ಡೌನ್ಲೋಡ್ ಮಾಡಿ ನೋಡಿಯೇ ಬಿಟ್ಟೆ.
ಅಬ್ಬಾ ಸೂಪರ್-
ಇದಪ್ಪ ಸಿನೆಮ ಅಂದ್ರೆ..ಇದು ನೋಡಿದ ಮೇಲೆ ನನ್ನ   ಉದ್ಘಾರ !
 
ನೀವೂ ನೋಡಿದ ಮೇಲೆ ಹಾಗೇ ಹೇಳುವಿರಿ.. ಈಗ ಮೊದಲಿಗೆ,
 
ಮೆಕನ್ನೆಸ್ ಗೋಲ್ಡ್-1969 ಕಥೆ:
'ಹೆಕ್ ಅಲೆನ್' ಬರೆದ  ದಿ ಮೆಕನ್ನೆಸ್ ಗೋಲ್ಡ್ ಕಾದಂಬರಿ ಆಧಾರಿತ ಈ ಚಿತ್ರದ ಕಥೆ  ಶುರು ಆಗುವುದು ಹೀಗೆ...
 
ಕ್ಯಾನನ್  ಡೆಲ್ ಒರೋ  ಪ್ರಾಂತ್ಯದಲ್ಲಿ ಅಪಾಚೆ ಇಂಡಿಯನ್ನರ ಆತ್ಮಗಳ  ಕಾವಲಿನಲ್ಲಿ  ಸ್ವರ್ಣದ  ಗಟ್ಟಿಗಳು  ಬೆಟ್ಟದ ಒಳಗೆ  ಇವೆ ಎಂದು ಒಂದು ದಂತಕಥೆ  ಪ್ರಚಲಿತದಲ್ಲಿದ್ದು  ಅದು ಹಲವರ ಕಿವಿಗೆ ಬಿದ್ದು  ಹಲವರು ಅದನ್ನು ಪಡೆಯಲು ಪ್ರಯತ್ನಿಸಿ  ಅದು ಇರುವ ಜಾಗದ -ಅಲ್ಲಿಗೆ  ತಲುಪುವ ಮಾಹಿತಿಯುಳ್ಳ ಮ್ಯಾಪ್ ಪಡೆದು ಅಲ್ಲಿಗೆ ಹೋಗಲು ಪ್ರಯತ್ನಿಸಿ ಹೆಚ್ಚು ಕಡಿಮೆ ಸ್ವರ್ಣ ಇರುವ ಪ್ರದೇಶಕ್ಕೆ ಹೋಗಿ ಅದು ಪಡೆಯುವ ಮೊದಲೇ   ಅಪಾಚೆ ಇಂಡಿಯನ್ನರ ಕೈಗೆ ಸಿಕ್ಕು ಸಾಯುವರು..ಅವರಲ್ಲಿ ಒಬ್ಬನು ತನ್ನನ್ನು ಉಳಿಸಬೇಕೆಂದು  ಪರಿ ಪರಿಯಾಗಿ ಬೇಡಿದಾಗ  ಅವನ  ಆ ಸ್ವರ್ಣ ಇರುವ ಜಾಗ, ಅಲ್ಲಿಗೆ ತಲುಪಲು ದಾರಿ  ನೋಡಿದ  ಕಣ್ಣುಗಳನ್ನು ತೆಗೆದು ಜೀವಂತ ಬಿಟ್ಟು ಹೋಗುವರು..ಕಣ್ಣು ಕಳೆದುಕೊಂಡು ಜೀವ ಉಳಿಸಿಕೊಂಡ ಆ ಮಧ್ಯ ವಯಸ್ಕ ವ್ಯಕ್ತಿ ವೃದ್ಧನಾಗಿ  ಆ ಘಟನೆ ಬಗ್ಗೆ ಅವರಿವರಿಗೆ ಹೇಳಿ ಆ ಸ್ವರ್ಣ ಪಡೆಯಲು ಸಾಧ್ಯವಿಲ್ಲ ಪ್ರಯತ್ನಿಸದಿರಿ ಎಂದು ಹೇಳಿದರೂ ಒಳಗೊಳಗೇ  ಆ ಸ್ವರ್ಣ ಹೇಗಾದರೂ ಪಡೆಯುವ  ಜೀವಮಾನದ ಆಶೆ ಇಟ್ಟುಕೊಂಡು  ಸರಿಯಾದ  ವ್ಯಕ್ತಿಗಳು ಸಿಗದೇ ಸುಮ್ಮನಾಗಿರುವನು.
 
ಕೆಲ ವರ್ಷಗಳ ನಂತರ  ಮಾರ್ಷಲ್ ಮ್ಯಾಕ್ ಕೆನ್ ಒಬ್ಬ ವೃದ್ಧ  ಇಂಡಿಯನ್ನನ್ನ ತನಗೆ ಮೋಸ ಮಾಡಿದ ಎಂದು ಗೋಲಿ ಹೊಡೆದು  ಆಮೇಲೆ  ಅವನ  ವಶದಲ್ಲಿದ್ದ  ಆ ಸ್ವರ್ಣ ಗಟ್ಟಿಗಳು ಇರುವ ಜಾಗದ ಅಲ್ಲಿಗೆ ತಲುಪುವ ಮ್ಯಾಪ್ ಸಿಕ್ಕಿ ಅದು ಆತ ನನ್ ಹತ್ತಿರ ಇದ್ದರೆ  ಅಪಾಯ ಎಂದು  ಅದನ್ನು ಮನನ ಮಾಡಿಕೊಂಡು  ಬೆಂಕಿಗೆ ಹಾಕಿ ಸುಡುವನು .
ಈಗ   ಆ ಸ್ವರ್ಣ ಇರುವ ಜಾಗ  ತಿಳಿದಿರುವ ಇಬ್ಬರು
ಒಬ್ಬ ಆ  ವೃದ್ಧ , ಈ ಮೊದಲು ಸ್ವರ್ಣ ಪಡೆಯಲು ಯತ್ನಿಸಿ ಕಣ್ಣು ಕಳೆದುಕೊಂಡವನು ಮತ್ತು
 ಈ ಮಾರ್ಷಲ್ ಮ್ಯಾ ಕೆನ್ ಮಾತ್ರ.
 
ಆ ಸ್ವರ್ಣವನ್ನು ಪಡೆಯಲು ಅದು ಹೊತ್ತು ತರಲು ತನ್ನೊಬ್ಬನಿಗೆ  ಆಗದು ಎಂದು ಅರಿವಿರುವ ಮಾರ್ಷಲ್  ನಂಬಿಕಸ್ಥ -ಗಟ್ಟಿಗ ಆಳುಗಳಿಗಾಗಿ  ಕಾಯುವನು.
ಈ ಮಧ್ಯೆ ಮೆಕ್ಸಿಕೋದ  ಕೊಲರಡೋ  ಎನ್ನುವ  ಅಪರಾಧಿ -ಕ್ರೂರಿ ವ್ಯಕ್ತಿ  ತನ್ನ  ಸಹಚರರೊಡನೆ  ಈ ಸ್ವರ್ಣ ಪಡೆಯಲು  ಅದು ಗೊತ್ತಿರುವ  ವೃದ್ಧ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿ ಮಾರ್ಗ ಮಧ್ಯೆ ಒಬ್ಬ ಜಡ್ಜ್ ಮನೆಯಲ್ಲಿ ವಾಸ್ತವ್ಯ ಹೂಡಿ  ಆ ಸ್ವರ್ಣ ಇರುವ ವಿಷ್ಯ ಒಬ್ಬ ವ್ಯಕ್ತಿಗೆ ಗೊತ್ತಿದೆ ಎಂದು ತಿಳಿದು  ಆ ಜಡ್ಜನ  ಸಾಯಿಸಿ ಅವನ ಮಗಳನ್ನು ಅಪಹರಿಸಿ  ಅಲ್ಲಿಂದ ಹೊರಡುವನು.
ಮಾರ್ಗ ಮಧ್ಯೆ  ಪೊಲೀಸರು ಬಂದರೆ ಅವರಿಂದ ತಪ್ಪಿಸಿಕೊಳ್ಳಲು  ಈ ಜಡ್ಜ್ ಮಗಳನ್ನು  ಗುರಾಣಿ ಮಾಡಿಕೊಳ್ಳುವ ಇರಾದೆ ಅವನಿಗೆ.
ಮಾರ್ಗ ಮಧ್ಯೆ  ಆ ಇಂಡಿಯನ್  ವೃದ್ಧನ  ಶವ ಹೂಳಲು ಗೋರಿ ತೋಡುತ್ತಿದ್ದ  ಮಾರ್ಷಲ್ ಮ್ಯಾಕ್ ಕೆನ್ ಸಿಕ್ಕು  ವೃದ್ಧನನ್ನು ಸಾಯಿಸಿ ಆ ಮ್ಯಾಪ್ ನೋಡಿ ಅದನ್ನು ಸುಟ್ಟಿರುವುದು  ಗೊತ್ತಾಗಿ -ಆ ಸ್ವರ್ಣ ಇರುವ ಜಾಗ  ಮಾರ್ಷಲ್ಗೆ ಗೊತ್ತಿದೆ ಎಂದು ಆ ಜಾಗ ತೋರಿಸು ಎಂದು  ತನ್ನೊಡನೆ ಕರೆದೊಯ್ಯುವನು.
ಆಗಾಗ ಮಾರ್ಗ ಮಧ್ಯದಲ್ಲಿ ಕುದುರೆ ಸವಾರ ಪೋಲೀಸರ  ತಪಾಸಣೆ ವಿಚಾರಣೆಗೆ ಈಡಾಗಿ -ಹೇಗೋ ಅವರಿಂದ ತಪ್ಪಿಸಿಕೊಂಡು  ಬರುವ  ಈ ಎಲ್ಲ ಜನರ  ಮಧ್ಯೆ  ಒಬ್ಬ ದೈತ್ಯ ದೇಹಿ ಅಪಾಚೆ ಇಂಡಿಯನ್  ಸಹಾ ಇದ್ದು  ಸ್ವರ್ಣಕ್ಕಾಗಿ ಅವನೂ ಹಂಬಲಿಸುತ್ತಿರುವನು.
ಕೆಲ ವ್ಯಕ್ತಿಗಳೊಡನೆ  ಈ ಸ್ವರ್ಣ ಪಡೆಯಲು  ಬರುವ ಕಣ್ಣು ಕಳೆದುಕೊಂಡ ವೃದ್ಧ ಮತ್ತು ಅವನ ಜೊತೆಗಿನ ವ್ಯಕ್ತಿಗಳನ್ನು  ಕುದುರೆ ಸವಾರಿ ಪೊಲೀಸರು  ಇವರು ಸ್ವರ್ಣ ಹುಡುಕಲು ಬಂದವರು ಎಂದು ಗೊತ್ತಾಗಿ ಅವರನ್ನು ಸಾಯಿಸುವರು.
 
ಮಾರ್ಗ ಮಧ್ಯೆ  ವಿಶ್ರಾಂತಿಗಾಗಿ  ನೆಲೆ ನಿಂತ  ಮಾರ್ಷಲ್ ಮ್ಯಾಕ್ ಕೆನ್ ಮತ್ತು ಕೊಲರಡೋ -ಸಹಚರರು  ಮಲಗಲೇ ತಯಾರಿಲ್ಲ! ಎಲ್ಲರಿಗೂ ಇನ್ನೊಬ್ಬರ ಮೇಲೆ  ಸಂಶಯ-ಎಲ್ಲಿ ತಮ್ಮನ್ನು ಕೊಲ್ಲುವರೋ.ಬಿಟ್ಟು ಹೋಗಿ ಬಂಗಾರವನ್ನು ತಾವೇ ಹೊತ್ತೊಯ್ದು ತಮ್ಮ ಕೈಗೆ ಚಿಪ್ಪು ಕೊಡುವರೋ ಎಂದು.
ಈ ಮಧ್ಯೆ  ಜಡ್ಜ್ ಮಗಳು ಮತ್ತು ಮಾರ್ಷಲ್ ಮ್ಯಾಕ್ ಕೆನ್ ಮಧ್ಯೆ  ಪ್ರೇಮ  ಚಿಗುರಿ  ಇವರ  ಸಾಮಿಪ್ಯವನ್ನು ಸಹಿಸದ  ಕೊಲರಡೋ ಮಾರ್ಷಲ್ಗೆ  ಹೊಡೆತ ಕೊಟ್ಟು ಕುದುರೆಗಳ  ಹಿಂದೆ ನಡೆದು ಬರುವ  ಶಿಕ್ಷೆ ಕೊಡುವನು..ಒಮ್ಮೆ ಜಡ್ಜ್ ಮಗಳನ್ನು ಸಾಯಿಸಲೂ ಯತ್ನಿಸುವನು.
ಅದೊಮ್ಮೆ ತಮ್ಮ ಬೆನ್ನು ಬಿದ್ದ  ಕುದುರೆ ಸವಾರಿ  ಪೊಲೀಸರ ಕಣ್ಣಿಗೆ ಮಣ್ಣು ಎರಚಲು  ತಮ್ಮೊಡನೆ ಇದ್ದ  ಜಡ್ಜ್ ಮಗಳನ್ನು ಕುದುರೆ ಮೇಲೆ  ಕಟ್ಟಿ ಹಾಕಿ ಪೋಲೀಸರ  ಕಡೆ ಹೋಗಲು ಬಿಟ್ಟು  ಅವರು ಅವಳನ್ನು ಕರೆದೊಯ್ಯುವರು ಎಂದು ಎಣಿಸಿ  ಅವಳನ್ನು ಬಿಟ್ಟಾಗ-ಪೊಲೀಸರು ಅವಳನ್ನು ನೋಡಿ  -ಈ ದುಸ್ಟರ  ಆಲೋಚನೆಯಂತೆ ಹೋಗುವಾಗ  ಮಾರ್ಗ ಮಧ್ಯೆ ಟಿಬ್ಬ್ಸ್ ಎನ್ನುವ ಪೋಲೀಸ್ ತನ್ನ ಜೊತೆಗಿನ ಸಹೋದ್ಯೋಗಿಗಳನ್ನು ಕೊಂದು  ಇವಳ ಜೊತೆ ಮತ್ತೆ ಈ ದುಷ್ಟರು ಇರುವೆಡೆ ಬಂದು  ಅವರೊಡನೆ ಸ್ವರ್ಣದಲ್ಲಿ  ಪಾಲು ಬೇಕೆಂದು ಅವರನ್ನು ಏನೂ ಮಾಡದೆ ಬಿಡುವುದಾಗಿ ಹೇಳುವನು.
 
ಹೀಗೆ ಹಲವು ಕಿಲೋ ಮೀಟರ್ ಪ್ರಯಾಣ ಮಾಡಿ  ಆ ಸ್ವರ್ಣ ಇರುವ ಪ್ರದೇಶದ -ಅಲ್ಲಿಗೆ  ಹೋಗುವ  ದಾರಿ ತೋರಿಸುವ  ಎತ್ತರದ  ಒಂದು ಕಲ್ಲಿನ ಮುಂದೆ ಬಂದು  ಒಂದು ಗೊತ್ತಾದ ದಿನ  ಸೂರ್ಯ ಬೆಳಕು ಅದರ ಮೇಲೆ ಬಿದ್ದು  ಆ ದಾರಿ ಕಾಣಿಸುವ ಕ್ಷಣಕ್ಕಾಗಿ  ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವರು..
ಮ್ಯಾಕ್ ಕೆನ್  ಹೇಳಿದ  ಆ ವಿಷ್ಯ-ಒಂದು ಗೊತ್ತಾದ ದಿನ  ಸೂರ್ಯ ಬೆಳಕು ಅದರ ಮೇಲೆ ಬಿದ್ದು ಸ್ವರ್ಣ ಇರುವ ಪ್ರದೇಶಕ್ಕೆ ಹೋಗುವ ದಾರಿ   ಕಾಣಿಸುವ ಹೇಳಿಕೆ  ನಂಬಲು ಯಾರೂ ತಯಾರಿಲ್ಲ.. ಇದೆಲ್ಲ ಕಟ್ಟು ಕಥೆ-ಇಲ್ಲ ತಮ್ಮನ್ನು ವಂಚಿಸಿ ತಾನೊಬ್ಬನೇ ಬಂಗಾರ ಹೊಯ್ಯಲು ಈ ಮ್ಯಾಕ್ ಕೆನ್  ಹೂಡಿದ  ಸಂಚು ಹೆಣೆದ ಕಥೆ  ಎಂದು ಅವರೆಲ್ಲರ  ಎಣಿಕೆ..ಅದಕಾಗಿ ಕಣ್ಣು ರೆಪ್ಪೆ ಮುಚ್ಚಲು ಹವಣಿಸುತ್ತಿದ್ದರೂ  ಕಣ್ಣೆವೆ ಬಡಿಯದೇ  ಸೂರ್ಯನ ಆಗಮನಕ್ಕೆ ಕಾಯಲು  ಸಿದ್ಧರಾಗಿ  ಆಗಸದತ್ತ ನೋಡುತ್ತಿರುವರು.
ಆ ದಿನವೂ  ಬಂದು, 
ಸೂರ್ಯನು ಉದಯಿಸಿ  ಆ ಬೆಳಕು ಈ ಎತ್ತರದ  ಕಲ್ಲಿನ ಮೇಲೆ  ಬಿದ್ದು ಅದರ ನೆರಳು  ಆ  ಸ್ವರ್ಣ ಇರುವ   ಅದರತ್ತ ಹೋಗುವ  ದಾರಿಯ ಕಡೆ  ತೋರಿಸುವುದು...
ಅದುವರೆಗೆ ಸತ್ತಂತೆ ಇದ್ದು  ನಿಶ್ಯಕ್ತಿಯಿಂದ ನಿರುತ್ಸಾಹದಿಂದ ನಿಸ್ತೇಜರಾಗಿ  ಇದ್ದವೆರೆಲ್ಲ ಧಿಗ್ಗನೆ ಎದ್ದು...ಆ ಸ್ವರ್ಣ ಇರುವ ಪ್ರದೇಶಕ್ಕೆ ದಾರಿ ಇರುವ ಕಡೆ ನಾ ತಾ ಎಂದು  ಮುಗು ಬಿದ್ದು  ಸ್ಪರ್ಧೆಯಲ್ಲಿ ಓಡುವರು..
 
ಆ ನಿಧಿ ಇರುವ  ಪ್ರದೇಶ ಸಿಕ್ಕಿ  ಕಣ್ಣು ಕುಕ್ಕುವ  ಬಂಗಾರದ  ದೊಡ್ಡ ದೊಡ್ದ ಗಟ್ಟಿಗಳು -ಎತ್ತ ಕಡೆ  ನೋಡಿದರೂ ಕಾಣಿಸುವ ಸ್ವರ್ಣದ  ಗೋಡೆ -ಧೂಳು -ಕಂಡು ಬೇಜಾನ್  ಬಂಗಾರವನ್ನು  ತಮ್ಮ ತಮ್ಮ  ಕುದುರೆಗಳ ಮೇಲಿನ  ಚೀಲಗಳಲ್ಲಿ ಹಾಕಿ  ಆದರೂ ಮನಸು  ಹೆಚ್ಚು ಹೆಚ್ಚು  ಸ್ವರ್ಣ  ಬಯಸಿ  ಕಿಸೆಗಳಲ್ಲಿ ಸಹ ಬಿಡದೆ ತುಂಬಿಕೊಳ್ಳುವರು..
ಆ ಮಧ್ಯೆ  ಸ್ವರ್ಣ ಪಡೆಯುವ ಮುಂಚೆ  ಮತ್ತು ಪಡೆದು ಆದ ಮೇಲೆ  ಸ್ವಾರ್ಥ -ಆಶೆ-ದುರಾಶೆಯ ಆ ಜನ   ಏನು ಅಪಾಯವನ್ನು  ತನಗೆ ಉಂಟು ಮಾಡಬಹದು ಎಂದು  ಮುಂದಾಲೋಚಿಸಿದ್ದ  ಮಾರ್ಷಲ್ ಮ್ಯಾಕ್ ಕೆನ್ ಆ ಸ್ವರ್ಣದ  ಗೊಡವೆಗೆ ಹೋಗದೆ   -ಆ ಜಡ್ಜ್ ಮಗಳ ಜೊತೆ ಆ ಬೆಟ್ಟ  ಪ್ರದೇಶದ  ಮೇಲೆ ಏಣಿ ಹತ್ತಿ  ಹೋಗಿ ಅಲ್ಲಿಂದ ಹೊರಗೆ ಹೋಗುವ ದಾರಿಯ ಕಂಡು ಹಿಡಿದು  ಅಲ್ಲಿಂದ ಹೋಗಲು  ಹವಣಿಸುವಾಗ -ಆ ದೂರ್ತ -ದುಸ್ಟ  ಕೊಲರಡೋ -ಸ್ವರ್ಣ ಸಿಕ್ಕು  ಅದರಿಂದಲೂ ಸಂತುಷ್ಟನಾಗದೇ  ಈ ಮಾರ್ಷಲ್ ಮ್ಯಾಕ್ ಕೆನ್ ಮತ್ತು ಜಡ್ಜ್ ಮಗಳನ್ನು ಸಾಯಿಸಲು ಕೈನಲ್ಲಿ  ತುಪಾಕಿ ಹಿಡಿದು -ಕೊಡಲಿಯ  ಜೊತೆ   ಏಣಿ ಹತ್ತಿ ಮೇಲೆ ಬರುವನು -ಮಾರ್ಷಲ್ ಮತ್ತು  ಕೊಲರಡೋ ಮಧ್ಯೆ ಕಾಳಗ ನಡೆದು ಕೊಲರಡೋ ಹೊಡೆದ ಗುಂಡುಗಳು ಆ ಬೆಟ್ಟಕ್ಕೆ  ತಾಗಿ ಅಲ್ಲಿ  ಬಿರುಕು ಮೂಡಿ ಕಲ್ಲುಗಳು ಕುಸಿಯಲು ಆರಂಭವಾಗುವುದು..
 
ಕಾಳಗದಲ್ಲಿ   ಆಯ ತಪ್ಪಿದ   ಕೊಲರಡೋ ಕೆಳಗೆ ಬಿದ್ದು ಸಾಯುವನು .
ಇತ್ತ ಕೆಳಗೆ  ಬೇಜಾನ್  ಬಂಗಾರವನ್ನು  ಕುದುರೆಗಳ  ಮೇಲೆ ಹೇರಿ -ಇನ್ನೂ ಬಂಗಾರ ಇಟ್ಟುಕೊಳ್ಳಲು ಜಾಗ ಹುಡುಕಾಡುತಿರುವ  ಕೊಲರಡೋ ಸಹಚರರು -ಆ ಪೋಲೀಸ್  ಮತ್ತು  ಅಪಾಚೆ  ಇಂಡಿಯನ್  ದಡಿಯ  ಒಬ್ಬರ ಮೇಲೆ ಒಬ್ಬರು ಸಂದೇಹಿಸುತ  ಆಕ್ರಮಣ ಮಾಡುವರು .ಅವರಲ್ಲಿ ಕೊಲರಡೋ ಸಹಚರರು ಮತ್ತು ಆ ದಡಿಯ  ಈ ಪೊಲೀಸನ  ಗುಂಡಿಗೆ ಬಲಿ ಆಗುವರು..
ಕುಸಿಯುತ್ತಿರುವ ಬೆಟ್ಟದ ಅಡಿ ಸಿಲುಕಿ ಕೆಲ ಜನರು ಸಾಯುವರು.ಆ ಮಧ್ಯೆ ಈ ಸ್ವರ್ಣ ಅನ್ವೇಷಣೆಗೆ  ಹೊರಟ  ಜನರ ಬಗ್ಗೆ  ಕೇಳಿದ್ದ  ಅಪಾಚೆ ಇಂಡಿಯನ್ನರು ಮತ್ತು ಪೊಲೀಸರು  ಅಲ್ಲಿಗೆ ಆಗಮಿಸುವರು.
 
ಏಣಿ ಹತ್ತಿ  ಮೇಲೋಗಿದ್ದ  ಮಾರ್ಷಲ್ ಮ್ಯಾಕ್ ಕೆನ್   ಮತ್ತು ಜಡ್ಜ್ ಮಗಳು  ಎಣಿಯಿಂದ  ಕೆಳಗೆ ಇಳಿದು ಅಲ್ಲಿದ್ದ  ಎರಡು ಕುದುರೆಗಳ ಮೇಲೆ  ಹತ್ತಿ  ವೇಗವಾಗಿ ಅಲ್ಲಿಂದ ಮರೆಯಾಗುವರು..
ಆ ಬೆಟ್ಟದ  ಪ್ರದೇಶದಿಂದ  ದೂರವಾಗುವ ಮೊದಲು  ಹಿಂತಿರುಗಿ ನೋಡಿದಾಗ  ಆ ಸ್ವರ್ಣ ಇರುವ  ಪ್ರದೇಶದ ಮೇಲೆ  ಬೆಟ್ಟ ಕುಸಿದು  ಆ ಮಣ್ಣು- ಕಲ್ಲುಗಳ ಕೆಳಗೆ  ಹುದುಗಿ  ಹೋಗುವ ಚಿನ್ನ    ಕಾಣಿಸುವದು.
 ಹೊರ  ಬಂದು  ಕುದುರೆ ನಿಲ್ಲ್ಸೀ ನೋಡಲು  ಆ ಬೆಟ್ಟವೇ ಕುಸಿದು ಬೀಳುವುದು-ಸ್ವರ್ಣ ಪಡೆಯಲು ತಾವೆಲ್ಲ ಮಾಡಿದ ಪ್ರಯತ್ನ -ಸ್ವರ್ಣ ಸಿಕ್ಕೂ ಅದನೊಯ್ಯಲು ಆಗದೆ ಪ್ರಾಣ ಮಾತ್ರ ಉಳಿಸ್ಕೊಂಡ ಬಗ್ಗೆ ತಮ್ಮ ಮೈಗೆ ಹತ್ತಿದ  ಚಿನ್ನದ ಧೂಳು ನೋಡುತ್ತಾ   ಇಬ್ಬರೂ ನಕ್ಕು ಕುದುರೆಗಳತ್ತ ದೃಸ್ಟಿ  ಹಾಯ್ಸಿದಾಗ  ಅಲ್ಲಿ ಕುದುರೆಗಳ ಬೆನ್ನ ಮೇಲೆ ಹಾಕಿದ ಚೀಲಗಳಲಿ ಹಲವು ಬಂಗಾರದ ಗಟ್ಟಿಗಳು ಕಾಣಿಸಿ ,  ಫುಲ್ ದಿಲ್ಕ್ಹುಶ್  ಆಗುವರು.  ಅಲ್ಲಿಂದ  ನಗುತ್ತ  ವಾಪಾಸ್  ಹೊರಡುವರು.
 
ಸ್ವರ್ಣವೂ  ಸಿಕ್ಕಿತು -ಜೊತೆಗೆ
ಸ್ವರ್ಣ ಸುಂದರಿ.ಜಡ್ಜ್ ಮಗಳೂ..!
 
ಕೆಲವು ಸನ್ನಿವೇಶಗಳು :
 
1.ಚಿನ್ನದ ಪ್ರದೇಶ ಕಂಡು ಹಿಡಿದು  ಅಪಾಚೆ ಇಂಡಿಯನ್ನರ ಕೈಗೆ ಸಿಕ್ಕು ಸಹಚರರು ಸತ್ತು  ತಾ ಕಣ್ಣು ಕಳೆದುಕೊಂಡು ಜೀವ ಉಳಿಸಿಕೊಳ್ಳುವ ವ್ಯಕ್ತಿಯ ಸನ್ನಿವೇಶ- ಸ್ವರ್ಣ ಹೋಗಲಿ ಪ್ರಾಣ ಉಳಿದರೆ ಸಾಕೆಂದು ಗೋಳಿಡುವ -ಬೇಡಿಕೊಳ್ಳುವ ಸನ್ನಿವೇಶ.
2.ತನಗೆ ಅನ್ಯಾಯ ಮಾಡಿದ ತನ್ನೊಡನೆ ಹಿಂದೊಮ್ಮೆ ಕೆಲಸ ಮಾಡಿದ್ದ ವೃದ್ಧನ ಕೊಂದ ಮಾರ್ಷಲ್ಗೆ ಎಷ್ಟೆಲ್ಲ ಜನ ಹುಡುಕುತ್ತಿರುವ ಆ ಮ್ಯಾಪ್ ಅಚಾನಕಾಗಿ  ಸಿಕ್ಕು  ಆಗ ಆಗುವ  ಸಂತೋಷ.
3.ತನಗೆ ಆತಿಥ್ಯ ನೀಡಿ ಉಪಚರಿಸಿ  ಚಿನ್ನ ಇರುವ ಜಾಗದ ಕುರಿತು ಗೊತ್ತಿರುವ ವ್ಯಕ್ತಿ ಬಗ್ಗೆ ತಿಳಿಸಿದ ಜಡ್ಜ್ನ ಸಾಯಿಸಿ   ಮಗಳನ್ನು  ಅಪಹರಿಸುವ  ದುಷ್ಟರ ಸನ್ನಿವೇಶಗಳು.
4.ಚಿನ್ನದ ಆಶೆಗೆ  ತನ್ನ ಪೂರ್ವಿಕರು -ಆರಾಧಿಸುವ -ಕಾಯುವ  ಚಿನ್ನವನ್ನು ಬಾಚಲು ದೋಚಲು  ಈ ದುಷ್ಟರಿಗೆ ಸಹಾಯ ಮಾಡುವ -ಆಮೇಲೆ  ಆ ಬಗ್ಗೆ ಸಾಯುವ ಮೊದಲು ಕೊರಗುವ-ಮರುಗುವ  ದೈತ್ಯ ದೇಹಿ ಅಪಾಚೆ ಇಂಡಿಯನ್  ದೃಶ್ಯಗಳು..
5.ಮಾರ್ಷಲ್ ಮತ್ತು  ಕೊಲರಡೋ  ನಡುವಿನ ದ್ವೇಷದಲ್ಲಿ ಸಿಕ್ಕು ನರಳುವ  ಜಡ್ಜ್ ಮಗಳು-ಅವಳ ಹತ್ಯೆಗೆಯ್ಯಲು ಕೊಲರಡೋ  -ಅವಳು ನೀರಲ್ಲಿ ಸ್ನಾನ ಮಾಡುವಾಗ  ನೀರೋಳಗಿಂದ ಹತ್ಯೆಗೆಯ್ಯಲು ಯತ್ನಿಸುವ  ಅವಳನ್ನು ಆ ಸಮಯದಲ್ಲಿ  ರಕ್ಷಿಸುವ ಮಾರ್ಷಲ್  ದೃಶ್ಯ 
6. ಈ ಸ್ವರ್ಣ ಪಡೆಯಲು  ಯತ್ನಿಸಿ ಅದು ಪಡೆಯುವ ಪ್ರಯತ್ನದಲ್ಲಿ ಆಗುವ  ಅನಾಹುತಗಳು ಅರಿವಿದ್ದು   ಹಿಂದೊಮ್ಮೆ ಕಣ್ಣು ಕಳೆದುಕೊಂಡ ವ್ಯಕ್ತಿ ಮತ್ತೆ ಇದಕಾಗಿ ಯತ್ನಿಸಲು  ಕೆಲ  ವೃದ್ಧರೊಂದಿಗೆ  ಆಗಮಿಸಿ  ಮಾರ್ಷಲ್ ಮತ್ತು  ಕೊಲರಡೋ ಆ ಬಗ್ಗೆ  ವಾಗ್ಯುದ್ಧ ನಡೆಸಿ ಮಾರ್ಷಲ್  ವಾಪಾಸು ಹೋಗಿ ಎಂದಾಗ  ಕೊಲರಡೋ  ಅವರೂ ಇರಲಿ ಎಂದು  ಸೇರಿಸ್ಕೊಳ್ಳುವ  ದೃಶ್ಯ.
7.ಪೋಲೀಸರ ಕಣ್ಣು ತಪ್ಪಿಸಲು ಮತ್ತು  ಮಾರ್ಷಲ್ನನ್ನು ಅವಳಿಂದ ದೂರ ಮಾಡಲು ಕೊಲರಡೋ  - ಆ ಜಡ್ಜ್ ಮಗಳನ್ನು ಕುದುರೆಗೆ ಕಟ್ಟಿ ಹಾಕಿ ಪೊಲೀಸರತ್ತ  ಬಿಟ್ಟು -ಅವಳು ಪೋಲೀಸರ ಕೈಗೆ ಸಿಕ್ಕು  ಅವರಿಗೆ  ಹಲವು ಜನ  ಸ್ವರ್ಣ  ಹುಡುಕಲು ಪಡೆಯಲು ಹೊರಟ  ವಿಷ್ಯ  ಗೊತ್ತಾಗಿ -ಮೊದಲು ಇವಳನ್ನು ತಮ್ಮ ಮುಖ್ಯ ಕಚೇರಿಗೆ  ಬಿಟ್ಟು ಆಮೇಲೆ ಇನ್ನಷ್ಟು ಪೋಲೀಸರ ಸಂಗಡ  ಮರಳಿ ಬಂದು  ಆ ಸ್ವರ್ಣ  ಕಳ್ಳರ ಸೆರೆ ಹಿಡಿಯುವದು ಎಂದು ಯೋಚಿಸಿ  ಮುಂದೆ ಹೋಗುವಾಗ  ಮಾರ್ಗ ಮಧ್ಯೆ  ಟಿಬ್ಬ್ಸ್  ಹೆಸರಿನ  ಪೋಲೀಸ್ ಆ ಸ್ವರ್ಣದ  ಆಶೆಗೆ -ಅದು ಪಡೆಯಲು ಕಾಯಲು ಆಗದೆ ಆ ಕ್ಷಣವೇ ತನ್ನ ಸಹೋದ್ಯೋಗಿಗಳನ್ನು ಕೊಂದು  ಜಡ್ಜ್ ಮಗಳೊಡನೆ  ಈ ದುಸ್ತರ ಕಡೆ ಬಂದು  ಚಿನ್ನದಲ್ಲಿ ಪಾಲಿಗಾಗಿ  ಚೌಕಾಶಿ ಮಾಡುವ  ದೃಶ್ಯ..
8. ಚಿನ್ನ ಇರುವ ಪ್ರದೇಶಕ್ಕೆ  ತಲುಪುವ ಮಧ್ಯೆ  ಅಡ್ಡಲಾಗಿ ಇರುವ ಶಿಥಿಲ ಸೇತುವೆ ದಾಟುವಾಗ ಅದು ಕುಸಿದು  ಇನ್ನೇನು ಬೀಳುವುದರಲ್ಲಿದ್ದು  ಬಚಾವಾಗುವ   ಮಾರ್ಷಲ್ -
9. ಚಿನ್ನ ಇರುವ ದಾರಿ ತೋರಿಸುವ  ಆ ಎತ್ತರದ ಕಲ್ಲಿನ ಮುಂದೆ  ಸೂರ್ಯನ ಆಗಮನ -ಆ ಕಿರಣಗಳ ಬೆಳಕಿಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವ - ಸೂರ್ಯ ಉದಯಿಸಿ  ದಾರಿ ಸಿಕ್ಕು ಎಲ್ಲರೂ ನಾ -ತಾ  ಮೊದಲು  ಎಂದು  ಮುನ್ನುಗ್ಗುವ  ದೃಶ್ಯ.
10. ಸ್ವರ್ಣ  ಸಿಕ್ಕು -ತಮ್ಮ ಮೈಗೆ ಕೈಗೆ  ಮೆತ್ತುತಿರುವ ಚಿನ್ನದ ಧೂಳು ನೋಡುತ್ತಾ ಸ್ಪರ್ಶಿಸುತ್ತ -ಎಲ್ಲಿ ನೋಡಿದರೂ ಕಾಣಿಸುವ ಚಿನ್ನದ  ಗಟ್ಟಿಗಳು-ಗೋಡೆ ಕಂಡು ಬೆನ್ನ ಹಿಂದಿನ ಅಪಾಯ ಯೋಚಿಸದೆ  ಸಾಕಷ್ಟು ಚಿನ್ನ  ಕುದುರೆ ಬೆನ್ನ ಮೇಲೆ  ಹೇರಿ ಆ ಭಾರಕೆ ಕುದುರೆಗಳು  ನೋವಿಂದ  ಕಿರುಚಿ ಬಾಗಿದರೂ -ತಂದ ಚೀಲಗಳು ಎಲ್ಲ ತುಂಬಿ  ಸಹಾ ಮನ ತಣಿಯದೇ  ತಮ್ಮ ಆತ್ಮಂ ಜೇಬು ಸಹಾ ಬಿಡದೆ ಚೀನಾ ತುಂಬಿಕೊಳ್ಳುವ ಜನ!
11. ಚಿನ್ನ ಪಡೆದು ಈಗ ತನ್ನೊಡನೆ ಬಂದವರ ಮೇಲೆ  ಮುಗಿ ಬಿದ್ದು  ಹೊಡೆದು ಕೊಂದು ಅವರ  ಚಿನ್ನವನೂ ದೋಚುವ  ಯತ್ನದಲ್ಲಿರುವ  ಜನ, ಹೀಗೇ  ಆಗಬಹದು ಎಂದು ಮೊದಲೇ  ಯೋಚಿಸಿ   ಚಿನ್ನ ಬೇಡ ಏನೂ ಬೇಡ  ಇಲ್ಲಿಂದ   ಬದುಕಿದರೆ ಇಲ್ಲಿಂದ ಆಚೆ  ಹೋದರೆ ಸಾಕೆಂದು ಜಡ್ಜ್  ಮಗಳೊಡನೆ ಏಣಿ ಹತ್ತುತಿರುವ  ಮಾರ್ಷಲ್ ನ  ವಯುಕ್ತಿಕ ದ್ವೇಷ  ಮತ್ತು ಹತಾಶೆಯೊಂದಿಗೆ  ಸಾಯಿಸಲು  ಯತ್ನಿಸುವ ಆ ಕಾಳಗದಲ್ಲಿ  ಕೆಳಗೆ ಬಿದ್ದು ಸಾಯುವ -ಕೊಲರಡೋ  ಮತ್ತು ಅವನು ಹೊಡೆದ ಗುಂಡು ಬೆಟ್ಟದ  ಕಲ್ಲುಗಳಿಗೆ ತಾಗಿ ಬೆಟ್ಟ ಕುಸಿಯುವ  ದೃಶ್ಯ.
12.ಬೆನ್ನ ಹಿಂದಿನಿಂದ  ಗುಂಡು ಹಾರಿಸಿ  ಆ ದೈತ್ಯನ ಸಾಯಿಸುವ  ಪೋಲೀಸ್ ಟಿಬ್ಬ್ಸ್ -ತನ್ನ ಪೂರ್ವಿಕರು ಪೂಜಿಸುವ  ಕಾಯುವ  ಆ ಚಿನ್ನ ಪಡೆಯ ಹೊರಟಿದ್ದು-ಇವರಿಗೆ ಸಾಥ್ ನೀಡಿದ್ದಕ್ಕೆ ತನಗೆ ತಕ್ಕ  ಶಾಸ್ತಿ ಆಯ್ತೆಂದು  ತನ್ನ ತಪ್ಪೇನು  ಎಂದು ಅರಿವಾಗಿ  ಸಾಯುವ ಅಪಾಚೆ  ಇಂಡಿಯನ್ .
13.ಬೆಟ್ಟ ಕುಸಿಯುವ -ಅದರಡಿ ಹುದುಗಿ  ಮತ್ಯಾವತ್ತೂ  ಹೊರ ಜಗತ್ತಿಗೆ ಕಾಣಿಸದೆ ಹೋಗುವ  ಚಿನ್ನವನ್ನು  ಕಣ್ಣಾರೆ ಕಂಡು  ಬದುಕಿ ಹೊರ ಬರುವ  ಮಾರ್ಷಲ್ ಮತ್ತು  ಜಡ್ಜ್ ಮಗಳು.
14.ಕ್ಲೈಮ್ಯಾಕ್ಸ್ನಲ್ಲಿ  ಅನಾಯಾಸವಾಗಿ  ದೊರಕುವ  ಅಪಾರ ಚಿನ್ನದ  ಚೀಲಗಳು..ಆಗ  ಇಬ್ಬರ ಪ್ರತಿಕ್ರಿಯೆ.!
 
 
- ಮ್ಯಾಕ್ ಕೆನ್ ಪಾತ್ರಕ್ಕೆ ಮೊದಲು  ಯೋಚಿಸಿ ಆಯ್ಕೆ ಮಾಡಿದ್ದು  ಹಾಲಿವುಡ್  ಖ್ಯಾತ ನಟ  ಕ್ಲೈಂಟ್ ಎಸ್ಟ್ ವುಡ್ ಅವರನ್ನ -ಆದರೆ ನಂತರ  ಇನ್ನೊಂದು ಚಿತ್ರಕ್ಕೆ  ಅವರನ್ನು ನಾಯಕರನ್ನಾಗಿಸಿ  ಈ ಚಿತ್ರಕ್ಕೆ  ಗ್ರೆಗರಿ ಪೆಕ್ ಅವರನ್ನು ಆಯ್ಕೆ ಮಾಡಿದ್ದರು..!
- ಚಿತ್ರವನ್ನು ಮೂರು ಘಂಟೆಗಳ ಅವಧಿಗೆ  ಚಿತ್ರಿಸಿ  -ಆ ನಂತರ  ಚಿತ್ರವನ್ನು 2 ಘಂಟೆಗಳಿಗೆ  ಸೀಮಿತ ಮಾಡಿದರು.
- ಮೊದಲೇ ಕಾದಂಬರಿ ಓದಿದ್ದು-ಈ ಚಿತ್ರದ  ಬಿಡುಗಡೆಗೆ ಕಾಯ್ತಿದ್ದ  ಜನರ ನಿರೀಕ್ಷೆ ಸುಳ್ಳು ಮಾಡದೆ  ಬಂದ ಚಿತ್ರವನ್ನು ಜನ  ಮುಗು ಬಿದ್ದು ನೋಡಿ  'ಹಿಟ್' ಮಾಡಿದರು.
- ಆಗಿಂದ ಈಗಿನವರೆಗೂ ಹಿಟ್ ಚಿತ್ರವಾಗಿ  ಕ್ಲಾಸಿಕ್ ಅನ್ನಿಸಿಕೊಂಡ ಈ ಚಿತ್ರ  ಈಗಲೂ  ಹಲವರ ಬಾಯಲ್ಲಿ ನಲಿದಾಡುತ್ತಾ  ವೀಕ್ಷಿಸಲ್ಪಡುತ್ತಿದೆ.
ಇದರ ರಿಮೇಕ್ -ಮಾಡಲು ಹಲವರು ಪ್ರಯತ್ನಿಸಿ ಸಾಧ್ಯವಾಗದೆ  ಕೈ ಚೆಲ್ಲಿದ್ದಾರೆ..!
- ಬಹುಶ ಮಾಡಿದರೂ -ಒರಿಜಿನಲ್ ಚಿತ್ರವನ್ನು  ಮೀರಿಸಲು ಆಗದೆ  ಅದರ ಆಜೂ- ಬಾಜೂ  ಸಹ ಬರದೆ ಇರಬಹದು.
 
ಚಿತ್ರದಲ್ಲಿ  ಜಡ್ಜ್ ಮಗಳು  ನೀರಲ್ಲಿ ಈಜುವ  -   
ಕೊಲರಡೋ ನಗ್ನನಾಗಿ  ನೀರಿಂದ ಆಚೆ ಬಂದು ದಡದ ಮೇಲೆ ಕೂರುವ  ದೃಶ್ಯಗಳು ಇವೆ....
ಹೀಗಾಗಿ ಇದು ಮನೆ ಮಂದಿ  ಒಟ್ಟಾಗಿ  ನೋಡುವ ಚಿತ್ರ ಅಲ್ಲ.
 
ಈ ಚಿತ್ರದ ಬಗ್ಗೆ ಒಮ್ಮೆಯಾದರೂ ಕೇಳದೆ  ಯಾರಾದರೂ ಇರುವರೇ? ಎಂಬ  ಸಂಶಯ ನನಗಿದೆ.
ಈ ಚಿತ್ರದ ಬಗ್ಗೆ ಕೇಳಿ -ಹಳೇ  ಕಾಲದ್ದು -ಹೆಂಗೋ ಏನೋ ಎಂದು ಮೊದಲೇ ಅದರ ಬಗ್ಗೆ  ಒಂದು ಪೂರ್ವಗ್ರಹ  ಭಾವದಿಂದ  ಇದ್ದು ನೋಡದೆ ಇರುವವರು  ಅದನ್ನು ನೋಡಲು  ಇದೇ ಸುಸಮಯ.
ಇದನ್ನು ನೋಡದೆ  ಇದ್ದಿದ್ದರೆ -ನೋಡದೆ ಹೋದರೆ -ಮುಂದೊಮ್ಮೆ ...
ಛೆ..ನೋಡಬೇಕಿತ್ತು ಎಂದು ಅನ್ನಿಸದೆ  ಇರದು!
 
ಈ ಚಿತ್ರ ಯೂಟೂಬ್ನಲ್ಲಿ  ಲಭ್ಯವಿದೆ..
ಮತ್ತು  ಹಲವು ಹಳೆಯ  ಹೊಸ  ಕ್ಲಾಸ್ಸಿಕ್ ಚಿತ್ರಗಳೂ ಯೂಟೂಬ್ನಲ್ಲಿ  ಲಭ್ಯವಿವೆ...
ಹುಡುಕಿ ನೋಡಿ..
 
ಚಿತ್ರ ಮೂಲಗಳು:http://www.filimadami.com/afisler/24367.jpg
 
ಅಯ್ .ಎಂ.ಡಿ .ಬಿ :
 
ವಿಕಿಪೀಡಿಯ:
 
ಯೂಟೂಬ್ ಲಿಂಕ್:
 
 
Rating
No votes yet

Comments

Submitted by hpn Fri, 01/11/2013 - 12:58

ಮೆಕೆನ್ನಾಸ್ ಗೋಲ್ಡ್ ಗ್ರೆಗರಿ ಪೆಕ್ ನಟಿಸಿದ ಮರೆಯಲಾಗದ ಚಿತ್ರಗಳಲ್ಲೊಂದು. ಈಗ ಮತ್ತೊಮ್ಮೆ ನೋಡಿದರೂ ಬೇಸರವಾಗದು.

> ಹೀಗಾಗಿ ಇದು ಮನೆ ಮಂದಿ  ಒಟ್ಟಾಗಿ  ನೋಡುವ ಚಿತ್ರ ಅಲ್ಲ.

ನೀವು ಹೇಳಿದ ಈ ಕೆಲವು ದೃಶ್ಯಗಳು ಭಾರತದಲ್ಲಿ ಸಿಗುವ ಡಿವಿಡಿಗಳಲ್ಲಿ ಕಟ್ ಮಾಡಿರುತ್ತಾರೆ. ಬೇಕಿದ್ದರೆ ಅದನ್ನು ತಂದು ನೋಡಬಹುದು.

ಹಾಲಿವುಡ್ ಸಿನಿಮಾಗಳಲ್ಲಿ ಬಂಗಾರ ಹುಡುಕುವ ಸಾಹಸಕ್ಕೆ ಕೈ ಹಾಕುವ ಚಿತ್ರಗಳೇನು ಕಡಿಮೆ ಇಲ್ಲ, ಆದರೆ ನೋಡಬಹುದಾದಂತ ಚಿತ್ರಗಳು ಕೆಲವು, ನೋಡಲೇಬೇಕಾದಂತ ಚಿತ್ರಗಳು ಕೆಲವು. 

ನಿಮಗೆ ಸಾಧ್ಯವಾದರೆ "ದಿ ಟ್ರೆಶರ್ ಆಫ್ ಸಿಯೆರಾ ಮಾದ್ರೆ" ನೋಡಿ.

Submitted by venkatb83 Sat, 01/12/2013 - 19:25

In reply to by hpn

hpn ನಾಮದೇಯದ ನೀವು ಸಂಪದ ಹಿಂದಿನ ಶಕ್ತಿ-ವ್ಯಕ್ತಿ- ಶ್ರೀಯುತ ಹರಿ ಪ್ರಸಾದ್ ನಾಡಿಗ್ ಅವರೇ ಎಂದುಕೊಳ್ಳುವೆ...!!

ನಾ ನೋಡಿದ್ದು ಡೌನ್ಲೋಡ್ ಮಾಡಿದ ಸಿನಿಮಾ-ಮೂಲ ಚಿತ್ರ ಅನ್ಸುತ್ತೆ ಅದ್ಕೆ ಆ ದೃಶ್ಯಗಳು ಇದ್ದವು..
ನೀವ್ ಹೇಳಿದ ಹಾಗೆ ಭಾರತದಲ್ಲಿ ಪ್ರಮಾಣಿಸಿ ಸರ್ಟಿಫಿಕೆಟ್ ಕೊಟ್ಟ ಡೀವೀಡಿಯಲಿ ಈ ತರಹದ ದೃಶ್ಯಗಳು ಇರಲಿಕ್ಕಿಲ್ಲ...(ನನಗೆ ಖಾತ್ರಿ ಇಲ್ಲ)
>>>ನೀವ್ ಹೇಳಿದ ಇನ್ನೊಂದು ಸಿನೆಮ(ದಿ ಟ್ರೆಶರ್ ಆಫ್ ಸಿಯೆರಾ ಮಾದ್ರೆ) ಬಗ್ಗೆ ನೆಟ್ನಲ್ಲಿ ಹುಡುಕಿ ಓದಿದೆ - ಕೈಗೆ ಬಂದಿದ್ದು ಬಾಯಿಗೆ ಬರಲಿಲ ಎಂಬ ತತ್ವದ ಸಿನೆಮ...!!'
ಅದನ್ನು ಡೌನ್ಲೋಡ್ ಮಾಡಿ ನೋಡಿ ಆ ಬಗ್ಗೆ ಖಂಡಿತ ಮುಂದೊಮ್ಮೆ ಬರೆಯುವೆ..
ನಿಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆ ನೀವ್ ಸಂಪದದಲ್ಲಿ ಬರುವ ಬರಹಗಳನ್ನು ಓದುವಿರಿ ಎಂದು ಗೊತ್ತಾಯ್ತು...!!
ಇದು ನಿಮ್ಮ 2ನೆಯ ಪ್ರತಿಕ್ರಿಯೆ ನನ್ನ ಬರಹಕ್ಕೆ (ಬಹು ಹಿಂದೆ ಒಮ್ಮೆ- ನೀವ್ ಮದ್ವೆ ಆಗಬಯಸುವ ಹುಡುಗಿ ಹೇಗಿರಬೇಕು ? ಬರಹಕ್ಕೆ.!!)

>>> ನಿಮಗೂ ಚಲನ ಚಿತ್ರಗಳ ಬಗೆಗೆ ವಿಶೇಷ ಆಸಕ್ತಿ ಇರುವ ಹಾಗಿದೆ..
ಆಗಾಗ ನೀವ್ ನೋಡಿದ ಉತ್ತಮ -ವಿಶೇಷ ಚಿತ್ರಗಳ ಬಗ್ಗೆ ನಮ್ಮ ಗಮನ ಸೆಳೆಯಿರಿ...
>>
ಪ್ರತಿಕ್ರಿಯೆ(ಗಳು) ಇಷ್ಟ ಆದವೇ? ಎಂದು ಹೊಸ ಆಯ್ಕೆಯನ್ನು ಸಂಪದದಲ್ಲಿ ಸೇರಿಸಿದ್ದು ಈಗ ನೋಡಿದೆ..

ತಮ್ಮ ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ.

\|/

Submitted by H A Patil Fri, 01/11/2013 - 17:40

ವೆಂಕಟ್ ರವರಿಗೆ ವಂದನೆಗಳು
'ಮೆಕನ್ನಾಸ್ ಗೋಲ್ಟ್' ಚಿತ್ರದ ವಿಮರ್ಶೆ ಓದಿದೆ, ಸಾರಾಂಶವನ್ನು ಬಹಳ ಚೆನ್ನಾಗಿ ನೀಡಿದ್ದೀರಿ. ಗ್ರೆಗರಿ ಪೆಕ್ ಮತ್ತು ಓಮಾರ್ ಶಾರೀಫ್ ಅಭಿನಯದ ಈ ಚಿತ್ರ ತಾಂತ್ರಿಕ ಕೌಶಲ್ಯಗಳು ಹಾಗೂ ಪಾತ್ರಧಾರಿಗಳ ಪ್ರಬುದ್ಧ ಅಭಿನಯದಿಂದ ಜನ ಮನ ಸೋರೆಗೋಂಡದ್ದು ಸುಳ್ಳಲ್ಲ. ಸುಮಾರು 42 ವರ್ಷಗಳ ಹಿಂದಿನ ಚಿತ್ರ. ಆಗಿನ ಹಾಲಿವುಡ್ ಚಿತ್ರಗಳ ನೆನಪು ಬಂತು. ಚಲನಚಿತ್ರಗಳ ಕುರಿತ ನಿಮ್ಮ ಎಲ್ಲ ಬರವಣಿಗೆಗಳನ್ನು ಓದುತ್ತಿರುವೆ ಚೆನ್ನಾಗಿ ಬರುತ್ತಿವೆ. ಆದರೆ ನನಗ ಆ ಚಿತ್ರಗಳನ್ನು ನೋಡುವ ಅವಕಾಶವಿಲ್ಲ, ಹೀಗಾಗಿ ಪ್ರತಿಕ್ರಿಯಿಸ ಲಾಗುತ್ತಿಲ್ಲ. ಈ ಕುರಿತ ನಿಮ್ಮ ಎಲ್ಲ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತನ್ನಿ, ಧನ್ಯವಾದಗಳು.

Submitted by venkatb83 Sat, 01/12/2013 - 19:30

In reply to by H A Patil

ಹಿರಿಯರೇ - ಗ್ರೆಗರಿ ಪೆಕ್ ಮತ್ತು ಓಮರ್ ಶೆರಿಫ್ ಸಂಗಮದ ಈ ಚಿತ್ರವನ್ನು ಬಹುಶ ನೋಡದ ಕೇಳದ ಯಾರೂ ಇಲ್ಲವೇನೋ? ಅನ್ನಿಸುತ್ತಿದೆ.!
ಯಾವತ್ತೂ ಶ್ರೇಷ್ಠ ಚಿತ್ರಗಳ ಕ್ಲಾಸಿಕ್ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನದ ಸ್ಪರ್ಧಿ..!!

ತಮ್ಮ ಅನುಭವವನ್ನು ಹಂಚಿಕೊಂಡು ಪ್ರತಿಕ್ರಿಯಿಸಿದ ನಿಮಗೆ ನನ್ನಿ .

>>>ಉತ್ತಮ -ಅತ್ಯುತ್ತಮ-ವಿಶೇಷ -ವಿನೂತನ ಕಥಾ ನಟ ಸಂಗಮದ ಚಿತ್ರಗಳ ಬಗೆಗೆ ಬರೆವ ಈ ಬರಹಗಳ ಸರಣಿ ಅನವರತ ಮುಂದುವರೆಯಲಿದೆ..
ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹ- ಸಹಕಾರವಿರಲಿ...
>>>ಹಿರಿಯರೇ
ನಾ ಬರೆವ ಬರಹಗಳನ್ನು ಪುಸ್ತಕ ರೂಪದಲ್ಲಿ ತರುವ ಮಟ್ಟಕ್ಕೆ-ಆ ಗುಣಮಟ್ಟ-ವಿಷ್ಯ-ವಸ್ತು-ಬರೆವ ಬರಹಗಳಿಗೆ ಇದೆ ಎಂದು ಅನ್ನಿಸಿಲ್ಲ....
ಬಹುಶ ಈ ಬರಹಗಳು ಬುಕ್ ರೂಪದಲ್ಲಿ ಬರಲಿಕ್ಕಿಲ್ಲ..
ಆದರೂ ಅ ಬಗ್ಗೆ ಮುಂದೊಮ್ಮೆ ಯೋಚಿಸುವೆ..

ಶುಭವಾಗಲಿ..

\|

Submitted by H A Patil Tue, 01/15/2013 - 20:40

In reply to by venkatb83

ವೆಂಕಟೇಶ ರವರಿಗೆ ವಂದನೆಗಳು
ನನ್ನ ಪ್ರತಿಕ್ರಿಯೆಗೆ ತಾವು ಬರೆದ ಮರು ಪ್ರತಿಕ್ರಿಯೆ ಓದಿದೆ. < ಪುಸ್ತಕ ರೂಪದಲ್ಲಿ ತರುವ ಮಟ್ಟಕ್ಕೆ ಆ ಗುಣ ಮಟ್ಟ, ವಿಷಯ,ವಸ್ತು ಬರಹಗಳಿಗೆ ಇದೆ ಎಂದು ಅನ್ನಿಸಿಲ್ಲ> ಎಂದು ಬರೆದಿದ್ದೀರಿ, ನಾನು ವಿನಕಾರಣ ತಮ್ಮ ಬರವಣಿಗೆಯನ್ನು ಹೊಗಳಿದೆನೆ ಎಂಬ ಅಲೋಚನೆ ಕ್ಷಣಕಾಲ ಬಂತು, ಮತ್ತೊಮ್ಮೆ ತಮ್ಮ ಬತರಹಗಳನ್ನು ಓದಿದೆ, ಹಾಗನ್ನಿಸಲಿಲ್ಲ, ನಿಜಕ್ಕೂ ನಿಮ್ಮ ಲೇಖನಗಳಲ್ಲಿ ಪುಸ್ತಕ ರೂಪದಲ್ಲಿ ಬರುವ ಗುಣ ಲಕ್ಷಣಗಳು ಎಲ್ಲ ಇವೆ ಎನ್ನುವುದು ನನ್ನ ವೈಯಕ್ತಿಕ ಅಬಿಪ್ರಾಯ, ತಮ್ಮ ಬರವಣಿಗೆಯ ಕಾರ್ಯ ಅವಿರತವಾಗಿ ಸಾಗಲಿ, ಧನ್ಯವಾದಗಳು.,

Submitted by ಗಣೇಶ Sat, 01/12/2013 - 00:28

ದಶಕಗಳೇ ಕಳೆಯಿತು...ಚಿತ್ರ ನೋಡಿ. ಟೈಟಾನಿಕ್ ಚಿತ್ರದ ಹಾಗೇ, ಆ ಕಾಲದಲ್ಲಿ ಎಲ್ಲರ ಬಾಯಲ್ಲೂ "ಮೆ...ಗೋ" ಮಾತೇ..ನೀವು ಚಿತ್ರಕತೆ ಹೇಳುತ್ತಾ ಹೋದ ಹಾಗೇ ಚಿತ್ರದ ಸನ್ನಿವೇಶಗಳು ಕಣ್ಣಮುಂದೆ ಬಂದವು. ಉತ್ತಮ ವಿಮರ್ಶೆಗೆ ಧನ್ಯವಾದಗಳು.( ಒಂದು ಚಿಕ್ಕ ಸಲಹೆ- ವಿಮರ್ಶೆಯ ಕೊನೆಯಲ್ಲಿ -"ಕೆಲವು ಸನ್ನಿವೇಶಗಳು" ಅತ್ಯುತ್ತಮ ೨-೩ ಸನ್ನಿವೇಶಗಳು ಮಾತ್ರ ಸಾಕು ಅನ್ನಿಸುತ್ತದೆ.)

Submitted by venkatb83 Sat, 01/12/2013 - 19:35

In reply to by ಗಣೇಶ

ಗಣೇಶ್ ಅಣ್ಣ- ನಿಮಗೆ ಸಿನೆಮಾಗಳ ಕುರಿತು ಆಸಕ್ತಿ ಇರುವ ಸಂಗತಿ ನನಗೆ ಗೊತ್ತು...!!
ಈ ಚಿತ್ರ ಮತ್ತು ಇನ್ನು ಹಲವು ಚಿತ್ರಗಳನ್ನು ನೀವ್ ನೋಡಿಯೇ ಇರುತ್ತೀರಿ ಅನಿಸುತ್ತಿದೆ..!
ಮೆಕನ್ನೆಸ್ ಗೋಲ್ಡ್ -ಯಾವತ್ತು ಕ್ಲಾಸ್ಸಿಕ್ ಚಿತ್ರವೇ ಸೈ ..
ಆ ಹಳೆಯ ಚಿತ್ರವನ್ನು ನಮ್ ತರಹದ ಯುವಕರು- ಈ ಜಮಾನದ ಹುಡುಗರು ನೋಡಿ ಇಷ್ಟ ಪಡುವುದು ಅಂದ್ರೆ ಸುಮ್ನೆನ..!!
ಏನಾದರೂ ಹೇಳಿ-ಹಳೆಯ ಚಿತ್ರಗಳು-ಹಳೆಯದಾದ ಎಲ್ಲವೂ ಶ್ರೇಷ್ಠ ಅನ್ಸುತ್ತೆ...
ಓಲ್ಡ್ ಈಸ್ ಗೋಲ್ಡ್ ನಿಜ...!!
ಗಣೇಶ್ ಅಣ್ಣ
ನಿಮ್ಮ ಸಲಹೆಯಂತೆ -ಉತ್ತಮ ಸನ್ನಿವೇಶಗಳ ಬಗ್ಗೆ ಕೆಲವೇ ಸಾಲುಗಳಲಿ(ಕೆಲವೇ ಸಾಲುಗಳನ್ನು) ಹಾಕುವೆ....

>>>ನೀವು ಈ ನಡುವೆ ಯಾವುದೇ ಹೊಸ ಬರಹ ಬರೆದಿಲ್ಲ....
ನಿಮ್ಮ ಹಳೆಯ ಬರಹಗಳನ್ನು ಓದಿ ನಕ್ಕು ನಕ್ಕು ಸುಸ್ತಾಗಿರುವೆ..ಆಗಾಗ ಹಳೆಯ ನಿಮ್ಮ ಬರಹಗಳನ್ನು ಓದುವೆ..
ನೀವು ಮತ್ತೆ ಆ ತರಹದ ನಗೆ ಬರಹಗಳನ್ನು (ಸಕಾಲಿಕ) ದೈನಂದಿನ ಘಟನೆಗಳ ಬಗ್ಗೆ ಯಾಕೆ ಬರೆಯಬಾರದು?
ಓದಲು ನಾವ್ ಸಿದ್ಧ..!!

ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ..

\|/

Submitted by partha1059 Sun, 01/13/2013 - 21:21

ಸಪ್ತಗಿರಿಯವರೆ
ಮೆಕನಾಸ್ ಗೋಲ್ಡ್ ಚಿತ್ರ ನಮ್ಮ ನೆನಪಿನಲ್ಲಿ ಚಿರ, ತುಮಕೂರಿನಲ್ಲಿ ಮಾರುತಿ ಟಾಕಿಸ್ ಹೊಸದಾಗಿ ಪ್ರಾರಂಬವಾದ ಹೊಸದರಲ್ಲಿ ಹಾಕಿದ್ದ ಚಿತ್ರ, ೭೦ ಎಮ್ ಎಮ್ ನ ಆ ಚಿತ್ರ ಕಾಲೇಜಿನಲ್ಲಿದ್ದ ನಮಗೆ ಅತಿ ಮೆಚ್ಚು, ಆಗ ತುಮಕೂರಿಗೆ ಬರುತ್ತಿದ್ದ ಯಾವುದೆ ಅಂಗ್ಲ ಚಿತ್ರವನ್ನು ಬಿಡದೆ ನೋಡುತ್ತಿದ್ದೆ. ಆ ಚಿತ್ರ ಪ್ರಾರಂಬವಾಗುವ ಮೊದದ ದೃಷ್ಯವೆ ಆಕರ್ಷಕ, ಪಕ್ಷಿ ಒಂದರ ಕಣ್ಣಾನ್ನು ಪರದೆಯ ತು೦ಬಾ ತೋರುವುದು, ಮರಳುಗಾಡಿನ ನಡುವೆ ಹುಲ್ಲು ಅಲ್ಲಾಡಿದಂತೆ ಕಾಣಿಸುತ್ತಿದ್ದ , ಅದನ್ನು ಜೂಮ್ ಮಾಡುತ್ತ ಹೋದಂತೆ ಕುದುರೆಯಲ್ಲಿ ಬರುತ್ತಿರುವ ಮನುಷ್ಯ ಕಾಣುವುದು ಇದೆಲ್ಲ ನಮಗೆ ಮಾತಿಗೆ ವಿಷ್ಯಗಳು, ನಂತರ ಹಾಗೆ ಬಂದ ಪ್ಯಾಸೇಜ್, ಏರ್ ಪೋರ್ಟ್ ಸೀರಿಸ್ ಸಿನಿಮಾಗಳು, ಮತ್ತೆ find where the crazy ಯಂತ ವಿಚಿತ್ರ ಸಿನಿಮಾಗಳು, ಇವೆಲ್ಲ ನಮಗೆ ಆಗ ಸಾಕಷ್ಟು ಆಕರ್ಷಣೆ ಒಡ್ಡಿತ್ತು, ಈಗ ನಿಮ್ಮ ಮೂಲಕ ಅವೆಲ್ಲ ಮತ್ತೆ ನೆನಪಿಗೆ ಬರುತ್ತಿದೆ, ಈ 'ಯೂ ಮೆಕಾನ.. ''' ಅಂದರೆ ಮೆಕಾನಸ್ ಗೋಲ್ಡ್ ಸಿನಿಮಾ ಸಹಿತ ಟಾಕಿಸಿನವರ ಪೆದ್ದು ತನ ಹಾಗು ದೌರ್ಜನ್ಯದಿಂದ ನಾವು ಪುಕ್ಕಟೆ ನೋಡಿದ್ದಲ್ಲದೆ ಅವರೆ ನಮಗೆ ಹಣ ಕೊಡುವಂತಾಗಿದ್ದು ವಿಚಿತ್ರ, ಅದು ಹೇಳಲು ಹೊರಟರೆ ಮತ್ತೊಂದು ಲೇಖನವಾದಿತು , ಹಳೆಯದೆಲ್ಲ ನೆನಪಿಸಿದ ನಿಮಗೆ ಧನ್ಯವಾದಗಳು
ಪಾರ್ಥಸಾರಥಿ

Submitted by ಗಣೇಶ Sun, 01/13/2013 - 22:19

In reply to by partha1059

>>ಅದು ಹೇಳಲು ಹೊರಟರೆ ಮತ್ತೊಂದು ಲೇಖನವಾದಿತು ---ಪಾರ್ಥರೆ, ಮತ್ತೊಂದು ಲೇಖನದ ನಿರೀಕ್ಷೆಯಲ್ಲಿರುವೆ;-------ಸಪ್ತಗಿರಿವಾಸಿಯವರೆ,>>>ಏನಾದರೂ ಹೇಳಿ-ಹಳೆಯ ಚಿತ್ರಗಳು-ಹಳೆಯದಾದ ಎಲ್ಲವೂ ಶ್ರೇಷ್ಠ ಅನ್ಸುತ್ತೆ... ಓಲ್ಡ್ ಈಸ್ ಗೋಲ್ಡ್ ನಿಜ...!! -------------ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅಂದಾಜು ೬೦ರಿಂದ ೮೦ರವರೆಗೆ ಶ್ರೇಷ್ಠ ಸಿನೆಮಾಗಳು-ಕನ್ನಡ,ಹಿಂದಿ,ಇಂಗ್ಲೀಶ್,ತಮಿಳು,ತೆಲುಗು..ಹೆಚ್ಚಿನ ಎಲ್ಲಾ ಭಾಷೆಯಲ್ಲೂ ಬಂದವು. ಅತ್ಯುತ್ತಮ ಹಾಡುಗಾರರು, ಸಂಗೀತ ನಿರ್ದೇಶಕರು ಸಹ-ಕನ್ನಡ ಇತ್ಯಾದಿ ಎಲ್ಲಾ ಭಾಷೆಯಲ್ಲೂ,... ಗಜಲ್ ಹಾಡುಗಾರರು, ಶಾಸ್ತ್ರೀಯ ಸಂಗೀತಕಾರರು,ವಾದ್ಯ ನುಡಿಸುವವರು...ಒಂದೇ ಕೊರತೆ--- ಈಗಿನ ಕಂಪ್ಯೂಟರ್ ಯುಗ ಆಗ ಇರುತ್ತಿದ್ದರೆ!!

Submitted by venkatb83 Tue, 01/15/2013 - 17:43

@ ಗಣೇಶ್ ಅಣ್ಣ -ಮತ್ತು ಗುರುಗಳಿಗೆ...

ನೀವ್ ಇಬ್ಬರೂ ಆ ಸಿನೆಮ ನೋಡಿ ಅಂದಿನ ದಿನಗಳಿಗೆ ಆ ನೆನಪುಗಳಿಗೆ ಜಾರಿ ನಿಮ್ಮ ಅನುಭವವನ್ನು ಹಂಚಿಕೊಂಡದ್ದಕ್ಕೆ ನನ್ನಿ ..
ಬಹುಶ ಈ ಚಿತ್ರ ಯಾವತ್ತು ಎಲ್ಲರಿಗೂ ಮೋಡಿ ಮಾಡುತ್ತಾ ಇರುವುದೇನೋ...
ನಾಡಿಗರು ಹೇಳಿದ ಮೇಲೆ ಈ ಬಂಗಾರ ಹುಡುಕುವ -ಪಡೆಯುವ ಪ್ರಯತ್ನಗಳ ಸುತ್ತ ಹೆಣೆದ ಹಲವು ಆಂಗ್ಲ ಚಿತ್ರಗಳು ಸಿಕ್ಕವು..
ಅವುಗಳಲ್ಲಿ ಕೆಲವನ್ನು ಭಟ್ಟಿ ಇಳಿಸಲು ಸಜ್ಜಾಗಿರುವೆ...!!
ಆದರೂ ಆ ಎಲ್ಲ ಚಿತ್ರಗಳ ಮಧ್ಯೆ ಈ ಚಿತ್ರ ಮೊದಲ ಸ್ಥಾನದಲ್ಲಿ ನಿಲ್ಲುವುದು.....
ಪ್ರತಿಕ್ರಿಯೆಗೆ ನನ್ನಿ ..

ಶುಭವಾಗಲಿ..

\|