ಏಕೆ, ಹೇಗೆ ಎನುವ ಪ್ರಶ್ನೆ (ಶ್ರೀ ನರಸಿಂಹ 59)

ಏಕೆ, ಹೇಗೆ ಎನುವ ಪ್ರಶ್ನೆ (ಶ್ರೀ ನರಸಿಂಹ 59)

ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ

ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ

ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ

ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ

 

ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊಂಬೆಯಂತೆ

ಸೃಷ್ಠಿ ರಹಸ್ಯವ  ತಿಳಿಯಲೆತ್ನಿಪ ನಿನ್ನ  ಪ್ರಯತ್ನವಂತೆ

ಏಕೆ, ಹೇಗೆಂಬುವುದಕೆ ಉತ್ತರ ದೊರಕಿದಂದು ನಿನಗೆ

ಉಪ್ಪಿನ ಗೊಂಬೆಯ ತೆರದಿ ಹೇಳಲಾಗದದ ಪರರಿಗೆ

 

ಎಲ್ಲ ಅವನಿಚ್ಚೆಯೆನುತಲಿ ಸಾಧನೆಯ ಹಾದಿಯಲಿ ಇರು ನೀನು

ಕಾಲ ಬರಲಾಗ ಶ್ರೀ ನರಸಿಂಹ ನೀಡುವ ನಿನಗೆಲ್ಲದರ ಅರಿವನು

Rating
No votes yet

Comments

Submitted by kavinagaraj Wed, 01/16/2013 - 09:52

ಪರಮಾತ್ಮನನ್ನು 'ಸಂಪ್ರಶ್ನ' ಎಂದೂ ಕರೆಯುವರು. ಒಂದು ಪ್ರಶ್ನೆಗೆ ಉತ್ತರ ಸಿಕ್ಕರೆ ಮತ್ತೊಂದು ಪ್ರಶ್ನೆ ಧುತ್ತೆಂದು ಎರಗುವುದು! ಧನ್ಯವಾದ, ಸತೀಶರೇ.