ಕತೆಗಾರ ಬಾಗಲೋಡಿ ದೇವರಾಯರು - ಸಮಗ್ರ ಕತೆಗಳ ಸಂಗ್ರಹ

ಕತೆಗಾರ ಬಾಗಲೋಡಿ ದೇವರಾಯರು - ಸಮಗ್ರ ಕತೆಗಳ ಸಂಗ್ರಹ

ಹಿಂದೊಮ್ಮೆ  ಕನ್ನಡ ಕತೆಗಳ ಸಂಕಲನವೊಂದನ್ನು ಓದುತ್ತಿದ್ದಾಗ ಒಂದು ಕತೆಯು ಹಿಡಿಸಿತು.  ಕಥಾವಸ್ತುವೂ, ಶೈಲಿಯೂ , ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳಲ್ಲಿ ಇರುವಂತಿತ್ತು. ಆದರೆ ಕತೆಗಾರರ ಹೆಸರು ಬಾಗಲೋಡಿ ದೇವರಾಯ ಎಂದಿತ್ತು.

ಇತ್ತೀಚೆಗೆ ಬಾಗಲೋಡಿ ದೇವರಾಯರ  ಸಮಗ್ರ ಕಥೆಗಳು ಎಂಬ ಪುಸ್ತಕ ಕೈಗೆ ಸಿಕ್ಕಿತು. ಎಲ್ಲ ಕತೆಗಳೂ ಚೆನ್ನಾಗಿವೆ. ನನ್ನ ಮೆಚ್ಚಿನ ಕತೆಗಾರರಾದ ಮಾಸ್ತಿ, ಜಯಂತ್ ಕಾಯ್ಕಿಣಿ, ಶಾಂತಿನಾಥ ದೇಸಾಯರ ಸಾಲಿಗೆ ಇವರೂ ಸೇರ್ಪಡೆಯಾದರು. ಮಾಸ್ತಿಯವರ ಕಾಲಕ್ಕೇ ಕತೆಗಳನ್ನು ಬರೆದಿದ್ದರಂತೆ. ಮಾಸ್ತಿಯವರೂ ಇವರ ಕತೆಗಳನ್ನು  ಮೆಚ್ಚಿಕೊಂಡು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದರಂತೆ,  ಆ ಮೇಲೆ ರಾಯಭಾರ ಕಚೇರಿಯಲ್ಲಿನ ಕೆಲಸದ ಮೂಲಕ ಪುರುಸೊತ್ತಿಲ್ಲದೆ ಬರವಣಿಗೆಯಲ್ಲಿ ಮುಂದುವರೆಯದ ಇವರು ಆ ಮೇಲೆ ಮೂವತ್ತು ವರ್ಷದ ನಂತರ ಮತ್ತೆ ಬರೆದರಂತೆ. ಇವರು ಅನೇಕ ದೇಶಗಳಲ್ಲಿ ರಾಯಭಾರಿಯೂ ಆಗಿದ್ದವರು.   ಇವರ ಕಥೆಗಳು ಮಾಸ್ತಿಯವರ ಕತೆಗಳಿಗಿಂತ ಏಕೆ ಬೇರೆ ಮತ್ತು ಏಕೆ ಮಿಗಿಲು ಎಂಬುದನ್ನು ಅದರ ಮುನ್ನುಡಿಯಲ್ಲಿ ಓದಿದೆ.

ಈ  ಕಥಾ ಸಂಕಲನದಲ್ಲಿನ "ಸತ್ಯಮೇವ ಜಯತೆ ಎ0ಬ ಬೋಧಪ್ರದವಾದ ಕಥೆಯು" ತನ್ನ ಶೈಲಿ ಮತ್ತು ತಮಾಶೆಗುಣದಿಂದ ನನ್ನ ಮನಸೆಳೆಯಿತು.

ಸಾಧ್ಯವಾದರೆ ಈ ಪುಸ್ತಕ ಓದಿ.

 

 

 

 

 

Rating
Average: 5 (3 votes)

Comments

Submitted by shreekant.mishrikoti Thu, 01/09/2014 - 22:01

ಈ ಲೇಖಕರ ಕೆಲವು ಕತೆಗಳ ಸಂಕಲನ- ಹುಚ್ಚ ಮುನ್ಸೀಫ ಸಂಗ್ರಹ - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿದೆ. http://www.new.dli.ernet.in/cgi-bin/metainfo.cgi?&title1=Huchcha%20Munas...
ಇದಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಹೃದಯಪೂರ್ಣ ಮುನ್ನುಡಿಯೂ ಇದೆ. 'ಹುಚ್ಚ ಮುನ್ಸೀಫ' ಕತೆಯು ಇತ್ತೀಚೆಗೆ ಸಿನಿಮಾ ಕೂಡ ಆಗಿದೆ.

Submitted by shreekant.mishrikoti Thu, 01/09/2014 - 22:04

In reply to by shreekant.mishrikoti

ಈ ಕೊಂಡಿಯಲ್ಲಿ ಆ ಚಲನಚಿತ್ರ( ಓಡುಚಿತ್ತಾರ!) ದ ಬಗೆಗೆ ಮಾಹಿತಿ ಇದೆ. http://avadhimag.com/2013/12/28/%E0%B2%A8%E0%B2%BE%E0%B2%B3%E0%B3%86-%E0...

Submitted by sri.ja.huddar Fri, 01/10/2014 - 12:44

ಬಾಗಲೋಡಿ ದೇವರಾಯ ಅವರು ಒಳ್ಳೆ ಕತೆಗಾರರು. ಅವರ ಒಂದು ಕಥಾ ಕಥಾ ಸಂಕಲನ ಧಾರವಾಡದ ಮನೋಹರ ಗ್ರಂಥ ಮಾಲಾದಿಂದಲೂ ಪ್ರಕಟವಾಗಿದೆ. ವಂದನೆಗಳು ಶ್ರೀಕಾಂತ.