ಪಾಲಕ್ ಸೊಪ್ಪಿನ ಬಜ್ಜಿ

ಪಾಲಕ್ ಸೊಪ್ಪಿನ ಬಜ್ಜಿ

ಬೇಕಿರುವ ಸಾಮಗ್ರಿ

ಪಾಲಕ್ ಸೊಪ್ಪು – 5 ಎಲೆಗಳು, ಕಡಲೇ ಹಿಟ್ಟು – ¼ ಕೆ.ಜಿ., ಎಣ್ಣೆ – ½ ಲೀಟರ್, ಮೆಣಸಿನ ಪುಡಿ – ಖಾರಕ್ಕೆ ತಕ್ಕಂತೆ, ಉಪ್ಪು – ರುಚಿಗೆ ತಕ್ಕಂತೆ, ಅಡುಗೆ ಸೋಡ – 1 ಚಿಟಿಕೆ.

ತಯಾರಿಸುವ ವಿಧಾನ

ಪಾಲಕ್ ಎಲೆಗಳನ್ನು ತೊಳೆದು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಆರಲು ಹಾಕಿ. ನೀರು ಪೂರ ಆರಿದ ಪಾಲಕ್ ಎಲೆಗಳನ್ನು ಅರ್ಧಕ್ಕೆ ಕತ್ತರಿಸಿ ಎರಡು ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಕಡಲೇ ಹಿಟ್ಟಿಗೆ ಮೆಣಸಿನ ಪುಡಿ, ಉಪ್ಪು ಮತ್ತು ಅಡುಗೆ ಸೋಡ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅಳತೆಗೆ ತಕ್ಕಂತೆ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿ. ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ನಂತರ ತುಂಡು ಮಾಡಿದ ಪಾಲಕ್ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಬಾಣಲೆಗೆ ಹಾಕಿ. ಕೆಂಪಗೆ ಕರಿದ ಬಜ್ಜಿಗಳನ್ನು ಜಾಲರಿ ತಟ್ಟೆಗೆ ತೆಗೆಯಿರಿ. ಬಿಸಿ ಬಿಸಿ ಪಾಲಕ್ ಬಜ್ಜಿಗಳು ಟೀಯೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ.

Comments

Submitted by partha1059 Mon, 01/28/2013 - 11:49

ಸ0ಪದ‌ ಸಮ್ಮಿಲನ‌ ಮತ್ತೆ ಮಾಡುವಾಗ‌, ಊಟ‌ ತಿ0ಡಿಯ‌ ಮೆನು ಸಿದ್ದಪಡಿಸಲು ನಿಮ್ಮ ಸಹಾಯವನ್ನೆ ತೆಗೆದುಕೊಳ್ಳುವ0ತೆ ಸ0ಪದ‌ ನಿರ್ವಾಹಕರಿಗೆ ಮನವಿ ಸಲ್ಲಿಸುತ್ತಿರುವೆ ..... :)))