ಶ್ರೀಮಂತಗೊಳಿಸು

ಶ್ರೀಮಂತಗೊಳಿಸು

ಶಿಖರವೇರುವ  ಛಲದಿ
ಹಾದಿಬದಿಯ ಹೂವು
ಹಣ್ಣುಗಳನು ಸವಿಯಲು
ಸಣ್ಣ ಪುಟ್ಟ ಹೆಜ್ಜೆಗಳ
ಗೆಜ್ಜೆನಾದ ಆಲಿಸಲು
ವೇಳೆಯಿಲ್ಲದ ಅವಸರದ
ಬಾಳಿನಲ್ಲೇನಿದೆ ರಸ ತಮ್ಮಾ?

ಕಂದನ ತೊದಲನಾಲಿಸಿ
ತೋಳ ತೊಟ್ಟಿಲಾಗಿಸಲು
ಸತಿಯ ಮನವನರಿತು
ತೋಳಬಂಧಿಯಾಗಿಸಲು
ನೆಮ್ಮದಿಯ ಕಡಲಾಗಿ
ಹೆತ್ತೊಡಲನು  ತಣಿಸಲು
ಸಮಯವಿಲ್ಲದೆ  ದುಡಿದುಡಿದು
ಗುಡ್ಡೆಹಾಕುವುದರಲ್ಲೇನಿದೆ ಸಿರಿ ತಮ್ಮಾ?

ಸಂಭ್ರಮಾನಂದ ಸಾರ್ಥಕತೆಯಲಿ
ಬದುಕನೇ ಶ್ರೀಮಂತಗೊಳಿಸು ತಮ್ಮಾ

Rating
No votes yet

Comments

Submitted by sathishnasa Tue, 02/05/2013 - 15:32

ನಿಜ ಈ ತೊಳಲಾಟದ ಜೀವನದಲ್ಲಿ ನಿಜವಾದ ಆನಂದವನ್ನು ಕಳೆದು ಕೊಂಡಿದ್ದೇವೆ ಒಳ್ಳಯ ಕವನ ಪ್ರೇಮರವರೇ .....ಸತೀಶ್

Submitted by ಮಮತಾ ಕಾಪು Tue, 02/05/2013 - 16:32

ಅರ್ಥಪೂರ್ಣವಾದ ಕವನ ಪ್ರೇಮಾ ಅವರೆ, ಇಂದಿನ ಯಾಂತ್ರಿಕ ಯುಗದಲ್ಲಿ ಗಳಿಕೆಯೊಂದೇ ಮುಖ್ಯ ಅನ್ನುವಂತಾಗಿದೆ. ನೆಮ್ಮದಿಯ ಕಡಲಾಗಿ
ಹೆತ್ತೊಡಲನು ತಣಿಸಲು, ಸಮಯವಿಲ್ಲದೆ ದುಡಿದುಡಿದು, ಗುಡ್ಡೆಹಾಕುವುದರಲ್ಲೇನಿದೆ ಸಿರಿ ತಮ್ಮಾ?ಸಂಭ್ರಮಾನಂದ ಸಾರ್ಥಕತೆಯಲಿ
ಬದುಕನೇ ಶ್ರೀಮಂತಗೊಳಿಸು ತಮ್ಮಾ+೧ ಧನ್ಯವಾದಗಳು.

Submitted by kavinagaraj Tue, 02/05/2013 - 16:38

ಇರುವುದನ್ನು ಅನುಭವಿಸದೆ ಇಲ್ಲದುದನ್ನು ಬಯಸುವ ಧಾವಂತವೀ ಜೀವನವೇ ಎಂಬುದನ್ನು ಬಿಂಬಿಸಿದ ಸಾಲುಗಳು!

Submitted by ಗಣೇಶ Wed, 02/06/2013 - 00:08

ಆಚೆ ಈಚೆ ನೋಡುತ್ತಿದ್ದರೆ ಗುರಿ ಮುಟ್ಟುವುದು ಯಾವಾಗ? ದುಡಿದು ದುಡಿದು ಗುಡ್ಡೆ ಹಾಕಿದರೆ ಸತಿಗೆ ತೋಳಬಂಧಿ..:) ---ಕವನ ಚೆನ್ನಾಗಿದೆ.