ಕವನ: ಕೆಲವು ನಗುವೆ ಹಾಗೆ
ಚಿತ್ರ
ಕೆಲವು ನಗುವೆ ಹಾಗೆ ಕೋಲ್ಮಿಂಚಿನ ಹಾಗೆ
ಕಣ್ತುಂಬಿದ ಬೆಳಕಿನ ಹಾಗೆ ಕೋರೈಸಿ ಮಾಯವಾಗುತ್ತದೆ
ಕಣ್ಣಲ್ಲಿ ಬೆಳಕು ತುಂಬಿ ನಂತರ ಕತ್ತಲಾಗುತ್ತದೆ
ಕೆಲವು ನಗುವೆ ಹಾಗೆ ಬೆಳಗಿನ ಮಂಜಿನ ಹಾಗೆ
ಕಣ್ಣಲಿ ತುಂಬಿ ನಿಧಾನವಾಗಿ ಕರಗುತ್ತದೆ
ಕಣ್ಣಲ್ಲಿ ಕರಗಿದ ನಗು ಹಾಗೆ ನಮ್ಮ ಮನದಲ್ಲಿ ಉಳಿಯುತ್ತದೆ
ಕೆಲವು ನಗುವೆ ಹಾಗೆ ಮಂದಾರ ಕುಸುಮದ ಹಾಗೆ
ಮನ ಮುಟ್ಟಿ ಹೃದಯ ತಟ್ಟಿ ಮುಖವೆಲ್ಲ ಹರಡುತ್ತದೆ
ಕಣ್ಣಲ್ಲಿ ತುಂಬಿದ ನಗು ಮನದಲ್ಲಿ ಸ್ಥಿರವಾಗಿ ನೆಲಸುತ್ತದೆ
ಕೆಲವು ನಗುವೆ ಹಾಗೆ ಮುಂಗಾರಿನ ಗುಡುಗಿನ ಹಾಗೆ
ಉರುಳು ಉರುಳು ಶಬ್ದ ಕಿವಿಯೆಲ್ಲ ದ್ವನಿಸುತ್ತದೆ
ಒಮೊಮ್ಮೆ ಗಂಡುಹುಡುಗರ ಗುಂಡಿಗೆ ಕೂಡ ನಡುಗುತ್ತದೆ!
Rating
Comments
ಕೆಲವು ನಗುವೇ ಹಾಗೆ ಉರಿಬಿಸಿಲಿನ
ಕೆಲವು ನಗುವೇ ಹಾಗೆ ಉರಿಬಿಸಿಲಿನ ಹಾಗೆ
ಕಾದ ಕಾವಲಿಯ ಮೇಲೆ ಬಿದ್ದ ನೀರಿನ ಹಾಗೆ
. . . . .ಮುಂದಿನ ಸಾಲು ಪಾರ್ಥರೇ ಬರೆದರೆ ಹೇಗೆ?
ಇಲಿಯ ಕನಸು ಕಾಣುತ್ತಿರಬಹುದು.:)
ಇಲಿಯ ಕನಸು ಕಾಣುತ್ತಿರಬಹುದು.:) ಕವನ ಚೆನ್ನಾಗಿದೆ ಪಾರ್ಥರೆ.
ಕೆಲವು ನಗುವೇ ಹಾಗೆ, ಕಿಲ ಕಿಲ
ಕೆಲವು ನಗುವೇ ಹಾಗೆ, ಕಿಲ ಕಿಲ ಸದ್ದು ಮಾಡಿ
ಗಂಡಿನ ಎದೆಯಲ್ಲಿ ಕೋಲಾಹಲ ಎಬ್ಬಿಸಿ
ಕುರುಕ್ಷೇತ್ರವನ್ನೂ ಮಾಡಿಸಿಬಿಡುತ್ತದೆ
ಪ್ರಾಸ ಸೊಗಸಾಗಿದೆ..!
ಪ್ರಾಸ ಸೊಗಸಾಗಿದೆ..!
ಹೌದು ಪಾರ್ಥರೆ, ನಗುವಿನ ಮೂಲಕ
ಹೌದು ಪಾರ್ಥರೆ, ನಗುವಿನ ಮೂಲಕ ಮನಸ್ಸಿನ ಭಾವನೆಗಳನ್ನೆಲ್ಲಾ ಅರುಹ ಬಹುದು.ಕೆಲಒಮ್ಮೆ ಮಂದಹಾಸ,ಕೆಲಒಮ್ಮೆಅಟ್ಟಹಾಸ, ಕೆಲ ಒಮ್ಮೆಕಪಟ,ಮತ್ತೊಮ್ಮೆ ವಿಕಟ, ಹೀಗೆ ನಗುವಿನಲ್ಲಿ ಒಮ್ಮೆ ಸಹಜತೆ ಇದ್ದರೆ ಇನ್ನೊಮ್ಮೆ ಅಸಹಜತೆ ಕಾಣುತ್ತೇವೆ......ವಂದನೆಗಳು
......ರಮೇಶ್ ಕಾಮತ್
ಅಟ್ಟಹಾಸದ ನಗು (ಸಾಮಾನ್ಯವಾಗಿ
ಅಟ್ಟಹಾಸದ ನಗು (ಸಾಮಾನ್ಯವಾಗಿ ಸಿನೆಮಾಗಳಲ್ಲಿ ಖಳರು -ವಜ್ರ ಮುನಿ ಅಮರೇಶ್ ಪುರಿ )-ಕೆಟ್ಟ ನಗು ತಟ್ಟೋ ನಗು-ಬೆಟ್ಟದ ನಗು (ಇದ್ಯಾವ್ದೂ ಅಂದ್ರ? ಅದೇ ಮಾರ್ಧನಿಸುತ್ತಲ್ಲ!)ಕಷ್ಟದ ನಗು (ಇದು ಎಲ್ಲರಿಗೂ ಅನುಭವ ಇರುವುದೇ)ಇಷ್ಟದ ನಗು..!!
ಏನೆಲ್ಲಾ ಇವೆ..ಅಬ್ಬಬ್ಬಾ..!!
ನಕ್ಕರದೇ ಸ್ವರ್ಗ...!!
ಆದರೆ ಬಾಯಿ ಬಿಟ್ಟರೆ ಬಣ್ಣ ಗೇಡು ಆಗಬಾರದು ಅಸ್ತೆ.!!
ಶುಭವಾಗಲಿ...
\।