ಹುಣಿಸೆ ಹಣ್ಣಿನ ಸಾರು
ಹುಣಿಸೆ ಹಣ್ಣು – ನಿಂಬೆ ಗಾತ್ರ, ಬೆಲ್ಲ – ನೆಲ್ಲಿ ಗಾತ್ರ, ಹಸಿ ಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ,
ಕಾಯಿ ಹಾಲು – 1 ಕಪ್, ಕೊತ್ತಂಬರಿ ಸೊಪ್ಪು – 3 ಎಸಳು, ಉಪ್ಪು – ರುಚಿಗೆ ತಕ್ಕಷ್ಟು...
ಒಗ್ಗರಣೆಗೆ : ಎಣ್ಣೆ – 1 ಚಮಚ, ಸಾಸಿವೆ – ¼ ಚಮಚ, ಕರಿಬೇವಿನ ಸೊಪ್ಪು – 4 ಅಥವಾ 5 ಎಸಳು, ಬೆಳ್ಳುಳ್ಳಿ – 5 ಅಥವಾ 6 ಎಸಳು, (ಬೆಳ್ಳುಳ್ಳಿ ಉಪಯೋಗಿಸದವರು ಇಂಗನ್ನು ಉಪಯೋಗಿಸಬಹುದು). ಇಂಗು – 1 ಚಿಟಿಕೆ.
ಹುಣಸೆ ಹಣ್ಣನ್ನು ಪುಟ್ಟ ಬೌಲಿನಲ್ಲಿ ಹಾಕಿ ನೆನೆಯಲು ಇಡಿ. ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಹಸಿ ಮೆಣಸಿನ ಕಾಯಿಯನ್ನು ನುರಿಯಿರಿ. ನಂತರ ಹುಣಿಸೆ ಹಣ್ಣನ್ನು ಕಿವುಚಿ ರಸವನ್ನು ಮಿಶ್ರಣಕ್ಕೆ ಬೆರೆಸಿ. ಕಾಯಿ ಹಾಲು, ಪುಡಿ ಬೆಲ್ಲ ಮತ್ತು ಉಪ್ಪನ್ನು ಹಾಕಿ ಕಲಕಿ. ಒಗ್ಗರಣೆಗೆ ಹೇಳಿದ ಸಾಮಗ್ರಿಗಳನ್ನೆಲ್ಲಾ ಹಾಕಿ ಒಗ್ಗರಣೆ ಮಾಡಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.... ಬಿಸಿ ಬಿಸಿ ಅನ್ನ, ತುಪ್ಪದೊಂದಿಗೆ ಸವಿಯಲು ಬಲು ರುಚಿ ಈ ದಿಢೀರ್ ಸಾರು. ...
ಮಾಹಿತಿ : ಹಸಿ ಮೆಣಸಿನ ಕಾಯಿ ನುರಿದಾಗ ಕೈಗೆ ಹತ್ತಿದ ಖಾರ, ಹುಣಿಸೆ ಹಣ್ಣನ್ನು ಕಿವುಚಿದಾಗ ಸ್ವಲ್ಪ ಕಡಿಮೆಯಾಗುತ್ತದೆ.
Comments
ಮಾಡಿ ಬಡಿಸುವವರು ಎಷ್ಟು
ಮಾಡಿ ಬಡಿಸುವವರು ಎಷ್ಟು ಕಷ್ಟಪಡುತ್ತಾರೆ ಎಂಬುದರ ಅರಿವಾಯಿತು. ಹೀಗೆಯೇ ರುಚಿ ರುಚಿಯಾಗಿ ಮಾಡಿಕೊಟ್ಟರೆ ಎಷ್ಟು ಚೆನ್ನಾಗಿರುತ್ತದೆ!! ಧನ್ಯವಾದ, ಶೋಭಾ.