ತವರು ಮನೆ ತಟ್ಟು

ತವರು ಮನೆ ತಟ್ಟು

ಬೇಕಿರುವ ಸಾಮಗ್ರಿ

ದೋಸೆ ಅಕ್ಕಿ – ¼ ಕೆ.ಜಿ., ಕಡಲೇ ಬೇಳೆ – ¼ ಕಪ್, ಉಪ್ಪು – ರುಚಿಗೆ ತಕ್ಕಂತೆ, ಕೊತ್ತಂಬರಿ ಸೊಪ್ಪು : 4 – 5 ಎಸಳು, ಇಂಗು – 1 ಚಿಟಿಕೆ, ಜೀರಿಗೆ – ¼ ಟೀ ಚಮಚ, ಕರಿ ಮೆಣಸು – ¼ ಟೀ ಚಮಚ, ತೆಂಗಿನಕಾಯಿ ತುರಿ – 1 ಕಪ್, ಹಸಿ ಮೆಣಸಿನಕಾಯಿ – ಖಾರಕ್ಕೆ ತಕ್ಕಂತೆ.

ತಯಾರಿಸುವ ವಿಧಾನ

ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಘಂಟೆ ನೆನೆಸಿ. ಕಡಲೇ ಬೇಳೆಯನ್ನು ತೊಳೆದು ನೆನೆಸಿ. ಹಸಿ ಮೆಣಸಿನಕಾಯಿ ಮತ್ತು ಕರಿ ಮೆಣಸು ಎರಡನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ ಚೆನ್ನಾಗಿ ನೆನೆದ ನಂತರ ನುಣ್ಣಗೆ ರುಬ್ಬಿ. ಹಿಟ್ಟು ತೆಳ್ಳಗೆ ನೀರಾಗಿ ಬರಿ ಅಕ್ಕಿ ದೊಸೆಗಿರುವಂತೆ (ನೀರು ದೋಸೆ) ಇರಬೇಕು. ಈ ಹಿಟ್ಟನ್ನು ಒಂದು ಅಗಲ ಬಾಯಿಯ ಪಾತ್ರೆಗೆ ಹಾಕಿ ಸ್ಟೌ ಮೇಲಿಟ್ಟು ತಳಹಿಡಿಯದಂತೆ ಮೊಗೆಚುತ್ತಿರಿ. ಹಿಟ್ಟು ಬೆಂದು ಮುದ್ದೆಯಾಗುತ್ತದೆ. ಈ ಮುದ್ದೆಗೆ ರುಬ್ಬಿದೆ ಮಸಾಲೆ, ಎಣ್ಣೆ, ಕಾಯಿ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ನೆನೆಸಿದ ಕಡಲೇ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈ ಮುದ್ದೆಯನ್ನು ಚೆನ್ನಾಗಿ ನಾದ ಬೇಕು. ನಂತರ ಪುಟ್ಟ ಪುಟ್ಟ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಅಂಬೊಡೆ ರೀತಿ ತಟ್ಟಿ ಹಬೆಯಲ್ಲಿ 15 – 20 ನಿಮಿಷ ಬೇಯಿಸಿ. ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

Comments

Submitted by ಗಣೇಶ Mon, 02/04/2013 - 00:43

ಈ ವಾರ ತವರು ಮನೆ ತಟ್ಟಬೇಕೆಂದಿದ್ದೇನೆ. ಪಾರ್ಥರೆ ನೀವು..?

Submitted by Shobha Kaduvalli Fri, 02/08/2013 - 15:31

In reply to by sasi.hebbar

ಈ ರೆಸೆಪಿ ನನ್ನ‌ ಸ‌oಕೇತಿ ಸಹೋದ್ಯೋಗಿಯೊಬ್ಬರು ಹೇಳಿದ್ದು. ಮಾಡಿ ತಿoದಾಗ‌ ಚೆನ್ನಾಗಿದೆ ಎನಿಸಿದ್ದರಿoದ‌ ಸ‌oಪದ‌ ರುಚಿಗೆ ಸೇರಿಸಿದೆ. ಹೆಸರು ಯಾಕೆ ಬoತು ಎoದು ಅವರನ್ನು ಕೇಳಿ ಹೇಳಬೇಕು.

Submitted by sasi.hebbar Fri, 02/08/2013 - 18:25

In reply to by Shobha Kaduvalli

ತವರು ಮನೆ ತಟ್ಟು - ಈ ತಿನಿಸು ಕದೊಳಿ ಕಡೆಯದ್ದು ಅಂತ ಅಂದುಕೊಂಡು, ನಮ್ಮ ಹಾಲಾಡಿಯಲ್ಲಿ ಇದರ ಹೆಸರನ್ನೇ ಕೇಳಿಲ್ಲವಲ್ಲ, ಇದು ಯಾವ ಅಪರಿಚಿತ ತಿಂಡಿ ಅಂತ ಅಚ್ಚರಿ ಪಟ್ಟಿದ್ದೆ. ನಮ್ಮ ಕಡೆ ಮಾಡುವ ಉಂಡೆ ಕಡುಬು ಸ್ವಲ್ಪ ಇದೇ ರೀತಿ ಅಲ್ವಾ? ಉಂಡಲಕಾಯಿಗೂ ಇದಕ್ಕೂ ಸ್ವಲ್ಪ ಹೋಲಿಕೆ ಉಂಟು!

Submitted by partha1059 Fri, 02/08/2013 - 16:47

ಕಾಡುವಳ್ಳಿ ... ಕೋಡುವಳ್ಳಿ ಒ0ದೇನ‌ ಬೇರೆ ಬೇರೆ ಊರ‌ ?
ಚೇತನ್ ಕೋಡುವಳ್ಳಿ ಅ0ತ ಸ0ಪದದಲ್ಲಿ ಇದ್ದಾರೆ (ಈಗ‌ ಅವರು ಮಾಯ‌)

Submitted by Shobha Kaduvalli Fri, 02/08/2013 - 18:12

ಕಾಡುವಳ್ಳಿ ಅಲ್ಲ ಸರ್, ಅದು ಕದುವಳ್ಳಿ..... ಮಾರಣ ಕಟ್ಟೆಯ ಹತ್ತಿರದ ಒಂದು ಪುಟ್ಟ ಹಳ್ಳಿ, ಕದಳಿ, ಕದೊಳಿ ಎಂದೂ ಸಹ ಹೇಳುತ್ತಾರೆ.... ನನ್ನ ಸುಂದರ ಊರು.

Submitted by venkatb83 Fri, 02/08/2013 - 19:27

ಗುರುಗಳೇ ನನಗೂ ಈ ಸಮ್ಷಯ ಬ0ದಿತ್ತು...!!
ನೀವು ಕೇಳಿದಿರಿ..!!
ಅವ್ರಿವರಲ್ಲ ....! ಅ0ತಾ ಗೊತ್ತಾಯ್ತು..!!

ಅ0ದ್ ಹಾಗೇ ನಮ್ ಆ ಚ್ಹೆತು ಎಲ್ಲಿ ಮಾಯವಾದ್ರೋ..!! ಯಾಕೊ..!!

\|