ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!
"ಸಖೀ,
ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟ
ಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟ
ನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡು
ಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು"
"ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆ
ಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆ
ದಿನವೂ ಸಖೀ ಸಖೀ ಅನ್ನುತ್ತಿರುವಿರಲ್ಲವೇ
ಬರೆಯುವಾಗಲೂ ಆ ರಾಜಕೀಯದ ಬಗ್ಗೆ"
"ಅಯ್ಯೋ ಮಂಕೇ ದಿನವೂ ಬರೆಯುವುದು
ಬರೆವ ಹವ್ಯಾಸಕ್ಕಾಗಿ ಅದು ನಿನಗಲ್ಲ ಕಣೇ
ಇಂದು ಬರೆದರೆ ಎಲ್ಲಾ ಅರ್ಥೈಸಿಕೊಂಬರು
ಇಲ್ಲಿರುವ ಸಖೀ ಬೇರಾರು ಅಲ್ಲ ನನ್ನ ಹೆಣ್ಣೇ
ಮನೆಯೊಳಗಿನ ಪ್ರೀತಿ ಪ್ರೇಮ ಇವೆಲ್ಲವೂ
ಸದಾ ಇರಲಿ ಮನೆಯ ಗೋಡೆಗಳ ನಡುವೆ
ಪ್ರೀತಿ ಭಕ್ತಿಗಳೆಂದಿಗೂ ಖಾಸಗಿಯಾಗಿರಲಿ
ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!”
*****
Rating
Comments
ವಾಹ್
ವಾಹ್
ಕಡೆಗು ಪ್ರೇಮಿಗಳ ದಿನ , ಸಖಿಯ ನೆನೆಯುವ ನಿಮ್ಮ ಹೆಸರು ಪುನ: ಕ0ಡಿತಲ್ಲ ಸ0ಪದದ ಗೋಡೆಯ ಮೇಲೆ !
ಸುಸ್ವಾಗತ ಪುನಹ ನಿಮ್ಮದೆ ಮನೆಗೆ !
In reply to ವಾಹ್ by partha1059
ಧನ್ಯವಾದಗಳು.
ಧನ್ಯವಾದಗಳು.
ಪ್ರಯತ್ನಿಸುತ್ತೇನೆ ಇಲ್ಲಿಯೂ ಇರಲು.
"ಮನೆಯೊಳಗಿನ ಪ್ರೀತಿ ಪ್ರೇಮ
"ಮನೆಯೊಳಗಿನ ಪ್ರೀತಿ ಪ್ರೇಮ ಇವೆಲ್ಲವೂ
ಸದಾ ಇರಲಿ ಮನೆಯ ಗೋಡೆಗಳ ನಡುವೆ
ಪ್ರೀತಿ ಭಕ್ತಿಗಳೆಂದಿಗೂ ಖಾಸಗಿಯಾಗಿರಲಿ
ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!”"
;()))೦
ಅಬ್ಬ..! ಅಂತೂ ಮರಳಿದಿರಿ ...!!
ಫೆಸ್ಬುಕಲಿ ನಿಮ್ಮ ಬ್ಲಾಗಲಿ ಸಕ್ರಿಯರಾಗಿರುವ ನೀವ್ ಈ ಮಧ್ಯೆ ಸಂಪದದಲ್ಲಿ ಕಾಣಿಸಿದ್ದು ಕಡಿಮೆ..!
ನಿಮಂ ಬರಹ ನಾ ಅರ್ಥೈಸಿಕೊಂಡಂತೆ
ಪ್ರೇಮಿಗಳಿಗಾಗಿ -ಪ್ರೀತಿಸುವವರಿಗಾಗಿ ಈ ಒಂದು ವಿಶೇಷ ಸಿನ ಯಾಕೆ ಅಂತ...!
ಹಾಗೆ ಮಾಡುವವರಿಗೆ ಪ್ರತಿದಿನವೂ ಪ್ರೇಮಿಗಳ ದಿನ -ಇಲ್ಲವಾದರೆ ಎಂದೋ ಒಂದಿನದ ಈ ಪ್ರೀತಿ ತೋರಿಕೆಯ ಕಾಟಾಚಾರದ ಪ್ರೀತಿ ಆಗುತ್ತೆ...!!
ಶುಭವಾಗಲಿ..
\।
In reply to "ಮನೆಯೊಳಗಿನ ಪ್ರೀತಿ ಪ್ರೇಮ by venkatb83
ಧನ್ಯವಾದಗಳು.
ಧನ್ಯವಾದಗಳು.
ಇಂದು ಮಾತ್ರ ಇರ್ತೇನೆ ಅಂತ ನಾನೆಲ್ಲೂ ಹೇಳಿಲ್ಲ.
ಬಾರದೇ ಇದ್ದುದಕ್ಕೆ ಕಾರಣ ಏನೆಂದು ಯಾರೂ ಕೇಳಿಲ್ಲ.
ಕೇಳಿದ್ದರೆ ಹೇಳುತ್ತಿದ್ದೆ.
ಕಾಟಾಚಾರವೋ, ತೋರಿಕೆಯ ಪ್ರೀತಿಯೋ, ಏನಾದರೂ ಅನ್ನಿ.
ತಮಗೂ ಶುಭವಾಗಲಿ.