ಗೊಂದಲಮಯ ಸಾಹಿತ್ಯಿಕ ವಾತಾವರಣ

ಗೊಂದಲಮಯ ಸಾಹಿತ್ಯಿಕ ವಾತಾವರಣ

ಸಾಹಿತ್ಯ, ಕಲೆ, ಅಭಿರುಚಿ, ಹವ್ಯಾಸಗಳು ಇವು ಸಾಂಸ್ಕೖತಿಕ ವಲಯದ ಪ್ರತಿಬಿಂಬಗಳಾಗಿವೆ. ಹಲವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿ ಬೆಳೆಯುತ್ತಿರುವ ಉತ್ತಮ ಆಸಕ್ತಿಗಳಿಗೆ ಕಡಿವಾಣ ಹಾಕುವ ಹಕ್ಕು ಯಾರಿಗೂ ಇರುವುದಿಲ್ಲ. ಆದರೆ ಸಾಹಿತ್ಯ ಎಂಬ ಪದ ಇತ್ತೀಚಿನ ದಿನಗಳಲ್ಲಿ ದುಬ೯ಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ.

ಕನ್ನಡಪರ ಸಂಘ, ಸಂಸ್ಥೆಗಳಲ್ಲಿರುವ ಅನೇಕರು ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಇಲ್ಲದೆ ತೋರಿಕೆಗಾಗಿ ಕಸಾಪಗಳಂಥ ಸಕಾ೯ರಿ ಅಂಗ ಸಂಸ್ಥೆಗಳಲ್ಲಿ ಜಿಲ್ಲಾ, ತಾಲ್ಲೂಕಾ ಅಧ್ಯಕ್ಷರುಗಳಾಗಿದ್ದಾರೆ. ಕಾಟಾಚಾರಕ್ಕೆಂಬಂತೆ ಕೆಲವೆಡೆ ಕಾಯ೯ಕ್ರಮಗಳು ಏಪ೯ಡಿಸುತ್ತಿರುವುದು ಯಾವ ಪುರಷಾಥ೯ಕ್ಕಾಗಿ ಎಂಬಂತಾಗಿದೆ.

ಹಲವೆಡೆ ಯುವ ಬರಹಗಾರರನ್ನು ಬೆಳೆಸಬೇಕೆಂಬ ಹಂಬಲ ವ್ಯಕ್ತಪಡಿಸುವ ಸಂಘಟಕರ ಉದ್ದೇಶ ವೇದಿಕೆಗಳಿಗಷ್ಟೇ ಅವರ ವಿಚಾರಗಳು ಶೀಮಿತವಾಗಿ ಉಳಿದಿವೆ. ಹಲವೆಡೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸಂಘಟಕರಿಂದ ದೂರವೇ ಉಳಿಯಬೇಕಾದ ಕಾಲ ಸೖಷ್ಟಿಯಾಗಿದೆ.

ಪ್ರತಿಭಾವಂತರನ್ನು ಗುರುತಿಸುವ ಕಾಯ೯ವನ್ನು ಮಾಡದೇ ಸಂಘಟನಾ ಚತುರರು ನಡೆದದ್ದೇ ದಾರಿ ಎನ್ನುವ ಹಾಗೆ ಅವರು ಗುರುತಿಸುವ ವ್ಯಕ್ತಿಗಳನ್ನೇ ವೈಭವ ಪೂರಿತವಾಗಿ ಪ್ರಚಾರಕ್ಕೆ ಚಾಲನೆ ಕೊಡುತ್ತಿರುವುದು ಎಷ್ಟು ಸರಿ ಎಂಬುದನ್ನು ಪ್ರಶ್ನಿಸುವಂತಾಗಿದೆ.

ಇಲ್ಲದ ಪ್ರತಿಭೆಗಳಿಗೆ ಕೊಡುತ್ತಿರುವ ಪ್ರಚಾರದಿಂದ ಮಯಾ೯ದಸ್ಥ ಜನಾಂಗ ತಲೆ ತಗ್ಗಿಸುವಂತಾಗಿದ್ದು, ಮೂಲ ಪ್ರತಿಭೆಗಳ ಬೆಳವಣಿಗೆಗೆ ಅಡ್ಡಗೋಡೆಯಾಗಿ ನಿಂತಿದ್ದಾರೆ. ವಿಪಯಾ೯ಸದ ಸಂಗತಿ ಎಂದರೆ ಪ್ರತಿಭೆಗಳು ಕತ್ತಲಲ್ಲೇ ಉಳಿದು, ಜೀವಂತ ಕೊಲೆಯಾಗುತ್ತಿರುವ ನೋವಿನ ಸಂಗತಿ ಘಾಸಿಗೊಳಿಸುವಂತಾಗಿದೆ.

ಪ್ರತಿಭಾ ಸಾಮಥ್ಯ೯ ಉಳ್ಳವರು ಮುಂದೊಂದು ದಿನ ಮೂಲೆಗುಂಪಾಗುವ ಕಾಲ ದೂರವಿಲ್ಲ ಎನಿಸುತ್ತಿದೆ. ಬುದ್ಧಿಜೀವಿಗಳು ಆತಂಕ ಪಡುವಂಥ ವಿಷಯ ಇದಾಗಿರುವುದರಿಂದ ಹಲವರಲ್ಲಿ ಕನ್ನಡಪರ ಸಂಘಟನೆಗಳೆಂದರೆ ವಿಷಾದದ ಛಾಯೆ ಮೂಡಿಸಿಕೊಂಡು ಭರವಸೆ ಕಳೆದುಕೊಳ್ಳುತ್ತಿದೆ.

ಸಾಹಿತ್ಯ, ಕಲೆ, ಸಾಂಸ್ಕೖತಿ ಎನ್ನುವುದು ಅವರವರ ಕೌಟುಂಬಿಕ ಸಮ್ಮತಿ ಮೇರೆಗೆ ಮಾತ್ರ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳು, ಪುಸ್ತಕ ಬಿಡುಗಡೆ ಸೇರಿದಂತೆ ಹಲವು ಜನಪರ ಕಾಯ೯ಕ್ರಮಗಳು ಇಂದಿನ ದಿನಗಳಲ್ಲಿ ಮಹತ್ವವನ್ನು ಕಳೆದುಕೊಳ್ಳುತ್ತಿವೆ.

ಯಾರಿಗಾಗಿ ಮತ್ತು ಯಾತಕ್ಕಾಗಿ..? ಯಾರ ಉದ್ಧಾರಕ್ಕಾಗಿ, ಉಪಯೋಗಕ್ಕೆ ಬರುತ್ತಿದೆ ಎಂಬುದೆಲ್ಲ ಗೊಂದಲಮಯ ವಾತಾವರಣ ಸೖಷ್ಠಿಯಾಗಿದೆ. ಸಾಹಿತ್ಯಿಕ ವಲಯದಲ್ಲಿ ಈಗಾಗಲೇ ಕವಿ, ಸಾಹಿತಿ ಎನಿಸಿಕೊಂಡವರು ಜಾತಿ ಲೆಕ್ಕಾಚಾರದ ಮೇಲೆ ಬೆಳೆಯುತ್ತಿರುವುದು ಸಮಾಜದ ಬಹು ದೊಡ್ಡ ದುರಂತವಾಗಿದೆ.

ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು ಹೇಗೋ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಸ್ವಸಾಮಥ್ಯ೯, ಪರಿಶ್ರಮದಿಂದ ಪ್ರಕಟಿಸಿ ತೖಪ್ತಿ ಹೊಂದುತ್ತಾರೆ ನಿಜ. ಆದರೆ ಕನಿಷ್ಠವಾಗಿ ಅವರದೇ ಆದ ಜಿಲ್ಲಾ, ತಾಲ್ಲೂಕಾ ಕೇಂದ್ರಗಳಲ್ಲಿ ಈಗಾಗಲೇ ಮಾಧ್ಯಮಗಳಿಂದ ಬೆಳೆದವರನ್ನು ಗುರುತಿಸುವ ಕಾಯ೯ ನಡೆಯದೇ ಇರುವುದು ವಿಪಯಾ೯ಸವಾಗಿದೆ.

ಬರೆಯಲು ಬಾರದವರಿಗೂ ಸಹ ಸಾಹಿತಿ ಎಂಬ ಪಟ್ಟ, ನಾಲ್ಕಾರು ವಷ೯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮಾತ್ರಕ್ಕೆ ಪ್ರೊಫೆಸರ್ ಎಂಬ ಬಿರದುಗಳು, ಎಂಫಿಲ್ ಮುಗಿಸಿದ ಮಾತ್ರಕ್ಕೆ ಡಾಕ್ಟರೇಟ್ ಪದವಿ (ಸಾಧನೆ ಗುರುತಿಸಿ ನೀಡಿದರೆ ತಪ್ಪಾಗಲಾರದು) ಇಲ್ಲದವರನ್ನು ನೀಡುತ್ತಿರುವುದು ಯಾವ ಮಾನದಂಡಗಳಿಂದ ಎನ್ನಲಾಗುತ್ತಿದೆ.

ಜಾತಿ ರಾಜಕಾರಣ ಹೆಚ್ಚಾಗಿರುವ ಈ ಸದಂಭ೯ದಲ್ಲಿ ನೈಜ ಪ್ರತಿಭೆಯುಳ್ಳವರಿಗೆ ಮಣೆ ಹಾಕುವ ಸಾಹಸಕ್ಕೆ ಮೀನಾಮೇಷ ಏಣಿಸುತ್ತಿರುವುದು ಜಾತಿ ರಾಜಕೀಯ ನೆಲೆ ನಿಂತಿದೆ. ಆದ್ದರಿಂದ ಅವನು ಯಾವ ಜಾತಿಯವನು, ನಮ್ಮವನಾದರೆ ಹೇಳಿ ಕಾಯ೯ಕ್ರಮವೊಂದರಲ್ಲಿ ಸನ್ಮಾನ, ಪ್ರಶಸ್ತಿ ಘೋಷಿಸೋಣ ಎಂಬಂಥ ಮಾತುಗಳು ಹಲವೆಡೆ ಚಚೆ೯ಯಲ್ಲಿವೆ.

ದುಡ್ಡು ಕೊಟ್ಟರೆ ಪ್ರಶಸ್ತಿಗಳು ಮಾರಾಟವಾಗುತ್ತಿರುವ ಈ ಕಾಲದಲ್ಲಿ ಬಡ ಪ್ರತಿಭಾವಂತರನ್ನು ಅಷ್ಟು ಸುಲಭವಾಗಿ ಹಾಗೂ ವೇಗವಾಗಿ ಬೆಳೆಸಬೇಕಾದ ಕಾಲ ಇದಲ್ಲ. ಏನಿದ್ದರೂ ದುಡ್ಡಿದ್ದವರಿಗೆ ಡಾಕ್ಟರೇಟ್ ಸಿಗುತ್ತೆ, ರಾಜ್ಯ ರಾಷ್ಟ್ರ ಪ್ರಶಸ್ತಿಗಳು, ಸನ್ಮಾನ ಬಿರುದುಗಳು ಅವರ ಪಾಲಾಗುತ್ತವೆ ಎನ್ನಬಹುದು.

ಉತ್ತಮ ಬರಹಗಾರರನ್ನು, ಕಲಾವಿದರನ್ನು ಹೊರ ಜಗತ್ತು ಗುರುತಿಸುವಂತಿದ್ದರೂ ಒಳ ಜಗತ್ತಿನಲ್ಲಿ ನಡೆಯುವ ಶಿಫಾರಸ್ಸುಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ತನ್ನ ಸುತ್ತಲಿನ ಪರಿಸರದ ಪ್ರತಿಷ್ಠಿತ ವ್ಯಕ್ತಿಗಳು, ಸಂಘ-ಸಂಸ್ಥೆಗಳಲ್ಲಿರುವವರ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣವೆನ್ನಬಹುದು.

ಹಿಂದುಳಿದ, ಬಡ ಕುಟುಂಬದ ಬರಹಗಾರರು, ಕಲಾವಿದರು ಬೆಳಕಿಗೆ ಬಾರದೇ ಕತ್ತಲೆಯಲ್ಲಿಯೇ ತಮ್ಮ ಭವಿಷ್ಯದ ಹುಡುಕಾಟ ನಡೆಸುವಂತಾಗಿರುವ ಕಾಲದಲ್ಲಿ ತಾಲ್ಲೂಕಾ, ಜಿಲ್ಲಾ ಕೇಂದ್ರಗಳಲ್ಲಿರುವ ಅನೇಕ ಉತ್ತಮ ಬರಹಗಾರರಿಗೆ ಸೌಜನ್ಯಕಾದರೂ ಕೇಳುವವರಿಲ್ಲದೇ ವೇದಿಕೆಗಳು ಸಿಗುತ್ತಿಲ್ಲ.

ಯಾವುದೇ ಕಾಯ೯ಕ್ರಮಗಳನ್ನು ಏಪ೯ಡಿಸುವ ಕನ್ನಡಪರ ಚತುರರು, ಸಂಘಟಕರು ಶುದ್ಧ ಸ್ವಾಥ೯ ಜೀವನ ಮೈಗೂಡಿಸಿಕೊಂಡಿರುವುದರಿಂದ ದಿಢೀರನೇ ಕಾಯ೯ಕ್ರಮಗಳನ್ನು ಏಪ೯ಡಿಸಲಾಗುತ್ತಿದೆ. ಏಕಾಏಕಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಹಪಾಹಪಿತನ, ಪ್ರಚಾರ ಪ್ರಿಯತೆ ನೆಚ್ಚಿಕೊಂಡಿದ್ದಾರೆ.

ಸಾಹಿತ್ಯಿಕ ಚಟುವಟಿಕೆಗಳ ಕುರಿತು ವಿಶ್ಲೇಷಣೆ ಮಾಡುತ್ತಾ ಹೋದಂತೆ ಲೆಕಕ್ಕೆ ಸಿಗಲಾರದಷ್ಟು ವಿವಾದ, ಹಗರಣಗಳು ಸಾಹಿತ್ಯ ಕ್ಷೇತ್ರದಲ್ಲಿ ಅನಿಷ್ಠಗಳು ನೆಲೆ ನಿಂತಿವೆ. ಸಾಹಿತ್ಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ತಾವೊಬ್ಬರೇ ಬೆಳೆಯಬೇಕು, ಹೊಸ ಪ್ರತಿಭೆಗಳನ್ನು ಬೆಳೆಸಬಾರದೆಂಬ ಭಾವನೆ ಹೆಚ್ಚಾಗಿದೆ. ಜಾತಿ ತಾರತಮ್ಯ ಸಂಘಟಕರಲ್ಲಿ ಮನೆ ಮಾಡಿಕೊಂಡಿದೆ. ಉಳ್ಳವರನ್ನು ಮಣೆ ಹಾಕುವ ಚಾಳಿ ಮುಂದೊರೆಸಿರುವವರು ಪ್ರತಿಭೆ ಉಳ್ಳವರನ್ನು ಮಣೆ ಹಾಕಿದಿರುವುದು ನಾಚಿಕೇಡಿನ ಸಂಗತಿಯೆಂದರೆ ತಪ್ಪಾಗಲಾರದು.

ಒಳ್ಳೆಯ ಬರಹಗಾರನಾಗಿ ಬೆಳಯಲು ಯಾವುದೇ ವೇದಿಕೆ ಮುಖ್ಯವಲ್ಲ. ವ್ಯಕ್ತಿ, ಸಂಘಟನೆಗಳು ಪ್ರಮುಖವಲ್ಲ. ಬರೆಯುವವನ ಬರವಣಿಗೆಯಲ್ಲಿ ವಾಸ್ತವಿಕತೆಯ ತಾಕತ್ತು, ಗ್ರಾಮೀಣ ಪ್ರದೇಶದ ಜನಜೀವನ, ಸ್ವಂತಿಕೆ, ಬರಹದಲ್ಲಿ ಜೀವಂತಿಕೆ ಇದ್ದು, ಗಟ್ಟಿತನದಿಂದ ಕೂಡಿದ್ದರೆ ಬರಹಗಾರ ಎಲ್ಲಿ ಬೇಕಾದರೂ ಸಲ್ಲುತ್ತಾನೆ.

ಯಾವುದೇ ಸಂಘ-ಸಂಸ್ಥೆ ಪ್ರತಿಭಾವಂತನನ್ನು ಕೈ ಹಿಡಿದು ನಡೆಸುವುದಿಲ್ಲ. ಅವನಲ್ಲಿ ಛಲ, ಆತ್ಮವಿಶ್ವಾಸ, ಸಾಮಥ್ಯ೯, ಪರಿಶ್ರಮ ಇದ್ದರೆ ತನ್ನಷ್ಟಕ್ಕೆ ತಾನು ಬೆಳೆಯುತ್ತಲೇ ಹೋಗುತ್ತಾನೆ. ಪ್ರಚಾರದ ಅಮಲನ್ನು ಹತ್ತಿಸಿಕೊಂಡವನು ನೆಲಕೊರಗಿದರೆ ಪ್ರತಿಭಾವಂತ ತನ್ನ ಕನಸಿನ ಸಾಮ್ರಾಜ್ಯ ಕಟ್ಟುತ್ತಲೇ ಆಕಾಶದ ಏಣಿ ಹತ್ತುತ್ತಾನೆ.

ಸಾಹಿತ್ಯ ವಲಯದಲ್ಲಿ ರಾಜಕೀಯ ಬೆರೆಸುವುದು ಬೇಡ ಎನ್ನುವ ಹಿರಿಯ ಸಾಹಿತಿಗಳು (ಕೆಲವರನ್ನು ಹೊರತುಪಡಿಸಿ) ಮೇಧಾವಿಗಳ, ಗಣ್ಯರ ಭಾಷಣಗಳು ವೇದಿಕೆಗಳಿಗಷ್ಟೇ ಶೀಮಿತವಾಗಿ ಉಳಿದಿವೆ. ವಾಸ್ತವದಲ್ಲಿ ಭೊಗಳೆ ಸಾಹಿತಿಗಳಿಂದ ಸಾಹಿತ್ಯ ಎಂಬ ಪವಿತ್ರ ಪದದಲ್ಲಿ ಅಪವಿತ್ರವಾಗಿದೆ. ಆದ್ದರಿಂದ ಎಲ್ಲಾ ಕ್ಷೇತ್ರದಲ್ಲಿ ರಾಜಕೀಯ ಅರಾಜಕತೆ ಮೆರೆಯುತ್ತಿದೆ.

ಯಾರನ್ನು ಮನ ನೋಯಿಸಬೇಕೆಂಬ ಉದ್ದೇಶ ಲೇಖನದ್ದಲ್ಲ. ಬರಹಗಾರರ ಮೇಲೆ ನಡೆಯುತ್ತಿರುವ ಅನ್ಯಾಯ, ಶೋಷಣೆಗಳಿಂದ ಸಮಾಜ ಮುಕ್ತಿ ಹೊಂದುವುದೇ ಎಂಬ ಅಭಿಪ್ರಾಯ ಕೋಟಿ ಕನ್ನಡಿಗರದ್ದಾಗಿದೆ. ಅಸಮಾನತೆ ಎಂಬುದು ಹೀಗೆ ಮುಂದೊರೆದರೆ ಕನ್ನಡಕ್ಕೆ ಧಕ್ಕೆ, ಕನ್ನಡಿಗರಿಗೆ ಉಳಿಗಾಲವಿಲ್ಲ ಎಂದು ಭಾವಿಸಿದ್ದೇನೆ.

ಉತ್ತಮ ಅವಕಾಶಗಳಿಂದ ವಂಚಿತರಾದವರ ಪರವಾಗಿ, ಜನಪರ ಹಿತಕ್ಕಾಗಿ ನನ್ನ ಅನುಭವಗಳನ್ನಿಲ್ಲಿ ಅನಾವರಣಗೊಳಿಸಿದ್ದು, ವಾಸ್ತವದ ಸ್ಥಿತಿಗತಿ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯ ಕುರಿತು ಬರೆದಿರುವ ವಿಚಾರಗಳನ್ನಿಲ್ಲಿ ಸ್ಪಷ್ಟಪಡಿಸಿದ್ದೇನೆ.
 
ಹಲವರು ತಮ್ಮ ನುಡಿಯಂತೆ ಬದುಕನ್ನು ನಡೆಸಿದ್ದಾರೆ. ಈಗಲೂ ಉತ್ತಮ ಸಮಾಜ ನಿಮಾ೯ಣಕ್ಕೆ ಪಣತೊಟ್ಟಿರುವವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಉತ್ಸಾಹಿ, ಸಾಹಿತಿ, ಕಲಾವಿದರನ್ನು ಗುರುತಿಸಿ ವೇದಿಕೆ ಒದಗಿಸಿ ಕೊಡುವ ಕಾಯ೯ ನಡೆಯಬೇಕಾಗಿದೆ.

Comments

Submitted by partha1059 Fri, 02/15/2013 - 08:29

ಸಾಹಿತ್ಯವೊಂದೆ ಅಲ್ಲ ವೀರಣ್ಣನವರೆ ಈಗ ಎಲ್ಲ ಕ್ಷೇತ್ರವು ಇದೆ ರೀತಿ ಕುಲಶಿತಗೊಂಡಿದೆ ಕ್ರೀಡೆಯಲ್ಲಿ ರಾಜಕೀಯ ಪ್ರತಿಬೆ ಮುಖ್ಯವಲ್ಲ ಹೆಸರು , ಕೀರ್ತಿಯಷ್ಟೆ ಮುಖ್ಯ ಕ್ರೀಡೆಯಲ್ಲಿ ಉಳಿಯಲು ಇಲ್ಲದಿದ್ದರೆ ಕ್ರಿಕೇಟ್ ನಲ್ಲಿ ನಲವತ್ತು ವರ್ಷವಾದರು ಆಡಿಸುವ ಅಗತ್ಯವೇನಿದೆ ನಮ್ಮಲ್ಲಿ ಯುವಕರಿಲ್ಲವೆ , ಕ್ಯಾನ್ಸರ್ ಪೀಡಿತನಾದರು ಆಡಲೆ ಬೇಕಾದ ಅಗತ್ಯವಿದೆಯೆ ? ಅಲ್ಲಿ ಕರುಣೆಯ ಅಗತ್ಯವೆ ? ರಾಜಕೀಯದಲ್ಲಿ ರಾಜಕೀಯ ಅವರ ಅವರ ಮಕ್ಕಳೆ ನಾಯಕರು ಒಬ್ಬರು ಇನ್ನೊಬ್ಬರನ್ನು ದೂರಿದರು ಸಹ ಎಲ್ಲ ಪಕ್ಷದವರು ಅವರ ಮಕ್ಕಳು ಅಳಿಯರನ್ನು ಅದಿಕಾರಕ್ಕೆ ತರುತ್ತಿಲ್ಲವೆ ಸಿನಿಮಾದಲ್ಲಿ ಹೀರೊ ಹಾಗು ನಿರ್ದೇಶಕರ ಮಕ್ಕಳೆ ಮುಂದಿನ ನಾಯಕರು ಅವರದು ಎಷ್ಟೆ ಕೆಟ್ಟಮುಖವಾದರು ನಾಯಕಿ ಪ್ರೀತಿಸಬೇಕು, ಇಲ್ಲದಿದ್ದರೆ ಹೇಗೆ ಅವರೆ ಹಣ ಹಾಕಿ ತೆಗೆಯುವದಲ್ಲವೆ ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ಸಹ ಹಾಗೆ ಅವರ ಮಕ್ಕಳೆ ಮತ್ತೊಂದು ಉದ್ದೆಮೆ ಸ್ಥಾಪಿಸುವುದು ಹಾಗೆ ಇಲ್ಲಿಯು ರಾಜಕೀಯ ಅಲ್ಲವೆ, ಅದನ್ನು ಯಾರು ತಡೆಯಬೇಕು ? ಆದರೆ ರೈತನ ಮನ ರೈತನಾಗಲೊಲ್ಲ., ಕಾರ್ಮಿಕನ ಮಗ ಕಾರ್ಮಿಕನಾಗಲೊಲ್ಲ ಇದೆ ಮುಂದಿನ ದೇಶದ ಪರಿಸ್ಥಿತಿ ಆದರೆ ಓದಿದೆ ಒಂದು ವಾಕ್ಯ ಹೇಳಲೆ : ಸಾಹಿತ್ಯದಲ್ಲಿ ಕಸುವಿದ್ದರೆ ಅದು ಬದುಕಿಕೊಳ್ಳುತ್ತದೆ ಯಾರದ ವಶೀಲಿ ಇಲ್ಲದೆ ! ಹಾಗಿರುವಾಗ ಚಿಂತೆ ಬೇಡ. ನೀವು ನಿಮ್ಮ ಕಾಯಕವನ್ನು ಮುಂದುವರೆಸಿ. ಶುದ್ದ ಸಾಹಿತ್ಯದೆಡೆಗೆ ಮನಕೊಡಿ ಉಳಿದುದ್ದೆಲ್ಲ ಮರೆತುಬಿಡಿ
Submitted by ಆರ್ ಕೆ ದಿವಾಕರ Fri, 02/15/2013 - 10:54

ಸಾರ್ಥಕತೆ ಮುಗಿಸಿಕೊಂಡಿರುವ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನಗಳು ಆಗಿಮದಾಗ್ಗೆ ನಡೆಯುತ್ತವೆ; ಅವು, ವಿಶ್ವಾಮಿತ್ರ ಶಪಥದಂತಹ ಘನ-ಗಂಭೀರ ನಿರ್ಣಯಗಳನ್ನೂ ಕೈಗೊಳ್ಳುತ್ತವೆ. ಪೇಪರ್‌ಗಳಲ್ಲಿ ತಲೆಬರಹ ಸುದ್ದಿಯಾಗಿ ಬಂದ ನಂತರ ಮುಗಿದುಹೋಯಿತು. ನಿರ್ಣಯಗಳು ಆಲಂಕಾರಿಕ; ಅನುಷ್ಠಾನವೆನ್ನುವುದು ಕಾಟಾಚಾರಕ್ಕೂ ಇಲ್ಲ! ಊಟದ ವ್ಯವಸ್ಥೆ ಚೆನ್ನಾಗಿರಲಿಲ್ಲ; ಮಾಡಿಟ್ಟಿದ್ದ ಅನ್ನ-ರೊಟ್ಟಿಗಳು ವೇಸ್ಟಾದವು; ಕೈತೊಳೆಯಲು ನೀರಿಲ್ಲ; ಊಟದ ಸ್ಥಳ ನಾರುತ್ತಿತ್ತು ಇತ್ಯಾದಿ ಇತ್ಯಾದಿ ದುರ್ವಾಸನೆಗಳಲ್ಲಿ, ಸಮ್ಮೇಳನದ ನಿರ್ಣಯಗಳಿಗಾದರೂ ಹೊಸ ಸ್ಪಂದನ ಎಲ್ಲಿಂದ ಬರಬೇಕು? ಇನ್ನು, ಅವುಗಳನ್ನು ಈಡೇಲೇಬೇಕೆಂಬ ಛಲ, ಯಾರಿಗಿಲ್ಲ-ಯಾರಿಗುಂಟು? ಈವೊತ್ತೂ ಕಸಾಪ ಎಮಬ ಸಂಸ್ಥೆಯೇನೋ ಅಸ್ತಿತ್ವದಲ್ಲಿದೆ.ಆದರೆ ಅದರ ಸಾರ್ಥಕತೆ, ನಟ-ನಟಿಯರ ಅಭಿಮಾನಿ ಸಂಘ, ಕಟ್ಟೆ ಬಳಗ, ಗುರರಾಜ ಪೂಜಾ ಸಮಿತಿ ಮುಂತಾದ ತತ್ಕಾಲೀನ ತಂಡಗಳಿಗಿಂತಾ ಮಹತ್ವದ್ದೆನೂ ಆಗಿ ಉಳಿದಿಲ್ಲ. ಘನತೆವೇತ್ತರು, ೧೯೧೫ರ ಸುಮಾರಿಗೆ ಗುರು (ಗೌರವಾನ್ವಿತರು)-ಹಿರಯರು ಯಾವ ಉತ್ಸಾಹದಿಂದ ಪರಿಷತ್ತನ್ನು ಸ್ಥಾಪಿಸಿದರೋ ಅದನ್ನೇ, ಸಂಸ್ಥೆ, ಈಗಲೂ ಬಡಬಡಿಸುವಂತೆ ಭಾಸವಾಗುತ್ತದೆ. ನಂತರದ ಸಾದನೆಯ ಬಗ್ಗೆಯೂ ಅದಕ್ಕೆ ಹೆಮ್ಮೆಯಿಲ್ಲವೇನೋ?!ಈಗಲಾದರೋ ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿಗಾಗಿ ಇಲಾಖೆಯನ್ನೇ ರಚಿಸಿದೆ; ಅಡಳಿತ ಭಾಷೆ ಬಹುತೇಕ ಕನ್ನಡವಾಗಿದೆ; ನಿಘಂಟು ಮತ್ತು ಪಠ್ಯಪುಸ್ತಕ ಮುಂತಾದವುಗಳ ಪ್ರಕಟನಣೆ ವ್ಯವಸ್ಥಿತವಾಗಿ ನಡೆದಿದೆ. ಅದಕ್ಕೆಲ್ಲಾ ತನ್ನ ಮತ್ತು ಧಾರವಾಡದ ವಿದ್ಯಾವರ್ಧಕ ಸಂಘದಂಥವುಗಳ ಛಲವಂತಿಕೆಯೇ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪ್ರೇರಣೆ ಮತ್ತು ಕರಣ ಎಂಬುದನ್ನೂ ಇದು ಮರೆತುಬಿಟ್ಟಂತಿದೆ. ವ್ಯಕ್ತಿಗಳಿಗೆ ವಯಸ್ಸಾಗಿ ಅವರೆಲ್ಲಾ ಸತ್ತೂ ಹೋಗಿದ್ದಾರೆ. ಆದರೆ ಪರಿಷತ್ತಿನಂತಹ ಸಂಘಟನೆಗಳು ಜೀವಂತವಿರಬೇಕಲ್ಲವೇ? ಈಗ ಕರ್ನಾಟಕವೆಂಬ ಭಾಷಾವಾರು ಪ್ರಾಂತ್ಯ ನಿರ್ಮಾಣವಾದದ್ದೇ ಇಂತಹ ಸಂಘಟನೆಗಳ ಒತತಾಸೆಯಿಂದ. ಆದರೀಗ ಕಸಾಪ, ಅದರ ಸಾಕ್ಷೀಪ್ರಜ್ಞೆಯಾಗಿದೆಯೇ? ಆತ್ಮಸಾಕ್ಷಿಯಾಗಿದೆಯೇ? ನೆಲ-ಜಲದ ಬಗೆಗಿನದು ಮೊಸಳೆ ಕಣ್ಣೀರಿನ ಪುನರಾವರ್ತಿತ ನಿರ್ಣಯವೇನೋ ಈಗಲೂ ಇದೆ. ಆದರೆ ವ್ಯಾವಹಾರಿಕವಾಗಿ, ನಾಡಿನ ಅಸ್ತಿತ್ವವೇ ತೋಪೆದ್ದುಹೋಗುವಂತಹ ಶಿಕ್ಷಣ ನೀತಿಯನ್ನು, ಖಂಡಿಸುವ ಕಾಲಜ್ಞಾನ, ಇಲ್ಲಿ ಇನ್ನಷ್ಟು ಗಾಢವಾಗಿರಬೇಕಿತ್ತಲ್ಲವೇ?
Submitted by ವೀರಣ್ಣ ಮಂಠಾಳಕರ್ Thu, 02/28/2013 - 15:48

ಧನ್ಯವಾದಗಳು ದಿವಾಕರ್ ಸರ್ ಮತ್ತು ಪಾಥ೯ ಸರ್, ಪ್ರವೀಣ ಕುಲಕಣಿ೯ ಸರ್ ಅವರುಗಳೆಲ್ಲಾ ಲೇಖನಕ್ಕೆ ಅಭಿಪ್ರಾಯ ಬರೆದಿದ್ದಕ್ಕೆ ಮತ್ತು ಬರೆಯುವ ಎಲ್ಲರಿಗೂ ಅಭಿನಂದನೆಗಳು