ಹಲಸಿನ ಕಾಯಿ ಹಪ್ಪಳ

4.2
ಬೇಕಿರುವ ಸಾಮಗ್ರಿ: 

ಹಲಸಿನ ತೊಳೆ, ಮೆಣಸಿನಕಾಯಿ ಪುಡಿ, ಉಪ್ಪು, ಕೊಬ್ಬರಿ ಎಣ್ಣೆ

ತಯಾರಿಸುವ ವಿಧಾನ: 

ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣಸಿನಕಾಯಿಪುಡಿಯನ್ನು ಮತ್ತು ಉಪ್ಪನ್ನು ಹಾಕಿ, ಒನಕೆಯಿಂದ ಕುಟ್ಟಬೇಕು ಅಥವಾ ಮಿಕ್ಸಿಯಲ್ಲಿ ಹಾಕಿ ತಿರುವಬೇಕು - (ಚಪಾತಿ ಹಿಟ್ಟಿನ ರೀತಿ). ಅದನ್ನು, ಚಪಾತಿ ಮಾಡುವ ರೀತಿ, ಉಂಡಗಳನ್ನಾಗಿ ಮಾಡಿ, ಎರಡು ಮಣೆಗಳ ಮಧ್ಯೆ ಪ್ಲಾಸ್ಟಿಕ್ ಹಾಳೆಗಳ ನಡುವೆ ಅಥವಾ ಬಾಳೆ ಎಲೆಗಳ ಮಧ್ಯೆ ಇಟ್ಟು ಚಪಾತಿಯ ಆಕಾರಕ್ಕೆ ತರಬೇಕು. ಪ್ಲಾಸ್ಟಿಕ್ ಹಾಳೆಗೆ ಆ ಹಿಟ್ಟು ಅಂಟದಂತೆ ಮಾಡಲು, ತೆಂಗಿನ ಎಣ್ಣೆಯನ್ನು ಸವರಿಕೊಳ್ಳಬಹುದು. ಪ್ಲಾಸ್ಟಿಕ್ ಹಾಳೆಯ ಸಹಿತ ಅದನ್ನು ಬೇರೊಂದು ದೊಡ್ಡ ಚಾಪೆಗೆ ಅಥವಾ ಪ್ಲಾಸ್ಟಿಕ್ ಹಾಳೆಗ ವರ್ಗಾಯಿಸಿ (ಅಂಟಿಸಿ), ಒಣಗಿಸಬೇಕು. ಹಲವಾರು ಹಸಿ ಹಪ್ಪಳಗಳನ್ನು ಅಂಟಿಸಿದ ಚಾಪೆ ಅಥವಾ ದೊಡ್ಡ ಹಾಳೆಯನ್ನು ಎರಡು ಅಥವಾ ಮೂರು ದಿನ ಉತ್ತಮ ಬಿಸಿಲಿನಲ್ಲಿ ಒಣಗಿಸಿ, ತೆಗೆದಿಟ್ಟುಕೊಳ್ಳಬೇಕು. ಚೆನ್ನಾಗಿ ಒಣಗಿದ ಹಪ್ಪಳಗಳು ನಾಲ್ಕಾರು ತಿಂಗಳುಗಳ ತನಕ ಉಪಯೋಗಕ್ಕೆ ಬರುತ್ತದೆ. ಒಣಗಿದ ಹಪ್ಪಳವನ್ನು ಎಣ್ಣೆಯಲ್ಲಿ ಕರಿದು ಅಥವಾ ಕೆಂಡದಲ್ಲಿ (ಗ್ಯಾಸ್ ಸ್ಟೌ ನಲ್ಲಿ) ಸುಟ್ಟು ತಿನ್ನಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು