ಕವಿತೆ : ಅನನ್ಯ ಭಾವ

ಕವಿತೆ : ಅನನ್ಯ ಭಾವ

ಏಕೊ ಅನಿಸುತ್ತದೆ ಯಾವುದು ಹೊಸತಲ್ಲ
ಯಾವುದು ನನ್ನದಲ್ಲ 

ನನ್ನ ಕಲ್ಪನೆಗಳು ಅನುಭವಗಳು ನನ್ನವಲ್ಲ 
ಎಂದೊ ಯಾರೊ ಕಲ್ಪಿಸಿದ್ದು ಅನುಭವಿಸಿದ್ದು
ನನ್ನ ಸುಖ ದುಃಖ ಅನುಭವಿಸುವ ದೇಹಭಾವ 
ಮನುಜ ಕುಲದ ಜೊತೆಜೊತೆಗೆ ಹರಿಯುತ್ತಿರುವ ಭಾವ 
ನನ್ನ ಆಲೋಚನೆಗಳು ಬುದ್ದಿವಂತಿಕೆ 
ಸಾಗರದ ಅಲೆಗಳಂತೆ ಪ್ರಕೃತಿದತ್ತ ನನ್ನದಲ್ಲದ ಭಾವ
ನನ್ನ ಸಾಹಿತ್ಯ ರಚನೆ ಮಾಡುವ ಕೆಲಸ 
ಅಳು ನಗು ನಿದ್ದೆ ಯಾವುದು ನನ್ನದಲ್ಲ ಎನ್ನುವ ನಿಶಿದ್ದ ಭಾವ
ಸಮಸ್ತವು ನನ್ನದಲ್ಲದ ನನ್ನನೊಳಗೊಂಡ ಸಮಷ್ಟಿಯದು 
ಆದರೆ ಗೆಳತಿ 
ನನ್ನ ನಿನ್ನ ನಡುವಿನ ಮದುರಭಾವ ಮಾತ್ರ ನಮ್ಮಿಬ್ಬರದೆ
ಇಬ್ಬರ ನಡುವಿನ ಪ್ರೇಮಭಾವ ನಮ್ಮ ಸ್ವಂತದ್ದೆ
ಎಂದೊ ಯಾರೊ ಅನುಭವಿಸಿರದ , ಯಾರೊ ಕಲ್ಪಿಸಿರದ 
ಯಾರದೊ ಅಲೋಚನೆಗೆ ನಿಲುಕಿರದ ಅನನ್ಯ ಭಾವ 
ಕಲುಶಿತವಿಲ್ಲದ ಪರಿಶುದ್ದ ಭಾವ..

Rating
No votes yet

Comments

Submitted by Shobha Kaduvalli Wed, 02/20/2013 - 16:24

ಚೆನ್ನಾಗಿದೆ ಪಾರ್ಥರೆ, ಎಲ್ಲೋ ಒಂದು ಮೂಲೆಯಲ್ಲಿ ಅನಿಸುತ್ತದೆ... ಇದು ನಮ್ಮದೇ ಅನುಭವ ಎಂದು! ಕವನ ಚೆನ್ನಾಗಿದೆ.