ಜಮಾನಾದ ಜೋಕುಗಳು - ೨೨: ತಿಗಣೆ ಸಾಯಿಸುವ ಉಪಕರಣ!

ಜಮಾನಾದ ಜೋಕುಗಳು - ೨೨: ತಿಗಣೆ ಸಾಯಿಸುವ ಉಪಕರಣ!

ಒಮ್ಮೆ ಪೇಪರಿನಲ್ಲಿ ಜಾಹಿರಾತು ಕೊಟ್ಟಿದ್ದರು. "ತಿಗಣೆ ಕೊಲ್ಲುವ ಉಪಕರಣ ಕೇವಲ ಇಪ್ಪತ್ತು ರೂಪಾಯಿ ಮಾತ್ರ" ಇದೇನೋ ಗಮ್ಮತ್ತಿನ ವಿಷಯವೆಂದುಕೊಂಡು ನಮ್ಮ ಬಸ್ಯಾ ಕೂಡ ಅವರು ತಿಳಿಸಿದ ಅಡ್ರೆಸ್ಸಿಗೆ ಇಪ್ಪತ್ತು ರೂ.ಗಳನ್ನು ಮನಿಯಾರ್ಡರ್ ಮಾಡಿದ. (ನೆನಪಿರಲಿ ಇದು ೭೦-೮೦ರ ದಶಕಗಳಲ್ಲಿನ ಇಪ್ಪತ್ತು ರೂಪಾಯಿ!). ಸ್ವಲ್ಪ ದಿನಗಳಲ್ಲೇ ಬಸ್ಯಾನ ಹೆಸರಿಗೊಂದು ಪಾರ್ಸಲ್ ಬಂತು - ತಿಗಣೆ ಕೊಲ್ಲುವ ಉಪಕರಣಗಳನ್ನು ಮಾರುವ ಕಂಪನಿಯಿಂದ. ಬಸ್ಯಾ ಕುತೂಹಲದಿಂದ ಅದು ಹೇಗಿರಬಹುದೆಂದು ಥಟಕ್ಕನೆ ಪಾರ್ಸೆಲ್ಲನ್ನು ಒಡೆದು ನೋಡಿದ. ಅದರೊಳಗೆ ಎರಡು ನುಣ್ಣನೆಯ ಕಲ್ಲುಗಳು ಮತ್ತು ಒಂದು ಚೀಟಿ ಇದ್ದವು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು, " ನೀವು ತಿಗಣೆಯನ್ನು ಸರಿಯಾಗಿ ಈ ಎರಡು ಕಲ್ಲುಗಳ ಮಧ್ಯೆ ಇಟ್ಟು ಅಮುಕಿರಿ; ಆಗ ತಿಗಣೆ ಶಾಶ್ವತವಾಗಿ ಸತ್ತುಹೋಗುತ್ತದೆ" ಆ ಕಂಪನಿಯವರ ಬುದ್ಧಿವಂತಿಕೆಗೆ ನಗಬೇಕೋ ಇಲ್ಲಾ ಇಪ್ಪತ್ತು ರೂ.ಗಳನ್ನು ಕಳೆದುಕೊಂಡ ತನ್ನ ದಡ್ಡತನಕ್ಕೆ ಅಳಬೇಕೋ ತಿಳಿಯದೇ ಬಸ್ಯಾ ಹಣೀ ಹಣೀ ಬಡಕೊಂಡ. 

Rating
No votes yet

Comments

Submitted by veena wadki Mon, 02/25/2013 - 12:03

ಜಾಹಿರಾತಿಗೆ ಜಾರಿ, ಜೇಬು ಬರಿದಾಗಿಸಿಕೊಳ್ಳುವವರ‌ ಜಾಣತನಕ್ಕಾಗಿ ಕಲ್ಲುಗಳ‌ ಕೊಡುಗೆ.........ಚೆನ್ನಾಗಿದೆ ಶ್ರೀಧರ್ ಸರ್ :)

Submitted by makara Mon, 02/25/2013 - 21:37

In reply to by kavinagaraj

ಕವಿಗಳೇ, ನಾನು ಬಹುತೇಕ ಇಲ್ಲಿ ದಾಖಲಿಸುತ್ತಿರುವುದು ಆಗಿನ ಜಮಾನಾದ ಜೋಕುಗಳೇ. ಇವನ್ನು ಹಿರಿಯರು ನೆನಸಿಕೊಳ್ಳಲಿ ಮತ್ತು ಇಂದಿನ ಪೀಳಿಗೆಯವರು ಅಂದಿನದನ್ನು ತಿಳಿಯಲಿ ಎನ್ನುವ ಉದ್ದೇಶದಿಂದ. ಈ ಜೋಕನ್ನು ಓದಿ ನಿಮಗೂ ಅಂದಿನ ದಿನಗಳ ನೆನಪಾದದ್ದು ಖುಷಿಯ ವಿಚಾರ.

Submitted by venkatb83 Mon, 02/25/2013 - 17:15

ಜೀ ಬಹುಶ ನಿಮಗೂ ಗೊತ್ತಿರಬಹುದು-ಹೊಸ ಪುಸ್ತಕ-ಪತ್ರಿಕೆ ಕೊಂಡಾಗ ಅದರ ಒಳಗಡೆ ಕೆಲ ಖಾಸಗಿ ವ್ಯಕ್ತಿಗಳು ಪೇಪರ್-ಪುಸ್ತಕ ಪತ್ರಿಕೆ ಹಂಚುವವರನ್ನು ಪುಸಲಾಯಿಸಿ ಹಣದ ಆಮಿಷ ತೋರಿಸಿ ತಮ್ಮ ಖಾಸಗಿ ಮುದ್ರಿತ ಜಾಹೀರಾತುಗಳನ್ನು ಇಡುವರು-ಅದರಲ್ಲಿ ತೀರ ಸರಳ ೩-೪ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಿಸಿ ಅವರಿಗೆ ವಾಪಸ್ಸು ಕಳಿಸಲು ತಾವೇ ಪೂರ್ವದಲ್ಲಿ ಹಣ ಪಾವತಿಸಿದ ಅಥವಾ ಆಮೇಲೆ ಪಾವತಿಸುವ ಹಾಗೆ ವ್ಯವಸ್ಥೆ ಮಾಡಿದ ಲಕೋಟೆ ಇಡುವರು-ಒಂದೊಮ್ಮೆ ನಾನೂ ಅದಕೆ ಉತ್ತರಿಸಿ ಆ ಪೇಪರ್ನ ಅಂಚೆ ಪೆತ್ತಿಎಗ್ಗೆ ಹಾಕಿದ್ದೆ-ಕೆಲ ದಿನಗಳ ನಂತರ ಮನೆಗೆ ಒಂದು ದೊಡ್ಡ ಬಾಕ್ಸ್ ಬಂತು-ಆದರೆ ಅದಾಗಲೇ ನಾ ಕೆಲ ಪೇಪರ್ಗಳಲ್ಲಿ ಈ ತರಹದ ಪೆಟ್ಟಿಗೆಯಲ್ಲಿ ಕಲ್ಲು-ಇಟ್ಟಿಗೆ-ರಟ್ಟು ಇತ್ತು ಮೋಸ ಮಾಡಿದ ಘಟನೆಗಳ ಬಗ್ಗೆ ಓದಿದ್ದೆ -ಹೀಗಾಗಿ ಅಂಚೆಯವ್ನಿಗೆ ಆ ಬಾಕ್ಸ್ ನನಗೆ ಬೇಡ ಅನ್ದೆಅವನು ತಾನೇ ಒಯ್ದು ಹಣ ಪಾವತಿಸಿ ಓಪನ್ ಮಾಡಿದ......ಒಳಗೆ ಟೀ ವಿ ಇತ್ತಾ ??? ದೇವರಾಣೆ ಇರಲಿಲ...!!
ಇದ್ದದ್ದು ಕಾರ್ಡ್ ಬೋರ್ಡ್ ಬಾಕ್ಸ್...;(((
ಇಂಗು ತಿಂದ ಮಂಗ ಅವನಾದ....ನಾ ಬಚಾವ್ ಆದೆ..>!
ಹೀಗೆ ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡುವವರೂ ಇರುವರು...
ಆಶೆ ಆಮಿಷ ದುರಾಷೆಗೆ ಅಡ್ಡ ದಾರಿಯಲ್ಲಿ ಹಣ ಸಂಪಾದನೆಗೆ ಇಳಿದರೆ ಹೀಗೆ ಆಗೋದು...!!
ಈಗಲೂ ನನ್ನ ಮೊಬೈಲ್ಗೆ ಮೇಲ್ಗೆ ದಿನವೂ ೧೦೬ ಮೆಸೇಜ್ ಬರುತ್ತವೆ ೦೦ಕೋಟಿ ೧೦೦ ಕೋಟಿ ಗೆದ್ದಿರುವೆ ಎಂದು....
ಓದಿ ನಕ್ಕು ಸುಮ್ಮನಾಗುವೆ.!!

ಈ ಜೋಕು ಅಂದು ಇಂದು ಮುಂದೂ ಪ್ರಸ್ತುತವೇ.....
ಎರಡು ಕಲ್ಲಲ್ಲಿ ಕುಟ್ಟಿ ತಿಗಣೆ ಕೊಳ್ಳುವ ಕಲ್ಪನೆ ಮಾಡ್ಕೊಂಡು ನಕ್ಕಿದ್ದೆ ನಕ್ಕಿದ್ದು..;())))

ಶುಭವಾಗಲಿ..

\।

Submitted by makara Mon, 02/25/2013 - 21:42

In reply to by venkatb83

ಟೆಕ್ನಾಲಜಿ ಬೆಳೆದಂತೆ ಮೋಸಮಾಡುವುದೂ ಹೈಟೆಕ್ ವಿಧಾನದಲ್ಲಿ ರೂಪುಗೊಳ್ಳುತ್ತಿದೆ. ೧೯೭೦-೮೦ರ ದಶಕದಲ್ಲಿ ಕಸ್ತೂರಿಯಲ್ಲಿ ಒಂದು ಸರಳವಾದ ಮಾಯಾ ಚೌಕವನ್ನು ಕೊಡುತ್ತಿದ್ದರು ಅದನ್ನು ಭರ್ತಿ ಮಾಡಿ ಅವರು ಹೇಳಿದ ಅಡ್ರೆಸ್ಸಿಗೆ ಮನಿಯಾರ್ಡರ್ ಮಾಡಿದರೆ ಅವರು ಒಂದು ರೇಡಿಯೋನೋ ಕ್ಯಾಮರಾನೋ ಆಫರ್ ಮಾಡುತ್ತಿದ್ದರು. ಅನೇಕ ವೇಳೆ ನೀವೆಂದಂತೆ V.P.P. ಕೂಡಾ ಕಳುಹಿಸುತ್ತಿದ್ದರು ಅದನ್ನು ಒಡೆದು ನೋಡಿದ ನಂತರವಷ್ಟೇ ನಾವು ಟೋಪಿ ಬಿದ್ದದ್ದು ಗೊತ್ತಾಗುತ್ತಿದ್ದದ್ದು. ಬಹುಶಃ ಇದನ್ನು ಬಲ್ಲ ಯಾರೋ ಬುದ್ಧಿವಂತರು ಈ ವಿಧವಾದ ಜೋಕು ಹೆಣೆದಿದ್ದಾರೆ. ಓದಿ ಮೆಚ್ಚಿಕೊಳ್ಳುವುದರೊಂದಿಗೆ ನಿಮಗಾದ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸಪ್ತಗಿರಿಗಳೆ.

Submitted by partha1059 Tue, 02/26/2013 - 08:46

In reply to by venkatb83

ಟೋಪಿ ಹಾಕುವರಿಗೆ ನೀವು ಟೋಪಿ ಹಾಕಿದ್ದೀರಿ... ಮೊದಲು ಲೆಟರ್ ಪೋಷ್ಟ್ ಮಾಡಿ ನ0ತರ‌ ಬಾಕ್ಸ್ ಬ0ದಾಗ‌ ಬೇಡ‌ ಎನ್ನುತ್ತ ಅವನಿಗೆ ತಿರುವು ಮ0ತ್ರ ಆದರೆ ನಿಮಗೆ ಎ0ದು ಕಳಿಸಿದ‌ ಟೋಪಿಯನ್ನು ನಿಮ್ಮ ಪೋಷ್ಟ್ ಮ್ಯಾನ್ ಹಾಕಿಕೊ0ಡದ್ದು ಮಾತ್ರ ...!!!! ಅಯ್ಯೊ ಪಾಪ‌ !!

Submitted by krishnarajb Tue, 02/26/2013 - 14:48

ಈ ಜೋಕು ತುಂಬಾ ಹಿಂದೆ DD ಕನ್ನಡದಲ್ಲಿ ಬರುತಿದ್ದ ಸೀತಾಪತಿ ಸಿಟಿ ಲೈಫ್ ಧಾರವಾಹಿಯಲ್ಲಿ ಬನ್ದಿತ್ತು. ಉಮೇಶ್ ಅದರ ಪಾತ್ರಧರಿಯಗಿದ್ದರು.. ಆಗ ನಾನು ತುಂಬಾ ಚಿಕ್ಕವನಿದ್ದರೂ, ನಾವೂ ಇದೇ ರೀತಿಯ ಜಾಹಿರಾತಿಗೆ ಮರುಲಾಗಿದ್ದರಿಂದ, ಧಾರಾವಾಹಿಯ ಕಥೆ ನೆನಪಿನಲ್ಲಿ ಉಲಿದಿದೆ...