ಜಮಾನಾದ ಜೋಕುಗಳು - ೨೪: ಕಣ್ಣು ತರೆಸಿದ ಗುರು?
ಒಬ್ಬ ಪ್ರಸಿದ್ದ ಸಂಗೀತ ವಿದ್ವಾಂಸನಿದ್ದ, ಅವನೊಂದು ದಿನ ತನ್ನ ಶಿಷ್ಯನೊಬ್ಬನ ಕಾಲಿಗೆ ಸಾಷ್ಟಾಂಗ ಪ್ರಣಾಮವೆರಗಿ ಅಡ್ಡ ಬಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ಶಿಷ್ಯ, "ಇದೇನು ಗುರುಗಳೇ ನೀವು ಯಾರಿಗೂ ತಲೆ ಬಾಗಿದವರಲ್ಲ, ಅಂಥಾದ್ದರಲ್ಲಿ ಇವನ ಕಾಲಿಗೆ ಬೀಳುವುದೆಂದರೇನು?" ಆಗ ಗುರುಗಳೆಂದರು, "ನನಗೆ ಯಾವ ಕತ್ತೆಗಾದರೂ ಸಂಗೀತ ಹೇಳಿಕೊಡಬಲ್ಲೆನೆಂಬ ಅಹಂಕಾರವಿತ್ತು. ನನ್ನ ಈ ಅಹಂಕಾರವನ್ನು ನಿಮ್ಮ ಸ್ನೇಹಿತ ಹೋಗಲಾಡಿಸಿ ನನ್ನ ಕಣ್ಣು ತೆರೆಸಿದ ಗುರುವಾಗಿದ್ದಾನೆ, ಅದಕ್ಕೇ ಅವನ ಕಾಲಿಗೆ ಎರಗಿದೆ!"
Rating
Comments
:))
:))
In reply to :)) by kavinagaraj
ಧನ್ಯವಾದಗಳು ಕವಿಗಳೆ.
ಧನ್ಯವಾದಗಳು ಕವಿಗಳೆ.
;())))
;())))
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಎನ್ನುವ ಗಾದೆಯೂ-ಮತ್ತು ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಗಾದೆ ಮಾತುಗಳು ಯಾಕೋ ನೆನಪಾದವು..!!
ನಮ್ಮ ಪುಣ್ಯಕ್ಕೆ ಅಕ್ಕ ಪಾಕದ ಮನೆಗಳಲ್ಲಿ ಸಂಗೀತ ಅಬ್ಯಾಸ ಮಾಡುವ ಯಾರೂ ಇಲ್ಲ...!!
ಆದರೆ ಚಿಕ್ಕಮ್ಮನ ಮಗನ ಟ್ರೇನು ವಿಶಲ್ ಮೀರಿಸುವ ಗೊರಕೆ ಶಬ್ದ-ನಮ್ಮ ನಿದ್ರೆಗೆ ಸವಾಲು ಹಾಕುತೆ...!!
ಶುಭವಾಗಲಿ...'
\।