ನಿದ್ದೆ

ನಿದ್ದೆ

ಕವನ

 


ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ


ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ


 


                       ಕಾನನದ ಮದ್ಯದಲಿ ಸಾಗಿ ಹೋಗುತಲಿದ್ದೆ


                       ಸುತ್ತಲೆಲ್ಲೆಲು ಬರಿ ಎಲೆ ಕೊಂಬೆಗಳ ಸದ್ದೆ


                       ಏನೊ ಸುಳಿಧಾಗಾಯ್ತು ಗಿಡಕಂಟೆಗಳ ಮದ್ದೆ


                       ಏನು ಎಂದರಿಯದಲೆ ಮೆಲ್ಲಗೆ ನಡುಗಿದ್ದೆ


          


ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ


ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ


 


                        ತಿರುಗಿ ನೋಡುದಕಾಗಿ ಹಿಂದೆ ಸರಿಯುತಲಿದ್ದೆ


                        ಕಾಲ್ಜಾರಿ ಹಿಂದಿರುವ ತೆಗ್ಗು ನೀರಿಗೆ ಬಿದ್ದೆ


                        ಕಣ್ತೆರೆದು ನೊಡಿದರೆ ಮಂಚದಾ ಕೆಳಗಿದ್ದೆ


                        ಹೆಗೇನೊ ನಾನರಿಯೆ ಚಡ್ಡಿ ಎಲ್ಲಾ ಒದ್ದೆ


 


ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ


ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ


                     


 

Comments

Submitted by raghu_cdp Sat, 03/23/2013 - 22:59

ಈ ಬರಹ ದಲ್ಲಿ ಚಮತ್ಕಾರವೇ ಕಾಣ್ತಾಯಿದೆ. ಚಮತ್ಕಾರವನ್ನು ಕವನವೆಂದು ಕರೆಯಬಹುದಾ?

ಅದು ಹಾಗಿರಲಿ, ಸಾಕಷ್ಟು ಮುದ್ರಾರಾಕ್ಷಸಗಳು ಎದ್ದು ಕಾಣ್ತಾಯಿವೇ. ಸರಿಮಾಡಿದರೇ ಚೆನ್ನಾಗಿರುತ್ತದೆ!

Submitted by shejwadkar Sun, 03/24/2013 - 13:35

In reply to by raghu_cdp

ರಘುರವರೆ
ಕವನದ ಬಗ್ಗೆ ಒಬ್ಬ ಕವಿಮಾತ್ರ ಅರಿಯ ಬಲ್ಲ, ಆದರೆ ನಾನು ಕವಿ ಅಲ್ಲ, ಯಾವುದದರು ಗೀತೆಯ ಧಾಟಿಗೆ ನನ್ನದೆ ಶಬ್ದಗಳನ್ನ ಪ್ರಾಸಬದ್ದವಾಗಿ ಜೋಡಿಸುವ ಹುಚ್ಚು ಅಸ್ಟೆ. ಇದು ಚಮತ್ಕಾರವೋ ಕವನವೋ ನಾನರಿಯೆ. ನೀವು ತಿಳಿಸಿದ "ಮುದ್ರಾ ರಾಕ್ಷಸ"
ಪದದ ಅರ್ಥ ಕೂಡ ನಾನು ತಿಳಿದಿಲ್ಲ. ನಾನು ಹೆಚ್ಚಾಗಿ "ದ್ದೆ" ಪದವನ್ನು ಪ್ರತಿಸಾಲಿನ ಕೊನೆಯಲ್ಲಿ ಬಳಸಿದ್ದಿರಬಹುದು ಅನ್ಕೊಂಡಿದಿನಿ.
ದಯವಿಟ್ಟು ಸಲಹೆ ಕೊಡಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

Submitted by venkatb83 Wed, 03/27/2013 - 19:07

In reply to by shejwadkar

" ಕವನದ ಬಗ್ಗೆ ಒಬ್ಬ ಕವಿಮಾತ್ರ ಅರಿಯ ಬಲ್ಲ, ಆದರೆ ನಾನು ಕವಿ ಅಲ್ಲ, ಯಾವುದದರು ಗೀತೆಯ ಧಾಟಿಗೆ ನನ್ನದೆ ಶಬ್ದಗಳನ್ನ ಪ್ರಾಸಬದ್ದವಾಗಿ ಜೋಡಿಸುವ ಹುಚ್ಚು ಅಸ್ಟೆ. ಇದು ಚಮತ್ಕಾರವೋ ಕವನವೋ ನಾನರಿಯೆ. ನೀವು ತಿಳಿಸಿದ "ಮುದ್ರಾ ರಾಕ್ಷಸ" ಪದದ ಅರ್ಥ ಕೂಡ ನಾನು ತಿಳಿದಿಲ್ಲ."

>>"ಮುದ್ರಾ ರಾಕ್ಷಸ" >>

ವ್ಯಾಕರಣ ದೋಷಗಳು ಇತ್ಯಾದಿ... ಆದರೂ ಈ ತರಹದ ಬರಹಗಳನ್ನು ನಾವ್ ತಿದ್ದಿಕೊಂಡೆ(ಮನಸಿನಲ್ಲಿ) ಓದ್ತೀವಿ ಬಿಡಿ...!!
ಅದ್ಯಾಗ್ಗೂ ನೀವ್ ಪ್ರಯತ್ನಿಸಿದರೆ "ಮುದ್ರಾ ರಾಕ್ಷಸ" ನ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು..!!

>>ಕವನದ ಬಗ್ಗೆ ಒಬ್ಬ ಕವಿಮಾತ್ರ ಅರಿಯ ಬಲ್ಲ>> ಈ ಬಗ್ಗೆ ನನಗೆ ಸಂಶಯವಿದೆ-ಅಂದ್ರೆ ನಾ ಕವಿ ಅಲ್ಲ -ಆದರೂ ನಿಮ್ಮ ಬರಹ ಮನ ತಟ್ಟಿತು ಮುಟ್ಟಿತು ಇಷ್ಟ ಆಯ್ತು..!!

>>>ಇದು ಚಮತ್ಕಾರವೋ ಕವನವೋ>> ಚಮತ್ಕಾರಿಕ ಕವನ ಅಂತ ಮಾತ್ರ ಹೇಳಬಲ್ಲೆ....!

ಉಳಿದಂತೆ ಈ ಬರಹ ಸೂಪರ್..
ನನಗೆ ಬಹು ಇಷ್ಟ ಆಯ್ತು ಕಾರಣ ರೈಮ್ಸ್-ಪ್ರಾಸಬದ್ಧವಾಗಿದೆ ಅದ್ಕೆ...!!
ನನಗೂ ಅ ತರಹದ ರಚನೆ ಇಷ್ಟ ಆದರೆ ಬರೆಯೋಕೆ ವಸಿ ಕಷ್ಟ..ನನ್ನ ಈ ಹಿಂದಿನ ಬರಹಗಳನ್ನು ನೋಡಿ ನಿಮಗೆ ಗೊತತಗುತ್ತೆ...
ಇನ್ನಸ್ಟು ಮತ್ತಸ್ತು ಒಳ್ಳೊಳ್ಳೆ ರಚನೆಗಳು (ಪ್ರಾಸಬದ್ಧ ನಿಮ್ಮಿಂದ ಬರಲಿ...)ನಮಗೆ ಓದಲು ಸಿಗಲಿ..
ಶುಭವಾಗಲಿ..

\।/